ಅನುದಿನದ ಮನ್ನಾ
ನಮ್ಮ ಆಯ್ಕೆಯ ಪರಿಣಾಮಗಳು
Friday, 26th of July 2024
2
1
238
Categories :
ಆಯ್ಕೆಗಳು (Choices)
ಕೆಲವು ಕ್ರೈಸ್ತರು ತಮ್ಮ ಜೀವಿತದಲ್ಲಿ ಯಾಕೇ ವಿಫಲ ರಾಗುತ್ತಾರೆ?ಇನ್ನೂ ಕೆಲವರು ನಂಬಿಕೆಯನ್ನು ಪ್ರತಿಪಾದಿಸುವುದರಲ್ಲಿಯೇ ವಿಫಲರಾಗಿ ಬಿಡುತ್ತಾರೆ. ಏಕೆಂದರೆ ನಮ್ಮ ಜೀವಿತವು ಆಯ್ಕೆಗಳಿಂದ ತುಂಬಿದೆ. "...ನನಗೆ ಇಷ್ಟವಿಲ್ಲದನ್ನು ಆರಿಸಿಕೊಂಡರು" ಎಂದು ಕರ್ತನು ತನ್ನ ಜನರಾದ ಇಸ್ರೇಲರಿಗೆ ಹೇಳುತ್ತಾನೆ. (ಯೇಶಾಯ 66:4)
ಇದರಿಂದ ನಮ್ಮ ಆಯ್ಕೆಗಳು ಎಷ್ಟು ಮಹತ್ವಪೂರ್ಣವಾದದ್ದು ಎಂದು ಅರ್ಥ ಮಾಡಿಕೊಳ್ಳಬಹುದು. ಇಂದು ನಾವು ಮಾಡಿಕೊಳ್ಳುವ ಆಯ್ಕೆಗಳು ನಮ್ಮ ಭವಿಷ್ಯದ ನಾಳೆಗಳನ್ನು ನಿರ್ಧರಿಸುತ್ತದೆ. ನಮ್ಮ ಇಂದಿನ ಆಯ್ಕೆಗಳೇ ನಾಳಿನ ದಿನದ ಫಸಲಿಗೆ ಬೀಜವಾಗಿದೆ. ನಮ್ಮ ಆಯ್ಕೆಗಳು ಯಾವಾಗಲೂ ದೇವರಿಗೆ ಆನಂದವನ್ನು ಉಂಟುಮಾಡುವಂತಿರಬೇಕು. ಇಲ್ಲವಾದರೆ ಅವು ಆತನ ದೃಷ್ಟಿಗೆ ಕೆಟ್ಟದಾಗಿ ಕಾಣುತ್ತದೆ.
"ದೈವನಿರ್ಣಯದ ಪದಕದ ಮೇಲೆ ಇಸ್ರಾಯೇಲ್ಯರ ಕುಲಗಳ ಹೆಸರುಗಳು ಬರೆದಿರುವದರಿಂದ ಆರೋನನು ಪವಿತ್ರಸ್ಥಾನದೊಳಗೆ ಹೋಗುವಾಗೆಲ್ಲಾ ಆ ಹೆಸರುಗಳನ್ನು ನಿತ್ಯವಾಗಿ ಯೆಹೋವನ ನೆನಪಿಗೆ ತರುವದಕ್ಕಾಗಿ ತನ್ನ ಹೃದಯದ ಮೇಲೆ ವಹಿಸುವನು. ದೈವನಿರ್ಣಯವನ್ನು ತಿಳಿಸುವ ಊರೀಮ್ ತುಮ್ಮೀಮ್ ಎಂಬ ವಸ್ತುಗಳನ್ನು ಆ ಚೀಲದ ಪದಕದಲ್ಲಿ ಇಡಬೇಕು. ಆರೋನನು ಯೆಹೋವನ ಸನ್ನಿಧಿಗೆ ಹೋಗುವಾಗ ಅವು ಅವನ ಎದೆಯ ಮೇಲೆ ಇರುವವು. ಇಸ್ರಾಯೇಲ್ಯರು ಕೈಕೊಳ್ಳಬೇಕಾದ ದೈವನಿರ್ಣಯವನ್ನು ಆರೋನನು ಹೀಗೆ ತನ್ನ ಹೃದಯದ ಮೇಲೆ ಯೆಹೋವನ ಸನ್ನಿಧಿಯಲ್ಲಿ ಯಾವಾಗಲೂ ಧರಿಸಿಕೊಂಡಿರುವನು."ಎಂದು ಕರ್ತನು ಹೇಳುತ್ತಾನೆ.(ವಿಮೋಚನಕಾಂಡ 28:29-30)
ಇಲ್ಲಿ ನಾವು ಮುಖ್ಯ ಯಾಜಕನಾದ ಆರೋನನ ಎದೆಕವಚಕ್ಕೆ ಹೊಲೆಯಲ್ಪಟ್ಟ "ಊರಿಮ್ ಮತ್ತು ತುಮ್ಮಿಮ್" ಎನ್ನುವ ಎರಡು ಕಲ್ಲುಗಳನ್ನು ದೇವರ ಚಿತ್ತವನ್ನು ವಿಚಾರಿಸುವುದಕ್ಕಾಗಿ ಬಳಸುವುದನ್ನು ಕಾಣುತ್ತೇವೆ. ಊರಿಮ್ ಮತ್ತು ತುಮ್ಮಿಮ್ ಎಂಬುವವು ಇಸ್ರಾಯೇಲ್ ಜನಾಂಗಕ್ಕೆ ಸಿಕ್ಕ ಅಧ್ಬುತ ವರವಾಗಿತ್ತು. ಆದರೆ ಅದನ್ನು ಕೇವಲ ಇಸ್ರಾಯೇಲ್ಯರ ಮಹಾಯಾಜಕರು ಮಾತ್ರ ಉಪಯೋಗಿಸಬಹುದಾಗಿತ್ತು.
ರೂಪಾಂತರ ಬೆಟ್ಟದಲ್ಲಿ ಯೇಸು ಸ್ವಾಮಿಯು ತನ್ನ ಅತ್ಯಂತ ಆಪ್ತಶಿಷ್ಯರಾದ ಪೇತ್ರ ಯಾಕೋಬ ಯೋಹಾನರ ಜೊತೆಯಲ್ಲಿದ್ದಾಗ ಆ ಶಿಷ್ಯರೆಲ್ಲರೂ "ಈತನೇ ನನ್ನ ಪ್ರಿಯನಾದ ಮಗನು, ನಾನು ಈತನನ್ನು ಮೆಚ್ಚಿದ್ದೇನೆ. ಈತನ ಮಾತನ್ನೇ ಕೇಳಿರಿ." ಎಂಬ ದೇವರ ಸ್ವರವನ್ನು ಕೇಳಿದರು.(ಮತ್ತಾಯ 17:5).
ಅಂದಿನ ದಿನ ಆ ಶಿಷ್ಯರಿಗೆ ದೇವ ಕುಮಾರನಾದ ಯೇಸುವಿನ ಮಹಿಮೆಯು ಪ್ರತ್ಯಕ್ಷವಾಯಿತು. ಆದರೆ ಯೇಸುಕ್ರಿಸ್ತನು ಪುನರುತ್ಥಾನಗೊಳ್ಳುವವರೆಗೂ ಅವರಿಗೆ ಈ ಘಟನೆಯ ಮರ್ಮವು ಅರ್ಥವಾಗಿರಲಿಲ್ಲ. ಆದರೆ ಆಮೇಲೆ ಅವರಿಗೆ "ಈತನ ಮಾತನ್ನೇ ಕೇಳಿರಿ"ಎಂದು ದೇವರಾಡಿದ ಮಾತುಗಳು ನೆನಪಿಗೆ ಬಂದವು.
ಈ ಲೋಕವು ಯಾವಾಗಲೂ "ನಿಮ್ಮ ಹೃದಯದ ಮಾತುಗಳನ್ನೇ ಕೇಳಿರಿ" "ನಿಮಗೆ ಏನು ಒಳ್ಳೆಯದು ಎಂದು ಅನಿಸುತ್ತದೆಯೋ ಅದನ್ನೇ ಮಾಡಿರಿ"ಎಂದು ನಮ್ಮೆಡೆಗೆ ಕೂಗಿಕೊಳ್ಳುತ್ತದೆ. ಆದರೆ ನೀವು ಮತ್ತು ನಾನು ನಮ್ಮ ಆಯ್ಕೆಗಳನ್ನು ಮತ್ತು ನಮ್ಮ ಜೀವನದ ನಿರ್ಧಾರಗಳನ್ನು ನಾವು ಹೇಗೆ ಭಾವಿಸುತ್ತೇವೆಯೋ ಅಥವಾ ನಮ್ಮ ಗ್ರಹಿಕೆಯ ಆಧಾರದ ಮೇಲೆಯೋ ಮಾಡಬೇಕಾಗಿಲ್ಲ.
ಇಂದು ನಾವು ಅತಿ ಶ್ರೇಷ್ಠವಾದ ಮಹಾ ಯಾಜಕನಾದ ದೇವರ ಜೀವವುಳ್ಳ ವಾಕ್ಯವಾದ ಕರ್ತನಾದ ಯೇಸುವಿನ ಮೇಲೆ ಭರವಸೆ ಇಡಬೇಕು. ನಮ್ಮ ಆಯ್ಕೆಗಳು ಮತ್ತು ನಮ್ಮ ಜೀವನದ ನಿರ್ಧಾರಗಳನ್ನು ನಾವು ನಿಜವಾಗಿಯೂ ಆತನ ಮಾತುಗಳನ್ನು ಕೇಳುವವರಾಗಿದ್ದರೆ ದೇವರ ವಾಕ್ಯಕ್ಕನುಗುಣವಾಗಿ ಮಾಡಬೇಕು.
"ನೀನು ಯೌವನದ ಇಚ್ಫೆಗಳಿಗೆ ದೂರವಾಗಿರು; ನೀತಿ ವಿಶ್ವಾಸ ಪ್ರೀತಿ ಮತ್ತು ಸಮಾಧಾನವನ್ನು ಸಂಪಾದಿಸುವದಕ್ಕೆ ಶುದ್ಧ ಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ಪ್ರಯಾಸಪಡು."ಎಂದು ದೇವರ ವಾಕ್ಯ ಹೇಳುತ್ತದೆ.(2 ತಿಮೊಥೆಯನಿಗೆ 2:22)
ದೇವರ ವಾಕ್ಯದ ಪ್ರಭಾವದಿಂದ ಬಂದಂತಹ ಆಯ್ಕೆಗಳು ಕಣ್ಣಿಗೆ ಕಾಣುವ ಹಾಗೂ ಕಣ್ಣಿಗೆ ಕಾಣದಂತಹ ಆಶೀರ್ವಾದವನ್ನು ಫಲಿಸುತ್ತದೆ. ಹೇಗೂ ಭಾವನೆ, ಅನಿಸಿಕೆ ಗೆಳೆಯರ ಮೋಜಿಗಾಗಿ ತೆಗೆದುಕೊಂಡಂತಹ ಆಯ್ಕೆಗಳು ನಿರ್ಧಾರಗಳು ಆಶೀರ್ವಾದಕ್ಕೆ ತೊಡಕುಗಳಾಗಬಹುದು. ಬಹುತೇಕ ತೊಡಕುಗಳನ್ನು ಉಂಟುಮಾಡಲುಬಹುದು.
ಪ್ರಾರ್ಥನೆಗಳು
1. ಕರ್ತನೇ ಪ್ರತಿದಿನವೂ ವಿವೇಕಯುತ ಆಯ್ಕೆಗಳನ್ನು ಮಾಡಲು ನನಗೆ ಸಹಾಯ ಮಾಡು.
2. ತಂದೆಯೇ ಎಲ್ಲದರಲ್ಲೂ ಸರಿಯಾದದ್ದನ್ನೇ ಆಯ್ಕೆ ಮಾಡುವಂತಹ ಜ್ಞಾನ- ವಿವೇಕಗಳನ್ನು ಯೇಸು ನಾಮದಲ್ಲಿ ಬೇಡುತ್ತೇನೆ.
3. ನಾನು ಇಂದಿನಿಂದ ನನ್ನೆಲ್ಲಾ ಆಯ್ಕೆಗಳನ್ನು ಭಾವನೆಗಳ ಮೇಲೆ, ಅನಿಸಿಕೆ ಮೇಲೆ ಮಾಡದೆ ದೇವರ ವಾಕ್ಯಕ್ಕನುಸಾರವಾಗಿಯೇ ಮಾಡುತ್ತೇನೆ ಎಂದು ಯೇಸು ನಾಮದಲ್ಲಿ ಘೋಷಿಸುತ್ತೇನೆ.
4. ಈಗಿನಿಂದ ನನ್ನ ಆಯ್ಕೆಗಳೆಲ್ಲವೂ ನನ್ನ ಜೀವಿತದಲ್ಲಿ ನಾನು ಎದುರಿಸುತ್ತಿರುವ ಸಮಸ್ಯೆಗಳನ್ನು ಜಯಿಸುತ್ತದೆ ಎಂದು ಯೇಸು ನಾಮದಲ್ಲಿ ಘೋಷಿಸುತ್ತೇನೆ.
Join our WhatsApp Channel
Most Read
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
● ಕರ್ತನ ಸೇವೆ ಮಾಡುವುದು ಎಂದರೇನು II
● ನೀವು ಸುಲಭವಾಗಿ ಬೇಸರಗೊಳ್ಳುವಿರಾ?
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಸಂತೃಪ್ತಿಯ ಭರವಸೆ
● ದಿನ 05: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು