ಅನುದಿನದ ಮನ್ನಾ
ನಂಬಿಕೆಯಲ್ಲಿಯೋ ಅಥವಾ ಭಯದಲ್ಲಿಯೋ
Saturday, 25th of May 2024
3
1
300
Categories :
ನಂಬಿಕೆ (Faith)
"ಅವರು ಹತ್ತರ ಬಂದು ಆತನನ್ನು ಎಬ್ಬಿಸಿ - ಸ್ವಾಮೀ, ಕಾಪಾಡು, ಸಾಯುತ್ತೇವೆ ಅನ್ನಲಾಗಿ ಆತನು ಅವರಿಗೆ - ಅಲ್ಪವಿಶ್ವಾಸಿಗಳೇ, ಯಾಕೆ ಧೈರ್ಯಗೆಡುತ್ತೀರಿ ಎಂದು ಹೇಳಿ, ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು; ಆಗ ಎಲ್ಲಾ ಶಾಂತವಾಯಿತು."(ಮತ್ತಾಯ 8:25-26)
ನನ್ನ ಪುಟ್ಟ ಸೋದರಳಿಯನನ್ನು (ಅವನೀಗ ಬೆಳೆದು ದೊಡ್ಡವನಾಗಿದ್ದಾನೆ)ಅವನಿನ್ನೂ ಚಿಕ್ಕವನಾಗಿದ್ದಾಗ ಸ್ವಲ್ಪ ಮೇಲೆತ್ತಿ ಎಸೆದು ಹಿಡಿದುಕೊಳ್ಳುತ್ತಿದ್ದೆ. ಮೊದಲ ಬಾರಿ ಹಾಗೆ ಎಸೆದಾಗ ಅವನು ಬಹಳವಾಗಿ ಕಿರುಚಿ ಅಳುತ್ತಿದ್ದ. ಬಹುಶಃ ಭಯದಿಂದ. ಆದರೆ ಎರಡನೇ ಸುತ್ತಿನಲ್ಲಿ ಎಸೆಯುವಾಗ ಮುಸುಮುಸು ನಗಲಾರಂಭಿಸುತ್ತಿದ್ದ . ಅದಾದಮೇಲೆ ನಾನು ಹಾಗೆ ಮಾಡುವಾಗಲೆಲ್ಲಾ ಅವನು ಉಲ್ಲಾಸದಿಂದ ಗಹಗಹಿಸಿ ನಗುತ್ತಿದ್ದ. ಅವನು ಅದರಲ್ಲಿ ಬಹಳವಾಗಿ ಹರ್ಷಿಸಿ, ಆನಂದಿಸುತ್ತಿದ್ದ. ನಾನು ನನ್ನ ರೂಮಿನಲ್ಲಿ ನನ್ನ ಕೆಲವು ಕೆಲಸಗಳಲ್ಲಿ ಮಗ್ನನಾಗಿದ್ದಾಗ ಅವನು ನನ್ನ ರೂಮಿಗೆ ನನ್ನನ್ನು ಹುಡುಕುತ್ತಾ ಬಂದು ಅವನ ಬಾಲ ಭಾಷೆಯಲ್ಲಿ ಅದೇ ರೀತಿ ಎತ್ತಿ ಎಸೆದಾಡುವ ಆಟವನ್ನು ಆಡಿಸಬೇಕೆಂದು ಕೇಳುತ್ತಿದ್ದ.
ನನ್ನ ಪುಟ್ಟ ಸೋದರಳಿಯನು ಭಯವನ್ನು ಬಿಟ್ಟು ನನ್ನನ್ನು ವಿಶ್ವಾಸಿಸಲು ಆರಂಭಿಸಿದಾಗ ನಾನು ನಿಜವಾಗಿ ಯಾರಾಗಿದ್ದೇನೆ ಮತ್ತು ನನ್ನ ಉದ್ದೇಶವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲಾರಾಂಭಿಸಿದ. ನಮ್ಮ ಜೀವಿತದಲ್ಲೂ ಅದೇ ರೀತಿಯ ಸಂಗತಿಗಳು ಜರುಗುತ್ತಿರುತ್ತವೆ. ಕ್ರೈಸ್ತರಾಗಿ ನಾವು ದೇವರು ನಮಗೆ ತಂದೆಯಾಗಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಆದರೆ ಅದೇ ಸಮಯದಲ್ಲಿ ನಾವು ಮನುಷ್ಯರಾಗಿ ನಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬ "ಅಮೂರ್ತ ನಂಬಿಕೆಯನ್ನೂ" ಹೊಂದಿದ್ದೇವೆ. ಆದಾಗಿಯೂ ನಾವು ನಮ್ಮ ವಾಸ್ತವ ಜೀವಿತವನ್ನು ಎದುರಿಸುವಾಗ ಭಯಕ್ಕೂ- ಆತಂಕಕ್ಕೂ ಸ್ಥಳಕೊಟ್ಟುಬಿಡುತ್ತೇವೆ. ಇದು ನಮ್ಮನ್ನು ದೇವರು ನಾವು ಹಾದು ಹೋಗುತ್ತಿರುವ ಪರಿಸ್ಥಿತಿಗಳ ಮೂಲಕ ತನ್ನ ಕಾರ್ಯವನ್ನು ಮಾಡಲು ಪ್ರಯತ್ನಿಸುವ ಸೌಂದರ್ಯವನ್ನು ನಾವು ಕಾಣದಂತೆ ಹಿಂದೆಳೆದು ಬಿಡುತ್ತದೆ.
ಭಯಕ್ಕೂ- ಸಂದೇಹಕ್ಕೂ ಯಾವಾಗಲೂ ಸಂಬಂಧವಿರುತ್ತದೆ ಮತ್ತು ಅವು ಒಂದನ್ನೊಂದು ನಡೆಸುತ್ತವೆ. ಮನುಷ್ಯನ ಸಂದೇಹಗಳು ಭಯಾನಕವಾದವುಗಳು ಹಾಗೂ ಭಯಗ್ರಸ್ತ ಮನುಷ್ಯನು ಯಾವಾಗಲೂ ಸಂದೇಹ ಪಡುತ್ತಾನೆ.
"ನೀವು ತಿರಿಗಿ ಭಯದಲ್ಲಿ ಬೀಳುವ ಹಾಗೆ ದಾಸನ ಭಾವವನ್ನು ಹೊಂದಿದವರಲ್ಲ, ಮಗನ ಭಾವವನ್ನು ಹೊಂದಿದವರಾಗಿದ್ದೀರಿ. ಈ ಭಾವದಿಂದ ನಾವು ದೇವರನ್ನು ಅಪ್ಪಾ, ತಂದೆಯೇ, ಎಂದು ಕೂಗುತ್ತೇವೆ."(ರೋಮಾಪುರದವರಿಗೆ 8:15 ) ಇದನ್ನು ನೋಡಿದಿರಾ? ನಮ್ಮ ಹೋರಾಟದ ಸಮಯದಲ್ಲಿ ಭಯ ಹಾಗೂ ನಡಕವನ್ನು ಪ್ರದರ್ಶಿಸಲು ದೇವರು ನಮ್ಮನ್ನು ಉಂಟುಮಾಡಲಿಲ್ಲ. ಬದಲಾಗಿ ನಮ್ಮ ನಂಬಿಕೆಯು ನಾವು ದೇವರ ಕುಟುಂಬಕ್ಕೆ ಸೇರಿದವರು ಎಂಬ ತಿಳುವಳಿಕೆ ಹೊಂದಿಕೊಳ್ಳಬೇಕೆಂದು ನಮಗೆ ಸಹಾಯ ಮಾಡಲೆಂದೇ ದೇವರಾತ್ಮವನ್ನು ಕೊಡಲ್ಪಟ್ಟಿದೆ.ನಾವು ಅಪ್ಪ ತಂದೆಯೇ ಎನ್ನುವಂತದ್ದು ಹಾಗೆಯೇ ಮೊರೆ ಇಡುವಂತದ್ದು ನಾವು ಆತನ ಶಕ್ತಿ ಮತ್ತು ಸಾಮರ್ಥ್ಯಗಳ ಮೇಲೆ ಸಂಪೂರ್ಣವಾಗಿ ಅತುಕೊಳ್ಳುವ ಭಾವನೆಗಳ ಏರಿಳಿತದ ಪರಿಣಾಮವಾಗಿದೆ. ನಂಬಿಕೆ ಮತ್ತು ಭಯ ಇವೆರಡೂ ಕ್ರೈಸ್ತರ ಜೀವಿತದಲ್ಲಿ ಏಕಕಾಲಕ್ಕೆ ಅಸ್ತಿತ್ವದಲ್ಲಿ ಇರಬಾರದು. ನಾವು ಸಂಪೂರ್ಣವಾಗಿ ದೇವರನ್ನು ನಂಬಬೇಕು ಮತ್ತು ನಮ್ಮ ಜೀವಿತವು ತಂದೊಡ್ಡುವ ಯಾವುದೇ ಸಮಯದಲ್ಲೂ ಆತನು ನಮಗೆ ಸಹಾಯಕನಾಗಿರುವನು ಎಂಬ ಭರವಸೆಯೂ ಇರಬೇಕು. ದೇವರು ಅಂತ ಪರಿಸ್ಥಿತಿಗಳನ್ನು ತಂದೊಡ್ಡದಿದ್ದರೆ ದೇವರೇ ಆ ಪರಿಸ್ಥಿತಿಗಳ ಮೂಲಕ ನಮ್ಮನ್ನು ಹೊರತರುತ್ತಾನೆ.
ಕಡೆಯದಾಗಿ, ಕ್ರಿಸ್ತನು ಮಾರ್ಕ್ 4:40ರಲ್ಲಿ ಹೇಳಿದ್ದು ಅದನ್ನೇ
"ತರುವಾಯ ಆತನು ಅವರನ್ನು - ಯಾಕೆ ಧೈರ್ಯಗೆಡುತ್ತೀರಿ? ಇನ್ನೂ ನಿಮಗೆ ನಂಬಿಕೆಯಿಲ್ಲವೇ... "
ಎಂದು. ಭಯವೆನ್ನುವ ಒಂದೇ ಒಂದು ಸಂಗತಿಯೇ ಕ್ರಿಸ್ತಿಯ ಜೀವಿತದಲ್ಲಿರುವ ನಂಬಿಕೆಯನ್ನು ಕಳೆದುಬಿಡುವಂತದ್ದು. ಇಂದು ದೇವರನ್ನು ಪರಿಪೂರ್ಣವಾಗಿ ವಿಶ್ವಾಸಿಸುತ್ತೇವೆ ಮತ್ತು ದೇವರಿಗೆ ಸಂಪೂರ್ಣವಾಗಿ ಶರಣಾಗುವೆವು ಎಂದು ನಿರ್ಣಯಿಸಿಕೊಳ್ಳಿರಿ. ದೇವರ ವಾಕ್ಯಗಳು ಮತ್ತು ಆತನ ವಾಗ್ದಾನಗಳ ಮೇಲೆ ನಂಬಿಕೆ ಇಡದಂತೆ ವಂಚಿಸುವ ಭಯಕ್ಕೆ ಅವಕಾಶ ಕೊಡುವುದಿಲ್ಲ ಎಂದು ನಿರ್ಣಯಿಸಿಕೊಳ್ಳಿರಿ.
ಪ್ರಾರ್ಥನೆಗಳು
ತಂದೆ ದೇವರೇ, ನಾನು ಯಾವುದೇ ಪರಿಸ್ಥಿತಿಯಲ್ಲಿದ್ದರೂ ನಿನ್ನ ಮೇಲೆ ಭರವಸೆಯಿಂದ ಇರುವಂತೆ ಸಹಾಯ ಮಾಡು. ಯಾವುದೇ ಸಮಯದಲ್ಲೂ ಸೈತಾನನು ನನ್ನಲ್ಲಿ ಭಯಪಡುವಂತೆ ಕಾರಣ ನೀಡಿದರೂ, ನಾನು ನಿನಗೆ ಸ್ವಂತ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ನಿನ್ನ ನಂಬಿಕೆಯಲ್ಲಿ ಬಲವಾಗಿ ನಿಲ್ಲುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ಆಮೆನ್.
Join our WhatsApp Channel
Most Read
● ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.● ದುರಾತ್ಮಗಳ ಪ್ರವೇಶವನ್ನು ಮುಚ್ಚುವ ಅಂಶಗಳು- I
● ಇತರರಿಗಾಗಿ ಪ್ರಾರ್ಥಿಸುವುದು
● ಭೂರಾಜರುಗಳ ಒಡೆಯನು
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
ಅನಿಸಿಕೆಗಳು