ಅನುದಿನದ ಮನ್ನಾ
ರಹಸ್ಯವಾದ ಆತ್ಮೀಕ ದ್ವಾರಗಳು
Tuesday, 23rd of July 2024
2
1
171
Categories :
ದೇವರವಾಕ್ಯ ( Word of God )
ಇಂದು ನಾನು ನಿಮಗೆ ಆತ್ಮಿಕ ಆಯಾಮದಲ್ಲಿ ಅಸಾಮಾನ್ಯವಾದ ದಯೆಯನ್ನು ಮತ್ತು ಅದ್ಭುತವಾದ ಬಿಡುಗಡೆಯನ್ನು ತರಬಲ್ಲ ರಹಸ್ಯಗಳ ಒಳನೋಟದ ಕೀಲಿ ಕೈಗಳನ್ನು ತೋರ್ಪಡಿಸಲು ಇಚ್ಚಿಸುತ್ತೇನೆ.ಈ ರಾತ್ರಿಯಲ್ಲಿಯೇ ಇಂತಹ ಅಸಾಮಾನ್ಯವಾದದನ್ನು ನೋಡಲು ನಿಮ್ಮಲ್ಲಿ ಎಷ್ಟು ಜನರು ಸಿದ್ದರಿದ್ದೀರಿ?
"ಆತನು ಮೋಶೆಗೆ ತನ್ನ ಮಾರ್ಗವನ್ನೂ ಇಸ್ರಾಯೇಲ್ಯರಿಗೆ ತನ್ನ ಕೃತ್ಯಗಳನ್ನೂ ಪ್ರಕಟಿಸಿದನು."(ಕೀರ್ತನೆಗಳು 103:7)
ಇಲ್ಲಿರುವ ವ್ಯತ್ಯಾಸವನ್ನು ಗಮನಿಸಿ ಆತನ ಕ್ರಿಯೆಗಳು ಇಡೀ ಇಸ್ರೇಲ್ ಜನಾಂಗಕ್ಕೆ ತಿಳಿದು ಬಂತು. ಆದರೆ ಆತನ ಮಾರ್ಗಗಳು ಕೇವಲ ಮೋಶೆಗೆ ಮಾತ್ರ ಪ್ರಕಟವಾಯಿತು. ಇಂದಿಗೂ ಸಹ ಬಹು ಸಂಖ್ಯಾತವಾದ ಜನರು ಆತನ ಕ್ರಿಯೆಗಳನ್ನು ನೋಡಿ ತೃಪ್ತಿಪಟ್ಟು ಕೊಳ್ಳಲು ಇಷ್ಟಪಡುತ್ತಾರೆ. ಆದರೆ ಕೆಲವೇ ಕೆಲವು ಮಂದಿ ಮಾತ್ರ ಮೋಶೆಯ ಹಾಗೆ ಪ್ರಾರ್ಥನೆ, ಆರಾಧನೆ, ವಾಕ್ಯಧ್ಯಾನದ ಮೂಲಕ ಮತ್ತು ಆತನಿಗೆ ವಿಧೇಯತೆ ತೋರುವ ಮೂಲಕ ಆತನನ್ನು ಸಮೀಪಿಸಿ ಆತನ ಮಾರ್ಗಗಳನ್ನು ಸಂಪೂರ್ಣವಾಗಿ ಕಲಿತುಕೊಳ್ಳಲು ಮನಸ್ಸು ಮಾಡುತ್ತಾರೆ.
ದೇವರು ತನ್ನ ಮಾರ್ಗಗಳನ್ನು ಪ್ರಕಟಿಸಲು ಬಯಸುತ್ತಾನೆ. ಯುದ್ಧದ ಸಮಯಗಳಲ್ಲಿ- ತುರ್ತು ಪರಿಸ್ಥಿತಿ ಸಮಯಗಳಲ್ಲಿ ಅರಸರು ಮತ್ತು ಮಂತ್ರಿಗಳು ಮಾತ್ರ ಭೇಟಿಯಾಗಲು ಕೆಲವೊಂದು ನಿರ್ದಿಷ್ಟ ಮಾರ್ಗಗಳಿರುತ್ತವೆ. ಆ ಮಾರ್ಗಗಳು ಸಾಮಾನ್ಯ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಅದೇ ರೀತಿಯಾಗಿ ಆತ್ಮೀಕ ಆಯಾಮದಲ್ಲೂ ಸಹ ಅಸಾಮಾನ್ಯವಾದಂತಹ ಮಾರ್ಗಗಳು ಇರುತ್ತವೆ. ಯುದ್ಧಗಳು ಬರಗಾಲಗಳು ಇರುವಾಗ ಕರ್ತನು ಈ ರೀತಿಯ ಅಸಾಮಾನ್ಯವಾದ ಮಾರ್ಗಗಳನ್ನು ಬಳಸಿಕೊಂಡು ತನ್ನ ಜನರನ್ನು ಸೇವೆಗೆ ನಿಯೋಜಿಸುತ್ತಾನೆ.
"ಆ ದಾರಿಯು ಯಾವ ಹದ್ದಿಗೂ ತಿಳಿಯದು, ಗಿಡಗದ ಕಣ್ಣಿಗೂ ಬಿದ್ದಿಲ್ಲ. ಸೊಕ್ಕಿದ ಮೃಗಗಳು ಅದನ್ನು ತುಳಿದಿಲ್ಲ, ಸಿಂಹವು ಆ ಮಾರ್ಗವನ್ನು ಹಾದಿಲ್ಲ."(ಯೋಬನು 28:7-8)
ಎಂದು ಸತ್ಯವೇದ ಯೋಬನ ಪುಸ್ತಕ 28:7-8 ಹೇಳುತ್ತದೆ.
ಸೈತಾನನಿಗೂ ಅವನ ದೂತರಿಗೂ ಪ್ರವೇಶಾತಿ ಇಲ್ಲದಂತಹ ಉನ್ನತ ಆಯಾಮಕ್ಕೆ ಕರ್ತನು ತನ್ನ ಜನರು ಬರಬೇಕೆಂದು ಬಯಸುತ್ತಾನೆ. ಸೈತಾನನು ಯಾವಾಗಲೂ ಆರೋಪ ಮಾಡಲು ತನ್ನ ಕೈಲಾದಷ್ಟು ಮಟ್ಟಿಗೆ ತಿರುಗಾಡುತ್ತಲೇ ಇರುತ್ತಾನೆ. ಆದರೆ ಅವನಿಗೂ ಪ್ರವೇಶಿಸಲಾರದಂತಹ ಮಾರ್ಗಗಳಿವೆ. ಅನೇಕರು ಇದನ್ನು "ದೇವರ ನಿರಪಾಯವಾದ ಸ್ಥಳ" ಎಂದು ಹೇಳುತ್ತಾರೆ. ಮತ್ತು ದೇವರು ಯಾರೆಲ್ಲಾ ಆತನ ಉದ್ದೇಶಗಳಲ್ಲಿ- ಆತನ ರಾಜ್ಯದ ಉದ್ದೇಶಗಳಲ್ಲಿ ಆಸಕ್ತರಾಗಿದ್ದಾರೋ ಅಂತವರಿಗೆ ಮಾತ್ರ ಇದನ್ನು ಪ್ರಕಟಿಸಲು ಇಚ್ಚಿಸುತ್ತಾನೆ ಎಂದು ನಾನು ನಂಬುತ್ತೇನೆ.
ಆತ್ಮಿಕಾ ಆಯಮದಲ್ಲಿ ದ್ವಾರಗಳಿವೆ. ಆ ದ್ವಾರಗಳು ವೈವಿದ್ಯಮಯವಾದ ದೃಷ್ಟಿಕೋನದ ಕೃಪೆ ಮತ್ತು ಆತ್ಮಿಕ ಆಯಾಮದ ಒಳನೋಟಗಳನ್ನು
ಹೊಂದಿರುವ ದೇವ ಜನರಿಗೆ ತೆರೆಯಲ್ಪಡುತ್ತದೆ.
ಅಪೋಸ್ತಲನಾದ ಯೋಹಾನನು ಪತ್ಮೋಸ್ ದ್ವೀಪದಲ್ಲಿದ್ದುಕೊಂಡು ಹೀಗೆ ಬರೆಯುತ್ತಾನೆ.. "ಇವುಗಳಾದ ಮೇಲೆ ನಾನು ನೋಡಿದಾಗ ಪರಲೋಕದಲ್ಲಿ ತೆರೆದಿದ್ದ ಬಾಗಿಲು ಕಾಣಿಸಿತು;...... ಕೂಡಲೆ ದೇವರಾತ್ಮವಶನಾದೆನು."(ಪ್ರಕಟನೆ 4:1)
ಇದು ಪರಲೋಕ ದ್ವಾರದ ನಿಜವಾದ ತೆರೆಯಲ್ಪಡುವಿಕೆಯಾಗಿದೆ. ಇಲ್ಲೇ "ತೆರೆದಿಟ್ಟ" ಎಂಬ ಪದಕ್ಕೆ ಗ್ರೀಕ್ ಭಾಷಾಂತರವು "ತೂರಾ"ಎಂದಿದೆ
1) ಪ್ರವೇಶ- ದ್ವಾರ
2) ಬಾಗಿಲು
3) ಮುಖ್ಯದ್ವಾರ ಎಂಬುದು ಅದರರ್ಥ.
ಯೋಹಾನನು ಒಂದು ಪ್ರವೇಶ ದ್ವಾರವನ್ನು ಪ್ರವೇಶಿಸಿದ ತಕ್ಷಣವೇ ಪರಲೋಕದಲ್ಲಿದ್ದ ಎಂಬುದು ತುಂಬಾ ಕುತಹಲಕಾರಿಯಾದ ವಿಚಾರವಾಗಿದೆ. ಅವನು ಭೂಮಿಯ ಮೇಲಿದ್ದನು. ಆದರೂ ಅವನು ಒಂದು ಪ್ರವೇಶ ದ್ವಾರವನ್ನು ಬಾಗಿಲನ್ನು- ಮುಖ್ಯದ್ವಾರವನ್ನು ಪ್ರವೇಶಿಸಿದ ಕೂಡಲೇ ಅವನು ಪರಲೋಕದೊಳಗೆ ಇದ್ದನು. ಆ ಬಾಗಿಲೇನೋ ಒಂದು ರೀತಿಯಲ್ಲಿ ಭೂಮಿಯನ್ನು ಪರಲೋಕವನ್ನು ಸಂಪರ್ಕಿಸುವ ಕೊಂಡಿಯಂತೆ ಇದೆ. ಅದನ್ನೇ ಆತ್ಮಿಕವಾದ ಬಾಗಿಲು -ಪ್ರವೇಶ ದ್ವಾರ ಎಂದು ನಾನು ಹೇಳಲು ಯತ್ನಿಸುತ್ತಿರುವುದು.
ಈ ಲೋಕದ ಕೆಲವು ವಿಜ್ಞಾನಿಗಳು ಇಂದು "ವರ್ಮ್ ಹೋಲ್" ಎಂದು ಮಾತನಾಡುತ್ತಿರುವುದು ಇದರ ಕುರಿತೇ ಆಗಿದೆ.
ಇಂದು ಲೋಕದಾದ್ಯಂತ ಅನೇಕ ಜನರು ಹೊಸದಾದ ಬಾಗಿಲು ತೆರೆದಂತೆ ದೇವರು ಕೊಟ್ಟ ದರ್ಶನವನ್ನು ನೋಡುತ್ತಿದ್ದಾರೆ. ಅವರೆಲ್ಲಾ ನಿಜವಾಗಿ ಏನನ್ನು ನೋಡುತ್ತಿದ್ದಾರೆ? ದ್ವಾರವನ್ನೋ ಅಥವಾ ಆತ್ಮೀಕ ಮಾರ್ಗವನ್ನೋ. ಪ್ರಾಯಶಃ ನೀವೂ ಸಹ ಇವುಗಳನ್ನು ಕಂಡಿರಬಹುದು. ಆದರೆ ತಿಳುವಳಿಕೆಯ ಕೊರತೆಯಿಂದಾಗಿ ಅದರ ಜೊತೆ ಸಂಪರ್ಕ ಸಾಧಿಸದೇ ಹೋಗಿರಬಹುದು. ನೀವಿಂದು ಈ ರೀತಿಯ ಆತ್ಮೀಕ ಆಯಾಮದ ಬಾಗಿಲುಗಳ ತಿಳುವಳಿಕೆಯನ್ನು ಪಡೆದುಕೊಳ್ಳಲಿ ಎಂದು ನಿಮಗಾಗಿ ನಾನು ಪ್ರಾರ್ಥಿಸುತ್ತೇನೆ.
ಪ್ರಾರ್ಥನೆಗಳು
ತಂದೆಯೇ, ದೇವರಾತ್ಮನು ಹೇಳುವುದನ್ನು ಕೇಳುವಂತೆ ನನ್ನ ಆತ್ಮಿಕ ಕಿವಿಗಳನ್ನು ತೆರೆ ಮಾಡು. ನನ್ನ ಕಣ್ಣುಗಳನ್ನು ತೆರೆ ಮಾಡು. ಪ್ರಕಟಣೆ 3:18ರ ವಾಕ್ಯದಂತೆ "ನನ್ನ ಕಣ್ಣುಗಳು ಕಾಣುವಂತೆ ಅಂಜನವನ್ನು ಹಚ್ಚು" ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್.
Join our WhatsApp Channel
Most Read
● ಕಾವಲುಗಾರನು● ಆ ವಾಕ್ಯವನ್ನು ಹೊಂದಿಕೊಳ್ಳಿರಿ
● ಈ ದಿನಮಾನಗಳಲ್ಲಿ ಕಾಣುವ ಅಪರೂಪದ ಸಂಗತಿ
● ಬೀಜದಲ್ಲಿರುವ ಶಕ್ತಿ-1
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
● ದಿನ 08:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು