ನಾವೆಲ್ಲರೂ ಕಾಲಂತರದಲ್ಲಿ ತಪ್ಪುಗಳನ್ನು ಮಾಡುವವರೇ ಆಗಿದ್ದೇವೆ. ಆದಾಗಿಯೂ ಹೀಗೆ ಹೇಳಿಕೊಳ್ಳುತ್ತಾ ನಾವು ಮಾದರಿಯಾಗಿ ಜೀವಿಸುವುದರಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ.
"ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ." ಎಂದು ಅಪೋಸ್ತಲನಾದ ಪೌಲನು ಹೇಳುತ್ತಾನೆ. (1 ಕೊರಿಂಥದವರಿಗೆ 11:1)
ಮೇಲ್ಮುಖವಾಗಿ ಇದೊಂದು ಒಂದು ಸಾಮಾನ್ಯ ಪರಿಕಲ್ಪನೆಯಂತೆ ಕಂಡರೂ ಅದು ಬಹಳ ಆಳವಾದ ಅರ್ಥವನ್ನು ಹೊಂದಿದೆ. "ನನ್ನನ್ನು ಅನುಸರಿಸಿ" ಎಂದು ಇತರರಿಗೆ ಹೇಳುವಲ್ಲಿ ಅಪೋಸ್ತಲನಾದ ಪೌಲನು ಅವರ ಗಮನವನ್ನು ತನ್ನತ್ತ ಸೆಳೆಯದೆ ಶಿಷ್ಯತ್ವದ ಮಾದರಿ ಹೇಗಿರಬೇಕು ಎನ್ನುವುದರ ಕಡೆಗೆ ಸೆಳೆಯುತ್ತಿದ್ದಾನೆ. ಶಿಷ್ಯರಾಗುವುದೆಂದರೆ ಯೇಸುವಿನೊಂದಿಗೆ ನಡೆಯುವುದು ಮತ್ತು ಆತನ ಬೋಧನೆಗಳನ್ನು ಪಾಲಿಸುವುದಾಗಿದೆ. ನಿಮ್ಮ ಜೀವನವು ನಿಮ್ಮ ಸುತ್ತಲಿನವರ ಜನರಿಗೆ ಸಂದೇಶವನ್ನು ಪ್ರಸರಿಸುವಂತಾದ್ದಾದರೆ ಆಗ ನೀವು "ನನ್ನನ್ನು ಅನುಕರಿಸಿ" ಎಂದು ಹೇಳುವ ಅವಕಾಶ ನಿಮಗೆ ಸಿಗುತ್ತದೆ.
ಈ ಮುಖ್ಯ ವಿಚಾರವನ್ನು ಅಪೋಸ್ತಲನಾದ ಪೌಲನು ತನ್ನ ಪತ್ರಿಕೆಗಳಲ್ಲಿ ಅನೇಕ ಬಾರಿ ಹೇಳಿದ್ದಾನೆ
"ನಿಮಗೆ ಕ್ರಿಸ್ತನಲ್ಲಿ ಉಪಾಧ್ಯಾಯರು ಸಾವಿರಾರು ಮಂದಿ ಇದ್ದರೂ ತಂದೆಗಳು ಬಹುಮಂದಿ ಇಲ್ಲ; ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದೆನು. ಆದದರಿಂದ ನನ್ನನ್ನು ಅನುಸರಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಈ ನಿವಿುತ್ತದಿಂದ ಕರ್ತನಲ್ಲಿ ನನ್ನ ಮಗನಾದ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೇನೆ. ಅವನು ನನಗೆ ಪ್ರಿಯನೂ ನಂಬಿಗಸ್ತನೂ ಆಗಿದ್ದಾನೆ. ಅವನು ಕ್ರಿಸ್ತನ ಸೇವೆಯಲ್ಲಿರುವ ನನ್ನ ನಡಾವಳಿಯನ್ನು ಅಂದರೆ ನಾನು ಎಲ್ಲೆಲ್ಲಿಯೂ ಪ್ರತಿಯೊಂದು ಸಭೆಯಲ್ಲಿಯೂ ಬೋಧಿಸುವ ಕ್ರಮವನ್ನು ನಿಮ್ಮ ನೆನಪಿಗೆ ತರುವನು. " (1 ಕೊರಿಂಥದವರಿಗೆ 4:15-17)
"ಸಹೋದರರೇ, ನೀವೆಲ್ಲರು ನನ್ನನ್ನು ಅನುಸರಿಸುವವರಾಗಿರಿ; ಮತ್ತು ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ."(ಫಿಲಿಪ್ಪಿಯವರಿಗೆ 3:17 )
ಮಕ್ಕಳು ತಮ್ಮ ಹಿರಿಯರಿಂದ ಹೇಗೆ ಕಲಿತುಕೊಳ್ಳುತ್ತಾರೋ ಆ ನಿಯಮವನ್ನೇ ಇದೂ ಸಹ ಹೊಂದಿದೆ. ಅನೇಕ ಕಲಾ ಪ್ರಕಾರಗಳು ಸಹ ಅನುಕರಣೆಯ ಮೂಲಕವೇ ಕಲಿತುಕೊಳ್ಳುವಂತದ್ದಾಗಿದೆ. ಹೊಸ ಒಡಂಬಡಿಕೆಯ ತುಂಬಾ ಕ್ರಿಸ್ತನನ್ನು, ಪ್ರಬುದ್ಧ ಕ್ರೈಸ್ತರನ್ನು ಮತ್ತು ನಂಬಿಗಸ್ತ ಸಭೆಯನ್ನು ಅನುಕರಿಸಲು ಉತ್ತೇಜಿಸುವಂತಹ ವಾಕ್ಯಗಳಿಂದಲೇ ತುಂಬಿದೆ.
ಹಾಗೆಯೇ ಅದು ನಾವು ದುಷ್ಟತ್ವವನ್ನು ಅನುಸರಿಸಬಾರದೆಂದೂ,ದುಷ್ಟತ್ವಕ್ಕೆ ಸೇರದಂತೆಯೂ ನಮ್ಮನ್ನು ಎಚ್ಚರಿಸುತ್ತದೆ. (1ಥೆಸಲೋನಿಕ 5:22)
ದೇವರ ವಾಕ್ಯದ ಸರಹದ್ದನ್ನು ಮೀರಿದ ಸಂಗತಿ ಗಳನ್ನು ಅನುಕರಣೆ ಮಾಡಿದಾಗ ಅದು ಕೆಟ್ಟ ಸಂಗತಿಯ ಅನುಕರಣೆಯಾಗುತ್ತದೆ.
ಇಂದು ಎಲೆಮರೆಯ ಕಾಯಿಯಂತೆ ನಮ್ಮ ಜೀವಿತವನ್ನು ಜೀವಿಸುವಂಥದ್ದು ದೂರದ ಮಾತಾಗಿದೆ. ನಾವೆಲ್ಲರೂ ಯಾವಾಗಲೂ ವೀಕ್ಷಿಸಲ್ಪಡುವಂತಹ ಜೀವಿತವನ್ನು ಜೀವಿಸುತ್ತಿದ್ದೇವೆ ಮತ್ತು ಒಂದು ರೀತಿಯಲ್ಲಿ ನಮ್ಮ ಜೀವಿತವು ಯಾವಾಗಲೂ ಇನ್ನೊಬ್ಬರ ಮೇಲೆ ಪ್ರಭಾವ ಬೀರುವಂತಹ ಜೀವಿತವಾಗಿದೆ. ಹೀಗಾದಾಗ ನಾವು ಕ್ರಿಸ್ತನನ್ನು ಅನುಕರಿಸಿ ನಡೆಯುವುದಾದರೆ ನಮ್ಮ ಸುತ್ತಲಿನ ಪ್ರಪಂಚದ ಮೇಲೆ ಬೀರುವಂತಹ ಪರಿಣಾಮವೇನಾಗಬಹುದು ಸ್ವಲ್ಪ ಯೋಚಿಸಿ.
ನಿಮ್ಮ ಜೀವಿತದಲ್ಲಿ ಇಂಥ ಕ್ಷೇತ್ರದಲ್ಲಿ ನನಗೆ ಬದಲಾವಣೆಯ ಅವಶ್ಯಕತೆ ಇದೆ ಎಂದು ತೀವ್ರವಾಗಿ ಬಯಸುವ ಕ್ಷೇತ್ರ ಇದೆಯೇ?
ಅದು ನಿಮ್ಮಲ್ಲಿರುವ ಪೋಷಕರ ಕೌಶಲ್ಯಗಳನ್ನು ಸುಧಾರಿಸುವಂಥದ್ದಾಗಿರಬಹುದು, ನಿಮ್ಮ ಆತ್ಮೀಕ ಜೀವಿತವನ್ನು ಬಲಗೊಳಿಸಿಕೊಳ್ಳುವಂಥದ್ದಾಗಿರಬಹುದು. ಮತ್ತು ಇವುಗಳನ್ನು ಹೇಗೆ ಸಾಧಿಸುವುದು ಎನ್ನುವುದಾಗಿರಬಹುದು. ಕರ್ತನ ಸೇವೆಯನ್ನು ಇನ್ನೂ ಚೆನ್ನಾಗಿ ಮಾಡಬೇಕೆ? ಅಥವಾ ಸರಳವಾಗಿ ವಾದ್ಯಗಳನ್ನು ನುಡಿಸಬೇಕೇ? ಅದು ಏನೇ ಆಗಿರಲಿ, ನೀವು ಬದಲಾವಣೆ ಬಯಸುತ್ತಿರುವ ನಿರ್ದಿಷ್ಟ ಕ್ಷೇತ್ರದಲ್ಲಿ ನಿಮಗಿಂತ ಉತ್ತಮವಾಗಿ ಕರ್ತನನ್ನು ಅನುಕರಿಸುವ ಜನರಿಗಾಗಿ ನಿಮ್ಮ ಸುತ್ತಲೂ ಹುಡುಕಿ ನೋಡಿರಿ.
"ನೀವು ಮಂದಮತಿಗಳಾಗಿರದೆ ಯಾರು ವಾಗ್ದಾನಗಳನ್ನು ನಂಬಿ ಅವುಗಳ ಫಲಕ್ಕೋಸ್ಕರ ಬಹು ದಿವಸಗಳವರೆಗೂ ಕಾದಿದ್ದು ಆ ಫಲವನ್ನು ಹೊಂದುತ್ತಾರೋ ಅವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ."(ಇಬ್ರಿಯರಿಗೆ 6:12)
ಪ್ರಾರ್ಥನೆಗಳು
ಜೀವವುಳ್ಳ ದೇವರ ಪವಿತ್ರ ಆತ್ಮನೇ, ನಿನ್ನ ಮಗನಾದ ಕ್ರಿಸ್ತ ಯೇಸುವನ್ನು ಅನುಕರಿಸುವಂತೆ ನನ್ನನ್ನು ಬಲಪಡಿಸು. ಆಗ ನಾನು ನನ್ನ ಸುತ್ತಲಿನ ಜನರಿಗೆ ಒಂದು ಬಲವಾದ ಉದಾಹರಣೆಯಾಗಿರಬಲ್ಲೆ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೇನ್.
Join our WhatsApp Channel
Most Read
● ಕರ್ತನೇ ನನ್ನ ದೀಪವನ್ನು ಬೆಳಗಿಸು.● ಸರಿಯಾದವುಗಳ ಮೇಲೆ ಲಕ್ಷ್ಯವಿಡಿರಿ
● ಒತ್ತಡವನ್ನು ಓಡಿಸಲು ಇರುವ ಮೂರು ಶಕ್ತಿಯುತ ಮಾರ್ಗಗಳು
● ಆತನ ನೀತಿಯ ವಸ್ತ್ರದಿಂದ ಭೂಷಿತರಾಗುವುದು
● ಕೃತಜ್ಞತೆಯ ಯಜ್ಞ
● ಕೃಪೆಯ ಮೇಲೆ ಕೃಪೆ
● ಆತ್ಮನಿಂದ ನಡೆಸಲ್ಪಡುವುದು ಎಂಬುದರ ಅರ್ಥವೇನು?
ಅನಿಸಿಕೆಗಳು