"ದೇವರು ತನ್ನ ಶಕ್ತಿಯ ಪ್ರಯೋಗದಲ್ಲಿ ನನಗೆ ಉಚಿತಾರ್ಥವಾಗಿ ಅನುಗ್ರಹಿಸಿದ ಕೆಲಸವನ್ನನುಸರಿಸಿ ನಾನು ಈ ಸುವಾರ್ತೆಗೆ ಸೇವಕನಾದೆನು. "(ಎಫೆಸದವರಿಗೆ 3:7)
ಮೆರಿಯಂ ವೆಬ್ಸ್ಟೆರ್ ಶಬ್ದಕೋಶದ ಪ್ರಕಾರ "ಉಡುಗೊರೆ ಎಂದರೆ "ಯಾವುದಕ್ಕೂ ಪರಿಹಾರವಾಗಿಯಲ್ಲದೇ, ಒಬ್ಬರು ಸ್ವಯಿಚ್ಛೆಯಿಂದ ಇನ್ನೊಬ್ಬರಿಗೆ ಏನನ್ನಾದರೂ ವರ್ಗಾಯಿಸುವುದಾಗಿದೆ". ನಾವಿಲ್ಲಿ ಗಮನಿಸಬೇಕಾಗಿರುವ ಒಂದು ವಿಚಾರವೆಂದರೆ ಉಡುಗೊರೆಯು ಕೊಡುವವನ ಮನೋನಿರ್ಧಾರವಾಗಿದೆಯೇ ಹೊರತು ತೆಗೆದುಕೊಳ್ಳುವವನದಲ್ಲ. ಉಡುಗೊರೆಯನ್ನು ಕೊಡುವವರು ಯಾವಾಗ ಕೊಡಬೇಕು? ಹೇಗೆ ಕೊಡಬೇಕು? ಮತ್ತು ಯಾರಿಗೆ ಈ ಉಡುಗೊರೆ ಕೊಡಬೇಕು? ಎಂದು ನಿರ್ಧರಿಸುವವರಾಗಿರುತ್ತಾರೆ.
ಆಸಕ್ತಿಕರ ವಿಷಯವೇನೆಂದರೆ ಹೊಸ ಒಡಂಬಡಿಕೆಯಲ್ಲಿರುವ "ವರ" (ಚರಿಷ್ಮ) ಎಂಬ ಪದಗಳೆಲ್ಲಾ "ಕೃಪೆ" ಎನ್ನುವ ಪದವಾಗಿ ಭಾಷಾಂತರಗೊಂಡಿದೆ. ದೇವರ ವಾಕ್ಯದ ಬರಹಗಾರರು ಸಹ ಕೃಪೆ ಎಂಬುದು ಉಚಿತಾರ್ಥ ವರ: ಯೋಗ್ಯತೆ ಇಲ್ಲದೆ ಹೊಂದಿಕೊಳ್ಳುವ ದಯೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದರು. ನಾವು ಅದಕ್ಕೆ ಯೋಗ್ಯರೆಂದು ನಾವದನ್ನು ಪಡೆದುಕೊಳ್ಳುವುದಿಲ್ಲ ಅಥವಾ ನಾವು ಅದನ್ನು ಹೊಂದಿಕೊಳ್ಳಲು ಅರ್ಹತೆ ಪಡೆದುಕೊಳ್ಳುವಂತಹ ಯಾವುದೋ ಕಾರ್ಯ ಮಾಡಿದ್ದೇವೆ ಅಂತಲೂ ಅಲ್ಲ.
ದೇವರ ಕೃಪೆಯು ನಮ್ಮ ಕ್ರಿಯೆಗಳಿಂದಾಗಿ ಅಥವಾ ನಮ್ಮ ಅರ್ಹತೆಗಳಿಂದಾಗಲಿ ಕೊಡಲ್ಪಡುವುದಿಲ್ಲ ಆದ್ದರಿಂದ ದೇವರು ನಮ್ಮ ಕಡೆಗೆ ಹರಿಸುವ ಆತನ ಕೃಪೆಯನ್ನು ತಡೆಯಲು ಅಥವಾ ಕಡಿಮೆ ಮಾಡಲು ನಾವು ಏನನ್ನು ಮಾಡಲು ಸಹ ಸಾಧ್ಯವಿಲ್ಲ. ಆತನು ಕೃಪೆಯನ್ನು ಅನುಗ್ರಹಿಸುವವನಾಗಿದ್ದಾನೆ ಮತ್ತು ಆತನು ಮನುಷ್ಯನ ಕ್ರಿಯೆಗಳು ನಿಷ್ಕ್ರಿಯೆಗಳಿಂದ ಪ್ರತ್ಯೇಕಿಸಲ್ಪಟ್ಟ ವೇದಿಕೆ ಮೇಲೆ ತನ್ನ ಕೃಪೆಯ ಕಾರ್ಯವನ್ನು ಮಾಡುವವನಾಗಿದ್ದಾನೆ. ಈ ಉಚಿತಾರ್ಥವರವು ಕೇವಲ ನಾವು ಏನು ಮಾಡಿದ್ದೇವೋ ಅದರ ಮೇಲೆ ಆಧಾರಗೊಂಡಿದ್ದರೆ, ಅದರ ಸಾರಾಂಶ ಹುರಳಿಲ್ಲದ್ದು.
ಹಾಗಾದರೆ ಆತನ ಕೃಪೆಯ ಮೂಲವೆಲ್ಲಿದೆ? ಆತನ ಕೃಪೆಯು ಎಲ್ಲಿಂದ ಬರುತ್ತದೆ? ಅಪೋಸ್ತಲನಾದ ಪೌಲನು ಈ ಮೇಲಿರುವ ವಾಕ್ಯದಲ್ಲಿ "ದೇವರ ಶಕ್ತಿಯ ಪ್ರಯೋಗದ" ಮೂಲಕ ಎಂಬ ಆ ರಹಸ್ಯವನ್ನು ನಮ್ಮ ಮುಂದೆ ಬಿಚ್ಚಿಡುತ್ತಾನೆ.ನಮ್ಮ ಸಕ್ರಿಯೆಗಳಿಂದಲ್ಲ ಅಥವಾ ನಮ್ಮ ಕಾರ್ಯ ಪ್ರವೃತ್ತತೆಯಿಂದಲ್ಲ, ಆದರೆ ದೇವರ ಶಕ್ತಿ ಪ್ರಯೋಗದ ಕಾರ್ಯಕಾರಿತ್ವದಿಂದಲೇ ನಮಗೆ ದೇವರ ಕೃಪೆಯು ದೊರಕುವಂಥದ್ದು ಮತ್ತು ನಾವು ಆತನ ವಾಕ್ಯಗಳಿಂದಲೇ ಆತನು ಅತಿಶಯವಾದ ಬಲವುಳ್ಳವನು ಅಸಾಧ್ಯವಾದದನ್ನು ಸಾಧಿಸುವ ಪರಾಕ್ರಮಿಯಾದ ದೇವರೆಂದು ಅರಿತುಕೊಳ್ಳುತ್ತೇವೆ.
ಆದ್ದರಿಂದ ದೇವರು ನಮ್ಮ ಮುಂದೆ ಇಟ್ಟಿರುವ ಈ ಖಾಲಿ ಚೆಕ್ಕನ್ನು ನಾವು ಹಿಡಿತದಲ್ಲಿಟ್ಟುಕೊಳ್ಳುವುದಾದರೆ ಮಾನವನ ಗ್ರಹಿಕೆಗೂ- ಮಾನಸಿಕ ಸಂರಚನೆಗೂ ಮೀರಿದಂತ ಆತ್ಮಿಕ ಸ್ತರದಲ್ಲಿ ಅದು ಕಾರ್ಯ ಮಾಡುತ್ತದೆ. ಅದಕ್ಕಾಗಿ ನಾವು ಮಾಡಬೇಕಾಗಿರುವುದು ಇಷ್ಟೇ! ಆತನ ವಾಕ್ಯದಲ್ಲಿ ನಂಬಿಕೆ ಉಳ್ಳವರಾಗಿ ಆತನ ಕೃಪೆಯನ್ನು ಸಂಪೂರ್ಣವಾಗಿ ವಿಶ್ವಾಸಿಸ ಬೇಕು. ಕೃಪೆಯನ್ನುವಂತದ್ದು ವೈಯಕ್ತಿಕವಾದ ಸಾಮರ್ಥ್ಯಗಳನ್ನು ಸಕ್ರಿಯಗೊಳಿಸಲು ಇರದೇ ಆತ್ಮಿಕವಾದ ಸಾಮರ್ಥ್ಯಗಳಲ್ಲಿ ಇರುವ ಸೌಲಭ್ಯಗಳನ್ನು ಸಕ್ರಿಯಗೊಳಿಸುವಂತಹದ್ದಾಗಿದೆ!
ದೇವರು ತನ್ನ ಅಪ್ರತಿಮವಾದ ಜ್ಞಾನದಲ್ಲಿ ಮನುಷ್ಯನು ಪರಲೋಕದ ಆಶೀರ್ವಾದಗಳನ್ನು ಅನುಭವಿಸುವಂತೆ ಯೋಜನೆಯನ್ನು ಸಂಯೋಜಿಸಿದ್ದಾನೆ. ನಾವು ಭೂಮಿಯ ಮೇಲೆ ದೇವರ ಸ್ವಭಾವದಲ್ಲಿ ಜೀವಿಸಬೇಕೆಂದು ಒಂದು ಬಾಗಿಲನ್ನು ತೆರೆಯಲಾಗಿದೆ. ಆದರೆ ಆ ಉತ್ತಮ ಅವಕಾಶದ ಬಾಗಿಲನ್ನು ಪ್ರವೇಶಿಸಲು "ಕೃಪೆ" ಎಂಬುದು ರಹಸ್ಯ ಸಂಕೇತವಾಗಿದೆ! ಇದೊಂದೇ ಸಾಕಾದದ್ದು!ನೀವು ನಿಮ್ಮ ಕ್ರಿಸಿಯ ಜೀವಿತದ ಪ್ರಯಾಣದಲ್ಲಿ ಸೆಣಸಾಡಿ ಸೆಣಸಾಡಿ ಸೋತು ಹೋಗಿದ್ದೀರಾ?ನಿಮ್ಮ ಜೀವಿತದ ಸವಾಲುಗಳ ಮಧ್ಯದಲ್ಲೂ ಜಯಪ್ರದವಾದ ಕ್ರಿಸ್ತೀಯ ಜೀವಿತ ಜೀವಿಸುವ ಮಾರ್ಗವನ್ನು ಎದುರು ನೋಡುತ್ತಿದ್ದೀರಾ?ನೀವು ದೇವರ ವಾಕ್ಯದಲ್ಲಿ ಓದಿದ ಪ್ರತಿಯೊಂದು ಅದ್ಭುತವನ್ನು ನೋಡಿ ಇದು ನನ್ನ ಜೀವಿತದಲ್ಲಿ ಜರುಗಬಾರದೇ ಎಂದು ಬಯಸುತ್ತಿದ್ದೀರಾ?
ಹಾಗಾದರೆ, ನಿಮ್ಮ ಜೀವಿತದಲ್ಲಿ ಅಲೌಕಿಕವಾದ ಆಳ್ವಿಕೆ ಮತ್ತು ಯಶಸ್ಸಿಗೆ ಸಾಧನವಾದ ದೇವರ ಕೃಪೆ ಬಿಟ್ಟು ನಿಮಗೆ ಬೇರೇನೂ ಬೇಕಿಲ್ಲ! ವಾಸ್ತವ ವಿಷಯವೇನೆಂದರೆ ಆತನನ್ನು ನಿರೀಕ್ಷಿಸಲು, ಆತನನ್ನು ಯಥಾರ್ಥವಾಗಿ ಹುಡುಕಲು ದೇವರ ಮೇಲೆ ಭರವಸೆ ಇಡಲು ಸಹ ನಿಮಗೆ ಆತನ ಕೃಪೆ ಬೇಕು.ಆದ್ದರಿಂದ ದೇವರ ಅಪರಿಮಿತವಾದ ಎಂದೂ ಮುಗಿಯದಂತ ಆತನ ಕೃಪೆಯಲ್ಲಿ ಇಂದೇ ಮುಂದಿನ ಹೆಜ್ಜೆ ಇಡಿರಿ.
ಪ್ರಾರ್ಥನೆಗಳು
ತಂದೆಯೇ, ಎಲ್ಲಾ ಸಂಗತಿಗಳಿಗಾಗಿಯೂ ನಿನ್ನ ಕೃಪೆಯ ಮೇಲೆಯೇ ಆಧಾರ ಗೊಳ್ಳಲು ನನಗೆ ಸಹಾಯ ಮಾಡು. ನನ್ನ ಜೀವಿತವು ಯೇಸು ನಾಮದಲ್ಲಿ ನಿನ್ನ ಕೃಪೆಯೊಂದಕ್ಕೆ ಯೇಸು ನಾಮದಲ್ಲಿ ಜೋತು ಬೀಳಲಿ. ಆಮೆನ್.
Join our WhatsApp Channel
Most Read
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2● ದೇವರ ಕೃಪೆಯನ್ನು ಸೇದುವುದು
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
● ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!
● ಪರಲೋಕದ ವಾಗ್ದಾನ
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಉಪವಾಸದ ಮೂಲಕ ದೇವದೂತರ ಸಂಚಲನೆಯನ್ನು ಉಂಟು ಮಾಡುವುದು.
ಅನಿಸಿಕೆಗಳು