ಅನುದಿನದ ಮನ್ನಾ
ನಂಬಿಕೆಯಲ್ಲಿ ದೃಢವಾಗಿ ನಿಲ್ಲುವುದು
Thursday, 30th of May 2024
2
1
315
Categories :
ನಂಬಿಕೆ (Faith)
"ಅವನು ಹೆಚ್ಚುಕಡಿಮೆ ನೂರು ವರುಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದುಹೋಯಿತೆಂದೂ ಯೋಚಿಸಿದಾಗ್ಯೂ ಅವನ ನಂಬಿಕೆಯು ಕುಂದಲಿಲ್ಲ. [20] ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ. " (ರೋಮಾಪುರದವರಿಗೆ 4:19-20)
ನಂಬಿಕೆಯ ನಡೆಯಲ್ಲಿ ಬರುವ ಪ್ರತಿಯೊಂದು ಪರೀಕ್ಷೆಗಳು ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಲು ಇರುವ ಅವಶ್ಯಕ ಅಂಶಗಳಾಗಿವೆ.ದೇವರು ಮನುಷ್ಯನನ್ನು ಪರೀಕ್ಷಿಸುವ ಮೂಲಕವೇ ಆ ಮನುಷ್ಯನನ್ನು ನಂಬಿಕೆಯನ್ನು ಇನ್ನಷ್ಟು ಬಲಗೊಳ್ಳುವಂತೆಯೂ, ದೃಢವಾಗಿ ನಿಲ್ಲುವಂತೆಯೂ, ಯಾವುದೇ ಬಿರುಗಾಳಿಗೂ ಅಲಗಾಡದಂತೆಯೂ ಮಾಡುತ್ತಾನೆ.ನೀವು ನಿಮ್ಮ ಜೀವಿತದಲ್ಲಿ ಆಗಾಗ್ಗೆ ಬರುವ ಸವಾಲುಗಳ ಬಿರುಗಾಳಿಗೆ ಅಲಗಾಡುವಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೀರಾ? ನೀವು ಆ ಉಪದ್ರವಗಳನ್ನು ಜಯಿಸಿ ನಂಬಿಕೆಯಲ್ಲಿ ಬಲಗೊಳ್ಳಬೇಕೆಂದು ದೇವರು ಅಪೇಕ್ಷಿಸುತ್ತಾನೆ.
ನಮ್ಮ ಇಂದಿನ ವಾಕ್ಯದ ಪ್ರಮುಖ ಅಧ್ಯಯನ ಅಂಶವು ಹೇಳುವುದೇನೆಂದರೆ ಅಬ್ರಹಾಮನು ತಾನು ಎದುರಿಸಿದ ಹಾಗೂ ಜಗತ್ತು ಅವನ ಮೇಲೆ ಎಸೆದ ನಿರುತ್ಸಾಹ ಪಡಿಸುವ ಮಾತುಗಳ ಮಧ್ಯದಲ್ಲೂ ದೇವರು ತನಗೆ ಕೊಟ್ಟ ವಾಗ್ದಾನದ ವಿಚಾರದಲ್ಲಿ ಅಪನಂಬಿಕೆಯಿಂದ ಚಂಚಲನಾಗಲಿಲ್ಲ. ಅವನು ದೇವರ ಮೇಲಿನ ತನ್ನ ನಂಬಿಕೆಯಲ್ಲಿ ದೃಢವಾಗಿ ನಿಂತನು ದೇವರಿಗೆ ಸಲ್ಲಿಸಬೇಕಾದ ಮಹಿಮೆಯನ್ನು ಸ್ತೋತ್ರವನ್ನು ಎಂದಿಗೂ ತಪ್ಪಿಸಲಿಲ್ಲ. ಯೋಬನು ಸಹ ಇದಕ್ಕಿಂತ ಏನೂ ಭಿನ್ನವಾಗಿರಲಿಲ್ಲ. ಅವನು ತನ್ನೆಲ್ಲಾ ಮಕ್ಕಳನ್ನು, ಸ್ವತ್ತನ್ನು, ಸಂಪತ್ತನ್ನು ಕಳೆದುಕೊಂಡರೂ ಅವನು ದೇವರನ್ನು ಆರಾಧಿಸುವುದನ್ನು ಮಾತ್ರ ಬಿಡಲಿಲ್ಲ. ತನ್ನ ಉಪದ್ರವದ ಕಾಲದ ಕಡೆಯ ಗಳಿಗೆವರೆಗೂ ಅವನು ತನ್ನ ನಂಬಿಕೆಯಲ್ಲಿ ದೃಢವಾಗಿ ನಿಂತನು.(ಯೋಬ 1:20-22).
ದೇವರ ವಾಗ್ದಾನಗಳು ಯಾವಾಗಲೂ ದೃಢವಾಗಿದ್ದು ಅವು ಎಂದಿಗೂ ನೆಲಕಚ್ಚುವುದಿಲ್ಲ. ಆದರೆ ನಾವು ನಮ್ಮ ನಂಬಿಕೆಯನ್ನು ಕಳೆದುಕೊಂಡಾಗ ನಿರುತ್ಸಾಹಗೊಂಡಾಗ ಅವು ನೆರವೇರದೆ ಹೋಗುವವವು. ಇಂದು ನಾವು ನಿರುತ್ಸಾಹಗೊಳ್ಳದೇ ಇರೋಣ. ಸೈತಾನ ಯಾವಾಗಲೂ ಹೇಳುವಂತೆ ನೀವು ನಿಮ್ಮ ಜೀವಿತವನ್ನು ಮುಗಿಸುವುದಿಲ್ಲ. ಅವನ ಸುಳ್ಳುಗಳನ್ನು ನಿರಾಕರಿಸಿ, ದೇವರ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. ಅವನನ್ನೂ ಅವನ ತಂತ್ರಗಳನ್ನೂ ಎದುರಿಸಿರಿ. ಯಾವುದೇ ಸಂದೇಹಕ್ಕೂ ಜಾಗ ಕೊಡಬೇಡಿರಿ (ಯಾಕೋಬ 4:7).
ಕರ್ತನಾದ ಯೇಸುವು ತನ್ನ ಶಿಷ್ಯರ ಅಪನಂಬಿಕೆಯನ್ನು ಯಾವಾಗಲೂ ಸೌಜನ್ಯದಿಂದ ಗದರಿಸುತ್ತಿದ್ದನು. ದೇವರನ್ನು ಕೋಪಗೊಳಿಸುವ ಅಪನಂಬಿಕೆಯಂಥ ಪಾಪ ಇನ್ನೊಂದಿಲ್ಲ. ದೇವರು ಸಂದೇಹ ಪಡುವುದನ್ನು ಅಸಹ್ಯಸಿಸುತ್ತಾನೆ. ಪ್ರತಿಯೊಬ್ಬ ಮನುಷ್ಯನು ತನ್ನ ಜೀವಿತದ ಪ್ರತಿಯೊಂದು ಅವಶ್ಯಕತೆಗಳಿಗಾಗಿ ತನ್ನನ್ನು ವಿಶ್ವಾಸಿಸಬೇಕೆಂದು ದೇವರು ಬಯಸುತ್ತಾನೆ.
ನೀವು ನಂಬಿಕೆಯಲ್ಲಿ ದೃಢವಾಗಿ ನಿಲ್ಲಲು ನೀವು ನಿರಂತರವಾಗಿ ಆತನ ವಾಕ್ಯದಲ್ಲಿರುವ ವಾಗ್ದಾನಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೇವರ ವಾಕ್ಯದ ಮೂಲಕ ನಿಮ್ಮ ನಂಬಿಕೆಯನ್ನು ಕಟ್ಟಿಕೊಳ್ಳುವಾಗ ನಿಮ್ಮ ಸಂಗತಿಗಳು ಹೊಸ ತಿರುವುಗಳನ್ನು ಪಡೆದುಕೊಳ್ಳುವುದನ್ನು ನೀವು ನೋಡಬಹುದು. ನೀವು ದೇವರ ವಾಕ್ಯಗಳನ್ನು ಸಂತೋಷದಿಂದ ಸ್ವೀಕರಿಸಿ ಕೊಳ್ಳುವಾಗ ನಿಮ್ಮ ನಂಬಿಕೆಯು ಬಲಗೊಳ್ಳುತ್ತಾ ಹೋಗುತ್ತದೆ. ನಿಮ್ಮ ಕುರಿತು, ನಿಮ್ಮ ಕುಟುಂಬದ ಕುರಿತು, ನಿಮ್ಮ ಆರೋಗ್ಯದ ಕುರಿತು, ನಿಮ್ಮ ಹಣಕಾಸು ಕುರಿತು, ನಿಮ್ಮ ವ್ಯವಹಾರಗಳ ಕುರಿತು, ನಿಮ್ಮ ಪರಿಸ್ಥಿತಿ ಕುರಿತು ವಾಕ್ಯ ಏನು ಹೇಳುತ್ತದೋ ಅದನ್ನು ಮನಪೂರಕವಾಗಿ ಹುಡುಕಿರಿ ಮತ್ತು ಅದನ್ನು ನಂಬಿರಿ. ದೇವರ ವಾಕ್ಯ ಬಿಟ್ಟು ಮತ್ಯಾವುದೇ ರಕ್ಷಣೆ ಮಾರ್ಗವಾಗಲೀ ಜೀವ ರಕ್ಷಕ ಕವಚವಾಗಲೀ ಇಲ್ಲವೇ ಇಲ್ಲ. ಆತನ ಮಾತುಗಳೆಲ್ಲಾ ಹೌದು ಮತ್ತು ಆಮೆನ್ ಎಂಬುದೇ ಆಗಿವೆ. (2 ಕೊರಿಯಂತೆ 1:20).
ದೇವ ಮಗುವೇ, ನೀನು ನಿನ್ನ ಜೀವಿತದಲ್ಲಿ ದೇವರು ಮಾಡಿರುವ ಉಪಕಾರಗಳನ್ನು ನೆನೆದು ಅದಕ್ಕಾಗಿ ಸ್ತೋತ್ರ ಸಲ್ಲಿಸುತ್ತಾ ದೇವರ ವಾಗ್ದಾನಗಳನ್ನೇ ನಿರೀಕ್ಷಿಸು. ನಿನ್ನ ಪ್ರಸ್ತುತ ಪರಿಸ್ಥಿತಿಗಳು ಆರಾಧನೆ ಮೇಲೆ ಪರಿಣಾಮ ಬೀರುತ್ತಿಲ್ಲ ಎಂಬ ಖಚಿತತೆ ನಿನಗಿರಲಿ. ಆಗ ದೇವರು ನಿನ್ನ ಜೀವಿತದಲ್ಲಿ ಕಾರ್ಯ ಮಾಡುವುದನ್ನು ನೀನು ನೋಡುವೆ. ನೀನು ನಂಬಿಕೆಯಲ್ಲಿ ದೃಢವಾಗಿ ನಿಂತಿರುವಂತೆಯೂ ಅದರಲ್ಲಿಯೇ ಬೃಹದಾಕಾರವಾಗಿ ಬೆಳೆಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ.
ಪ್ರಾರ್ಥನೆಗಳು
Father, I thank You for Your word, which builds my faith always. I ask for the grace to wait on all Your promises and not compromise. Help me to stand firm, oh Lord. In Jesus’ name.
Join our WhatsApp Channel
Most Read
● ದೇವರು ಹೇಗೆ ಒದಗಿಸುತ್ತಾನೆ #4● ಮಹಾತ್ತಾದ ಕಾರ್ಯಗಳು
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ
● ಆತ್ಮೀಕ ಚಾರಣ
● ಆತನಿಗೆ ಯಾವುದೇ ಮಿತಿಯಿಲ್ಲ.
● ದೇವರಿಗೇ ಪ್ರಥಮ ಸ್ಥಾನ ನೀಡುವುದು #2.
ಅನಿಸಿಕೆಗಳು