ಅನುದಿನದ ಮನ್ನಾ
ಆತ್ಮೀಕ ಚಾರಣ
Friday, 12th of July 2024
3
1
305
Categories :
ಬೆಲೆ (Price)
ಶಿಷ್ಯತ್ವ (Discipleship)
ಯಾರಾದರೂ ಯೇಸುವನ್ನು ಹಿಂಬಾಲಿಸಬೇಕೆಂದರೆ ಅಲ್ಲಿ ಶಿಷ್ಯತ್ವಕ್ಕೆ ಪ್ರಾಶಾಸ್ತ್ಯ ಎನ್ನುವುದನ್ನು ಮರೆಯುವ ಹಾಗಿಲ್ಲ. ಕ್ರಿಸ್ತನನ್ನು ಹಿಂಬಾಲಿಸಲು ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದು ದೇವರ ವಾಕ್ಯವು ಸ್ಪಷ್ಟವಾಗಿ ನಮಗೆ ಬೋಧಿಸುತ್ತದೆ ( ದೊಡ್ಡ ಮೌಲ್ಯದ ಮುತ್ತು )
"ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು - ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ? ಹೀಗೆ ಲೆಕ್ಕಮಾಡದೆ ಅದಕ್ಕೆ ಅಸ್ತಿವಾರ ಹಾಕಿದ ಮೇಲೆ ಆ ಕೆಲಸವನ್ನು ಪೂರೈಸಲಾರದೆ ಹೋದರೆ ನೋಡುವವರೆಲ್ಲರು -ಈ ಮನುಷ್ಯನು ಕಟ್ಟಿಸುವದಕ್ಕಂತೂ ತೊಡಗಿದನು, ಕೆಲಸಪೂರೈಸಲಾರದೆಹೋದನು ಎಂದು ಅವನನ್ನು ಹಾಸ್ಯಮಾಡಾರು. ಇಲ್ಲವೆ ಯಾವ ಅರಸನಾದರೂ ಮತ್ತೊಬ್ಬ ಅರಸನ ಸಂಗಡ ಯುದ್ಧಮಾಡುವದಕ್ಕೆ ಹೋಗುವಾಗ ತನ್ನ ಮೇಲೆ ಇಪ್ಪತ್ತು ಸಾವಿರ ದಂಡು ತೆಗೆದುಕೊಂಡು ಬರುವವನನ್ನು ತಾನು ಹತ್ತು ಸಾವಿರ ದಂಡಿನಿಂದ ಎದುರಿಸುವದಕ್ಕೆ ಶಕ್ತನಾಗುವೆನೋ ಇಲ್ಲವೋ ಎಂದು ಕೂತುಕೊಂಡು ಆಲೋಚಿಸುವದಿಲ್ಲವೇ? ತಾನು ಶಕ್ತನಲ್ಲದಿದ್ದರೆ ಬರುವ ಅರಸನು ಇನ್ನೂ ದೂರದಲ್ಲಿರುವಾಗಲೇ ರಾಯಭಾರಿಗಳನ್ನು ಕಳುಹಿಸಿ ಸಂಧಾನಕ್ಕೆ ಒಪ್ಪಂದವನ್ನು ಕೇಳಿಕೊಳ್ಳುವನು.ಹಾಗೆಯೇ ನಿಮ್ಮಲ್ಲಿ ಯಾವನೇ ಆಗಲಿ ತನಗಿರುವದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು."(ಲೂಕ 14:28-33)
ನಾವೀಗ ಯಾವುದೇ ಬೆಲೆಯನ್ನು ತೆರಬೇಕಾದ ಅವಶ್ಯಕತೆ ಇಲ್ಲ ಎನ್ನುವ ಕೆಲವು ಸುಳ್ಳು ಬೋಧನೆಗಳು ಈಗ ಎದ್ದಿವೆ. ಹೌದು! ರಕ್ಷಣೆಯು ಉಚಿತವಾದದ್ದು ಮತ್ತು ಅದಕ್ಕಾಗಿ ನಾವು ಏನನ್ನೂ ಮಾಡುವ ಅವಶ್ಯಕತೆ ಇಲ್ಲ. ಹಾಗಿದ್ದರೂ ಅಪೋಸ್ತಲನಾದ ಪೌಲನು "ನಿಮ್ಮ ಕರೆಯನ್ನು ಸಾಧಿಸಿಕೊಳ್ಳಿರಿ" ಎಂದು ಸ್ಪಷ್ಟವಾಗಿ ಹೇಳುತ್ತಾನೆ. (ಫಿಲಿಪ್ಪಿ 2:12)
ಪವಿತ್ರೀಕರಣದ ಪ್ರಕ್ರಿಯೆಯಲ್ಲಿ ನಿರಂತರವಾಗಿ ವಿಧೇಯತೆಯಿಂದ ನಡೆದುಕೊಳ್ಳುವ ಮೂಲಕ ನಾವು ಇದನ್ನು ಮಾಡುತ್ತೇವೆ. ಪೌಲನು ತಾನು ಕ್ರಿಸ್ತನ ಸಾರೂಪ್ಯವನ್ನು ಹೊಂದಲು "ಎದೆಬೊಗ್ಗಿದವನಾಗಿ" - "ಬಿರುದನ್ನು ಗುರಿ ಮಾಡಿಕೊಂಡವನಾಗಿ" ಓಡುವವನಾಗಿ ತನ್ನನ್ನು ವರ್ಣಿಸಿಕೊಳ್ಳುತ್ತಾನೆ. (ಫಿಲಿಪ್ಪಿ 3:13-14)
ನಾನು ಚಿಕ್ಕವನಾಗಿದ್ದಾಗ ವಿಜ್ಞಾನದ ಕುರಿತ ಧಾರಾವಾಹಿ ಒಂದನ್ನು ಕೆಲವೊಮ್ಮೆ ನೋಡುತ್ತಿದ್ದೆ. ನಕ್ಷತ್ರಾಚಾರಣ(ಸ್ಟಾರ್ ಟ್ರೆಕ್) ಎಂದು ಕರೆಯಲ್ಪಡುವ ಈ ಧಾರಾವಾಹಿಯನ್ನು ನೋಡುತ್ತಾ ಹೇಗೆ ಈ ಜನರು ಅಷ್ಟು ದೂರಕ್ಕೆ ಆಕಾಶದ ಆಳಕ್ಕೆ ಹೋಗುತ್ತಾರೆ ಎಂದು ಆಶ್ಚರ್ಯದಿಂದ ನೋಡಿ ಬೆರಗಾಗುತ್ತಿದ್ದೆ. ಇತ್ತೀಚೆಗೆ ನಾನು ಅದರ ಬಗ್ಗೆ ಯೋಚಿಸುತ್ತಾ ನಾವು ಆತ್ಮಿಕ ಆಯಾಮದಲ್ಲಿ ಹೀಗೆಯೇ ದೂರಕ್ಕೆ ಪ್ರಯಾಣಿಸಬೇಕಾಗಿದೆ. ಹಾಗಾಗಿ ಅದರ ಕುರಿತು ಅನ್ವೇಷಣೆ ನಡೆಸುವುದು ಅಗತ್ಯವಿದೆ. ಏಕೆಂದರೆ ನಾವಿನ್ನೂ ಅದರಲ್ಲಿ ನೋಡಬೇಕಾದದ್ದು, ಕೇಳಬೇಕಾದದ್ದು ಮತ್ತು ಅನುಭವಿಸ ಬೇಕಾದದ್ದು ಬಹಳಷ್ಟು ಇದೆ ಎನಿಸಿತು.
ಆತ್ಮಿಕಾ ಆಯಮದಲ್ಲಿ ಅನೇಕ ಅದ್ಭುತವಾದ ಪ್ರಕಟಣೆಗಳಿವೆ. ಆದರೆ ಅವುಗಳನ್ನು ಹೊಂದಿಕೊಳ್ಳಲು ನಾವು ತಕ್ಕ ಬೆಲೆ ತೆರಬೇಕಷ್ಟೇ. ಅಪೋಸ್ತಲನಾದ ಪೌಲನು ಈ ಕುರಿತು ಸಾಕಷ್ಟು ವಿವೇಕಿಯಾಗಿದ್ದನು. ಅದಕ್ಕಾಗಿಯೇ ಅವನು ಕರ್ತನನ್ನು ಸಂಧಿಸಿದ ಕೂಡಲೇ ಅರೇಬಿಯಾದ ಮರುಭೂಮಿಯಲ್ಲಿ ಏಕಾಂತವಾಗಿ ಕರ್ತನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾ ಆತ್ಮಿಕವಾದ ಆಳವಾದ ಸ್ತರಗಳನ್ನು ಪ್ರವೇಶಿಸಲು ಆ ಸಮಯವನ್ನು ಉಪಯೋಗಿಸಿಕೊಂಡನು.(ಗಲಾತ್ಯ 1:7)
ಅದೆಷ್ಟೋ ಪ್ರವಾದನ ವಾಕ್ಯಗಳು, ಹೆಚ್ಚಾದ ಆತ್ಮೀಕ ಗೀತೆಗಳು, ಉನ್ನತವಾದ ಆತ್ಮಿಕ ಅಭಿಷೇಕ ಮತ್ತು ಅನೇಕ ವರಗಳು ಮತ್ತು ಇನ್ನೂ ಹೆಚ್ಚು ನಿಖರವಾದ ಯೋಜನೆಗಳು ಮತ್ತು ತಂತ್ರಗಾರಿಕೆಗಳು ದೇವರ ಕೃಪಾಸನದಿಂದ ನಾವು ಸ್ವೀಕರಿಸಿಕೊಳ್ಳುವುದಕ್ಕಾಗಿಯೇ ನಮಗಾಗಿ ಕಾಯುತ್ತಿವೆ.
"ದೇವರೊಂದಿಗೆ ಯಾವುದು ಅಸಾಧ್ಯವಲ್ಲ" ಎಂದು ಲೂಕ 1:37 ಹೇಳುತ್ತದೆ. ಅಲ್ಲಿ ಅದು "ದೇವರಿಗೆ ಯಾವುದೂ ಅಸಾಧ್ಯವಲ್ಲ" ಎಂದು ಹೇಳದೇ "ದೇವರೊಂದಿಗೆ ಯಾವುದೇ ಅಸಾಧ್ಯವಿಲ್ಲ" ಎಂದು ಹೇಳಿರುವಂತದ್ದನ್ನು ಗಮನಿಸಿರಿ. ಹಾಗಾಗಿ ದೇವರೊಂದಿಗೆ ನಡೆಯುವವರಿಗೆ ಯಾವುದೂ ಅಸಾಧ್ಯವಲ್ಲ ಎಂಬುದೇ ಅದರ ಅರ್ಥವಾಗಿದೆ. (ಲೂಕ 1:37). ನಾವೀಗ ಮಾಡಬೇಕಾದೇನೆಂದರೆ ಈ ಆತ್ಮಿಕ ಆಯಾಮದ ಚಾರಣವನ್ನು ಆರಂಭಿಸಬೇಕು. ನಾವು ಧೈರ್ಯದಿಂದ ಆತ್ನಿಕ ಆಯಾಮಕ್ಕೆ ತೆರಳಬೇಕು ಹಾಗೂ ದೇವರ ಮಹಿಮೆಯ ಆಳವಾದ ಆಯಾಮಗಳನ್ನು ಸಾಕಾರಗೊಳಿಸಿಕೊಳ್ಳಬೇಕು. ನೀವು ಈ ಕರೆಗೆ ಕಿವಿಗೊಡುವಿರಾ?
ಪ್ರಾರ್ಥನೆಗಳು
ತಂದೆಯೇ, ನನಗಾಗಿ ಮತ್ತು ನನ್ನ ಮನೆಯವರಿಗಾಗಿ ಭರಿಸಬೇಕಾದ ವೆಚ್ಚವೇನೆಂಬುದನ್ನು ನಾನು ಲೆಕ್ಕಿಸಿದ್ದೇನೆ. ನಿಮ್ಮ ಆತ್ಮದ ಆಳವಾದ ಆಯಾಮದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಯೇಸು ನಾಮದಲ್ಲಿ ನಮಗೆ ಸಹಾಯ ಮಾಡಿ. ಆಮೆನ್.
Join our WhatsApp Channel
Most Read
● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ● ನಂಬುವವರಾಗಿ ನಡೆಯುವುದು
● ನೆಪ ಹೇಳುವ ಕಲೆ
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
● ಪ್ರೀತಿಯ ಭಾಷೆ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು