ಅನುದಿನದ ಮನ್ನಾ
ಕರ್ತನಾದ ಯೇಸುವಿನ ಮುಖಾಂತರ ಕೃಪೆ
Saturday, 8th of June 2024
1
1
297
Categories :
ಅನುಗ್ರಹ (Grace)
"ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು; ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು."(ಯೋಹಾನ 1:17)
ಒಂದು ಅಂಕಿ ಅಂಶದ ಪ್ರಕಾರ ಇಂದಿನ ಲೋಕದಲ್ಲಿ ಧರ್ಮದ ಸಂಖ್ಯೆಗಳು ಹೆಚ್ಚಳವಾಗುತ್ತಿವೆ. ಅನೇಕರು ಇಂದು ದೇವರನ್ನು ತಲುಪಲು ಇರುವ ಮಾರ್ಗದ ನಕ್ಷೆಯನ್ನು ಹುಡುಕುತ್ತಿದ್ದಾರೆ ಮತ್ತು ಇನ್ನು ಹುಡುಕುತ್ತಲೇ ಇದ್ದಾರೆ.
ಮನುಷ್ಯನಿಗಿರುವ ದೇವರನ್ನು ಮತ್ತು ತನಗಿಂತ ಉನ್ನತವಾದವನನ್ನು ಹುಡುಕುವ ಬಯಕೆ ಆಳವಾದದ್ದು ಮತ್ತು ಅದು ಹುಟ್ಟಿನಿಂದಲೇ ಬರುವಂತದ್ದು. ಇದರಿಂದಲೇ ಜಗತ್ತನ್ನು ಅನಾವರಣಗೊಳಿಸಲು ಚಾರಣಿಗರು ಗಾಢವಾದ ಕಾಡುಗಳ ಮಧ್ಯದಲ್ಲಿ ಹೋದಷ್ಟು ಆರಾಧಿಸುವಂತಹ ವಸ್ತುಗಳನ್ನು ಅವರು ಕಂಡುಕೊಳ್ಳುತ್ತಲೇ ಇದ್ದಾರೆ. ಪ್ರತಿಯೊಂದು ಧರ್ಮವು ಇಂದು ಅದರ ತಿಳಿಯದ ದೇವರನ್ನು ಹುಡುಕುವ ಮಾರ್ಗವನ್ನೂ, ಅದಕ್ಕೆ ಸಂಬಂಧಿಸಿದ ನಿಯಮ -ಆಜ್ಞೆಗಳನ್ನು ವಿವರಿಸುತ್ತದೆ. ಅವರು ಎಷ್ಟು ಹೆಚ್ಚು ಹೆಚ್ಚಾಗಿ ಆಜ್ಞೆಗಳಿಗೆ ವಿದೇಯರಾಗಲು ಹೋಗುತ್ತಾರೆಯೋ ಅಷ್ಟೇ ಬೇಗ ಅದರಲ್ಲಿ ಬಿದ್ದು ಹೋಗುತ್ತಾರೆ. ಅವರಂತೂ ತಮಗೆ ತಿಳಿಯದಂತ ದೇವರನ್ನು ಮೆಚ್ಚಿಸಲು ಇನ್ನಿಲ್ಲದ ಪ್ರಯತ್ನಗಳ ಹಗ್ಗ ಜಗ್ಗಾಟವನ್ನು ಮುಂದುವರಿಸುತ್ತಲೇ ಇದ್ದಾರೆ.
ಹಳೆಯ ಒಡಂಬಡಿಕೆಯಲ್ಲಿ ಇಸ್ರಾಯೆಲ್ಯರು ದೇವರ ಮಾರ್ಗವನ್ನು ಎಂದಿಗೂ ಅರಿತುಕೊಳ್ಳಲೇ ಇಲ್ಲ. ಅವರು ಕೇವಲ ಶಾಸನಗಳು ಮತ್ತು ಆಜ್ಞೆಗಳನ್ನಷ್ಟೇ ಬಲ್ಲವರಾಗಿದ್ದರೇ ವಿನಃ ನಿತ್ಯಕ್ಕೂ ಪರಿಪೂರ್ಣವಾಗಿಯೂ ಮತ್ತು ಅತಿ ಪವಿತ್ರವಾಗಿಯೂ ಜೀವಿಸುವಂತಹ ದೇವರ ಮಾನದಂಡವನ್ನೂ ಮತ್ತು ಆತನ ವ್ಯಕ್ತಿತ್ವವನ್ನು ಅವರು ಅರ್ಥ ಮಾಡಿಕೊಳ್ಳುವಂತಹ ಸ್ಥಾನಕ್ಕೆ ಎಂದೂ ತಲಪಲಿಲ್ಲ (ಕೀರ್ತನೆ 103:7)
ಹಳೆ ಒಡಂಬಡಿಕೆಯಲ್ಲಿರುವ ದೇವ ದರ್ಶನದ ಗುಡಾರದ ವಿನ್ಯಾಸವು ಧರ್ಮಶಾಸ್ತ್ರದಿಂದ ಮನುಷ್ಯನು ಪವಿತ್ರ ಜೀವನ ಜೀವಿಸಲು ಪ್ರಯತ್ನಿಸುವ ಕಾರ್ಯ ಅಪೂರ್ಣವಾದದ್ದು ಹಾಗೂ ಕೊರತೆಯುಳ್ಳದ್ದು ಎಂಬುದನ್ನು ಬಹಿರಂಗಪಡಿಸಿತು.
ಯಾವುದು ದೇವರ ಬಳಿಗೆ ಕರೆದುಕೊಂಡು ಹೋಗಬೇಕಿತ್ತೋ, ಅದೇ ಮನುಷ್ಯನನ್ನು ಆತನಿಂದ ಇನ್ನೂ ದೂರ ಉಳಿಯುವಂತೆ ಮಾಡಿ ಆತನ ಸಾನಿಧ್ಯವನ್ನು ಪ್ರವೇಶಿಸಿದಂತೆ ಮಾಡಿಬಿಟ್ಟಿತ್ತು.
ಧರ್ಮಶಾಸ್ತ್ರವು ದೇವರ ಮಾನದಂಡಕ್ಕಿಂತ ಮನುಷ್ಯನ ಜೀವಿತವು ಯಾವಾಗಲೂ ಅಸಮರ್ಥವಾದದ್ದು ಮತ್ತು ಕೊರತೆಯುಳ್ಳದ್ದು ಎಂದು ತೋರಿಸುವುದನ್ನೇ ಮುಂದುವರಿಸುತ್ತಿದೆ. ಅದಕ್ಕಾಗಿ ಸತ್ಯವೇದವು ಧರ್ಮಶಾಸ್ತ್ರವನ್ನು ಶಾಲಾ ಶಿಕ್ಷಕ ಎಂದು ಕರೆಯುತ್ತದೆ. (ಗಲಾತ್ಯ 3:25)
ಕರ್ತನಾದ ಯೇಸುವಿನ ಬರೋಣವು ವ್ಯಕ್ತಿಯಾಗಿ ದೇವರನ್ನು ಅರ್ಥ ಮಾಡಿಕೊಳ್ಳುವಂತಹ ಹಂತಕ್ಕೆ ನಮ್ಮನ್ನು ತಂದಿತು. ಯೇಸುವು ತನ್ನೊಡನೆ ನಂಬಿಕೆಯನ್ನು- ಕೃಪೆಯನ್ನು ತಂದನು. ನಂಬಿಕೆಯು ದೇವರನ್ನು ಸಂಧಿಸಲಿರುವ ಸಾಧನ ಮತ್ತು ಕೃಪೆಯು ಆ ಸಾಧನವನ್ನು ಉಪಯೋಗಿಸಿಕೊಳ್ಳಲು ಸಿದ್ಧಪಡಿಸಿದ ವೇದಿಕೆಯಾಗಿದೆ. ನಂಬಿಕೆಯು ದೇವರನ್ನು ವ್ಯಕ್ತಿಯಾಗಿ ಅರ್ಥ ಮಾಡಿಕೊಳ್ಳುವ ಸ್ಥಾನಕ್ಕೆ ತರುತ್ತದೆ. ಆದರೆ ಅದಕ್ಕೆ ತದ್ವಿರುದ್ದವಾಗಿ ಧರ್ಮಶಾಸ್ತ್ರವು ನಿರ್ವಾತಾವನ್ನು ಮೂಡಿಸಿ ದೇವರ ಬೋಧನೆಗಳನ್ನು ಜೀವವಿಲ್ಲದಂತೆಯೂ- ಸಮಾಧಾನವಿಲ್ಲದಂತೆಯೂ ಮಾಡುತ್ತದೆ.
"ಕ್ರಿಸ್ತನಂಬಿಕೆಯ ಕಾಲ ಬರುವದಕ್ಕೆ ಮೊದಲು ನಾವು ಮುಂದಕ್ಕೆ ಪ್ರಕಟವಾಗಬೇಕಾಗಿದ್ದ ಆ ನಂಬಿಕೆಗೆ ವಶವಾಗುವದಕ್ಕಾಗಿ ಧರ್ಮಶಾಸ್ತ್ರದ ಕೈಕೆಳಗೆ ಕಾವಲಲ್ಲಿ ಮುಚ್ಚಲ್ಪಟ್ಟಿದ್ದೆವು." ಎಂದು ಗಲಾತ್ಯದವರಿಗೆ 3:23 ನಮಗೆ ಹೇಳುತ್ತದೆ.
ಕರ್ತನಾದ ಯೇಸುವು ಮನುಷ್ಯರಾದವರು ಬೇರೆ ಯಾವ ಮನುಷ್ಯ ಮಧ್ಯವರ್ತಿ ಇಲ್ಲದೇ ದೇವರ ಸಾನಿಧ್ಯಕ್ಕೆ ಧೈರ್ಯವಾಗಿ ಹೋಗುವಂತಹ ವೇದಿಕೆಯನ್ನು ಸಂಬಂಧಗಳ ಪುನ ಸ್ಥಾಪನೆಗಾಗಿಯೂ ಮತ್ತು ನ್ಯಾಯಕ್ಕಾಗಿ ಒದಗಿಸಿ ಕೊಟ್ಟಿದ್ದಾನೆ. ಕೇವಲ ಯೇಸುವಿನ ಮುಖಾಂತರ ಮಾತ್ರವೇ ಪ್ರತಿಯೊಬ್ಬ ಮನುಷ್ಯನು ರಕ್ಷಿಸಲ್ಪಡುವನು ಮತ್ತು ಪರಿಪೂರ್ಣತೆಗೆ ಬರುವನು.
ಹಾಗಾಗಿ ನಂಬಿಕೆಯಿಂದ ನಾವು ಆತನ ಬಲವನ್ನು ಹೊಂದಿಕೊಳ್ಳುತ್ತೇವೆ. ಹಾಗೆಯೇ ಕೃಪೆಯಿಂದಲೇ ನಾವು ಆತನನ್ನು ವ್ಯಕ್ತಿಯಾಗಿಯೂ ಮತ್ತು ಆತನ ಮಾರ್ಗಗಳನ್ನು ಇನ್ನೂ ಹೆಚ್ಚಾಗಿ ಅರಿತುಕೊಳ್ಳುತ್ತೇವೆ.
ಪ್ರಾರ್ಥನೆಗಳು
ಕರ್ತನಾದ ಯೇಸುವೇ ಮನುಕುಲಕ್ಕೆ ನೀನು ತಂದುಕೊಟ್ಟ ಕೃಪೆಗಾಗಿ ನಿನಗೆ ಸ್ತೋತ್ರ. ಆಮೆನ್
Join our WhatsApp Channel
Most Read
● ದೇವರ ಕೃಪೆಯನ್ನು ಸೇದುವುದು● ನಿಮ್ಮ ಗತಿಯನ್ನು ಬದಲಾಯಿಸಿ
● ಯಾವುದೂ ಮರೆಯಾಗಿಲ್ಲ
● ಮಳೆಯಾಗುತ್ತಿದೆ
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
● ಸಮಯದ ಸೂಚನೆಗಳ ವಿವೇಚನೆ.
ಅನಿಸಿಕೆಗಳು