ಅನುದಿನದ ಮನ್ನಾ
ಸ್ತ್ರೀ ಪುರುಷರು ಏಕೆ ಪತನಗೊಳ್ಳುವರು- 5
Sunday, 12th of May 2024
1
0
190
Categories :
ಜೀವನದ ಪಾಠಗಳು (Life Lessons)
"ಮನುಷ್ಯನ ಹೃದಯವು ಚಿಕ್ಕಂದಿನಿಂದಲೇ ಕೆಟ್ಟದ್ದು" ಎಂದು ಆದಿಕಾಂಡ 8:21 ರಲ್ಲಿ ಕರ್ತನಾದ ಯೆಹೋವನು ಹೇಳುತ್ತಾನೆ. ಆಗ ಮನುಷ್ಯರೆಲ್ಲರೂ ನಿರಂತರವಾಗಿ ದುಷ್ಟತ್ವವನ್ನೇ ಹೃದಯದಲ್ಲಿ ಕಲ್ಪಿಸಿಕೊಳ್ಳುವಂಥದ್ದು ದೇವರ ಹೃದಯವನ್ನು ದುಃಖ ಪಡಿಸಿತ್ತು ಮತ್ತು ಲೋಕವನ್ನೆಲ್ಲಾ ಜಲಪ್ರಳಯದ ಮೂಲಕ ನಾಶವಾಗುವಂತೆ ಮಾಡಿತ್ತು. ಇಂದಿನ ದಿನಮಾನಗಳಲ್ಲಿ ನಮ್ಮ ಸುತ್ತಲೂ ಆಗುತ್ತಿರುವ ದುಷ್ಟತ್ವವನ್ನು ನೋಡುತ್ತಿದ್ದರೆ ಖಂಡಿತವಾಗಿಯೂ ಆತನ ಹೃದಯವು ಅತೀವವಾದ ದುಃಖಕ್ಕೊಳಗಾಗಿದೆ ಎಂಬುದಂತೂ ಸ್ಪಷ್ಟ.
ಎಲ್ಲ ರೀತಿಯ ಪಾಪಗಳು ಮೊದಲು ನಮ್ಮ ಆಲೋಚನೆಗಳಿಂದಲೇ (ಕಲ್ಪನೆಗಳಿಂದ) ಆರಂಭವಾಗುತ್ತದೆ. ದೇವರ ವಾಕ್ಯವು ಸ್ಪಷ್ಟವಾಗಿ ನಮಗೆ ಹೇಳುವುದೇನೆಂದರೆ "ಕೂಡಲೆ ದಾವೀದನು ಒಬ್ಬನನ್ನು ಕರೆದು ಆ ಸ್ತ್ರೀ ಯಾರೆಂದು ಕೇಳಲು ಅವನು - ಆಕೆಯು ಎಲೀಯಾಮನ ಮಗಳೂ ಹಿತ್ತಿಯನಾದ ಊರೀಯನ ಹೆಂಡತಿಯೂ ಆಗಿರುವ ಬತ್ಷೆಬೆಯಲ್ಲವೋ ಎಂದು ಉತ್ತರ ಕೊಟ್ಟನು.4 ಆಗ ದಾವೀದನು ಆಗಲೇ ಋತುಸ್ನಾನಮಾಡಿಕೊಂಡಿದ್ದ ಆಕೆಯನ್ನು ದೂತರ ಮುಖಾಂತರವಾಗಿ ಕರೇಕಳುಹಿಸಿದನು; ಆಕೆಯು ಬರಲು ಆಕೆಯನ್ನು ಕೂಡಿದನು." ಎಂದು (2 ಸಮುವೇಲನು 11:3-4)
"ಆದರೆ ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ.15 ಆಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ."(ಯಾಕೋಬನು 1:14-15)
ದಾವೀದನು ಬಕ್ಷಬೆ ಕುರಿತು ವಿಚಾರಿಸುವಾಗ ಅಲ್ಲಿನ ಜನರು ಸ್ಪಷ್ಟವಾಗಿ ಆಕೆಯು ವಿವಾಹಿತ ಸ್ತ್ರೀ ಎಂದು ಅವನಿಗೆ ಹೇಳಿದರು. ಇನ್ನೂ ದುರದೃಷ್ಟವಾದ ಸಂಗತಿ ಏನೆಂದರೆ ಆಕೆಯು ಅರಸನ ಒಬ್ಬ ನಿಷ್ಠಾವಂತ ಹಾಗೂ ವಿಶ್ವಾಸ ಯೋಗ್ಯ ಸೈನಿಕನಾದ ಹಿತ್ತೀಯನವನಾದ ಊರಿಯನ ಹೆಂಡತಿ ಎಂದು ಕೂಡ ಹೇಳಿದರು. ಒಂದೇ ಕ್ಷಣದಲ್ಲಿ ತರ್ಕ, ಕಾರಣಗಳು ಮತ್ತು ಆತ್ಮಿಕ ಸಮರ್ಥನೆಗಳೆಲ್ಲಾ ಅಲ್ಲಿ ಮೂಲೆ ಕಸವಾಗಿ ಹೋಯಿತು ಮತ್ತು ದಾವಿದನು ಕಾಮಾಂಧನಾದನು. ದುರಂತ ವಿಚಾರವೇನೆಂದರೆ ದಾವಿದನ ಈ ಪಾಪವು ಅವನನ್ನು ವ್ಯಭಿಚಾರ, ನರಹತ್ಯೆ ಎಂಬ ಕೃತ್ಯಗಳನ್ನು ನಡೆಸುವಂತೆ ಮಾಡಿ ಅವನ ಇಡೀ ಕುಟುಂಬದ ತಲೆಮಾರಿಗೆ ಪಾಪದಿಂದ ಒದಗುವ ಸಮಸ್ಯೆಗಳಿಗೆ ಗುರಿಮಾಡಿತು.
ನೀವು ಒಂದು ವೇಳೆ ಯಾವುದಾದರೂ ಪಾಪಕ್ಕೆ ಸಿಲುಕಿ ಬಿಟ್ಟಿದ್ದರೆ ಅದನ್ನೇ ಪುನರಾವರ್ತಿಸುವ ಮಾದರಿಯನ್ನಾಗಿ ಮಾಡಿಕೊಳ್ಳಬೇಡಿ. ನಾನಿಲ್ಲಿ ಮಾದರಿಯನ್ನಾಗಿ ಎಂದು ಹೇಳುವ ಅರ್ಥವೇನೆಂದರೆ ನೀವು ಒಂದು ಸಂಗತಿಯನ್ನು ಪದೇಪದೇ ಮಾಡುತ್ತಿದ್ದರೆ ಅದು ಮಾದರಿಯಾಗಿ ಬಿಡುತ್ತದೆ. ನಾನು ನಿಮ್ಮನ್ನು ಗೌರವ ಪೂರಕವಾಗಿ ಎಚ್ಚರಿಸುವುದೇನೆಂದರೆ ಅವು ನಿಮ್ಮನ್ನು ನಾಶನಕ್ಕೆ ಕೊಂಡೊಯ್ಯುತ್ತದೆ. ಮಾರಣಾಂತಿಕವಾಗಿ ಗಾಯಗೊಂಡ ಮನುಷ್ಯರಂತೆ ತಕ್ಷಣವೇ ಅದರ ಕುರಿತು ಕಾಳಜಿ ವಹಿಸಬೇಕು ನೀವು ಈಗಲೇ ಆ ಪಾಪಗಳಿಗಾಗಿ ದೇವರ ಕಡೆಗೆ ತಿರುಗಿಕೊಂಡು ಪಶ್ಚಾತಾಪ ಪಡಬೇಕು.
"ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು."(ಜ್ಞಾನೋಕ್ತಿಗಳು 4:23). ನಮ್ಮ ಮನಸ್ಸು ಯಾವುದಕ್ಕೆ ಲಕ್ಷ ವಿಡುತ್ತದೋ ನಮ್ಮ ಜೀವನದಲ್ಲಿ ಅದೇ ಆಟ ಆರಂಭವಾಗುತ್ತದೆ. ಬರಬರುತ್ತ ಅದೇ ನಾವಾಗಿ ರೂಪಾಗೊಳ್ಳುತ್ತೇವೆ. ನಾವು ನಮ್ಮ ಜೀವಿತದಲ್ಲಿ ಮುಳುಗಿಹೋಗಲು ನಮ್ಮ ಆಲೋಚನೆಗಳೇ ಹೊರತು ನಮ್ಮ ಪರಿಸ್ಥಿತಿಗಳು ಕಾರಣವಲ್ಲ.
ಪರಿಶುದ್ಧತೆಗಾಗಿ ನಿಮ್ಮ ಮನಸ್ಸಿನಲ್ಲಾಗುವ ಹೋರಾಟವು ಒಂದು ಜಯ ಹೊಂದುತ್ತದೆ ಇಲ್ಲವೇ ಸೋಲನ್ನಪ್ಪುತ್ತದೆ. ನಾವು ಅಂತಹ ಆಲೋಚನೆಗಳನ್ನು ಸೆರೆ ಹಿಡಿಯುವುದನ್ನು ಕಲಿತುಕೊಳ್ಳಬೇಕು. ಆ ಆಲೋಚನೆಗಳು ಅರಳುವ ಮುನ್ನವೇ ಮೊಗ್ಗಿನಲ್ಲೇ ಅವುಗಳನ್ನು ಚಿವುಟಿ ಹಾಕಬೇಕು.
ಪ್ರಾರ್ಥನೆಗಳು
ತಂದೆಯೇ, ನನ್ನಲ್ಲಿರುವ ಎಲ್ಲಾ ಅಶುದ್ಧ ಆಲೋಚನೆಗಳನ್ನು ಬಯಕೆಗಳನ್ನು ಯೇಸು ನಾಮದಲ್ಲಿ ನಿರ್ಮೂಲ ಮಾಡಿರಿ. ನಿನ್ನ ಮಹಿಮೆಗಾಗಿ ಪರಿಶುದ್ಧವಾಗಿ ನಾನು ಜೀವಿಸಲು ಯೇಸು ನಾಮದಲ್ಲಿ ನನಗೆ ಕೃಪೆಯನ್ನು ಅನುಗ್ರಹಿಸಿ ಆಮೆನ್
Join our WhatsApp Channel
Most Read
● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ● ನಂಬಿಕೆಯ ಜೀವಿತ
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ದಿನ 40:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅತ್ಯಂತ ಸಾಮಾನ್ಯ ಭಯಗಳು
● ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?
ಅನಿಸಿಕೆಗಳು