ದೊಡ್ಡ ಔತಣ ಮಾಡಿಸಿ, ದೊಡ್ಡ ಅಡಿಕೆಯನ್ನು ಮಾಡಿಸಿ ಬಹುಜನರನ್ನು ಔತಣಕ್ಕೆ ಬರಬೇಕೆಂದು ಆಹ್ವಾನಿಸಿದ ಒಬ್ಬ ವ್ಯಕ್ತಿಯ ಸಾಮ್ಯವನ್ನು ಯೇಸು ಸ್ವಾಮಿಯು ಜನರಿಗೆ ಹೇಳಿದನು. ಸಾಮಾನ್ಯವಾಗಿ ಇಂತಹ ಒಂದು ಅಮೂಲ್ಯವಾದ ಔತಣಕ್ಕೆ ಆಹ್ವಾನಿಸಲ್ಪಟ್ಟಾಗ ಜನರು ನಿಜಕ್ಕೂ ಅದಕ್ಕೆ ಭೇಟಿ ನೀಡಲು ಉತ್ಸುಕರಾಗಿರುತ್ತಾರೆ ಮತ್ತು ಆಹ್ವಾನಿಸಲ್ಪಟ್ಟಿದ್ದಕ್ಕಾಗಿ ಬಹಳ ಸಂತೋಷ ಪಡುತ್ತಾರೆ. (ಲೂಕ 14:18-19).
ಆದರೆ ಇಲ್ಲಿ ಔತಣಕ್ಕೆ ಹೋಗಬೇಕಾದ ಸಮಯ ಬಂದಾಗ ಪ್ರತಿಯೊಬ್ಬರೂ ನೆವ ಹೇಳಲು ಆರಂಭಿಸುತ್ತಾರೆ."ನಾನು ಹೊಲವನ್ನು ಕೊಂಡುಕೊಂಡಿದ್ದೇನೆ.... ನಾನು ನೊಗದ ಎತ್ತುಗಳನ್ನು ಕೊಂಡುಕೊಂಡಿದ್ದೇನೆ...." ಎಂದು (ಲೂಕ 14:18-19)ಈ ಮೊದಲ ಎರಡು ಸಬೂಬುಗಳು ಲೋಕ ವಿಚಾರಗಳಾಗಿವೆ.
ನಾನು ವೈಯಕ್ತಿಕವಾಗಿ ಯೋಚಿಸುವುದೇನೆಂದರೆ ಈ ಎರಡೂ ಸಬೂಬುಗಳು ನಿಜಕ್ಕೂ ದಡ್ಡತನ ಎನಿಸುತ್ತದೆ. ಯಾಕೆಂದರೆ ಯಾರೂ ಸಹ ತುಂಡುಭೂಮಿಯನ್ನು ಕೊಂಡುಕೊಂಡು ಅದನ್ನು ನೋಡಲು ಆಮೇಲೆ ಹೋಗುವುದಿಲ್ಲ. ಹಾಗೆಯೇ ಯಾರೂ ಸಹ ನೊಗ ಹೊರುವ ಎತ್ತನ್ನು ಕೊಂಡುಕೊಂಡು ಆಮೇಲೆ ಅದನ್ನು ಪರೀಕ್ಷಿಸಲು ಹೋಗುವುದಿಲ್ಲ. ಸತ್ಯವೇನೆಂದರೆ ಇವರಿಬ್ಬರೂ ಮೊದಲೇ ತಮ್ಮ ಸ್ವತ್ತುಗಳ ವಿಚಾರಗಳಲ್ಲಿ ಮುಳುಗಿ ಹೋಗಿದ್ದಾರೆ ಅಷ್ಟೇ!
ಇನ್ನು "ನಾನು ಮದುವೆಯಾಗಿದ್ದೇನೆ... "(ಲೂಕ 14:20) ಈ ಮೂರನೇ ಸಬೂಬು ವ್ಯಕ್ತಿಯು ತನ್ನ ಕುಟುಂಬಕ್ಕೆ ಎಲ್ಲದಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾನೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೆ ನಿಜವಾಗಿಯೂ ಯಾರಾದರೂ ತಮ್ಮ ಕುಟುಂಬಕ್ಕೆ ಅತ್ಯುತ್ತಮವಾದದನ್ನು ಮಾಡಬೇಕು ಎಂದು ಅಂದುಕೊಂಡರೆ ನಿಜವಾಗಿಯೂ ಅಂತವರು ಕರ್ತನಾದ ಯೇಸು ಕ್ರಿಸ್ತನಿಗೇ ತಮ್ಮ ಕುಟುಂಬದವರೆಲ್ಲರಿಗಿಂತ ಪ್ರಮುಖವಾದಂತ ಸ್ಥಾನವನ್ನು ತಮ್ಮ ಕುಟುಂಬದಲ್ಲಿ ಕೊಡುವವರಾಗಿರುತ್ತಾರೆ.
"ಆಗ ಆ ಯಜಮಾನನು ತನ್ನ ಆಳಿಗೆ ಹೇಳಿದ್ದು - ನೀನು ಹಾದಿಗಳಿಗೂ ಬೇಲಿಗಳ ಬಳಿಗೂ ಹೋಗಿ ಅಲ್ಲಿ ಸಿಕ್ಕಿದವರನ್ನು ಬಲವಂತಮಾಡಿ ಒಳಕ್ಕೆ ಕರಕೊಂಡು ಬಾ, ನನ್ನ ಮನೆ ತುಂಬಲಿ."(ಲೂಕ 14:23)
ಮನೆಯ ಯಜಮಾನನ ಬಯಕೆ ಒಂದೇ ತನ್ನ ಮನೆಯು ಅತಿಥಿಗಳಿಂದ ತುಂಬಬೇಕು ಮತ್ತು ತಾನು ಸಿದ್ಧಪಡಿಸಿದ್ದನ್ನು ಅವರು ಹೊಂದಿಕೊಳ್ಳಬೇಕು ಎಂಬುದು. ತನ್ನ ಮನೆಯು ತುಂಬಿರಬೇಕು ಎಂದು ಆಸೆ ಪಡುವ ಈ ಯಜಮಾನನ ಆಸೆಯನ್ನು ನಾವು ಹೇಗೆ ಪೂರೈಸಬಹುದು?
ಜನರಿಗಾಗಿ ಪ್ರಾರ್ಥಿಸಿ
ನೀವು ನಿಮ್ಮ ಆಹ್ವಾನವನ್ನು ನೀಡುವ ಮೊದಲೇ ಜನರ ಹೃದಯದಲ್ಲಿ ಪವಿತ್ರಾತ್ಮನು ಕಾರ್ಯ ಮಾಡಬೇಕು. ಅದಕ್ಕಾಗಿ ಕರ್ತನು ಅವರ ಹೃದಯವನ್ನು ತೆರೆಯುವ ಹಾಗೆ ನಿಮ್ಮ ಆಹ್ವಾನವನ್ನು ಅವರು ಅಂಗೀಕರಿಸಿಕೊಳ್ಳುವ ಹಾಗೆ ಪ್ರಾರ್ಥಿಸಿ. ಅವರು ಯೇಸುವನ್ನು ಕರ್ತನಾಗಿ ರಕ್ಷಕನಾಗಿ ಸ್ವೀಕರಿಸಿಕೊಳ್ಳುವಂತೆ ಪ್ರಾರ್ಥಿಸಿ. ನೀವು ಯಥಾರ್ಥವಾಗಿ ಹೀಗೆ ಪ್ರಾರ್ಥಿಸಿದಾದರೆ ನಿಜಕ್ಕೂ ನೀವು ಅದರ ಪ್ರತಿಫಲವನ್ನು ಕಂಡು ಅಚ್ಚರಿಪಡುವಿರಿ.
ವ್ಯಕ್ತಿಗತವಾಗಿ ಆಹ್ವಾನವನ್ನು ನೀಡಲು ಆರಂಭಿಸಿ.
ನಿಮ್ಮ ಮೊಬೈಲ್ ಫೋನಿನಲ್ಲಿ ಸರಿಸುಮಾರು ಎಷ್ಟು ಜನರ ಸಂಪರ್ಕ ಸಂಖ್ಯೆಗಳಿರಬಹುದು? ಕೆಲವರಂತೂ ನಿಮಗೆ ಬಹಳ ಹತ್ತಿರದವರೂ, ನಿಮಗೆ ಪ್ರೀತಿ ಪಾತ್ರರೂ ಆಗಿರುತ್ತಾರೆ. ನೀವು ಏಕೆ ಅವರನ್ನು ಭಾನುವಾರದ ಆರಾಧನೆಗೆ ನಿಮ್ಮೊಂದಿಗೆ ಸಭೆಗೆ ಕರೆತರಬಾರದು?
ನಿಮ್ಮ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಸಹೋದ್ಯೋಗಿಗಳು ಇತ್ಯಾದಿ, ಏಕೆ ಇವರನ್ನೆಲ್ಲಾ ನೀವು ಕರೆ ತರಬಾರದು?
ಅವರಿಗೂ ಸಹ ನೀವು ಮಾಡುವಂತೆ ಮಾಡಲು ಹೇಳಿಕೊಡಿ.
ನಿಮ್ಮ ಜೊತೆ ಸಭೆಯ ಆರಾಧನೆಯಲ್ಲಿ ಪಾಲ್ಗೊಂಡ ನಿಮ್ಮ ಸ್ನೇಹಿತರಿಗೂ ಹೇಗೆ ಸುವಾರ್ತೆ ಸಾರಬೇಕು ಎಂಬುದನ್ನು ಹೇಳಿಕೊಟ್ಟು, ಜೊತೆಯಾಗಿ ಸೇವೆ ಮಾಡಿರಿ. ಅಪೋಸ್ತಲನಾದ ಪೌಲನು "ನೀನು ನನ್ನಿಂದ ಅನೇಕ ಸಾಕ್ಷಿಗಳ ಮುಂದೆ ಕೇಳಿದ ಉಪದೇಶವನ್ನು ಇತರರಿಗೆ ಬೋಧಿಸ ಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು." ಎಂದು ಬರೆಯುತ್ತಾನೆ(2 ತಿಮೊಥೆಯನಿಗೆ 2:2).
ಲೋಕದ ಕಟ್ಟ ಕಡೆಯವರೆಗೂ ಇತರರಿಗೂ ಬೋಧಿಸಲು ಶಕ್ತರಾದಂತಹ ತನ್ನ ಅಪೋಸ್ತಲರನ್ನು ಯೇಸು ಸ್ವಾಮಿಯು ಕಳಿಸಿಕೊಟ್ಟನು.
ನೀವು ಈ ರೀತಿ ಮಾಡಿದ್ದೇ ಆದರೆ ನೀವು ಯಜಮಾನನ ಬಯಕೆಯನ್ನು ಪೂರೈಸುವವರಾಗಿದ್ದು ಆತನ ಬಯಕೆಯನ್ನು ಪೂರೈಸುವಿರಿ ಮತ್ತು ಆತನ ಮನೆಯು ಎಂದಿಗೂ ಬರಿದಾಗಿ ಇರುವುದಿಲ್ಲ.
ಪ್ರಾರ್ಥನೆಗಳು
ತಂದೆಯೇ, ನಿನ್ನ ವಾಕ್ಯ ಹೇಳುತ್ತದೆ " ಜ್ಞಾನಿಯು ಆತ್ಮಗಳನ್ನು ಆಕರ್ಷಿಸುವನು"(ಜ್ಞಾನೋಕ್ತಿ 11:30) ಎಂದು ಆದ್ದರಿಂದ ನಿನ್ನ ರಾಜ್ಯಕ್ಕಾಗಿ ಆತ್ಮಗಳನ್ನು ಆದಾಯ ಪಡಿಸುವ ಕೃಪೆಯನ್ನು- ಬಲವನ್ನು ಯೇಸು ನಾಮದಲ್ಲಿ ನಮಗೆ ಅನುಗ್ರಹಿಸು. ನಿನ್ನ ಹೆಸರಿನಲ್ಲಿ ನಾವು ಆಹ್ವಾನಿಸಿದ ನನ್ನ ಕುಟುಂಬದವರು ಸಂಬಂಧಿಕರು ಸ್ನೇಹಿತರು ಮತ್ತು ಯಾರೆಲ್ಲ ನಿನ್ನ ರಾಜ್ಯಕ್ಕೆ ಸಂಬಂಧಿಸಿದ್ದಾರೋ ಅವರೆಲ್ಲರನ್ನು ಕರೆತಂದು ನಿನ್ನ ಮನೆಯನ್ನು ತುಂಬಿಸಬೇಕೆಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ.
Join our WhatsApp Channel
Most Read
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು- 3
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ದೇವರಿಗೇ ಪ್ರಥಮ ಸ್ಥಾನ ನೀಡುವುದು #2.
● ಭಯದ ಆತ್ಮ
● ನೀವೊಂದು ಉದ್ದೇಶಕ್ಕಾಗಿ ಹುಟ್ಟಿದ್ದೀರಿ.
● ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?
ಅನಿಸಿಕೆಗಳು