ಅನುದಿನದ ಮನ್ನಾ
ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ
Friday, 30th of August 2024
2
1
121
Categories :
ಸಮೃದ್ಧಿ (Prosperity)
"ಪ್ರಿಯನೇ, ನೀನು ಆತ್ಮ ವಿಷಯದಲ್ಲಿ ಅಭಿವೃದ್ಧಿಹೊಂದಿರುವ ಪ್ರಕಾರ ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿಹೊಂದಿ ಸುಕ್ಷೇಮವಾಗಿರಬೇಕೆಂದು ಪ್ರಾರ್ಥಿಸುತ್ತೇನೆ."(3 ಯೋಹಾನನು 1:2)
ನಿಜವಾದ ಸಮೃದ್ಧಿ ಎಂಬುದು ಯಾವಾಗಲೂ ದೈವೀಕ ಸೂಚನೆಗಳನ್ನು ಪೂರೈಸಲು ಬೇಕಾಕಷ್ಟು ದೈವೀಕ ಸೌಲಭ್ಯವನ್ನು ಹೊಂದಿಕೊಂಡಿರುತ್ತದೆ. ನಿಜವಾದ ಸತ್ಯವೇದ ಆಧಾರಿತ ಸಮೃದ್ಧಿ ಎಂದರೆ ಕೇವಲ ಹಣಕಾಸಿನ ಸಮೃದ್ಧಿ ಮಾತ್ರವಲ್ಲ. ಆದರೆ ಅದು ಜೀವನದ ಎಲ್ಲಾ ಕ್ಷೇತ್ರದಲ್ಲಿರುವ ಸಮೃದ್ಧಿಯಾಗಿರುತ್ತದೆ. ಉದಾಹರಣೆಗೆ ಆರೋಗ್ಯದಲ್ಲಿನ ಸಮೃದ್ಧಿ, ಬಾಂಧವ್ಯಗಳಲ್ಲಿ ಸಮೃದ್ಧಿ, ಇತ್ಯಾದಿ..
ಸಾಮಾನ್ಯವಾಗಿ ಎಲ್ಲರೂ ಎಲ್ಲಾಕಡೆ ಕೇಳಲಾಗುವ ಪ್ರಶ್ನೆ ಎಂದರೆ "ನನ್ನ ಜೀವನದಲ್ಲಿ ನಾನು ಈ ಸಮೃದ್ಧಿಯನ್ನು ಪಡೆಯುವುದು ಹೇಗೆ" ಎಂಬುದೇ.
ದೇವರ ಚಿತ್ತವನ್ನು ಶ್ರದ್ದೆಯಿಂದ ಅನುಸರಿಸುವುದೇ ನಮ್ಮ ಎಲ್ಲ ಪ್ರಯತ್ನಗಳಲ್ಲಿ ಏಳಿಗೆಯನ್ನು ಸಾಧಿಸಲು ಇರುವ ಖಚಿತವಾದ ಮಾರ್ಗವಾಗಿದೆ.
"ಅವನು ತನ್ನ ದೇವರ ಒಲುಮೆಯನ್ನು ಪಡಕೊಳ್ಳುವದಕ್ಕೋಸ್ಕರ ದೇವಾಲಯದ ಸೇವಾಸಂಬಂಧದಲ್ಲಿಯೂ ಧರ್ಮಶಾಸ್ತ್ರವಿಧಿಗಳ ಸಂಬಂಧದಲ್ಲಿಯೂ ತಾನು ಪ್ರಾರಂಭಿಸಿದ ಎಲ್ಲಾ ಕಾರ್ಯಗಳನ್ನು ಯಥಾರ್ಥಚಿತ್ತದಿಂದ ಮಾಡಿ ಕೊನೆಗಾಣಿಸಿದನು."(2 ಪೂರ್ವಕಾಲವೃತ್ತಾಂತ 31:21)
ಹಿಜ್ಕಿಯ ಎಂಬ ಯಹೂದದ ಅರಸನು ನಮ್ಮಂತೆ ಅತ್ಯಂತ ಅಪಾಯಕಾರಿಯಾದ ಪ್ರಕ್ಷುಬ್ದ ಸಮಯದಲ್ಲಿ ವಾಸಿಸುತ್ತಿದ್ದನು. ಎಲ್ಲಾ ಕಡೆಗಳಿಂದಲೂ ಪ್ರಬಲವಾದ ಶತ್ರುಗಳು ಅವನನ್ನು ಮುತ್ತುತ್ತಿದ್ದರು. ವಿಗ್ರಹಾರಾಧನೆ ಅಂದಿನ ಜನಪ್ರಿಯ ವಾದಂತಹ ಧರ್ಮವಾಗಿತ್ತು. ಇವನ ತಂದೆ ತಾಯಿಗಳು ತಮ್ಮ ನಿಜವಾದ ದೇವರನ್ನು ತೊರೆದು ಪ್ರಜೆಗಳನ್ನೂ ವಿಗ್ರಹಾರಾದನೆ ಮಾಡುವಂತೆ ಪ್ರೇರೇಪಿಸುತ್ತಿದ್ದರು (2 ಪೂ. ವೃ. 28).
ಇವೆಲ್ಲವುಗಳ ಮಧ್ಯದಲ್ಲೂ ಹಿಜ್ಕೀಯನು ಯಾವುದೇ ರಾಜಿ ಮಾಡಿಕೊಳ್ಳದೆ ಯಹೋವನನ್ನು ಪೂರ್ಣ ಮನಸ್ಸಿನಿಂದ ಸೇವಿಸುವುದನ್ನೇ ಆಯ್ಕೆ ಮಾಡಿಕೊಂಡನು.
ಜನರೆಲ್ಲರೂ ಸಹ ಜೀವಸ್ವರೂಪನಾದ ದೇವರನ್ನೇ ಆರಾಧಿಸಬೇಕೆಂದು ಅದಕ್ಕಾಗಿ ತನ್ನ ಶಕ್ತಿ ಮೀರಿ ಎಲ್ಲವನ್ನೂ ಮಾಡಿದನು.
ಹಿಜ್ಕೀಯನು ತನ್ನ ದೇವರ ಆಜ್ಞೆಗಳನ್ನೆಲ್ಲ ಶ್ರದ್ಧೆಯಿಂದ ಕೈಗೊಂಡನು. ಇದರ ಪ್ರತಿಫಲವಾಗಿ ದೇವರು ಅವನನ್ನು ಬಹಳವಾಗಿ ಆಶೀರ್ವದಿಸಿದನು. ಹಿಜ್ಕೀಯನು ಕೇವಲ ರಕ್ಷಿಸಲ್ಪಟ್ಟಿದ್ದು ಮಾತ್ರವಲ್ಲದೇ ಅಂತಹ ಸಮಯದಲ್ಲಿಯೂ ಪ್ರವರ್ಧಮಾನಕ್ಕೆ ಬಂದನು. ಏಕೆಂದರೆ ಬಹು ಸಂಖ್ಯಾತ ಜನರ ಅಭಿಪ್ರಾಯವನ್ನು ತಳ್ಳಿ ಹಾಕಿ ಜೀವ ಸ್ವರೂಪನಾದ ದೇವರನ್ನೇ ಅನುಸರಿಸಬೇಕೆಂಬ ನಿರ್ಧಾರವನ್ನು ಕೈಗೊಂಡಿದ್ದೆ ಇದಕ್ಕೆ ಕಾರಣ.ನಾವು ಸಹ ಇವನ ಮಾದರಿಯನ್ನೇ ಅನುಕರಿಸಬೇಕು.
ಎರಡನೆಯದಾಗಿ ಸತ್ಯವೇದ ಮಾನದಂಡಗಳ ಪ್ರಕಾರ ಜೀವಿಸುವಂತಹ ಪ್ರಭುದ್ಧವಾದ ಕ್ರೈಸ್ತರೊಂದಿಗೆ ಆರೋಗ್ಯಕರವಾದ ಬಾಂಧವ್ಯಗಳನ್ನು ಬೆಳೆಸಿಕೊಳ್ಳಲೂ ಸಹ ನಾವು ಪ್ರಯತ್ನಿಸಬೇಕು. ಕಡೆಯದಾಗಿ ಆದರೆ ಪ್ರಮುಖವಾಗಿ ನಮ್ಮ ಸಮಯ ಪ್ರತಿಭೆ ಮತ್ತು ಸಂಪತ್ತನ್ನು ಉಪಯೋಗಿಸಿಕೊಂಡು ನಾವು ಮಾಡುವ ಕೆಲಸಗಳ ಕುರಿತು ಜಾಗರೂಕತೆಯಿಂದ ಇರಬೇಕು.
ಪ್ರಾರ್ಥನೆಗಳು
1. ತಂದೆಯೇ ನಾನು ಸಮೃದ್ಧಿಯಾಗುವಂತೆ ಸರಿಯಾದ ವ್ಯಕ್ತಿಗಳೊಂದಿಗೆ ಯೇಸು ನಾಮದಲ್ಲಿ ನನ್ನನ್ನು ಕೂಡಿಸು.
2. ತಂದೆಯೇ ನನ್ನ ಎಲ್ಲಾ ಆಲೋಚನೆಗಳನ್ನು ನಿನ್ನ ವಾಕ್ಯ ಕ್ಕನುಗುಣವಾಗಿರುವಂತೆ ಯೇಸು ನಾಮದಲ್ಲಿ ಮಾರ್ಪಡಿಸು. ಆಗ ನಾನು ಸಮೃದ್ಧಿ ಹೊಂದಿ ನಿನಗೆ ಮಹಿಮೆ ತರುವಂತಾಗುವುದು. ಆಮೇನ್.
2. ತಂದೆಯೇ ನನ್ನ ಎಲ್ಲಾ ಆಲೋಚನೆಗಳನ್ನು ನಿನ್ನ ವಾಕ್ಯ ಕ್ಕನುಗುಣವಾಗಿರುವಂತೆ ಯೇಸು ನಾಮದಲ್ಲಿ ಮಾರ್ಪಡಿಸು. ಆಗ ನಾನು ಸಮೃದ್ಧಿ ಹೊಂದಿ ನಿನಗೆ ಮಹಿಮೆ ತರುವಂತಾಗುವುದು. ಆಮೇನ್.
Join our WhatsApp Channel
Most Read
● ಯುದ್ಧಕ್ಕಾಗಿ ತರಬೇತಿ.● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?- 2
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?
● ಯೇಸುವಿನ ಹೆಸರು.
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸಿ ಮತ್ತು ಆತ್ಮಿಕವಾದ ನವಚೇತನವನ್ನು ಹೊಂದಿಕೊಳ್ಳಿರಿ
● ಮಾತಿನಲ್ಲಿರುವ ಶಕ್ತಿ
● ರಹಸ್ಯವಾದ ಆತ್ಮೀಕ ದ್ವಾರಗಳು
ಅನಿಸಿಕೆಗಳು