ಅನುದಿನದ ಮನ್ನಾ
ದೇವರು ನಿಮ್ಮ ಶರೀರದ ಕುರಿತು ಚಿಂತಿಸುತ್ತಾನಾ?
Friday, 23rd of August 2024
1
0
164
Categories :
ವ್ಯಾಯಾಮ (Exercise)
"ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಪವಿತ್ರಮಾಡಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಿಮ್ಮ ಆತ್ಮಪ್ರಾಣಶರೀರಗಳು ದೋಷವಿಲ್ಲದೆ ಸಂಪೂರ್ಣವಾಗಿ ಕಾಣಿಸುವಂತೆ ಕಾಪಾಡಲ್ಪಡಲಿ.'(1 ಥೆಸಲೋನಿಕದವರಿಗೆ 5:23)
ದೇವರು ನಮ್ಮನ್ನು ಪ್ರಾಣ ಆತ್ಮ ಮತ್ತು ಶರೀರವಾಗಿ ಉಂಟು ಮಾಡಿದ್ದಾನೆ. ಕ್ರೈಸ್ತರಿಗೆ ಈ ಮೂರೂ ಸಹ ಸಮಾನ ಮುಖ್ಯತ್ವ ಹೊಂದಿರುವ ಸಂಗತಿಗಳಾಗಿವೆ. ಆತ್ಮದಿಂದ ತುಂಬಿದ ಕ್ರೈಸ್ತರು ಪ್ರಾಣ ಮತ್ತು ಆತ್ಮದ ಅಂಶಗಳನ್ನು ನೋಡಿಕೊಳ್ಳುವಲ್ಲಿ ಶ್ರದ್ಧೆಯಿಂದ ಇರುತ್ತಾರೆ. ಆದರೆ ಶರೀರ ವಿಚಾರದಲ್ಲಿ ಹಿಂದಾಗುತ್ತಾರೆ.
ಅಪೋಸ್ತರನಾದ ಪೌಲನು ಹೀಗೆ ಬರೆಯುತ್ತಾನೆ " ದೈವ ಭಕ್ತಿಯ (ಭಕ್ತಿಯ ) ವಿಷಯದಲ್ಲಿ ಸಾಧನೆ ಮಾಡಿಕೋ (ನಿನ್ನನ್ನು ಆತ್ಮಿಕವಾಗಿ ಸದೃಢಗೊಳಿಸಿಕೋ). ದೇಹ ಸಾಧನೆಯೂ ಸ್ವಲ್ಪಮಟ್ಟಿಗೆ ಪ್ರಯೋಜನವಾಗಿವೆ.( ಕೆಲವು ಮೌಲ್ಯವನ್ನು ಹೊಂದಿದೆ(1 ತಿಮೋತಿ 4:7 ವಿಷದವಾಗಿದೆ) ಎಂದು. ದೇಹ ಸಾಧನೆ ಮತ್ತು ಆತ್ಮಿಕ ಸಾಧನೆ ಎರಡು ರೀತಿಯ ಸಾಧನೆಗಳು ಮುಖ್ಯವಾಗಿವೆ. ಅನೇಕರು ಈ ಸತ್ಯವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಭೌತಿಕ ದೇಹವನ್ನು ನಿರ್ಲಕ್ಷಿಸಿ ಕೇವಲ ಆತ್ಮೀಕ ವಿಚಾರಗಳ ಮೇಲೆ ಸಂಪೂರ್ಣವಾಗಿ ಲಕ್ಷ್ಯವಿಡುವ ಕೆಲವು ಜನರಿದ್ದಾರೆ. ತಮ್ಮ ಭೌತಿಕ ದೇಹದ ರೂಪ ಮತ್ತು ಆಕಾರದ ಮೇಲೆಯೇ ಹೆಚ್ಚು ಗಮನ ಹರಿಸಿ ಆತ್ಮಿಕ ಬೆಳವಣಿಗೆ ಹಾಗೂ ನಿರ್ಲಕ್ಷಿಸುವ ಇನ್ನೂ ಕೆಲವು ಜನರಿದ್ದಾರೆ. ಈ ಎರಡೂ ಸಹ ತಪ್ಪು.ಎರಡರಲ್ಲೂ ಸಮತೋಲನ ಅಗತ್ಯವಾಗಿ ಬೇಕು.
ವ್ಯಾಯಾಮ ಮಾಡುವುದರಿಂದ ಏನಾದರೂ ಪ್ರಯೋಜನಗಳಿವೆಯೇ? ಮತ್ತು ಕ್ರೈಸ್ತರು ವ್ಯಾಯಾಮ ಮಾಡಬಹುದೇ? ಹೌದು!
1) ನಮ್ಮ ಶರೀರವನ್ನು ಲಕ್ಷಿಸುವ ಮೂಲಕ ನಾವು ದೇವರನ್ನು ಗೌರವಿಸುವವರಾಗಿರುತ್ತೇವೆ.
1 ಕೊರಿಯಂತೆ 6:19-20ರಲ್ಲಿ ಸತ್ಯವೇದವು ನಿಮ್ಮ ದೇಹಗಳು ಪವಿತ್ರಾತ್ಮನ ಗರ್ಭಗುಡಿಯಾಗಿದೆ ನೀವು ದೇವರಿಂದ ಅಂಗೀಕರಿಸಲ್ಪಟ್ಟವರಾಗಿದ್ದೀರಿ ಎಂಬುದು ನಿಮಗೆ ತಿಳಿದಿಲ್ಲವೇ. ನೀವು ನಿಮ್ಮ ಸ್ವಂತ ಸ್ವತ್ತಲ್ಲ. ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರಾಗಿದ್ದೀರಿ. ಆದ್ದರಿಂದ ನಿಮ್ಮ ದೇಹದಲ್ಲಿ ದೇವರ ಪ್ರಭಾವವನ್ನು ಪ್ರಕಾಶ ಪಡಿಸಿರಿ ಎಂದು ಹೇಳುತ್ತದೆ. ನಾವು ನಮ್ಮ ದೇಹವನ್ನು ಜಾಗರೂಕತೆಯಿಂದ ನಿರ್ವಹಿಸಬೇಕೆಂದು ದೇವರು ಬಯಸುತ್ತಾನೆ. ನಾವು ನಮ್ಮ ದೇಹದ ಮಾಲೀಕರಲ್ಲ. ಕೇವಲ ಅದನ್ನು ನಿರ್ವಹಿಸುವವರಾಗಿದ್ದೇವೆ ಅಷ್ಟೇ. ಸತ್ಯವೇದದಲ್ಲಿ ನಿರ್ವಾಹಕ ಎಂಬ ಪದದ ಅರ್ಥ ಮೇಲ್ವಿಚಾರಣೆ ಎಂಬುದಾಗಿದೆ.ನಮ್ಮ ದೇಹವನ್ನು ನೋಡಿಕೊಳ್ಳುವುದು ಎಂದರೆ ನಮ್ಮ ಆತ್ಮಿಕತೆಯ ಉಸ್ತುವಾರಿ ವಹಿಸುವುದು ಎನ್ನುವುದು ಸಹ ಆಗಿದೆ.
2). ವ್ಯಾಯಾಮವು ನಮ್ಮ ದೇಹವನ್ನು ಹೆಚ್ಚಿನ ಪ್ರಮಾಣದಲ್ಲಿ ಶಿಸ್ತುಗೊಳಿಸಲು ಸಹಾಯ ಮಾಡುತ್ತದೆ.
"ಹೀಗಿರಲಾಗಿ ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದಿರುವ ಅವರಂತೆಯೇ ಓಡುತ್ತೇನೆ; ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ. ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನ ಪಡಿಸಿಕೊಳ್ಳುತ್ತೇನೆ."(1 ಕೊರಿಂಥದವರಿಗೆ 9:26-27)
3). ವ್ಯಾಯಾಮವು ನಾವು ದೇವರ ಚಿತ್ತವನ್ನು ಮಾಡಲು ನಮ್ಮನ್ನು ಆರೋಗ್ಯದಿಂದ ಇರುವಂತೆ ಮಾಡುತ್ತದೆ.
"ಪ್ರಿಯನೇ, ನೀನು ಆತ್ಮ ವಿಷಯದಲ್ಲಿ ಅಭಿವೃದ್ಧಿಹೊಂದಿರುವ ಪ್ರಕಾರ ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿಹೊಂದಿ ಸುಕ್ಷೇಮವಾಗಿರಬೇಕೆಂದು ಪ್ರಾರ್ಥಿಸುತ್ತೇನೆ."(3 ಯೋಹಾನನು 1:2 ). ವ್ಯಾಯಾಮವು ನಮ್ಮ ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.
ಎಲ್ಲವನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನಾವು ವ್ಯಾಯಾಮ ಮಾಡಬೇಕು. ಆದರೆ ಜನರು ನಮ್ಮನ್ನು ನೋಡಲಿ ಎಂದು ಅವರನ್ನು ಆಕರ್ಷಿಸುವುದಕ್ಕಾಗಿ ಮಾಡಬಾರದು. ಅದರ ಬದಲಾಗಿ ವ್ಯಾಯಾಮದ ಗುರಿಯು ನಮ್ಮ ದೈಹಿಕ ಆರೋಗ್ಯದ ಸುಧಾರಣೆಗಾಗಿ ಇರಬೇಕು. ಇದರಿಂದ ನಾವು ಭೂಮಿಯ ಮೇಲೆ ನಮಗಿರುವ ದೇವರ ಚಿತ್ತವನ್ನು ಪೂರೈಸಲು ಹೆಚ್ಚಾದ ದೈಹಿಕ ಶಕ್ತಿಯನ್ನು ಹೊಂದಿಕೊಳ್ಳುವವರಾಗುತ್ತೇವೆ.

ಪ್ರಾರ್ಥನೆಗಳು
ತಂದೆಯೇ ನೀನು ನನಗೆ ಅನುಗ್ರಹಿಸಿರುವ ಈ ಶರೀರಕ್ಕಾಗಿ ನಿನಗೆ ಸ್ತೋತ್ರ. ಈ ನನ್ನ ದೇಹವನ್ನು ಸ್ವಸ್ಥ ಪಡಿಸು. ಕರ್ತನೇ, ಇಂದು ಪ್ರಸ್ತುತಪಡಿಸಿರುವ ಈ ಸತ್ಯವನ್ನು ನಾನು ಅಂಗೀಕರಿಸಿಕೊಂಡು ಅದರಂತೆ ಅಭ್ಯಾಸ ಮಾಡಲು ಯೇಸು ನಾಮದಲ್ಲಿ ನನಗೆ ಸಹಾಯ ಮಾಡು.ಆಮೆನ್.
Join our WhatsApp Channel
Most Read
● ಮೂರು ನಿರ್ಣಾಯಕ ಪರೀಕ್ಷೆಗಳು● ಮಹಾತ್ತಾದ ಕಾರ್ಯಗಳು
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ನೀವು ಸುಲಭವಾಗಿ ಬೇಸರಗೊಳ್ಳುವಿರಾ?
● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
● ಅಗ್ನಿಯು ಸುರಿಯಲ್ಪಡಬೇಕು
● ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
ಅನಿಸಿಕೆಗಳು