ಅನುದಿನದ ಮನ್ನಾ
ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
Saturday, 22nd of June 2024
3
2
256
Categories :
ಪ್ರೀತಿ (Love)
"ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ." (ರೋಮಾಪುರದವರಿಗೆ 5:8)
ಮತ್ತೊಬ್ಬರಿಂದ ಏನನ್ನೂ ಪ್ರತಿಯಾಗಿ ನಿರೀಕ್ಷಿಸದೆ ಅವರ ಬಗ್ಗೆ ಸ್ವಾಭಾವಿಕವಾಗಿ ಕಾಳಜಿ ವಹಿಸುವುದು ಮಾನವರಿಗೆ ಅಸಾಧ್ಯ. ಮತ್ತು ನಾವಿಂದು ಇಂತಹ ಅಸಾಧ್ಯ ಎನ್ನುವ ಲೋಕದಲ್ಲಿ ಜೀವಿಸುತ್ತಿದ್ದೇವೆ. ಪ್ರತಿಯಾಗಿ ಏನನ್ನೂ ಸಹ ನೀಡದ ವ್ಯಕ್ತಿಗೆ ಜನರು "ಪ್ರೀತಿ" ತೋರಿಸುವಂತದ್ದು ತೀರಾ ಅಪರೂಪ. ಜನರು ತಮಗೆ ಒಳ್ಳೆಯದನ್ನು ಮಾಡುವವರಿಗೆ ಅಥವಾ ಒಳ್ಳೆಯದನ್ನು ಮಾಡಬಲ್ಲವರಿಗೆ ಒಳ್ಳೆಯದನ್ನು ಮಾಡುವಂಥದ್ದು ಪ್ರವೃತ್ತಿಯಾಗಿದೆ. ಇಂದಿನ ಲೋಕವು ಕಾರ್ಯನಿರ್ವಹಿಸುವುದೇ ಹೀಗೆ.
ಇದಕ್ಕೆ ಕಾರಣವೂ ಬಹಳ ಸರಳ : ಮಾನವನ ಪ್ರೀತಿ ಷರತ್ತು ಬದ್ಧವಾಗಿದೆ. ಜನರು ತಮಗೆ ಸುಂದರವಾಗಿ ಕಾಣುವವರನ್ನು ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿರುವವರನ್ನು ಅಥವಾ ಯಾವುದೋ ವಿಚಾರದಲ್ಲಿ ಆಕರ್ಷಕ ಎನ್ನುವವರನ್ನು ಮಾತ್ರವೇ ಪ್ರೀತಿಸುತ್ತಾರೆ. "ಆ ವ್ಯಕ್ತಿ ಅಥವಾ ಆ ವಿಷಯ ನನ್ನ ಪ್ರೀತಿಗೆ ಯೋಗ್ಯವಾಗಿರಬೇಕು" ಎಂಬ ಮನೋಭಾವವನ್ನು ಮನುಷ್ಯನು ಹೊಂದಿರುತ್ತಾನೆ. ಆ ವಸ್ತು ಅಥವಾ ಆ ವ್ಯಕ್ತಿ ಬದಲಾದರೆ ಅವರನ್ನು ಪ್ರೀತಿಸುವ ವಿಧಾನವು ಸಹ ಬದಲಾಗುತ್ತದೆ. ಇನ್ನೂ ಕೆಲವು ಜನರಂತೂ ಯಾವುದಾದರೂ ರೀತಿಯಲ್ಲಿ ತಮಗೆ ಒಳ್ಳೆಯದಾಗುವುದಿದ್ದರೆ ಮಾತ್ರವೇ ಅಂತವರಿಗೆ ಒಳ್ಳೆಯ ಮುಖಭಾವವನ್ನು ತೋರಿಸುತ್ತಾರೆ.
ಆದಾಗಿಯೂ ನಿಜವಾದ ಪ್ರೀತಿಯ ನಿಜವಾದ ವ್ಯಾಖ್ಯಾನ ವಾಗಿರುವ ದೇವರು ನಮಗೆ ವಿಭಿನ್ನ ಮಾದರಿಯ ಪ್ರೀತಿಯನ್ನು ಪರಿಪೂರ್ಣವಾಗಿ ತೋರಿಸುವವನಾಗಿದ್ದಾನೆ. ರೋಮ 5:8ರಲ್ಲಿ " ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟಿದ್ದಾರೆ ಅಲ್ಲಿ ದೇವರು ನಮ್ಮ ಮೇಲೆ ತನಗೆ ಇರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ " ಎಂದು ಹೇಳುವುದನ್ನು ನೋಡುತ್ತೇವೆ. ಲೋಕವು ವಾಸ್ತವವಾಗಿ ದೇವರಿಗೆ ಅವಿಧೇಯವಾಗಿತ್ತು. ದೇವರಿಗಾಗಿ ಅರ್ಪಿಸಲು ಲೋಕಕ್ಕೆ ಏನೂ ಇರಲಿಲ್ಲ. ಲೋಕವೇನೋ ದೇವರ ಆಜ್ಞೆಗಳಿಗೆ ವಿಧೇಯವಾಗಲು ಆರಂಭಿಸಿಬಿಟ್ಟಿದೆ ಎಂದುಕೊಂಡು ದೇವರು ಲೋಕದ ಪಾಪಗಳಿಗಾಗಿ ತನ್ನ ಮಗನನ್ನು ಮರಣಕ್ಕೆ ಒಪ್ಪಿಸಲು ಕಳುಹಿಸಿಕೊಡಲಿಲ್ಲ.
ಮೆಸೇಜ್ ವರ್ಷನ್ ಸತ್ಯವೇದವು ಈ ವಾಕ್ಯವನ್ನು ಈ ರೀತಿ ಹೇಳುತ್ತದೆ " ಆದರೆ ನಾವು ಆತನಿಗೆ ಏನೂ ಅಲ್ಲದವರು, ಯಾವ ರೀತಿಯಲ್ಲಿಯೂ ಆತನಿಗೆ ಉಪಯೋಗಕ್ಕೆ ಬಾರದವರಾಗಿರುವಾಗ ಆತನು ತನ್ನ ಮಗನನ್ನು ಮರಣಕ್ಕೆ ಒಪ್ಪಿಸಿಕೊಡುವ ಮೂಲಕ ತನ್ನ ಪ್ರೀತಿಯನ್ನು ಸಿದ್ಧಾಂತ ಪಡಿಸಿದನು ಎಂದು. ನಿಜವಾಗಿಯೂ ಇದು ವ್ಯತ್ಯಾಸವಾದ ಪ್ರೀತಿಯೇ ಹೌದು! ಲೋಕವು ಇಂದು ಪ್ರೀತಿಯನ್ನು ಸಿದ್ಧಾಂತಪಡಿಸುವ ರೀತಿಗೆ ಇದು ಮೈಲಿಗಟ್ಟಲೆ ದೂರವಾಗಿದೆ.
ಸ್ಪಷ್ಟವಾಗಿ, ನೀವು ಪಾಪಿಯಾಗಿದ್ದರೂ ದೇವರು ನಿಮ್ಮನ್ನು ಇಷ್ಟರಮಟ್ಟಿಗೆ ಪ್ರೀತಿಸಬಹುದಾದರೆ ನೀವು ಇನ್ನೆಷ್ಟರವರೆಗೂ ಆತನ ಮಗುವಾಗಿದ್ದಿರಿ. ನೀವು ನಿಮ್ಮ ಕುರಿತು ಯೋಚಿಸುವಾಗ ನೀವು ನಿಮ್ಮನ್ನು ಅಯೋಗ್ಯರು ಆ ಪಾತ್ರರು ಎಂದು ಅಂದುಕೊಳ್ಳುವಂತೆ ಮಾಡಲು ಸೈತಾನನಿಗೆ ಎಷ್ಟು ಮಾತ್ರಕ್ಕೂ ಅವಕಾಶ ಕೊಡಬೇಡಿರಿ. ಇಂತಹ ಭಾವನೆಗಳು ದೇವರ ಪ್ರೀತಿಯ ಸತ್ಯತೆಯನ್ನೇ ಕಸಿದುಕೊಳ್ಳಬಹುದು. ಒಬ್ಬ ಮಹಾನ್ ದೇವ ಮನುಷ್ಯರು ಒಮ್ಮೆ ಹೇಳಿರುವುದೇನೆಂದರೆ " ಭಾವನೆಗಳು ನಮ್ಮಲ್ಲಿ ಬರುತ್ತವೆ -ಹೋಗುತ್ತವೆ, ಆದರೆ ದೇವರ ಪ್ರೀತಿಯಲ್ಲ. "ಎಂದು.ಇಂದು ನಿಮ್ಮ ಪರಿಸ್ಥಿತಿ ಏನೇ ಆಗಿದ್ದರೂ ಸರಿಯೇ ದೇವರು ನಿಮ್ಮನ್ನು ಪ್ರೀತಿಸುತ್ತಿದ್ದಾನೆ.
ನಿಮ್ಮ ಕಡೆಗೆ ಯಾವಾಗಲೂ ಇರುವ ಆತನ ಅಪ್ರತಿಮವಾದ ಪ್ರೀತಿಯನ್ನು ಕುರಿತು ಯಾವಾಗಲೂ ಜಾಗೃತರಾಗಿರಿ. ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಆದರೆ ಲೋಕವು ಪ್ರೀತಿಸುವ ರೀತಿಯಲ್ಲಿ ಅಲ್ಲ. ನೀವು ನಿಮ್ಮ ಜೀವನದಲ್ಲಿ ಮೊದಲ ಸುಳ್ಳನ್ನು ಹೇಳುವ ಮೊದಲೇ ಆತನು ನಿಮ್ಮನ್ನು ಪ್ರೀತಿಸಿದ್ದಾನೆ. ನೀವು ಪಾಪವೇನೆಂದು ಅರಿತುಕೊಳ್ಳುವ ಮೊದಲೇ ಅದಕ್ಕಾಗಿ ಪಾಪ ಪರಿಹಾರವನ್ನು ಸಿದ್ಧ ಮಾಡಿದ್ದಾನೆ. ಎಂಥ ಅದ್ಭುತ! ಆತನು ಎದ್ದು ತೋರುವವಂತ ವ್ಯತ್ಯಾಸವಾದ ಪ್ರೀತಿಯಿಂದ ನಿಮ್ಮನ್ನು ಪ್ರೀತಿಸುತ್ತಾನೆ. ಆತನು ನಿಮ್ಮನ್ನು ಪ್ರೀತಿಸುತ್ತಾನೆ ಯಾಕೆಂದರೆ ಆತನು ನಿಮ್ಮನ್ನು ಪ್ರೀತಿಸಲೆಂದೇ ನಿಮ್ಮನ್ನು ಆರಿಸಿಕೊಂಡಿದ್ದಾನೆ. ಆತನ ಈ ಮಹಾನ್ ಪ್ರೀತಿ ಸಾಗರದಲ್ಲಿ ಮುಳುಗಿರಿ. ಅದಕ್ಕಾಗಿ ಯಾವಾಗಲೂ ನಿಮ್ಮ ಹೃದಯದಲ್ಲಿ ಕೃತಜ್ಞತಾ ಸ್ತೋತ್ರವಿರಲಿ.
ಅರಿಕೆಗಳು
ತಂದೆಯಾದ ದೇವರೇ, ನನ್ನ ಕುರಿತು ನಿನಗಿರುವ ಈ ಮಹಾ ಪ್ರೀತಿಗಾಗಿ ಸ್ತೋತ್ರ. ನನ್ನ ಜೀವಿತದ ಎಲ್ಲಾ ಸಮಯದಲ್ಲೂ ನಿನ್ನ ಈ ಅಗಮ್ಯ ಪ್ರೀತಿಯ ಪರಿಜ್ಞಾನದಲ್ಲಿ ನಾನು ಜೀವಿಸಬೇಕೆಂದು ಪ್ರಾರ್ಥಿಸುತ್ತೇನೆ. ನೀನು ನನ್ನನ್ನು ಬೇಷರತ್ತಾಗಿ ಪ್ರೀತಿಸುವವನಾಗಿದ್ದೀಯ ಎಂದು ನಾನು ವಿಶ್ವಾಸಿಸುವಂತೆ ನನಗೆ ಸಹಾಯ ಮಾಡು. ನಿನ್ನ ಪ್ರೀತಿಯ ಸಾಗರದಲ್ಲಿ ಯಾವಾಗಲೂ ಮುಳುಗಿರಲು ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ಆಮೆನ್.
Join our WhatsApp Channel
Most Read
● ಎತ್ತಲ್ಪಡುವಿಕೆ ಮತ್ತು ರೋಶ್ ಹಸನ್ನ● ಸಮಾಧಾನದ ಮೂಲ :ಕರ್ತನಾದ ಯೇಸು
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕೃಪೆಯಿಂದಲೇ ರಕ್ಷಣೆ
● ಪುರುಷರು ಏಕೆ ಪತನಗೊಳ್ಳುವರು -4
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II
● ಬೆಟ್ಟಗಳ ಮತ್ತು ತಗ್ಗಿನ ದೇವರು.
ಅನಿಸಿಕೆಗಳು