"ನಾವು ನೋಡುವವರಾಗಿ ನಡೆಯದೇ ನಂಬುವವರಾಗಿ ನಡೆಯುವವರಾಗಿದ್ದೇವೆ "(2ಕೊರಿ 5:17)
ಈ ಒಂದು ದೇವರ ವಾಕ್ಯವು ನಂಬಿಕೆಯ ಮೂಲಕ ದೇವರೊಂದಿಗೆ ನಡೆದ ಜನರ ಮಾದರಿ ಚಿತ್ರಣವನ್ನು ನೀಡುತ್ತದೆ. ಹನೋಕಾ,ಅಬ್ರಹಾಮನು, ಹನ್ನಾ, ದಾವೀದ ಹಿಜ್ಕಿಯ, ದಾನಿಯೇಲಾ, ಮೂವರು ಇಬ್ರಿಯ ಮನುಷ್ಯರು ಮತ್ತು ಇನ್ನು ಅನೇಕರು. ಇವರೆಲ್ಲಾರು ಅಸಾಮಾನ್ಯರಾದ ಮನುಷ್ಯರಾಗಿರಲಿಲ್ಲ. ಆದರೆ ಅವರು ದೇವರನ್ನು ಮಾತ್ರ ತಮ್ಮ ಉದ್ಧಾರಕ ಎಂಬ ಭರವಸೆ ಮತ್ತು ಶರಣಾಗತಿಯಲ್ಲಿ ನಡೆದ ಸಾಮಾನ್ಯ ಮನುಷ್ಯರಾಗಿದ್ದರು. ವಿಪರೀತವಾದ ಸಂದೇಹಗಳ ಮೋಡಗಳು ಅವರನ್ನು ಕವಿದುಕೊಳ್ಳುತ್ತಿದ್ದರೂ ದೇವರ ಮೇಲೆ ಅವರು ಭರವಸೆ ಉಳ್ಳವರಾಗಿಯೇ ಇದ್ದರು.
ನಂಬುವವರಾಗಿ ನಡೆಯಲು ದೇವರ ಮೇಲೆ ಸಂಪೂರ್ಣವಾದ ವಿಶ್ವಾಸ ಹಾಗೂ ಆತನ ಚಿತ್ತದ ಮತ್ತು ಆಜ್ಞೆಗಳ ಅರಿವಿರಬೇಕು. ಅದು ಆತನಿಗೆ ನಮ್ಮ ಜೀವಿತದ ಮೇಲೆ ಉದ್ದೇಶಪೂರ್ವಕವಾಗಿ ನಿಯಂತ್ರಣ ಸಾಧಿಸಲು ಅನುವು ಮಾಡಿಕೊಡುತ್ತದೆ. ನಾವು ಅಬ್ರಹಾಮನ ಜೀವಿತದ ಮೇಲ್ಮೈಯನ್ನು ನೋಡುವಾಗ ನಂಬಿಕೆ ಎನ್ನುವಂತದ್ದು ಏನೂ ಅಲ್ಲದ ಒಬ್ಬ ಮನುಷ್ಯನನ್ನು ದೇವರು ಏನನ್ನು ಮಾಡಲು ಇಚ್ಚಿಸುತ್ತಾನೆ ಎಂಬುದನ್ನು ಅರಿತುಕೊಳ್ಳ ಬಹುದು. ಅಬ್ರಾಮನು ಬೇರೆ ಎಲ್ಲಾ ಸತ್ಯವೇದದಲ್ಲಿನ ಪಾತ್ರಧಾರಿಗಳ ಹಾಗೆ ಪರಿಚಯಿಸಲ್ಪಟ್ಟಿದ್ದಾನೆ. ಆದರೆ ಅವನ ನಂಬಿಕೆಯ ವ್ಯಾಖ್ಯಾನ ನೀಡುವ ಕ್ಷಣ ಬಂದಾಗ:ದೇವರು ತಾನು ತೋರಿಸುವ ಹೊಸ ಜಾಗಕ್ಕೆ ಹೋಗಲು ಈಗಿರುವ ಹಳೆಯ ಜಾಗವನ್ನು ಬಿಟ್ಟುಬಿಡುವಂತೆ ಹೇಳುತ್ತಾನೆ. ಅವನ ಈ ಭರವಸೆಗೆ ಮುಂಗಡವೆಂದು ದೇವರು ಅವನ ಹೆಸರನ್ನು ಅಬ್ರಹಾಮನೆಂದು ಬದಲಾಯಿಸುತ್ತಾನೆ.
ದೇವರು ಅವನನ್ನು ಅವನಿಗೆ ಬಹಳ ಚಿರಪರಿಚಿತವಾಗಿದ್ದಂತ ಸ್ಥಳದಿಂದ ಯಾರೂ ಸಹ ಅವನನ್ನು ಅರಿಯದಂತ ಸ್ಥಳಕ್ಕೆ ಕರೆಯುತ್ತಾನೆ. ಅವನು ಆ ಕರೆಗೆ ವಿದೇಯನಾದನು. ದೇವರು ಅವನನ್ನು ಕರೆದಾಗ ತಾನು ಎಲ್ಲಿಗೆ ಹೋಗಬೇಕು ಎಂಬ ವಿಳಾಸವನ್ನಾಗಲೀ ವಿವರಣೆಯನ್ನಾಗಲೀ ದೇವರನ್ನು ಅಬ್ರಹಾಮನು ಕೇಳಲಿಲ್ಲ.
ಅವನು ತನ್ನ ಆಸೆ ಇದು ತನ್ನ ಯೋಜನೆಗಳಿವು ಎಂದು ದೇವರ ಮುಂದೆ ತನ್ನ ಇಂಗಿತವನ್ನು ತೋಡಿಕೊಳ್ಳಲೂ ಇಲ್ಲ. ಅವನು ಸುಮ್ಮನೆ ವಿಧೇಯನಾದನು.
ಈ ಒಂದು ಹಂತದ ವಿಶ್ವಾಸವನ್ನು ದೇವರು ನಮ್ಮಿಂದ ಇಂದಿನ ದಿನಮಾನಗಳಲ್ಲಿ ನಿರೀಕ್ಷಿಸುತ್ತಿದ್ದಾನೆ. ನಾವಿಂದು ಓಡಿಸುತ್ತಿರುವ ನಮ್ಮ ಜೀವನದ ಬಂಡಿಯ ಹಿಡಿತವನ್ನು ಆತನಿಷ್ಟ ಬಂದ ಕಡೆಗೆ ಚಲಿಸುವಂತೆ ಆತನ ಕರಗಳಿಗೆ ಒಪ್ಪಿಸಿ ಕೊಡಬೇಕು. ಆತನು ನಿಮ್ಮ ಜೀವನದಲ್ಲಿ ಕೆಲವು ವಿಚಾರಗಳಿಗೆ ಮಾತ್ರ ಯಜಮಾನನಾಗಲು ಸಾಧ್ಯವಿಲ್ಲ. ಒಂದೋ ಆತನು ನಿಮ್ಮ ಜೀವಿತಕ್ಕೆ ಸಂಬಂಧಿಸಿದ ಎಲ್ಲದಕ್ಕೂ ಯಜಮಾನನಾಗಿರುತ್ತಾನೆ. ಇಲ್ಲವೇ ಯಾವುದಕ್ಕೂ ಆತನು ಯಜಮಾನನಲ್ಲ ಅಷ್ಟೇ. ನಾವೆಲ್ಲಿರಬೇಕು, ನಾವೇನನ್ನು ಮಾಡಬೇಕು ಮತ್ತು ಹೇಗೆ ಮಾಡಬೇಕು ಇವುಗಳೆಲ್ಲವೂ ನಂಬುವರಾಗಿ ನಡೆಯುವ ವಿಚಾರಕ್ಕೆ ಸಂಬಂಧಿಸಿದಂತಾಗಿದೆ.
ನಂಬುವರಾಗಿ ನಡೆಯುವಂತಹದ್ದು ದೇವರ ಸೂಚನೆಗಳನ್ನು ಯಾವುದೇ ಸಂದೇಹವಿಲ್ಲದೆ ಯಾವುದೇ ಹಿಂಜರಿಕೆ ಇಲ್ಲದೆ ಪಾಲಿಸುವುದಾಗಿದೆ ಕ್ರೈಸ್ತರಿಗೆ ನಂಬುವರಾಗಿ ನಡೆಯುವಂತದು ಒಂದು ಆಯ್ಕೆ ಅಲ್ಲ, ಅದು ಅವಶ್ಯ.
ಇಬ್ರಿಯ 11:6ರಲ್ಲಿ ಸತ್ಯವೇದ ಹೇಳುತ್ತದೆ "ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ."ಎಂದು. ಇದು ಕ್ರಿಸ್ತೀಯ ಜೀವಿತದಲ್ಲಿ ನಂಬಿಕೆ ಎಂಬುದು ಒಂದು ನಿಯಮ ಎಂಬ ಸತ್ಯವನ್ನು ಬೆಟ್ಟು ಮಾಡಿ ತೋರಿಸುತ್ತದೆ.ದೇವರು ಶಾರೀರಿಕವಾಗಿ ನಮ್ಮ ಜೊತೆ ಉಪಸ್ಥಿತಿಯಲ್ಲಿ ಇಲ್ಲದಿರಬಹುದು ಆದರೆ ಆತನ ವಾಕ್ಯಗಳ ಮೂಲಕ ನಾವು ಆತನ ಬಲವನ್ನು ಸಾಮರ್ಥ್ಯವನ್ನು ಅರಿತುಕೊಳ್ಳಬಹುದು.
ಆದರಿಂದಲೇ, ನಂಬಿಕೆ ಎಂಬುದು ಮಾತ್ರವೇ ನಾವು ಸತ್ಯವಾಗಿ ದೇವರನ್ನು ಹಿಂಬಾಲಿಸಲು ಇರುವ ಏಕೈಕ ಮಾರ್ಗವಾಗಿದೆ. ನಾವು ಆತನನ್ನು ವಿಶ್ವಾಸಿಸದಿದ್ದರೆ, ನಾವು ಆತನನ್ನು ನೋಡಲು ಸಾಧ್ಯವಿಲ್ಲ. ನಾವು ಆತನ ಮೇಲೆ ಆಧಾರ ಗೊಳ್ಳದಿದ್ದರೆ, ನಾವು ನಮಗೆ ಸಹಾಯ ಮಾಡಿಕೊಳ್ಳಲಾಗುವುದಿಲ್ಲ: ಇದಂತೂ ಸರಳ!
ನೀವು ದೇವರೊಂದಿಗಿನ ನಿಮ್ಮ ನಡೆಯನ್ನು ಹೆಚ್ಚು ಹೆಚ್ಚಾಗಿ ಹೃತ್ಪೂರ್ವಕವಾಗಿಯೂ ಫಲಪ್ರದವಾಗಿಯೂ ನೋಡಬೇಕೆಂಬ ಬಯಕೆ ಉಳ್ಳವರಾಗಿದ್ದರೆ ನೀವು ಆತನ ಮೇಲೆಯೇ ಆಧಾರಗೊಳ್ಳಬೇಕು ಮತ್ತು ಆತನ ವಾಕ್ಯಗಳನ್ನು ವಿಶ್ವಾಸಿಸಬೇಕು. "ನೀವು ಧರ್ಮಶಾಸ್ತ್ರದ ನಿಯಮಗಳನ್ನೆಲ್ಲಾ ಪರಿಶೋಧಿಸಿ......". ನಿಮ್ಮ ಜೀವನವು ಆತನ ವಾಗ್ದಾನಗಳು ಮತ್ತು ತತ್ವಗಳ ಆಳ್ವಿಕೆಗೆ ಒಳಪಡಲಿ.

ಪ್ರಾರ್ಥನೆಗಳು
ತಂದೆಯಾದ ದೇವರೇ, ಆಸಕ್ತಿಯಿಂದಲೂ ನಿಯಮಿತವಾಗಿಯೂ ನಂಬಿಕೆಯಲ್ಲಿ ನಾನು ನಡೆಯುವಂತೆ ಸಹಾಯ ಮಾಡು. ನಿನ್ನ ವಾಕ್ಯಗಳನ್ನು ಸಂಪೂರ್ಣವಾಗಿ ವಿಶ್ವಾಸಿಸುವಂತೆಯೂ, ನಿನ್ನ ಕೃಪೆಯ ಮೇಲೆ ಸಂಪೂರ್ಣವಾಗಿ ಆಧಾರಗೊಳ್ಳುವಂತೆಯೂ ನನಗೆ ಬೋಧಿಸು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.
Join our WhatsApp Channel
Most Read
● ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.● ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?
● ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ
● ದೇವರಿಗೆ ಮೊದಲಸ್ಥಾನ ನೀಡುವುದು #3
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
● ಪರಿಶೋಧನೆಯ ಸಮಯದಲ್ಲಿ ನಂಬಿಕೆ
● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
ಅನಿಸಿಕೆಗಳು