"ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ."(ಇಬ್ರಿಯರಿಗೆ 11:6)
ನಾವು ನಿನ್ನೆ ಮತ್ತು ಇಂದು ನಂಬಿಕೆ ಕುರಿತ ಸಂಗತಿಯನ್ನು ನೋಡುತ್ತಾ ಇದ್ದೇವೆ. ನಾವು ನಮ್ಮ ದೇವರನ್ನು ಮೆಚ್ಚಿಸಲು ಏನಾದರೂ ಮಾಡಬೇಕೆಂದು ಎಣಿಸಿದರೆ ಮೊದಲು ಆ ಶಾಲೆಗೆ ಸೇರ್ಪಡೆಯಾಗಲು ನಂಬಿಕೆ ಮೂಲಕ ಪ್ರವೇಶಾತಿ ಪಡೆಯಬೇಕಾಗುತ್ತದೆ. ಆ ನಂಬಿಕೆಯನ್ನು ಕುರಿತು ಇಂದು ಆಳವಾದ ಅನ್ವೇಷಣೆ ನಡೆಸೋಣ. ಇದನ್ನು ಆರಂಭಿಸಲು "ಇನ್ನೊಬ್ಬರನ್ನು ಮೆಚ್ಚಿಸುವುದರ" ಅರ್ಥವನ್ನು ಅಧ್ಯಯನ ಮಾಡೋಣ.ಕೇಂಬ್ರಿಡ್ಜ್ ಇಂಗ್ಲೀಷ್ ನಿಘಂಟಿನ ಪ್ರಕಾರ "ಪ್ಲೀಸ್" ಎಂಬ ಪದವು "ಯಾರನ್ನಾದರೂ ಸಂತೋಷ ಅಥವಾ ತೃಪ್ತಿಯನ್ನು ಅನುಭವಿಸುವಂತೆ ಮಾಡುವುದು" ಅಥವಾ "ಯಾರಿಗಾದರೂ ಸಂತೋಷವನ್ನು ನೀಡುವುದು" ಎಂದರ್ಥ. ಎಂಥ ಅದ್ಭುತವಾದಂತಹ ಅರ್ಥ! ನಂಬಿಕೆ ಎನ್ನುವ ವಿಷಯವು ಎಂತಹ ಮಹತ್ವಪೂರ್ಣವಾದ ಬಹುದೊಡ್ಡ ವಿಷಯವಾಗಿದೆ ಅಲ್ಲವೇ. ನಂಬಿಕೆಯೊಂದು ನಿಮ್ಮಲ್ಲಿ ಇಲ್ಲದಿದ್ದರೇ ನೀವು ಏನೇ ಮಾಡಿದರು ದೇವರು ನಿಮ್ಮಲ್ಲಿ ತೃಪ್ತನಾಗುವುದಿಲ್ಲ ಹಾಗೆಯೇ ಸಂತೋಷಿಸುವುದೂ ಇಲ್ಲ.
ಸತ್ಯವೇನೆಂದರೆ- "ವಿಶ್ವಾಸವಿಲ್ಲದೆ" ಆತನ ಮೇಲೆ ಭರವಸೆಯಿಂದ ಆಧಾರಗೊಳ್ಳುವಂತದ್ದು, ಆತನ ಮೇಲೆ ಆತನ ಆಲೋಚನೆಗಳ ಮೇಲೆ ಆತನ ವಾಗ್ದಾನದ ಮೇಲೆ ಆಧಾರಗೊಳ್ಳುವಂಥದ್ದು ಹೇಗೆ ತಾನೇ ಆತನು ನಿಮ್ಮಲ್ಲಿ ಸಂತೋಷವಂತೆ ಮಾಡಬಲ್ಲದು?ನಿಮ್ಮನ್ನು ನಂಬುವ ಮತ್ತು ನಿಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಜನರೊಂದಿಗೆ ನೀವು ಇರುವಾಗ ನಿಮ್ಮ ನಡುವಿನ ಸಂಬಂಧಗಳು ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂದು ಯೋಚಿಸಿ ನೋಡಿರಿ.
ತನ್ನ ತಂದೆಯ ಮೇಲೆ ನಂಬಿಕೆಯನ್ನು ಕಳಕೊಂಡ ಮಗುವು ತನ್ನ ತಂದೆಯನ್ನು ಮೆಚ್ಚಿಸಲು ಪ್ರಯತ್ನಿಸುವಂತದ್ದು ಅವನಿಗೆ ಅಥವಾ ಅವಳಿಗೆ ಸಾಧ್ಯವೇ? ಇನ್ನೂ ಗಂಡ ಹೆಂಡತಿಯ ವಿಷಯವೇನು? ಒಂದು ಮಟ್ಟದ "ಭರವಸೆ -ವಿಶ್ವಾಸವು" ಅವರ ನಡುವೆ ಇಲ್ಲದಿದ್ದರೆ ಅವರಿಬ್ಬರು ಆನಂದದಿಂದ ತೃಪ್ತಿಯಿಂದ ಅವರ ಮನೆಯಲ್ಲಿ ಸಂಬಂಧಗಳಲ್ಲಿ ನೆಲೆಗೊಳ್ಳಲು ಸಾಧ್ಯವೇ?
ನಂಬಿಕೆಯು ಪತನದ ನಂತರ ಮನುಷ್ಯನ ಮುರಿದು ಹೋದ ಆತ್ಮದ ತುಣುಕುಗಳನ್ನು ಒಟ್ಟುಗೂಡಿಸುವಂತಹ ಒಂದು ಅಂಟಾಗಿದೆ. ಇದು ದೇವರಿಗೆ ಸಂಬಂಧಿಸಿದ ಎಲ್ಲದಕ್ಕೂ ಸಂಬಂಧ ಕಲ್ಪಿಸುವ ಮಾರ್ಗವಾಗಿದೆ! ನಂಬಿಕೆಯ ಅಡಿಪಾಯವನ್ನು ಎಚ್ಚರಿಕೆಯಿಂದ ಹಾಕದೇ ಯಾವುದೇ ಕ್ರಿಸ್ತೀಯ ಜೀವನ ಸಾಗಲು ಸಾಧ್ಯವಿಲ್ಲ (ಎಫಸ್ಸೆ 2:8)
ಆತ್ಮ ಸ್ವರೂಪನಾದ ದೇವರೊಂದಿಗಿನಾ ಸಂಬಂಧವೂ ಕಾರ್ಯಸಾಧಕವಾಗಲು ನಂಬಿಕೆಯು ಕಾರ್ಯ ಮಾಡಬೇಕು. ಹೇಗೆ ಮನುಷ್ಯನು ತನ್ನ ಸಾಂಗತ್ಯದಲ್ಲಿ ಸಂತೋಷಪಡುವ ಭರವಸೆ ಇಡುವ ವ್ಯಕ್ತಿಗಳೊಂದಿಗೆ ಪ್ರಯಾಣ ಮಾಡಲು ಯೋಚಿಸುತ್ತಾನೆಯೋ ಹಾಗೆಯೇ ದೇವರು ಸಹ ಆತನ ಮೇಲೆ ಭರವಸೆ ಇಡುವವರಿಗೆ ಮಾತ್ರ ಲಭ್ಯವಾಗುತ್ತಾನೆ. ನಂಬಿಕೆ ಇಲ್ಲದೆ ನಾವು ಏನೇ ಮಾಡಿದರೂ ಅದು ಹೃದಯದಿಂದ ಬಂದದ್ದಲ್ಲ! ಅದು ನೋಡುವುದಕ್ಕೆ ಮಾತ್ರ ವಿಶ್ವಾಸಿಸುವಂತೆ ಕಾಣುತ್ತದೆ ಅಥವಾ ಅದು ಕೇವಲ ನೋಟಕ್ಕೆ ಸೀಮಿತವಾದ ನಂಬಿಕೆ ಅಷ್ಟೇ. ನನ್ನನ್ನು ನಂಬಿರಿ ಇಂದು ಸಭೆಯಲ್ಲೂ ಸಹ ಬಹಳಷ್ಟು ಜನರಲ್ಲಿ ಈ ರೀತಿಯ ನಂಬಿಕೆಯನ್ನು ನಾವು ಕಾಣುತ್ತೇವೆ.
ಹಾಗಾಗಿ, ನಿಮ್ಮನ್ನು ದೇವರ ಹೃದಯಕ್ಕೆ ಮತ್ತು ಆತನ ರಾಜ್ಯದಲ್ಲಿರುವ ಮರೆಯಾದ ಸುಭದ್ರವಾದ ಸ್ಥಳಕ್ಕೆ ಕರೆದುಕೊಂಡೊಯ್ಯಬಲ್ಲ ಏಕೈಕ ಬಾಗಿಲೆಂದರೆ -ಅದು ನಂಬಿಕೆ " ಅದೇಕೆ? ಇಬ್ರಿಯ ಪತ್ರಿಕೆಯ ಗ್ರಂಥ ಕರ್ತನು ಇದರ ಕುರಿತು ಹೀಗೆ ಹೇಳುತ್ತಾನೆ."....ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ."ಎಂದು. ದೇವರ ಬಳಿ ಬರುವವರ ಮೊದಲ ಪ್ರತಿಕ್ರಿಯೆ ಎಂದರೆ ಮತ್ತು ಆತನನ್ನು ಹಿಂಬಾಲಿಸಬೇಕು ಎಂದು ಕೊಂಡರೆ ಮೊದಲು ನಾವು ಯಾರ ಬಳಿಗೆ ಹೋಗುತ್ತಿದ್ದೆವೋ, ಆ ವ್ಯಕ್ತಿ ಜೀವಂತವಾಗಿದ್ದಾನೆ ಎಂಬ ಸತ್ಯವನ್ನು ಅರಿತುಕೊಂಡು ಹೋಗುವ ಪ್ರಯತ್ನ ಮಾಡಬೇಕು! ದೇವರು ಇದ್ದಾನ ಎಂಬುದೇ ಇಂದು ಬಹುದೊಡ್ಡ ವಿಷಯವಾಗಿದೆ! ಇಂದು ಅನೇಕ ಜನರು ದೇವರ ವೈರಿಗಳಾಗಿಬಿಡುತ್ತಿರುವುದರಿಂದ ನಾವೂ ಸಹ "ಅಪನಂಬಿಕೆ" ಎಂಬ ಸಾಗರದೊಳಗೆ ಕಾಲಿಡುತ್ತಿದ್ದೇವೆ.
ಒಬ್ಬ ಮಹಾನ್ ದೇವ ಮನುಷ್ಯರು ಒಮ್ಮೆ ಹೀಗೆ ಹೇಳಿದ್ದಾರೆ "ಇದು (ದೇವರಿದ್ದಾನೆ ಎಂಬ ನಂಬಿಕೆ) ದೇವರನ್ನು ಆರಾಧಿಸಲು ಬೇಕಾಗಿರುವ ಮೊದಲ ವಿಷಯವಾಗಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಆತನಿದ್ದಾನಾ ಎಂಬ ಸಂದೇಹ ಮನೋಭಾವದಲ್ಲಿ ನಾವು ಆತನ (ದೇವರ) ಬಳಿಗೆ ಬರಲು ಸಾಧ್ಯವಿಲ್ಲ. ನಾವು ಆತನನ್ನು ಕಂಡಿಲ್ಲ, ಆದರೂ ಆತನಿದ್ದಾನೆ ಎಂಬುದನ್ನು ನಂಬಬೇಕು. (ಅದುವೇ ನಿಜವಾದ ನಂಬಿಕೆ) ನಾವು ಆತನ ಯಥಾವತ್ತಾದ ಚಿತ್ರಣವನ್ನು ನಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಆ ರೀತಿಯ ಜೀವಂತ ವ್ಯಕ್ತಿ ಇದ್ದಾನೆ ಎಂಬ ನಮ್ಮ ನಿರ್ಣಯದ ಹೊನಲನ್ನು ತಡೆಯಬಾರದು."ಎಂದು.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಾನು ನಿನ್ನನ್ನು ನಿಜವಾಗಿಯೂ ಮೆಚ್ಚಿಸುವಂತೆ ನನ್ನ ನಂಬಿಕೆಯನ್ನು ಬಲಪಡಿಸು. ನಿನ್ನ ವಾಗ್ದಾನಗಳು ಮತ್ತು ನಿನ್ನ ಪ್ರೀತಿಯಲ್ಲಿ ನನ್ನ ನಂಬಿಕೆಯನ್ನು ಆಳವಾಗಿಸಲು ನನಗೆ ಸಹಾಯ ಮಾಡಿರಿ, ಇದರಿಂದ ನಾನು ನೋಡುವವನಾಗಿ ನಡಿಯದೆ ನಂಬುವವನಾಗಿ ನಡೆಯುತ್ತೇನೆ. ಯೇಸುವಿನ ನಾಮದಲ್ಲಿ. ಆಮೆನ್
Join our WhatsApp Channel
Most Read
● ಉತ್ತಮವು ಅತ್ಯುತ್ತಮವಾದದಕ್ಕೆ ಶತೃ● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು- 3
● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
● ನಂಬಿಕೆಯಿಂದ ಹೊಂದಿಕೊಳ್ಳುವುದು
● ಪುರುಷರು ಏಕೆ ಪತನಗೊಳ್ಳುವರು -3
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು