"ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ."(ಎಫೆಸದವರಿಗೆ 2:8)
"ಅಮೇಜಿಂಗ್ ಗ್ರೇಸ್ ಹೌ ಸ್ವೀಟ್ ದಟ್ ಸೌಂಡ್ ದಟ್ ಸೇವ್ಡ್ ಅ ವ್ರೆಚ್ ಲೈಕ್ ಮಿ" ಎನ್ನುವ ಪದ್ಯವನ್ನು ನಾನು ಹಾಡುವಾಗಲೆಲ್ಲಾ ನನ್ನ ರಕ್ಷಣೆಯ ಕಥೆಯಲ್ಲಿ ಕೃಪೆಯು ಎಂತಹ ಪಾತ್ರ ವಹಿಸಿದೆ ಎಂಬುದನ್ನು ಜ್ಞಾಪಿಸುತ್ತಲೇ ಇರುತ್ತದೆ.ಕರ್ತನು ನನ್ನನ್ನು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ರಕ್ಷಿಸಿದನು.ನನ್ನ ಜೀವಮಾನದಲ್ಲೆಲ್ಲಾ ನಾನು ಉಚಿತವಾಗಿ ನನಗೆ ಅನುಗ್ರಹಿಸಿದ ಈ ಒಂದು ಕೃಪೆಯ ವರದಲ್ಲಿ ಆನಂದಿಸುವವನಾಗಿದ್ದೇನೆ. ನನಗೆ ಖಂಡಿತವಾಗಿಯೂ ಗೊತ್ತು ನಿಮಗೂ ಕೂಡ ಇಂಥದ್ದೇ ಒಂದು ಕಥೆ ಇರುತ್ತದೆ ಎಂದು.
ಈ ಹೊತ್ತಿನ ನಮ್ಮ ವಾಕ್ಯದ ಜ್ಞಾನದ ಮುಖ್ಯ ಭಾಗವು ನಾವು ಯಾವ ರೀತಿಯಲ್ಲಿ ರಕ್ಷಣೆಯನ್ನು ಪಡೆದುಕೊಂಡಿದ್ದೇವೆ ಎಂಬುದನ್ನು ವಿವರಿಸುತ್ತದೆ.ರಕ್ಷಣೆಗೆ ನಮ್ಮ ಯಾವುದೇ ಕಾರ್ಯಗಳ -ಪ್ರಯಾಸಗಳ ಅಗತ್ಯವಿಲ್ಲ ಎಂಬ ವಾಸ್ತವತೆಯನ್ನು ವಿವರಿಸುತ್ತದೆ. ಪ್ರತಿಯೊಬ್ಬ ವಿಶ್ವಾಸಿಯು ಇಂದು ರಕ್ಷಣೆ ಹೊಂದಿರುವಂತದ್ದು ಯಾವುದೋ ಒಂದು ನಿರ್ದಿಷ್ಟ ಕರ್ತವ್ಯವನ್ನು ಜವಾಬ್ದಾರಿಯನ್ನು ನೆರವೇರಿಸಿಯಲ್ಲ.ನಮ್ಮ ರಕ್ಷಣೆಗೆ ಬೇಕಾಗಿರುವುದು ಮಾನಸಂತರ ಹೊಂದುವ ನಮ್ಮ ದೃಢ ಚಿತ್ತ ಮತ್ತು ಬಯಕೆಯೇ ಹೊರತು ಬೇರೆ ಯಾವುದೇ ಮಾನದಂಡದ ಅಗತ್ಯ ಇದಕ್ಕಿಲ್ಲ. ಯಾವುದೇ ವ್ಯಕ್ತಿಯಾಗಲೀ ಅವನು ಎಷ್ಟೇ ಬಲಶಾಲಿಯಾಗಿದ್ದರೂ ಎಷ್ಟೇ ಸಾಮರ್ಥ್ಯ ಉಳ್ಳವನಾಗಿದ್ದರೂ ಸರಿಯೇ ತನ್ನ ಸ್ವಂತ ರಕ್ಷಣೆಯನ್ನು ಗಳಿಸಿಕೊಳ್ಳಲಾರನು.
ಕಪಾಲ ಸ್ಥಳದಲ್ಲಿ ಯೇಸು ಮಾಡಿದ ತ್ಯಾಗದ ಕಾರ್ಯ ನಮ್ಮನ್ನು ಕೃಪೆ ರಕ್ಷಿಸಿದೆ ಎಂಬುದಕ್ಕೆ ಪರಿಪೂರ್ಣವಾದ ಉದಾಹರಣೆಯಾಗಿದೆ. ಏದೆನ್ ತೋಟದ ಮಧ್ಯದಲ್ಲಿ ಆದಂತಹ ಪತನದ ದಿನದಿಂದಲೂ ಮನುಕುಲವು ಪಾಪ ಅಂಧಕಾರ ಮತ್ತು ನಾಶನದ ಕೆಸರಿನಲ್ಲಿ ಹೊರಳಾಡುತ್ತಲೇ ಇತ್ತು. ವಿಮೋಚನೆಗೆ ಯಾವುದೇ ಮಾರ್ಗವಾಗಲೀ ಇರಲಿಲ್ಲ ಮತ್ತು ಯಾವ ಮನುಷ್ಯನ ರಕ್ತವು ಪಾಪಕ್ಕೆ ಪ್ರಾಯಶ್ಚಿತವಾಗಿ ಅರ್ಪಿಸಲು ಯೋಗ್ಯವಾಗಿರಲಿಲ್ಲ. ಹಾಗಾಗಿ ಮಾನವನ ಜೀವಿತ ನಾಶನದಲ್ಲೇ ಮುಂದುವರೆಯುತ್ತಾ ಪಾಪದಲ್ಲೇ ವ್ಯರ್ಥವಾಗಿ ಹೋಗುತ್ತಿತ್ತು.
ಆದರೆ ದೇವರ ದಯೆ ಹಾಗೂ ಪ್ರೀತಿಯ ಸ್ವಭಾವವು ಮನುಷ್ಯನ ನೈತಿಕ ಭ್ರಷ್ಟತೆ ಮತ್ತು ಆಲಸ್ಯವನ್ನು ಪರಿಹರಿಸಲು ನಮಗಾಗಿ ಒಂದು ಮಹಾನ್ ಯೋಜನೆಯನ್ನು ಸಿದ್ಧ ಮಾಡಿತು.ಸತ್ಯವೇದದಲ್ಲಿನ ಯೋಹಾನ ಪುಸ್ತಕದ 3:16ರ ಜನಪ್ರಿಯ ವಾಕ್ಯವು ಕರುಣಾಮಯನಾದ ತಂದೆಯ ಪ್ರೀತಿಯು ಮಾಡಿದ ಅತ್ಯುನ್ನತ ಯಜ್ಞವನ್ನು ಕುರಿತು ನಮಗೆ ಹೇಳುತ್ತದೆ.
ಮನುಕುಲದ ಮೇಲಿರುವ ದೇವರ ಪ್ರೀತಿಯು ಆತನ ಹೃದಯದಲ್ಲಿ ನಮಗಾಗಿ ವಿಸ್ತಾರವಾದ ಸ್ಥಳಾವಕಾಶ ಮಾಡಿಕೊಟ್ಟಿದೆ. ನಾವೆಲ್ಲರೂ ನರಕಕ್ಕೆ ಪಾತ್ರರಾದವರೇ! ಆದರೆ ಕೃಪೆಯು ಪ್ರವೇಶಿಸಿ ನಮ್ಮ ಪತನ- ತಿರಸ್ಕಾರದ ಕಥೆಯನ್ನು ಬೇರೆಯಾಗಿ ಪುನರಚಿಸಿತು!
ಅನೇಕ ಸತ್ಯವೇದ ಪಂಡಿತರು ಕೃಪೆ ಪದದ ಆಂಗ್ಲ ಪರಿಭಾಷೆಯ ಗ್ರೇಸ್ ನ ಸಂಕ್ಷಿಪ್ತ ವ್ಯಾಖ್ಯಾನವನ್ನು ಹೀಗೆ ನೋಡಿದರು.
G=God's
R=riches
A=At
C=Christ
E=expenses
ಅಂದರೆ ಕ್ರಿಸ್ತನ ವೆಚ್ಚದಲ್ಲಿರುವ ದೇವರ ಸಂಪತ್ತು ಎಂದು
ಹೊಸ ಒಡಂಬಡಿಕೆ ಸಭೆಯ ಕಾಲದಲ್ಲಿ ಅನೇಕ ಯಹೂದಿ ವಿಶ್ವಾಸಿಗಳು ಅನ್ಯ ಜನರನ್ನು ಮತಾಂತರವಾಗಲು ಸುನ್ನತಿಯನ್ನು ಮಾಡಿಸಿಕೊಂಡು ಶಾಸ್ತ್ರ ಸಂಪ್ರದಾಯಗಳನ್ನು ಅವರು ಕೈಗೊಳ್ಳಬೇಕೆಂದು ನಿರೀಕ್ಷಿಸಿದರು. ಅದೇ ದೇವರನ್ನು ಮೆಚ್ಚಿಸಲಿರುವ ಮಾರ್ಗವೆಂದು ಬೋಧಿಸುತ್ತಿದ್ದರು (ಅ . ಕೃ 15:1-2 ಓದಿರಿ) ಆದರೆ ಕ್ರಿಸ್ತನು ನಮಗೆ ಕೃಪಾವರವನ್ನು ಅನುಗ್ರಹಿಸಿದಾಗ ಆತನು ನಮ್ಮಿಂದ ಪ್ರತಿಯಾಗಿ ಏನನ್ನೂ ನಿರೀಕ್ಷಿಸಲಿಲ್ಲ. ತನ್ನ ಕೃಪಾವರವನ್ನು ಪ್ರೀತಿಯಿಂದ ನಮಗೆ ನಾವದಕ್ಕೆ ಅರ್ಹರಲ್ಲದವರಾಗಿದ್ದರೂ ಅನುಗ್ರಹಿಸಿದನು. ಆತನ ಕೃಪೆಯಿಂದಲೇ ನಾವು ರಕ್ಷಣಾ ವರವನ್ನು ಪಡೆದುಕೊಂಡಿದ್ದೇವೆ.ಆ ವರವನ್ನು ಸಂಪಾದಿಸಲು ನಾವೇನೂ ಮಾಡಬೇಕಾದ ಅಗತ್ಯವಿಲ್ಲ!
ಪ್ರಾರ್ಥನೆಗಳು
Father, Your grace continues to astound me despite my inadequacies. Your love remains unabashed by my shortcomings. Thank You for Your grace, and help me never to lose sight of it. In Jesus’ name. Amen.
Join our WhatsApp Channel
Most Read
● ನಂಬಿಕೆ- ನಿರೀಕ್ಷೆ -ಪ್ರೀತಿ● ದೂರದಿಂದ ಹಿಂಬಾಲಿಸುವುದು
● ಅಂತ್ಯಕಾಲದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು : #1
● ಮೊಗ್ಗು ಬಿಟ್ಟಂತಹ ಕೋಲು
● ದೈವೀಕ ಅನುಕ್ರಮ -2
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ಮನುಷ್ಯರಿಂದ ಬರುವ ಹೊಗಳಿಕೆಗಿಂತಲೂ ದೇವರು ಕೊಡುವ ಪ್ರತಿಫಲವನ್ನು ಎದುರು ನೋಡುವುದು.
ಅನಿಸಿಕೆಗಳು