ಕ್ರಿಸ್ತೀಯ ಜೀವಿತದಲ್ಲಿ, ನಿಜವಾದ ನಂಬಿಕೆ ಮತ್ತು ಅಹಂಕಾರದಿಂದ ಕೂಡಿದ ಮೂರ್ಖತನದ ನಡುವಿನ ವ್ಯತ್ಯಾಸವನ್ನು ವಿವೇಚಿಸುವಂತದ್ದು ನಿರ್ಣಾಯಕ ಅಂಶವಾಗಿದೆ. ಅರಣ್ಯಕಾಂಡ 14:44-45 ರಲ್ಲಿ ದಾಖಲಿಸಲ್ಪಟ್ಟಿರುವಂತೆ ವಾಗ್ದತ್ತ ದೇಶವನ್ನು ಪ್ರವೇಶಿಸಲು ಇಸ್ರಾಯೇಲ್ಯರು ಮಾಡಿದ ದುರಹಂಕಾರದ ಪ್ರಯತ್ನದ ಕಥೆಯು, ಮನುಷ್ಯನು ದೇವರ ಮಾರ್ಗದರ್ಶನದಲ್ಲಿ ಭರವಸೆಯಿಡುವ ಬದಲು ನಮ್ಮ ಸ್ವಂತ ಆಸೆಗಳ ಮೇಲೆ ಕಾರ್ಯನಿರ್ವಹಿಸುವುದರ ವಿರುದ್ಧದ ಕಟುವಾದ ಎಚ್ಚರಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ನಂಬಿಕೆ ಮತ್ತು ಪೂರ್ವಯೋಜಿತಕಲ್ಪನೆಗಳ ನಡುವಿನ ವ್ಯತ್ಯಾಸಗಳನ್ನು ನಾವು ಅನ್ವೇಷಿಸೋಣ ಮತ್ತು ಇಸ್ರೇಯೆಲ್ಯರ ತಪ್ಪಿನಿಂದ ಪಾಠ ಕಲಿಯೋಣ.
ನಂಬಿಕೆಯ ಸ್ವರೂಪ
ನಂಬಿಕೆಯು ದೇವರ ವಾಗ್ದಾನದಿಂದ ಪ್ರಾರಂಭವಾಗುತ್ತದೆ. ಇಬ್ರಿಯ 11:1 ಹೇಳುವಂತೆ, "ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ." ಸಂದರ್ಭಗಳು ಅಸಾಧ್ಯವೆಂದು ತೋರುತ್ತಿದ್ದರೂ ದೇವರು ತನ್ನ ಮಾತನ್ನು ಪೂರೈಸುತ್ತಾನೆ ಎಂಬ ಭರವಸೆಯಲ್ಲಿ ನಂಬಿಕೆ ಬೇರೂರಿದೆ. ಅಬ್ರಹಾಮನು ತಾನು ಮೃತ್ಯು ಪ್ರಾಯದವನ್ನಾಗಿದ್ದರೂ ಮಗನನ್ನು ಹೊಂದುವೆನು ಎಂಬ ದೇವರ ವಾಗ್ದಾನವನ್ನು ನಂಬುವ ಮೂಲಕ ತನ್ನ ನಂಬಿಕೆಯನ್ನು ಉದಾಹರಿಸಿದನು. (ರೋಮ 4:18-21).
ಇದಲ್ಲದೆ, ನಂಬಿಕೆಯು ಯಾವಾಗಲೂ ದೇವರ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ, ಅದು ಆತನಿಗೇ ಮಹಿಮೆಯನ್ನು ತರಲು ಪ್ರಯತ್ನಿಸುತ್ತದೆ. ಯೋಹಾನ 11:40 ರಲ್ಲಿ, ಯೇಸು ಮಾರ್ಥಾಳಿಗೆ , "ನೀನು ನಂಬಿದರೆ ದೇವರ ಮಹಿಮೆಯನ್ನು ನೋಡುವೆ ಎಂದು ನಾನು ನಿನಗೆ ಹೇಳಲಿಲ್ಲವೇ?"ಎಂದು ಉತ್ತರ ಕೊಟ್ಟನು.ನಿಜವಾದ ನಂಬಿಕೆಯು ದೇವರ ಯೋಜನೆಗಳು ಮತ್ತು ಉದ್ದೇಶಗಳು ನಮ್ಮ ಆಲೋಚನೆಗಳಿಗಿಂತ ಉನ್ನವಾಗಿವೆ ಎಂಬುದನ್ನು ಒಪ್ಪಿಕೊಳ್ಳುತ್ತದೆ. (ಯೆಶಾಯ 55:8-9).
ನಂಬಿಕೆಯು ದೀನತ್ವವನ್ನು ಪ್ರಕಟಿಸುತ್ತದೆ .
ಮತ್ತಾಯ 8:8 ರಲ್ಲಿ ಯೇಸುವಿಗೆ, "ಆ ಶತಾಧಿಪತಿಯು - ಪ್ರಭುವೇ, ನೀನು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನ್ನಲ್ಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವದು." ಎಂದು ಹೇಳುವ ಮುಖಾಂತರ ಶತಾಧಿಪತಿಯ ತನ್ನ ವಿನಯ ಪೂರಿತ ನಂಬಿಕೆಯನ್ನು ಪ್ರದರ್ಶಿಸಿದನು. ನಂಬಿಕೆಯು ದೇವರ ಮೇಲಿನ ನಮ್ಮ ಅವಲಂಬನೆಯನ್ನು ಮತ್ತು ಆತನ ಅಧಿಕಾರಕ್ಕೆ ಒಳಪಡುವ ನಮ್ಮ ಗುಣವನ್ನು ವ್ಯಕ್ತಪಡಿಸುತ್ತದೆ.
ಅಂತಿಮವಾಗಿ, ನಂಬಿಕೆಯು ದೇವರನ್ನೇ ನಿರೀಕ್ಷಿಸುತ್ತದೆ ಮತ್ತು ಆತನ ಸಮಯಕ್ಕೆ ಶರಣಾಗುತ್ತದೆ. ದಾವೀದನಿಗೆ ಸೌಲನನ್ನು ಕೊಲ್ಲುವ ಅವಕಾಶವು ಸಿಕ್ಕಾಗಲೂ ಅವನು ದೇವರ ಸಮಯಕ್ಕಾಗಿ ಕಾಯುವುದನ್ನು ಆರಿಸಿಕೊಂಡನು ಮತ್ತು ಆತನಿಂದ ಬರುವ ವಿಮೋಚನೆಯಲ್ಲಿ ಭರವಸೆಯಿಟ್ಟನು. (1 ಸಮುವೇಲ 26:10-11). ಪರಿಸ್ಥಿತಿಗಳು ನಮ್ಮ ನಿರೀಕ್ಷೆಗಳಿಗಿಂತಾ ಭಿನ್ನವಾಗಿದ್ದರೂ ದೇವರ ಮಾರ್ಗಗಳು ಪರಿಪೂರ್ಣವೆಂದು ನಂಬಿಕೆಯು ವಿಶ್ವಾಸಿಸುತ್ತದೆ.
ಪೂರ್ವಯೋಜಿತ ಕಲ್ಪನೆಗಳಲ್ಲಿರುವ ಅಪಾಯ
ಪೂರ್ವ ಯೋಜಿತಕಲ್ಪನೆಯು, ನಂಬಿಕೆಗೆ ವಿರುದ್ಧವಾಗಿ,ವೈಯಕ್ತಿಕ ಬಯಕೆಯಿಂದ ಹುಟ್ಟುತ್ತದೆ. ಇಸ್ರಾಯೇಲ್ಯರಿಗೆ ನಿಮ್ಮ ಅಪನಂಬಿಕೆಯ ಕಾರಣದಿಂದಾಗಿ ನೀವು ವಾಗ್ದತ್ತ ದೇಶವನ್ನು ಪ್ರವೇಶಿಸುವುದು ಸಾಧ್ಯವಿಲ್ಲ ಎಂದು ಹೇಳಲ್ಪಟ್ಟ ನಂತರ,ಅವರು ಇದ್ದಕ್ಕಿದ್ದಂತೆ ಹೋಗಿ ಹೋರಾಡಲು ನಿರ್ಧರಿಸಿದರು (ಅರಣ್ಯಕಾಂಡಾ14:40). ಅವರ ಈ ನಡತೆಯು ಅವರ ಸ್ವಂತ ಬಯಕೆಯ ಮೇಲೆ ಆಧಾರವಾಗಿತ್ತೇ ಹೊರತು ದೇವರ ಆಜ್ಞೆಯ ಮೇಲೆ ಅಲ್ಲ.
ಪೂರ್ವಯೋಜಿತ ಕಲ್ಪನೆಗಳು ಮನುಷ್ಯ-ಕೇಂದ್ರಿತವಾಗಿದ್ದು ದೇವರ ಮಹಿಮೆಗಿಂತಲೂ ಹೆಚ್ಚಾಗಿ ನಮಗಾಗಿ ಆತನು ಏನು ಮಾಡಬೇಕೆಂದು ನಾವು ಬಯಸುತ್ತೇವೆ ಎಂಬುದರ ಮೇಲೆ ಆಧಾರವಾಗಿರುತ್ತದೆ . ಅಪೋಸ್ತಲರ ಕೃತ್ಯಗಳು 8:18-23 ರಲ್ಲಿ, ಸೀಮೋನನೆಂಬ ಒಬ್ಬ ಮಾಂತ್ರಿಕನು ದೇವರ ವರಗಳನ್ನು ಸ್ವಾರ್ಥಉದ್ದೇಶಗಳಿಗಾಗಿ ಪಡೆಯಬಹುದು ಎಂದು ಅವನು ಭಾವಿಸಿ, ತನ್ನ ಸ್ವಂತ ಲಾಭಕ್ಕಾಗಿ ಪವಿತ್ರಾತ್ಮನ ಶಕ್ತಿಯನ್ನು ಖರೀದಿಸಲು ಪ್ರಯತ್ನಿಸಿದನು.
ಪೂರ್ವಯೋಜಿತಕಲ್ಪನೆಯು ಅಹಂಕಾರಭಾವದಿಂದ ಕೂಡಿದ್ದು, ದೇವರನ್ನೇ 'ಆತನು ಹೇಗೆ ಏನನ್ನು ಮಾಡಬೇಕೆಂದು ನಿರ್ದೇಶಿಸಿ ಹಾಗೆಯೇ ಮಾಡುವಂತೆ ಬೇಡಿಕೆ ಇಡುತ್ತದೆ'. ಫರಿಸಾಯರು ಈ ಅಹಂಕಾರದಿಂದಲೇ ಯೇಸುವಿನಿಂದ ಒಂದು ಚಿಹ್ನೆಯನ್ನು ಕೇಳಿದರು, ದೀನತ್ವದಿಂದ ಆತನನ್ನು ಅರಿತುಕೊಳ್ಳುವ ಬದಲು ಆತನನ್ನು ಪರೀಕ್ಷಿಸಿದರು (ಮತ್ತಾಯ 12:38-39). ನಮ್ಮ ವಿಧೇಯತೆಗೆ ಅರ್ಹನಾದ ಸಾರ್ವಭೌಮನಾದ ಕರ್ತನಿಗಿಂತಲೂ ಹೆಚ್ಚಾಗಿ ನಮ್ಮ ಇಚ್ಛೆಗಳನ್ನು ಪೂರೈಸಬೇಕಾದ ಒಂದು 'ಜೀನಿಯಂತೆ' ಈ ಪೂರ್ವಯೋಜಿತಕಲ್ಪನೆಗಳು ದೇವರನ್ನು ಪರಿಗಣಿಸುತ್ತದೆ.
ಪೂರ್ವಯೋಜಿತ ಕಲ್ಪನೆಗಳಿಂದಾಗುವ ಪರಿಣಾಮಗಳು.
ನಾವು ನಮ್ಮ ಸ್ವಂತ ಇಚ್ಛೆಗೆ ತಕ್ಕಂತೆ ವರ್ತಿಸುತ್ತಾ ಕರ್ತನು ನಮ್ಮೊಂದಿಗಿದ್ದಾನೆ ಎಂದು ಭಾವಿಸುವುದು ದುರಂತಕ್ಕೆ ಕಾರಣವಾಗುತ್ತದೆ. ಇಸ್ರಾಯೇಲ್ಯರು ಅಮಾಲೇಕ್ಯರು ಮತ್ತು ಕಾನಾನ್ಯರಿಂದ ಸೋಲಿಸಲ್ಪಟ್ಟಾಗ ಈ ನೋವಿನ ಪಾಠವನ್ನು ಕಲಿತರು (ಅರಣ್ಯಕಾಂಡ 14:45). ಅವರ ಈ ಪೂರ್ವಕಲ್ಪನೆಗಳು ಅವಮಾನಕರ ಸೋಲಿಗೂ ಮತ್ತು ಜೀವಹಾನಿಗೂ ಅವರನ್ನು ಈಡುಮಾಡಿತು.
ಇದರಂತೆಯೇ, ನಾವು ದೇವರ ಕೃಪೆಯಿದೆ ಎಂದು ಕಲ್ಪಿಸಿಕೊಂಡು ಅವಿಧೇಯತೆಯಲ್ಲಿ ಜೀವಿಸುವಾಗ ನಾವು ಶಿಕ್ಷೆ ಮತ್ತು ಕಷ್ಟಗಳನ್ನು ನಮ್ಮ ಜೀವಿತದಲ್ಲಿ ಆಹ್ವಾನಿಸುತ್ತೇವೆ. ಜ್ಞಾನೋಕ್ತಿ 13:13 ನಮ್ಮನ್ನು ಎಚ್ಚರಿಸುವಂತೆ, "[ದೇವರ] ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಯನ್ನು ಭಯಭಕ್ತಿಯಿಂದ ಕೈಕೊಳ್ಳುವವನು ಸುಫಲವನ್ನು ಹೊಂದುವನು." ಪೂರ್ವ ಕಲ್ಪನೆಗಳು ಆತ್ಮೀಕ ವೈಫಲ್ಯತೆಗೆ ಕಾರಣವಾಗುತ್ತದೆ ಮತ್ತು ದೇವರು ನಮಗೆ ನೀಡಲು ಬಯಸುವ ಆಶೀರ್ವಾದಗಳನ್ನು ಅದು ಕಸಿದುಕೊಳ್ಳುತ್ತದೆ.
ನಿಜವಾದ ನಂಬಿಕೆಯನ್ನು ಬೆಳೆಸಿಕೊಳ್ಳುವುದು.
ಪೂರ್ವಯೋಜಿತ ಕಲ್ಪನೆಗಳ ಬಲೆಯಿಂದ ತಪ್ಪಿಸಿಕೊಳ್ಳಲು ನಾವು ನಿಜವಾದ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಇದು ದೇವರ ವಾಕ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಪ್ರಾರಂಭವಾಗುತ್ತದೆ.
"ನಾನೀಗ ನಿಮ್ಮನ್ನು ಕರ್ತನಿಗೂ ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತೇನೆ. ಆತನು ನಿಮ್ಮಲ್ಲಿ ಭಕ್ತಿವೃದ್ಧಿಯನ್ನುಂಟುಮಾಡುವದಕ್ಕೂ ಪವಿತ್ರರಾದವರೆಲ್ಲರಲ್ಲಿ ನಿಮಗೆ ಹಕ್ಕನ್ನು ಅನುಗ್ರಹಿಸುವದಕ್ಕೂ ಶಕ್ತನಾಗಿದ್ದಾನೆ."(ಅಪೊಸ್ತಲರ ಕೃತ್ಯಗಳು 20:32). ನಾವು ನಮ್ಮ ಮನಸ್ಸನ್ನು ದೇವರವಾಕ್ಯಗಳಿಂದ ತುಂಬಿಸಲ್ಪಾಟ್ಟಾಗ ನಾವು ದೇವರ ಚಿತ್ತವನ್ನು ಗ್ರಹಿಸಲು ಮತ್ತು ನಮ್ಮ ಆಸೆಗಳನ್ನು ಆತನ ಚಿತ್ತಾಕ್ಕನುಸಾರ ಹೊಂದಿಸಿಕೊಳ್ಳಲು ಕಲಿಯುತ್ತೇವೆ.
ಯಾಕೋಬ 1:5 ಸೂಚಿಸುವಂತೆ ನಾವು ಜ್ಞಾನಕ್ಕಾಗಿಯೂ ಮತ್ತು ಆತನ ಮಾರ್ಗದರ್ಶನಕ್ಕಾಗಿಯೂ ಪ್ರಾರ್ಥಿಸಬೇಕು. "ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.".ನಾವು ಹೀಗೆ ಪ್ರಾರ್ಥಿಸುವಾಗ, ನಾವು ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಂಡು ನಮ್ಮ ಸ್ವಬುದ್ದಿಯ ಮೇಲೆ ಆಧಾರಗೊಳ್ಳದೆ ಆತನ ಚಿತ್ತವನ್ನೇ ಹುಡುಕುವವರಾಗುತ್ತೇವೆ (ಜ್ಞಾನೋಕ್ತಿ 3:5-6).
ಕಡೆಯದಾಗಿ, ನಮ್ಮ ಸ್ವಂತ ಆಲೋಚನೆಗಳು ಎಷ್ಟೇ ಸವಾಲನ್ನೊಡ್ಡಿದ್ದರೂ ನಾವು ದೇವರ ಆಜ್ಞೆಗಳಿಗೇ ವಿಧೇಯರಾಗಿ ನಡೆಯಬೇಕು."ಇದಲ್ಲದೆ ನೀವು ನನ್ನನ್ನು ಸ್ವಾಮೀ ಸ್ವಾಮೀ ಅಂತ ಕರೆದು ನಾನು ಹೇಳುವದನ್ನು ನಡಿಸದೆ ಇರುವದೇಕೆ? "ಎಂದು ಲೂಕ 6:46 ರಲ್ಲಿ ಯೇಸು ಎಚ್ಚರಿಸಿದನು. ನಿಜವಾದ ನಂಬಿಕೆಯು ವಿಧೇಯತೆಯ ನಡತೆಯ ಮೂಲಕ ಪ್ರದರ್ಶಿಸಲ್ಪಡುತ್ತದೆಯೇ ಹೊರತು ಕೇವಲ ತುಟಿಗಳ ಮಾತಿನಿಂದಲ್ಲ.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಂಬಿಕೆ ಮತ್ತು ಪೂರ್ವಯೋಜಿತ ಕಲ್ಪನೆಯ ನಡುವಿನ ವ್ಯತ್ಯಾಸವನ್ನು ವಿವೇಚಿಸುವ ಜ್ಞಾನವನ್ನು ನನಗೆ ಅನುಗ್ರಹಿಸು. ನಿನ್ನ ವಾಗ್ದಾನಗಳಲ್ಲಿ ನಂಬಿಕೆ ಇಡಲು, ನಿನ್ನ ಮಹಿಮೆಯನ್ನು ಹುಡುಕಲು ಮತ್ತು ನಿನ್ನ ಚಿತ್ತಕ್ಕೆ ನನ್ನನ್ನು ದೀನತ್ವದಿಂದ ಸಮರ್ಪಿಸಿಕೊಳ್ಳಲೂ ನನಗೆ ಸಹಾಯ ಮಾಡು. ನನ್ನ ಜೀವನವು ನಿಮ್ಮ ಕೃಪೆಗೂ ಮತ್ತು ಒಳ್ಳೆಯತನಕ್ಕೂ ಸಾಕ್ಷಿಯಾಗಿರಲಿ ಎಂದು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ ಆಮೆನ್.
Join our WhatsApp Channel
Most Read
● ನೀವೊಂದು ಉದ್ದೇಶಕ್ಕಾಗಿ ಹುಟ್ಟಿದ್ದೀರಿ.● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ದಿನ 04: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 08:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಅಪ್ಪನ ಮಗಳು - ಅಕ್ಷಾ
● ದೇವರು ಹೇಗೆ ಒದಗಿಸುತ್ತಾನೆ #2
ಅನಿಸಿಕೆಗಳು