ಚಾರಪ್ತದಲ್ಲಿ ಒಬ್ಬ ಸ್ತ್ರೀ ಇದ್ದಳು. ಆಕೆಯ ಗಂಡನು ಸತ್ತು ಹೋಗಿದ್ದನು. ಈಗ ಆಕೆ ಮತ್ತು ಆಕೆಯ ಮಗನು ಹಸಿವಿನಿಂದ ಸಾಯುವ ಸ್ಥಿತಿಗೆ ಬಂದಿದ್ದರು. ಕಾರಣ ಲೋಕವೆಲ್ಲ ಆವರಿಸಿದಂತ ಬರಗಾಲದಿಂದ ಅವರು ಬಾಧಿತರಾಗಿದ್ದರು. ತಮ್ಮ ಉಳಿವಿಗಾಗಿ ಎಲ್ಲಿಗೆ ಹೋಗಬೇಕೋ - ಏನು ಮಾಡಬೇಕೋ ಎಂದು ಕಂಗಲಾಗಿದ್ದರು. ಅಂತಹ ಒಂದು ಪರಿಸ್ಥಿತಿಯಲ್ಲಿ ದೇವರು ಪ್ರವಾದಿಯಾದ ಎಲೀಯನನ್ನು ಆಕೆಯ ಬಳಿಗೆ ಕಳುಹಿಸಿದನು.
ಆಕೆಯು ಸೌದೆಯನ್ನು ಕೂಡಿಸುವುದಕ್ಕಾಗಿ ಹೋಗುವಾಗ ಎಲೀಯನು ಆಕೆಯನ್ನು ಕರೆದು " ನನಗೆ ಕುಡಿಯಲಿಕ್ಕೆ ತಂಬಿಗೆ ನೀರನ್ನು ತೆಗೆದುಕೊಂಡು ಬಾ ಎಂದು ಹೇಳಿದನು. ಆಕೆ ಹೋಗುತ್ತಿರುವಾಗ ನೀನು ಬರುವಾಗ ನನಗೋಸ್ಕರ ಒಂದು ತುಂಡು ರೊಟ್ಟಿಯನ್ನು ತೆಗೆದುಕೊಂಡು ಬಾ ಅಂದನು" ಪ್ರಾಯಶಃ ಬರಗಾಲದಿಂದ ಆಕೆ ಬಳಿಯಲ್ಲಿದ್ದ ಆಹಾರವೆಲ್ಲ ತೀರಿಹೋದರಿಂದ ಆಗಿದ್ದ ಆತಂಕವನ್ನುಅವನು ಆಕೆಯ ಮುಖದಲ್ಲಿ ಕಂಡನೇನೋ.
"ಆಕೆಯು ಅವನಿಗೆ - ನಿನ್ನ ದೇವರಾದ ಯೆಹೋವನಾಣೆ, ನನ್ನ ಹತ್ತಿರ ರೊಟ್ಟಿಯಿರುವದಿಲ್ಲ. ಮಡಕೆಯಲ್ಲಿ ಒಂದು ಹಿಡಿ ಹಿಟ್ಟು, ಮೊಗೆಯಲ್ಲಿ ಸ್ವಲ್ಪ ಎಣ್ಣೆ ಇವುಗಳ ಹೊರತಾಗಿ ಬೇರೇನೂ ಇರುವದಿಲ್ಲ. ಈಗ ಎರಡು ಕಟ್ಟಿಗೆಗಳನ್ನು ಹೆಕ್ಕಿ ನನಗೋಸ್ಕರವೂ ನನ್ನ ಮಗನಿಗೋಸ್ಕರವೂ ರೊಟ್ಟಿ ಮಾಡುತ್ತೇನೆ. ಅದನ್ನು ತಿಂದ ಮೇಲೆ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ ಎಂದು ಉತ್ತರಕೊಟ್ಟಳು. "(1 ಅರಸುಗಳು 17:12)
ಅವಳ ಬಳಿ ಉಳಿದಿರುವ ಆಹಾರ ಸಾಮಗ್ರಿಯಲ್ಲಿ ಆಗುವ ಆಹಾರವು ಅವಳಿಗೂ ಅವಳ ಮಗನಿಗೇ ಸಾಕಾಗುವಷ್ಟಿರಲಿಲ್ಲ. ಆದರೆ ಅದರಲ್ಲಿಯೂ ಸಹ ಆಕೆ ಸ್ವಲ್ಪವನ್ನು ಪ್ರವಾದಿಗೆ ಕೊಟ್ಟುಬಿಟ್ಟಳು. ಇದುವೇ ಅವಳನ್ನು ಸಮೃದ್ಧಿಯನ್ನು -ಅಭಿವೃದ್ಧಿಯನ್ನು ನೋಡುವಂತಹ ಆಯಾಮಕ್ಕೆ ಕೊಂಡೊಯ್ಯಿತು. ದೇವರು ನಿಮ್ಮನ್ನು ಆಶೀರ್ವದಿಸಲು ಬಯಸುವಾಗ ಆತನು ನಿಮ್ಮಲ್ಲಿರುವ ವಿದೇಯತೆಯನ್ನು ಸಾಕ್ಷಿಕರಿಸುವಂತೆ ಹೇಳುತ್ತಾನೆ. ಆತನ ಮೇಲೆ ನಿಮಗಿರುವ ಪ್ರೀತಿ ಎಷ್ಟೆಂದು ಪರೀಕ್ಷಿಸಲು ಬಯಸುತ್ತಾನೆ.
ದೇವರ ರಾಜ್ಯವು, ಲೋಕದಲ್ಲಿರುವ ಸ್ವಾಭಾವಿಕ ಆಡಳಿತಕ್ಕಿಂತ ವಿಭಿನ್ನವಾದ ನಿಯಮದೊಂದಿಗೆ ಕಾರ್ಯಾಚರಣೆ ನಡೆಸುತ್ತದೆ. ನಾವು ಪರಲೋಕ ರಾಜ್ಯದ ಪ್ರಜೆಗಳು. ಹಾಗಾಗಿ ನಾವು ಪರಲೋಕ ರಾಜ್ಯದ ಪದ್ಧತಿಗಳ ಅನುಸಾರ ನಮ್ಮನ್ನು ಒಗ್ಗಿಸಿಕೊಳ್ಳಬೇಕು. ಲೋಕದ ವ್ಯವಸ್ಥೆಯಲ್ಲಿ "ಪ್ರತ್ಯಕ್ಷವಾಗಿ ನೋಡುವುದನ್ನು ನಂಬುತ್ತಾರೆ" ಆದರೆ ಪರಲೋಕ ರಾಜ್ಯದ ಜೀವನ ಶೈಲಿ ಮತ್ತು ನಿಯಮದಲ್ಲಿ "ನಂಬುವುದನ್ನು ನೋಡುತ್ತೇವೆ".
ಸಮೃದ್ಧಿ ಹೊಂದಿ ಆನಂದ ಅನುಭವಿಸಲು ಅನೇಕ ಮಾರ್ಗಗಳಿವೆ. ಆದರೆ ನೀವು ಕೊಡುವುದನ್ನು ಎಂದಿಗೂ ಅಲಕ್ಷಿಸಬಾರದು, ಲೋಕದ ವ್ಯವಸ್ಥೆಯಲ್ಲಿ "ಪಡೆದುಕೊಳ್ಳುವುದೇ ಆಶೀರ್ವಾದ" ಎನ್ನುತ್ತಾರೆ. ಆದರೆ ಪರಲೋಕ ರಾಜ್ಯದ ಪ್ರಕಾರ "ಕೊಡುವುದೇ ಆಶೀರ್ವಾದ."
ನೀವು ಒಂದು ವಿಚಾರವನ್ನು ನಿಮ್ಮ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ, ದೇವರು ನಮಗೆ ಕೊಡಬೇಕೆಂದು ಆಜ್ಞಾಪಿಸಿದ್ದಾನೆ (ಲೂಕ 6.32) ಮತ್ತು ನಾವು ಕೊಡುವಾಗಲೆಲ್ಲಾ ನಾವು ಆತನ ಆಜ್ಞೆಯನ್ನು ಅನು ಪಾಲಿಸುವವರಾಗಿರುತ್ತೇವೆ. ನಾವು ಆ ರೀತಿ ವಿದೇಯರಾದಾಗ ಅದಕ್ಕೆ ಇರುವಂತಹ ಆತ್ಮಿಕವಾದ ಭೌತಿಕವಾದ ಆಶೀರ್ವಾದಗಳು ನಮ್ಮ ಜೀವಿತದಲ್ಲಿ ಹರಿದುಬರಲಾರಂಭಿಸುತ್ತವೆ. ವಿಧೇಯತೆಗೆ ಅಂಟಿಕೊಂಡ ಕೆಲವು ಆಶೀರ್ವಾದಗಳನ್ನು ನಾವೀಗ ನೋಡೋಣ.
ಅನೇಕರು "ಕೊಡುವುದು"ಎಂದರೆ ಅದು ಹಣಕಾಸಿಗೆ ಸಂಬಂಧಿಸಿದೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಕೊಡುವಿಕೆ ಎನ್ನುವುದು ಕ್ರಿಸ್ತೀಯ ಜೀವಿತದ ಎಲ್ಲಾ ಆಯಾಮಕ್ಕೂ ಅನ್ವಯಿಸುತ್ತದೆ.
"ಕೊಡುವಿಕೆಯು" ನಿರ್ಣಾಯಕವಾದ ಅಂಶ ಎನ್ನಲು ಕಾರಣಗಳೇನು?
1. ಕೊಡುವಿಕೆಯು ನಿಮ್ಮ ಬೆಳೆಯನ್ನು ಹೆಚ್ಚಿಸುತ್ತದೆ.
"ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಆಹಾರವನ್ನೂ ಕೊಡುವಾತನು ನಿಮಗೂ ಬಿತ್ತುವದಕ್ಕೆ ಬೀಜವನ್ನು ಕೊಟ್ಟು ಹೆಚ್ಚಿಸಿ ನಿಮ್ಮ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ವೃದ್ಧಿಪಡಿಸುವನು."ಎಂದು 2 ಕೊರಿಂಥದವರಿಗೆ 9:10 ಹೇಳುತ್ತದೆ.
ಕೊಡುವಿಕೆಯು ಯಾವಾಗಲೂ ನೀವು ಬಿತ್ತುವುದಕ್ಕಿಂತ ಅಧಿಕಪಟ್ಟೇ ವೃದ್ಧಿಸುತ್ತದೆ. ಅದು ಕ್ಷಮೆಯಾಗಿರಲಿ, ಸಮಯವಾಗಿರಲಿ, ಹಣಕಾಸೇ ಆಗಿರಲಿ ಇತ್ಯಾದಿ. ಖಂಡಿತವಾಗಿಯೂ ನಿಮ್ಮ ಫಸಲು ನೀವು ಬಿತ್ತುವುದಕ್ಕಿಂತಲೂ ಅಧಿಕ ಅಧಿಕಾವಾಗಿಯೇ ಬರುತ್ತದೆ. ನೀವು ಈ ಒಂದು ತಿಳುವಳಿಕೆಯನ್ನು ಹೊಂದಿಕೊಂಡು ಯಾವಾಗಲೂ ಬಿತ್ತಲು ನಿಮ್ಮನ್ನು ನೀವು ಉತ್ತೇಜಿಸಿಕೊಳ್ಳಬೇಕು. ಇದು ನಿಮ್ಮಲ್ಲಿರುವಂತಹ ಎಲ್ಲವನ್ನು ಹೆಚ್ಚಿಸುವ ಒಂದು ಒಡಂಬಡಿಕೆ ಎಂದು ಅರಿತುಕೊಂಡು ಈ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
ಅರಿಕೆಗಳು
ತಂದೆಯೇ, ನೀನು ನನ್ನ ಜೀವಿತದಲ್ಲಿ ಸಮೃದ್ಧಿಯಾದ ಸೌಭಾಗ್ಯವನ್ನು ಕೊಟ್ಟಿದ್ದೀಯಾ ಎಂದು ಅರಿಕೆ ಮಾಡುವೆನು. ನಾನು ನಿನ್ನ ವಾಕ್ಯಗಳನ್ನೆಲ್ಲ ಧ್ಯಾನಿಸುವಾಗ ನೀನು ಬರೆದಿರುವುದನ್ನೆಲ್ಲ ಗಮನಿಸಿಕೊಂಡು ನಡೆಯುವಾಗ ನಾನು ನನ್ನ ಮಾರ್ಗದಲ್ಲಿ ಸಮೃದ್ಧಿಯಾಗುವೆನು ಮತ್ತು ಯಶಸ್ವಿಯಾಗುವೆನು ಎಂದು ಯೇಸು ನಾಮದಲ್ಲಿ ಅರಿಕೆ ಮಾಡುವೆನು. ನಾನು ಆತ್ಮದಲ್ಲಿಯೂ, ಪ್ರಾಣದಲ್ಲಿಯೂ, ದೇಹದಲ್ಲಿಯೂ, ಸಮಾಜದಲ್ಲಿಯೂ, ಹಣಕಾಸಿನಲ್ಲಿಯೂ ಯಾವುದೇ ಕೊರತೆಯನ್ನು ನಾನು ಅನುಭವಿಸುವುದಿಲ್ಲ. ಅದಕ್ಕಾಗಿ ನಿನಗೆ ಸ್ತೋತ್ರ ತಂದೆಯೇ.
Join our WhatsApp Channel
Most Read
● ಶ್ರೇಷ್ಠತೆಯ ಬೆನ್ನಟ್ಟುವಿಕೆ.● ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
● ಬದಲಾಗಲು ಇರುವ ತೊಡಕುಗಳು.
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ಅತ್ಯುತ್ತಮ ದೇವರು ನೀಡಿದ ಸಂಪನ್ಮೂಲ
● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
● ಭಕ್ತಿವೃದ್ಧಿಮಾಡುವ ಅಭ್ಯಾಸಗಳು.
ಅನಿಸಿಕೆಗಳು