ಅನುದಿನದ ಮನ್ನಾ
ಹನ್ನಾಳ ಜೀವಿತದಿಂದ ಕಲಿಯಬೇಕಾದ ಪಾಠ
Wednesday, 14th of August 2024
4
2
208
Categories :
ನಂಬಿಕೆ (Faith)
#1. ತನಗಿದ್ದ ಎಲ್ಲ ಪ್ರತಿಕೂಲಗಳ ಮಧ್ಯದಲ್ಲಿಯೂ ಹನ್ನಳು ದೇವರಿಗೆ ನಂಬಿಗಸ್ಥಳಾಗಿಯೇ ಇದ್ದಳು.
ಹನ್ನಳಿಗೆ ಬಹು ಪತ್ನಿತ್ವ ಹೊಂದಿದ್ದ ಗಂಡನಿದ್ದನು. ಆಕೆಗೆ ಮಕ್ಕಳಿರಲಿಲ್ಲ. ಸವತಿಯಿಂದ ದಿನಾಲು ನಿಂದನೆಗಳನ್ನು ಕೇಳುತ್ತಿದ್ದಳು.ಆದರೂ ಆಕೆಯು ತನ್ನ ಕುರಿತು ಕಾಳಜಿ ವಹಿಸುವ ದೇವರ ಮೇಲಿನಾ ತನ್ನ ಲಕ್ಷ್ಯವನ್ನು ಎಂದಿಗೂ ಕಳೆದುಕೊಳ್ಳಲಿಲ್ಲ.
ಒಂದು ಭಾನುವಾರದಂದು ಒಬ್ಬ ವ್ಯಕ್ತಿಯಿಂದ ನನಗೆ ಇ- ಮೇಲ್ ಬಂದಿತ್ತು. ಆ ಇ-ಮೇಲ್ ನ ಸಾಲುಗಳು ಈ ರೀತಿಯಾಗಿತ್ತು:
"ನನ್ನ ತಾಯಿಗೆ ಕ್ಯಾನ್ಸರ್ ಆಗಿತ್ತು ಮತ್ತು ನಾವು ಆಕೆಯನ್ನು ದೇವರು ಸ್ವಸ್ಥ ಪಡಿಸುತ್ತಾನೆ ಎಂದು ಭರವಸೆ ಇಟ್ಟಿದ್ದೆವು. ಅದಕ್ಕಾಗಿ ನಾವು ವರ್ಷವೆಲ್ಲ ಪ್ರಾರ್ಥಿಸಿದೆವು. ಹೇಗೂ ದೇವರು ಆಕೆಯನ್ನು ಕರೆದುಕೊಂಡುಬಿಟ್ಟನು. ಆಕೆ ಸತ್ತು ಹೋದಳು. ನಾವು ಆಕೆಯನ್ನು ನೆನ್ನೆ ತಾನೇ ಸಮಾಧಿ ಮಾಡಿದೆವು. ನಾವು ಇಂದು ಸಭೆಗೆ ಬಂದಾಗ ಒಬ್ಬರು "ನಿನ್ನೆ ತಾನೆ ನಿಮ್ಮ ತಾಯಿಯನ್ನು ಕಳೆದುಕೊಂಡಿದ್ದೀರಿ.ಮತ್ತೆ ಯಾಕೆ ಇಂದು ಸಭೆಗೆ ಬಂದಿದ್ದೀರಿ"ಎಂದು ಕೇಳಿದರು.
ನಮಗೆ ಆ ತಕ್ಷಣ ಏನು ಹೇಳಬೇಕೋ ತೋಚಲಿಲ್ಲ. ಆದರೆ ಆ ಸಮಯದಲ್ಲಿ ನಮ್ಮ ಬಾಯಲ್ಲಿ ಬಂದ ಮಾತುಗಳಿವು. "ನಾವು ಇಂದು ಇರಬೇಕಾದ ಜಾಗದಲ್ಲಿ ಅಂದರೆ ದೇವರ ಮನೆಯಲ್ಲಿ ತಾನೇ ಇದ್ದೇವೆ "ಎಂದು.
ಎಲ್ಲಾ ಸಂಗತಿಗಳು ಚೆನ್ನಾಗಿ ಹೋಗುವಾಗ ಯಾರು ಬೇಕಾದರೂ ಹಲ್ಲೆಲೂಯ ಎಂದು ದೇವರಿಗೆ ಸ್ತೋತ್ರವನ್ನು ಕೂಗಬಹುದು. ಆದಾಗಿಯೂ ಪರಿಸ್ಥಿತಿಯೆಲ್ಲಾ ಬುಡಮೇಲಾದಾಗ ಭರವಸೆಯಿಂದ ಇರಲು, ಸಭೆಯಾಗಿ ಕೂಡಿ ಬರಲು, ದೇವರ ಮನೆಗೆ ಹೋಗಲು ಇಂಥ ನಂಬಿಕೆಯ ಅಗತ್ಯವಿದೆ.
ಉಪದ್ರವಗಳು ನಮ್ಮ ನಂಬಿಕೆಯನ್ನು ಪರೀಕ್ಷಿಸುತ್ತವೆ.
"ಬಂಗಾರವು ನಾಶವಾಗುವಂಥದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟಾಹಾಕಿ ಶೋಧಿಸುವದುಂಟಷ್ಟೆ. ಬಂಗಾರಕ್ಕಿಂತ ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು."(1 ಪೇತ್ರನು 1:7)
#2. ನಿಮ್ಮ ಸಮಸ್ಯೆಗಳನ್ನು ದೇವರ ಮುಂದೆ ತನ್ನಿರಿ.
ಪ್ರಾಯಶಃ ಇಂದು ನಿಮ್ಮ ಮನಸ್ಸಿನಲ್ಲಿ ಆತ್ಮಹತ್ಯೆಯ ಯೋಚನೆಗಳು ಓಡುತ್ತಿರಬಹುದು. ನೀವು ಅತ್ತು ಅತ್ತು ಸಾಕಾಗಿ ನಿಮಗೆ ಇನ್ನು ಅಳಲು ಶಕ್ತಿಯೇ ಇಲ್ಲದ ಮೇಲೆ ನೀವೇನು ಮಾಡುತ್ತೀರಿ? ಆಗಲೇ ನಾವು ನಮ್ಮದೆಲ್ಲವನ್ನೂ - ನಮ್ಮ ನೋವನ್ನು ಒಳಗೊಂಡು ಎಲ್ಲವನ್ನೂ ಆತನ ಪಾದಕ್ಕೆ ತರಬೇಕೆಂದು ಕರ್ತನು ಬಯಸುತ್ತಾನೆ.
"ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು."(ಕೀರ್ತನೆಗಳು 55:22)
#3. ಹನ್ನಳು ದೇವರಿಂದ ಏನನ್ನು ಹೊಂದಿಕೊಂಡಿದ್ದಳೋ ಅದನ್ನು ಪುನಃ ದೇವರಿಗೇ ಹಿಂದಿರುಗಿಸಿದಳು.
ಹನ್ನಳು ಕರ್ತನಿಂದ ಒಬ್ಬ ಮಗನನ್ನು ಬೇಡಿ ಪಡಕೊಂಡಳು ಮತ್ತು ಆ ಮಗುವು ಆರೇಳು ವರ್ಷಗಳಷ್ಟು ಬೆಳೆದ ಬಾಲಕನಾದಾಗ ಅವನನ್ನು ಶಿಲೋವಿಗೆ ಕರೆದುಕೊಂಡು ಹೋಗಿ ದೇವರ ಮನೆಯಲ್ಲಿ ಅವನನ್ನು ಕರ್ತನ ಸೇವೆಗಾಗಿ ಬಿಟ್ಟು ಬಂದಳು. ಅವಳಿಗೆ ಆ ಕಾರ್ಯ ಮಾಡಲು ಎಷ್ಟು ನೋವಾಗಿರಬಹುದು. ಆ ಪುಟ್ಟ ಬಾಲಕನಾದ ಸಮುವೇಲನು ಅದೆಷ್ಟು ಅಳುತಿದ್ದಿರಬಹುದು?
ನೀವು ಏನನ್ನು ಹೊಂದಿಕೊಂಡಿದ್ದೀರೋ ಅದನ್ನು ಹಿಂದಿರುಗಿಸಲು ಸಿದ್ಧರಿದ್ದೀರಾ? ಪ್ರಾಯಶಃ ಇದಕ್ಕಾಗಿಯೇ ಅನೇಕರು ಪ್ರಥಮ ಸ್ಥಾನವನ್ನು ಹೊಂದಿಕೊಂಡಿಲ್ಲ. ನಮ್ಮ ಹೃದಯವು ನಾವು ಹೊಂದಿಕೊಂಡಿರುವುದರ ಮೇಲೆಯೇ ಇರುತ್ತದೆ.ಇಂದು ನಮ್ಮ ಬಳಿ ಏನೆಲ್ಲಾ ಇದೆಯೋ ಅದೆಲ್ಲವನ್ನು ಕರ್ತನಿಂದಲೇ ಹೊಂದಿಕೊಂಡಿದ್ದೇವೆ. ಹಾಗಿದ್ದರೂ ದೇವರು ನಮಗೆ ಕೊಟ್ಟ ಮೊದಲ ಸ್ಥಾನವನ್ನು ಹಿಂದಿರುಗಿ ಕೊಡುವಂತದ್ದು ನಮಗೆ ಯಾಕಷ್ಟು ನೋವಿನ ಸಂಗತಿ ಆಗಿದೆ?(1ಕೊರಿಯಂತೆ 4:7)
ಹನ್ನಳು ತನ್ನ ಮಗನನ್ನು ಕರ್ತನ ಸೇವೆಗೆಂದು ಕೊಟ್ಟ ಮೇಲೆ ದೇವರಾದ ಕರ್ತನು ಆಕೆಯನ್ನು ಇನ್ನು ಹೆಚ್ಚಾಗಿ ಆಶೀರ್ವದಿಸಿದನು. ಕರ್ತನು ಕೊಟ್ಟದ್ದನ್ನು ಹಿಂದಿರುಗಿ ಕರ್ತನ ಮಹಿಮೆಗಾಗಿ -ಉಪಯೋಗಕ್ಕಾಗಿ ಕೊಡುವುದರಲ್ಲಿ ಹನ್ನಾಳ ಮಾದರಿಯನ್ನು ಅನುಸರಿಸಿರಿ. ನೀವೆಲ್ಲರೂ ಆ ರೀತಿ ನಾಲೆಗಳಾಗಿರುವುದಕ್ಕಾಗಿಯೇ ಕರೆಯಲ್ಪಟ್ಟಿದ್ದೀರಿ. ಕ್ಷಮೆಯು ನಿಮ್ಮ ಮೂಲಕ ಉಕ್ಕಿ ಹರಿಯಲಿ. ಸಮಾಧಾನವು ನಿಮ್ಮ ಮೂಲಕ ಉಕ್ಕಿಹರಿಯಲಿ.ಹಣವು ನಿಮ್ಮ ಮೂಲಕ ಉಕ್ಕಿ ಹರಿಯಲಿ.
ದೇವರು ಹನ್ನಳನ್ನು ಇನ್ನೂ ಮೂರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳನ್ನು ಕೊಡುವುದರ ಮೂಲಕ ಹೆಚ್ಚಾಗಿ ಆಶೀರ್ವದಿಸಿದನು. ಆತನು ಸಾಕಾದಕ್ಕಿಂತಲೂ ಮಿಗಿಲಾದದನ್ನು ಹೊಂದಿರುವ ದೇವರು. ಆತನು ಸಮೃದ್ಧಿಯನ್ನು ಉಕ್ಕಿಹರಿಸುವಂತಹ ದೇವರು. (ಎಫಸ್ಸೆ 3:20, ಕೀರ್ತನೆ 23:5)
ಇದೇ ಸನ್ನಿವೇಶವನ್ನೇ ಅಬ್ರಹಾಮನೂ ಸಹ ಪ್ರದರ್ಶಿಸುತ್ತಾನೆ. ಅವನು ಇಸಾಕನಿಗಾಗಿ ತನ್ನ ಜೀವಮಾನವೆಲ್ಲಾ ಕಾದಿದ್ದನು. ಆದರೆ ಅದೇ ಮಗನನ್ನು ದೇವರು ಯಜ್ಞವಾಗಿ ಸಮರ್ಪಿಸಲು ಹೇಳಿದನು! ಆದರೆ ದೇವರು ತಾನೇ ತನ್ನನ್ನು ಒದಗಿಸಿ ಕೊಟ್ಟಿದ್ದರಿಂದ ಅಬ್ರಹಾಮಾನು ತನ್ನ ಮಗನನ್ನು ಯಜ್ಞ ಮಾಡಲಿಲ್ಲ. ಅಬ್ರಹಾಮ ಹಾಗೂ ಹನ್ನಳ ಚರಿತ್ರೆಯು ನಂಬಿಕೆಯು ಹೇಗೆ ಕಾರ್ಯ ಮಾಡುತ್ತದೆ ಎಂಬುದನ್ನು ಅನಾವರಣಗೊಳಿಸುತ್ತದೆ.
ಪ್ರಾರ್ಥನೆಗಳು
ತಂದೆಯಾದ ದೇವರೇ ನಿನ್ನ ಮಗನಾದ ಯೇಸುವಿನ ನಾಮದಲ್ಲಿ ನಿನ್ನ ಆಶೀರ್ವಾದದ ನಾಲೆ ಆಗುವಂತೆ ನನ್ನನ್ನು ಆಶೀರ್ವದಿಸು. ಎಲ್ಲಾ ರೀತಿಯ ಲೋಭಗಳನ್ನು ನನ್ನಿಂದ ತೆಗೆದುಹಾಕು.
Join our WhatsApp Channel
Most Read
● ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ● ದೇವರು ನಿಮ್ಮ ಶರೀರದ ಕುರಿತು ಚಿಂತಿಸುತ್ತಾನಾ?
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
● ಸ್ಥಿರತೆಯಲ್ಲಿರುವ ಶಕ್ತಿ
● ದಿನ 39 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ
ಅನಿಸಿಕೆಗಳು