ಅನುದಿನದ ಮನ್ನಾ
ಪುರಾತನ ಮಾರ್ಗಗಳನ್ನು ವಿಚಾರಿಸಿ
Tuesday, 6th of August 2024
2
1
125
Categories :
ಪುರಾತನ ಮಾರ್ಗ (Old Paths)
"ಯೆಹೋವನು ಹೀಗೆ ನುಡಿಯುತ್ತಾನೆ - ದಾರಿಗಳು ಕೂಡುವ ಸ್ಥಳದಲ್ಲಿ ನಿಂತುಕೊಂಡು ನೋಡಿ ಪುರಾತನ ಮಾರ್ಗಗಳು ಯಾವವು, ಆ ಸನ್ಮಾರ್ಗವು ಎಲ್ಲಿ ಎಂದು ವಿಚಾರಿಸಿ ಅದರಲ್ಲೇ ನಡೆಯಿರಿ; ಇದರಿಂದ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು..... "(ಯೆರೆಮೀಯ 6:16)
[ಪುರಾತನ ಮಾರ್ಗಗಳನ್ನು ವಿಚಾರಿಸಿ ಎಂಬುದರ ಅರ್ಥವೇನು?
ಪುರಾತನ ಮಾರ್ಗಗಳಿಗೆ ತಿರುಗಿ ಕೊಳ್ಳಿರಿ ಎಂದರೆ ನಿಮ್ಮ ಹಳೆಯ ಸಂಪ್ರದಾಯಗಳನ್ನು ತಿರುಗಿ ಮಾಡಿರಿ ಎಂದರ್ಥವಲ್ಲ. ಪರಿಸಾಯರು ಸಂಪ್ರದಾಯವಾದಿಗಳಾಗಿದ್ದರು.ಕರ್ತನಾದ ಯೇಸುವು ಅವರಿಗೆ ಆ ಎಲ್ಲಾ ಸಂಪ್ರದಾಯಗಳನ್ನು ತ್ಯಜಿಸಲು ಹೇಳಿ (ಯೆರೆಮಿಯ ಹೇಳಿದಂತೆ) ಪುರಾತನ ಮಾರ್ಗಗಳಿಗೆ ಹಿಂದಿರುಗ ಬೇಕೆಂಬ ಕರೆ ಕೊಟ್ಟನು.
ಹಳೆಯ ಮಾರ್ಗಗಳನ್ನು ಕುರಿತು ಮಾತನಾಡುವಾಗ ಅನೇಕರು ರಹಸ್ಯವಾಗಿ ತಿರಸ್ಕರಿಸಬಹುದು. ಪ್ರಾಯಶಃ ಅವರಿಗೆ ಅದು ಹಳೆಯ ಶೈಲಿಯೋ ಅಥವಾ ಬೆಚ್ಚಗಿನ ಅನುಭವ ನೀಡದ ಭಯಾನಕತೆಯೋ ಎಂದು ಎನಿಸಬಹುದು. ಆದರೂ ಗತಿಸಿ ಹೋದಂತ ಕಾಲದಲ್ಲಿ ಪುರಾತನ ಕಾಲದ ದೇವರ ವಾಕ್ಯದಲ್ಲಿ ಜೀವಂತಿಕೆಯೂ ಜೀವ ರಕ್ಷಕವಾದ ಜ್ಞಾನವೂ ಇದೆ.
"ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ತೊಳಲುತ್ತಿದ್ದೆವು, ಪ್ರತಿಯೊಬ್ಬನೂ ತನ್ನ ತನ್ನ ದಾರಿಯನ್ನು ಹಿಡಿಯುತ್ತಿದ್ದನು;..... "(ಯೆಶಾಯ 53:6)
ಅನೇಕರು ತಮ್ಮದೇ ಆದ ಮಾರ್ಗಗಳಲ್ಲಿ ನಡೆದು ಇಂದು ತಮ್ಮ ಜೀವನವನ್ನು ಅಸ್ತವ್ಯಸ್ತಗೊಳಿಸಿಕೊಂಡಿದ್ದಾರೆ. ದೇವರ ಮಾರ್ಗ ಬಿಟ್ಟು ತಮ್ಮದೇ ಆದ ಮಾರ್ಗದಲ್ಲಿ ನಡೆದಿದ್ದಾರೆ. ಇದು ಪುರಾತನ ಮಾರ್ಗಗಳನ್ನು ವಿಚಾರಿಸಿ ಮತ್ತೆ ಅದಕ್ಕೆ ತಿರುಗಿಕೊಳ್ಳಬೇಕಾದ ಸಮಯವಾಗಿದೆ.
ಪುರಾತನ ಮಾರ್ಗಗಳಿಂದ ಪ್ರಯೋಜನ ಪಡೆಯಲು ದೇವರು ಅವರಿಗೆ ತಮ್ಮ ಸ್ಥಾನದಲ್ಲಿ ನಿಂತುಕೊಳ್ಳಲು ಹೇಳಿದನು. (ತಮ್ಮ ಮಾರ್ಗಗಳನ್ನು ನಿಲ್ಲಿಸುವಂತೆ ಹೇಳಿದನು)
ಪುರಾತನ ಮಾರ್ಗಗಳಿಂದ ಪ್ರಯೋಜನ ಪಡೆಯಲು ಅವುಗಳನ್ನು ಕುರಿತು ವಿಚಾರಿಸುವಂತೆಯೂ ಅದನ್ನೇ ಅಪೇಕ್ಷಿಸುವಂತೆಯೂ ದೇವರು ಹೇಳಿದನು.
ಪುರಾತನ ಮಾರ್ಗಗಳಿಂದ ಪ್ರಯೋಜನ ಪಡೆಯಲು ಅವುಗಳನ್ನು ಹುಡುಕುವಂತೆ ದೇವರು ಹೇಳಿದನು.
ಪುರಾತನ ಮಾರ್ಗಗಳಿಂದ ಪ್ರಯೋಜನ ಪಡೆಯಲು ಅದರಲ್ಲಿರುವ ಸನ್ಮಾರ್ಗಗಳನ್ನು ಲಕ್ಷಿಸಲು ದೇವರು ಹೇಳಿದನು.
ಪುರಾತನ ಮಾರ್ಗದಿಂದ ಪ್ರಯೋಜನ ಪಡೆಯಲು ಆ ಸನ್ಮಾರ್ಗವನ್ನು ಕಂಡುಹಿಡಿದು ಅದರಲ್ಲಿಯೇ ನಡೆಯುವಂತೆ ದೇವರು ಹೇಳಿದನು.
ಕಳೆದು ಹೋದ ದಿನಗಳಲ್ಲಿ ಆತನ ಮಾತುಗಳನ್ನು ಕೇಳಿ ಆತನು ಸೂಚಿಸಿದ ಕೆಲಸಗಳನ್ನು ಮಾಡಿದವರ ಕಾರ್ಯವನ್ನು ಯಥಾರ್ಥವಾಗಿ ಪಾಲಿಸಲು ಅವರನ್ನು ಅನುಸರಿಸಲು ದೇವರು ಹೇಳಿದನು.
" ಇದರಿಂದ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವುದು" (ಯೆರೆಮಿಯ 6:16)
ಇದುವೇ ಪುರಾತನ ಮಾರ್ಗಗಳನ್ನು ಎದುರು ನೋಡುವುದರಿಂದ, ಹುಡುಕುವುದರಿಂದ ಮತ್ತು ಅದರಲ್ಲಿ ನಡೆಯುವುದರಿಂದ ದೊರಕುವ ಸಮೃದ್ಧಿಯಾದ ಪ್ರತಿಫಲವಾಗಿದೆ. ಈ ಒಂದು ಪ್ರತಿಫಲಕ್ಕೆ ಸರಿಸಾಟಿ ಯಾದದ್ದು ಒಂದೂ ಇಲ್ಲ.
ಇನ್ನು ಹೆಚ್ಚಾಗಿ ಹೇಳಬೇಕೆಂದರೆ ನಾವು ಆತನ ಮಾರ್ಗಗಳಲ್ಲಿ ನಡೆಯುವಾಗ ಈ ಮೂರು ಮಹತ್ತರ ಸತ್ಯಗಳ ಕುರಿತು ನಾವು ಭರವಸದಿಂದ ಇರಬಹುದು.
1). ನಾವು ಸರಿಯಾದ ನಿಲ್ದಾಣತಲುಪುತ್ತೇವೆ ಎಂದು ಖಚಿತವಾಗಿ ಇರಬಲ್ಲೆವು! ಕರ್ತನ ರಾಜಮಾರ್ಗವನ್ನು ನಾವು ಆಯ್ಕೆ ಮಾಡಿಕೊಂಡಾಗ ಅದು ಆತನ ಪ್ರಸನ್ನತೆಯಲ್ಲಿಯೇ ಕೊನೆಗೊಳ್ಳುತ್ತದೆ ಎಂದು ಭರವಸದಿಂದ ಇರಬಹುದು.
2). ನಾವು ಕರ್ತನ ಮಾರ್ಗದಲ್ಲಿ ಇರುವುದರಿಂದ ಮಾರ್ಗದಲ್ಲೆಲ್ಲ ಆತನು ನಮ್ಮನ್ನು ಕಾಯುತ್ತಾನೆ ಎಂದು ನಿಶ್ಚಿಂತೆಯಿಂದ ಸುರಕ್ಷಿತವಾಗಿ ಪ್ರಯಾಣಿಸಬಹುದು. ನಾವು ತಲುಪಬೇಕಾದ ನಿಲ್ದಾಣವನ್ನು ಸೇರುವುದು ಮಾತ್ರವಲ್ಲದೆ ಅತ್ಯಂತ ಸಮಾಧಾನದಿಂದ ನಾವದನ್ನು ತಲುಪುವರಾಗುತ್ತೇವೆ.
3) ಕರ್ತನ ಮಾರ್ಗದಲ್ಲಿ ನಡೆಯುವಾಗ ನಮ್ಮ ಆತ್ಮದ ಆಳವಾದ ಬಯಕೆಗಳು ಪೂರೈಸಲ್ಪಡುತ್ತದೆ ಎಂದು ನಾವು ತಿಳಿದವರಾಗಿದ್ದೇವೆ!. ಕರ್ತನ ಅನ್ಯೋನ್ಯತೆಯಲ್ಲಿ ನಡೆಯುವಾಗ ಆತನ ಪ್ರಸನ್ನತೆಯಲ್ಲಿರುವ ಸಂಪೂರ್ಣ ಸಂತೋಷವನ್ನು ಅನುಭವಿಸುವರಾಗುತ್ತೇವೆ!
ನೀವೊಂದು ಪ್ರವಾಸಕ್ಕೆ ಹೊರಟಾಗ ನೀವು ಹೋಗುವ ಸ್ಥಳದಲ್ಲಿ ಮಾತ್ರ ಆನಂದವಿರದೆ, ಆ ಪ್ರಯಾಣವೂ ನಿಮಗೆ ಆನಂದಕರವಾಗಿರುತ್ತದೆ. ಹಾಗೆಯೇ, ನಾವು ತಲುಪುವ ಸ್ಥಳವಷ್ಟೇ ನಮ್ಮನ್ನು ಮಾರ್ಪಡಿಸದೇ ಆತನೊಂದಿಗಿನ ನಮ್ಮ ಪ್ರಯಾಣವೂ ಸಹ ನಮ್ಮನ್ನು ಮಾರ್ಪಡಿಸುವಂತದ್ದಾಗಿದೆ.
ಪ್ರಾರ್ಥನೆಗಳು
1. ತಂದೆಯೇ, ನಿನ್ನ ಮಾರ್ಗಗಳನ್ನು ಬಿಟ್ಟು ಕದಲದಂತೆ ಯೇಸು ನಾಮದಲ್ಲಿ ನನ್ನನ್ನು ಕಾಪಾಡು. ನಿನ್ನ ವಾಕ್ಯದಲ್ಲೇ ಲಕ್ಷವಿಟ್ಟು ನಡೆಯುವಂತೆ ನನಗೆ ಸಹಾಯ ಮಾಡು.
2. ತಂದೆಯೇ, ನಾನು ಸ್ವನೀತಿಯಲ್ಲಿಯೂ ನನ್ನ ಸ್ವಂತ ಮಾರ್ಗದಲ್ಲಿಯೂ, ಧರ್ಮಶಾಸ್ತ್ರದ ಅನುಸರಿಸುವಿಕೆಯಿಂದ ಉಂಟಾದ ನೀತಿಯಲ್ಲಿಯೂ ನೆಲೆಗೊಳ್ಳದೆ, ಯೇಸುಕ್ರಿಸ್ತನ ಮೇಲಿನ ನಂಬಿಕೆಯಿಂದಲೂ, ನಿನ್ನ ಮೇಲಿನ ನಂಬಿಕೆಯಿಂದಲೂ ಉಂಟಾದ ನೀತಿಯಲ್ಲಿ ನಾನು ನೆಲೆಗೊಳ್ಳುವಂತೆಯೂ ಮತ್ತು ಬೇರೂರುವಂತೆಯೂ ಯೇಸು ನಾಮದಲ್ಲಿ ಸಹಾಯ ಮಾಡು. ಆಮೆನ್.
2. ತಂದೆಯೇ, ನಾನು ಸ್ವನೀತಿಯಲ್ಲಿಯೂ ನನ್ನ ಸ್ವಂತ ಮಾರ್ಗದಲ್ಲಿಯೂ, ಧರ್ಮಶಾಸ್ತ್ರದ ಅನುಸರಿಸುವಿಕೆಯಿಂದ ಉಂಟಾದ ನೀತಿಯಲ್ಲಿಯೂ ನೆಲೆಗೊಳ್ಳದೆ, ಯೇಸುಕ್ರಿಸ್ತನ ಮೇಲಿನ ನಂಬಿಕೆಯಿಂದಲೂ, ನಿನ್ನ ಮೇಲಿನ ನಂಬಿಕೆಯಿಂದಲೂ ಉಂಟಾದ ನೀತಿಯಲ್ಲಿ ನಾನು ನೆಲೆಗೊಳ್ಳುವಂತೆಯೂ ಮತ್ತು ಬೇರೂರುವಂತೆಯೂ ಯೇಸು ನಾಮದಲ್ಲಿ ಸಹಾಯ ಮಾಡು. ಆಮೆನ್.
Join our WhatsApp Channel
Most Read
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #1
● ಮೂರು ನಿರ್ಣಾಯಕ ಪರೀಕ್ಷೆಗಳು
● ನಿಮ್ಮ ಗುರಿಯನ್ನು ತಲುಪಲು ಬಲವನ್ನು ಹೊಂದಿಕೊಳ್ಳಿರಿ.
● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
● ಆತ್ಮೀಕ ಚಾರಣ
● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
ಅನಿಸಿಕೆಗಳು