ನಾವು ನೆಪಗಳನ್ನು ಹೇಳುವುದರಲ್ಲಿ ಕೌಶಲ್ಯ ಉಳ್ಳವರು. ಹೌದು ತಾನೆ? ಜವಾಬ್ದಾರಿಗಳು ಅಥವಾ ಸವಾಲೊಡ್ಡುವ ಕೆಲಸಗಳು ಬಂದರೆ ಜಾರಿಕೊಳ್ಳುವುದು ಮನುಷ್ಯನ ಸಾಮಾನ್ಯ ಪ್ರವೃತ್ತಿಯಾಗಿದೆ. ಯಾವುದಾದರು ಕೆಲಸ ತಡವಾದರೆ, ಮುಂದೂಡಲ್ಪಟ್ಟರೆ, ಕಷ್ಟಕರ ಎನಿಸುವ ಮಾತುಕತೆಗಳು ಬಂದಾಗ ಅಥವಾ ಆತ್ಮೀಕ ಶಿಸ್ತನ್ನು ನಿರ್ಲಕ್ಷಿಸಿದಾಗ ನೆಪಗಳನ್ನು ನಮ್ಮ ರಕ್ಷಾ ಕವಚಗಳ ಹಾಗೆ ನಾವು ಬಳಸಿಕೊಳ್ಳುತ್ತೇವೆ.
"ನನಗೆ ಸಮಯವಿರಲಿಲ್ಲ", " ನಾನು ತುಂಬಾ ಸುಸ್ತಾಗಿದ್ದೆ", "ಇದು ಬಹಳ ಕಷ್ಟಕರವಾದದ್ದು" ಅಥವಾ "ಇದನ್ನು ನಾಳೆ ಮಾಡುತ್ತೇನೆ" ಎನ್ನುವ ಮಾತುಗಳು ಸಾಮಾನ್ಯವಾಗಿ "ನೆಪ" ಎನ್ನುವುದು ಒಳಗೊಂಡಿರುತ್ತದೆ.
ಈ ಎಲ್ಲಾ ನೆಪಗಳು ನಿಮಗೆ ತಾತ್ಕಾಲಿಕವಾದ ಆರಾಮವನ್ನು ಕೊಡಬಹುದು. ಆದರೆ ನಿಮ್ಮ ಪರಿಪೂರ್ಣ ಸಾಮರ್ಥ್ಯದ ಮಟ್ಟವನ್ನು ಮುಟ್ಟಲಾಗದ ಹಾಗೆ ಮಾಡುತ್ತವೆ. ವಾಸ್ತವೇನೆಂದರೆ ಈ ನೆಪಗಳನ್ನು ನಮಗೆ ಆರಂಭದಾಯಕವಲ್ಲದ, ವೈಫಲ್ಯಗಳ ಅಥವಾ ಅಜ್ಞಾತ ಸಂಗತಿಗಳನ್ನು ಎದುರಿಸಬೇಕಾಗುವುದು ಎನ್ನುವಂತಹ ಪರಿಸ್ಥಿತಿಯಲ್ಲಿ ಅವುಗಳನ್ನು ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ನೆಪಾಗಳನ್ನು ಬಳಸುತ್ತೇವೆ. ಆದರೆ ಈ ರೀತಿ ತಪ್ಪಿಸಿಕೊಳ್ಳುವುದರಿಂದ ಆಗುವ ದೀರ್ಘಾವಧಿಯ ಪರಿಣಾಮವನ್ನು ನಾವು ಅರಿತಿರುವುದಿಲ್ಲ.
ನೆಪ ಹೇಳುವಂತ ಮೂರ್ಖತನ: ಪ್ರವಾದಿಯಾದ ಯೆರೆಮಿಯನಿಂದ ಕಲಿಯಬೇಕಾದ ಪಾಠ.
"ನೆಪಗಳು ಅಸಮರ್ಥರ ಸಾಧನಗಳಾಗಿವೆ ಮತ್ತು ಈ ನೆಪ ಹೇಳುವ ಕಲೆಯಲ್ಲಿ ಪರಿಣಿತಿ ಹೊಂದಿದವರು ಸಾಧನೆಯಲ್ಲಿ ಮುಂದೆ ಸಾಗುವುದು ತೀರಾ ಅಪರೂಪ" ಎಂದು ಹೇಳಲಾಗುತ್ತದೆ. "ನೆಪ ಹೇಳವುದರಲ್ಲಿ ಉತ್ತಮವಾದವನಲ್ಲಿ ಉತ್ತಮವಾದವುಗಳು ದೊರಕುವುದೇ ಅಪರೂಪ" ಎಂದು ಬೆಂಜಾಮೀನ್ ಫ್ರಾಂಕ್ಲಿನ್ ಹೇಳಿದ್ದಾರೆ. ಈ ಮಾತು ಯೆರೆಮಿಯನ ಕಥೆಗೆ ಅನ್ವಯವಾಗುತ್ತದೆ.
ದೇವರು ಯೆರೆಮಿಯನನ್ನು ಜನಾಂಗಗಳಿಗೆ ಪ್ರವಾದಿಯನ್ನಾಗಿ ನೇಮಿಸಿದಾಗ ಅವನು ತಕ್ಷಣವೇ ನೆಪಗಳನ್ನು ಹೇಳಲು ಆರಂಭಿಸುತ್ತಾನೆ.
"ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವದಕ್ಕೆ ಮುಂಚೆ ನಿನ್ನನ್ನು ತಿಳಿದಿದ್ದೆನು; ನೀನು ಉದರದಿಂದ ಬರುವದಕ್ಕೆ ಮೊದಲೇ ನಿನ್ನನ್ನು ಪ್ರತಿಷ್ಠಿಸಿದ್ದೆನು; ಜನಾಂಗಗಳಿಗೆ ಪ್ರವಾದಿಯನ್ನಾಗಿ ನಿನ್ನನ್ನು ನೇವಿುಸಿದ್ದೇನೆ. ಅದಕ್ಕೆ ನಾನು - ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು ಎಂದು ಬಿನ್ನವಿಸಿದೆನು." ಎಂದು ಹೇಳಿದ್ದನ್ನು ಯೆರೆಮೀಯ 1:4-6 ರಲ್ಲಿ ಓದುತ್ತೇವೆ.
ನೆಪಗಳು ಈ ದಿನಕ್ಕೆ ಆರಾಮವನ್ನು ಕೊಟ್ಟು ನಾಳಿನ ದಿನವನ್ನು ಕಷ್ಟಕ್ಕೆ ದುಡುತ್ತದೆ.
ನೆಪಗಳು ಈ ದಿನವನ್ನು ಆರಾಮ ಎನಿಸುವಂತೆ ಮಾಡಬಹುದು. ಆದರೆ ಅವು ನಾಳಿನ ದಿನಗಳನ್ನು ಇನ್ನಷ್ಟು ಕಷ್ಟಕ್ಕೆ ಧೂಡುತ್ತದೆ. ನೀವು ನಿಮಗೆ ಇಂದು ಕಷ್ಟ ಎನಿಸುವ ಕೆಲಸಗಳಿಂದ ತಪ್ಪಿಸಿಕೊಂಡರೂ ಕ್ರೋಢಿಕರಿಸಲ್ಪಟ್ಟ ನಾಳೆಯ ದಿನಕ್ಕೆ ಇನ್ನೂ ಹೆಚ್ಚಿನ ಒತ್ತಡ ತರುವಂತೆ ಮಾಡುತ್ತದೆ.ಈ ಒಂದು ಸಿದ್ಧಾಂತವನ್ನು ಜ್ಞಾನಕ್ತಿ 6:9-11 ರ ವಾಕ್ಯಗಳೂ ಸಹ ಪ್ರತಿಧ್ವನಿಸುತ್ತವೆ.
" ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ? ಇನ್ನು ಸ್ವಲ್ಪ ನಿದ್ದೆ, ಇನ್ನು ತುಸು ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ? ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು."
ಈ ಒಂದು ದೇವರ ವಾಕ್ಯವನ್ನು ನೆಪಗಳನ್ನು ಹೇಳುತ್ತಾ ಕಾರ್ಯಗಳನ್ನು ತಡ ಮಾಡುವ, ಕಾರ್ಯಗಳನ್ನು ಮುಂದೂಡುವುದರ ಅಪಾಯದ ಕುರಿತು ಎಚ್ಚರಿಕೆ ನೀಡುತ್ತದೆ.
"ಸ್ವಲ್ಪ ನಿದ್ರೆ" "ಸ್ವಲ್ಪ ತೂಕಡಿಕೆ" ಎಂದು ಹೇಳುವಂಥದ್ದು ತೋರಿಕೆಗೆ ಅಷ್ಟೇನೂ ಹಾನಿಕರವಲ್ಲದ್ದು ಎನಿಸಬಹುದು ಮುಂದೆ ಕಾಲಾನಂತರದಲ್ಲಿ ಈ ಸಣ್ಣ ಸಣ್ಣ ನೆಪಗಳೇ ಗಮನಾರ್ಹ ದುಷ್ಪರಿಣಾಮಗಳಿಗೆ ಕಾರಣವಾಗಬಹುದು. ಅದು ನಮ್ಮ ಜೀವಿತದಲ್ಲಿ ಬಡತನವನ್ನು ಸಣ್ಣಗೆ ನುಸುಳುವಂತೆ ಮಾಡುತ್ತದೆ.
ಶಿಸ್ತಿನ ಶಿಕ್ಷಣವು ಎಂದು ಕಠಿಣ ಎನಿಸಿದರೂ ನಾಳೆಯನ್ನು ಸುಲಭ ಮಾಡುತ್ತದೆ.
ಮತ್ತೊಂದೆಡೆ ಶಿಸ್ತು ಎನ್ನುವುದು ಕಠಿಣ ಎಂದು ಕಂಡರೂ ಅದು ನಾಳಿನ ದಿನಗಳನ್ನು ಆರಾಮದಾಯಕವನ್ನಾಗಿ ಮಾಡುತ್ತದೆ. ಪ್ರತಿದಿನ ಪರಿಶ್ರಮ, ಸ್ವ ನಿಯಂತ್ರಣ ಹಾಗೂ ಕೆಲವೊಮ್ಮೆ ಆರಾಮದಾಯಕವಲ್ಲದ ಸ್ಥಿತಿಯನ್ನು ಶಿಸ್ತು ನಿರೀಕ್ಷಿಸುತ್ತದೆ. ಆದರೆ ಶಿಸ್ತಿಗೆ ಇರುವ ಪ್ರತಿಫಲವು ಬಹುಕಾಲಕ್ಕೂ ಬಾಳಿಕೆ ಬರುವಂತದ್ದು ನಿರಂತರಕ್ಕೂ ಇರುವಂತದ್ದು ಆಗಿರುತ್ತದೆ.
ಅನೇಕ ವಾಕ್ಯ ವೃಂದಗಳಲ್ಲಿ ಸತ್ಯವೇದವು ಶಿಸ್ತಿನ ಮಹತ್ವವನ್ನು ಒತ್ತುಕೊಟ್ಟು ಹೇಳುತ್ತದೆ. ಅದರಲ್ಲಿ ಒಂದು ವಾಕ್ಯವು ಇಬ್ರಿಯ 12:11
"ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ. "
ನೆಪಗಳೋ ಇಲ್ಲವೇ ಶಿಸ್ತೋ , ಆಯ್ಕೆ ನಮ್ಮದು :
ನೆಪ ಹೇಳುವುದೋ ಅಥವಾ ಶಿಸ್ತನ್ನು ಅನುಸರಿಸುವುದೋ ಎನ್ನುವ ಪರೀಕ್ಷೆಯನ್ನು ಅನುದಿನವೂ ಈ ಒಂದು ಆಯ್ಕೆಯನ್ನು ನಾವು ಎದುರಿಸುವವರಾಗಿರುತ್ತೇವೆ.ಈ ಒಂದು ನಿರ್ಧಾರದಲ್ಲಿಯೇ ನಮ್ಮ ಜೀವಿತವು ಅಡಗಿದೆ. ನೆಪಗಳು ಜವಾಬ್ದಾರಿಗಳಿಂದ ತಕ್ಷಣವೇ ತಪ್ಪಿಸಿಕೊಳ್ಳಲು ಸಹಾಯ ಮಾಡಬಹುದು. ಆದರೆ ಅವು ನಮ್ಮನ್ನು ಸಾಧಾರಣ ಎನ್ನುವಂತ ಅತೃಪ್ತ ಸಾಮರ್ಥ್ಯದ ಚಕ್ರದಲ್ಲಿ ಸಿಲುಕಿಸುತ್ತದೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಶಿಸ್ತು ಎನ್ನುವಂತದ್ದು ಪ್ರಯತ್ನ ಮತ್ತು ತ್ಯಾಗವನ್ನು ನಿರೀಕ್ಷಿಸುತ್ತದೆ. ಆದರೆ ಇದುವೇ ನಮ್ಮ ಯಶಸ್ಸು ಆತ್ಮಿಕ ಬೆಳವಣಿಗೆ ಮತ್ತು ನಮ್ಮ ಜೀವಿತದಲ್ಲಿ ದೇವರ ಉದ್ದೇಶವನ್ನು ನಾವು ನೆರವೇರಿಸಲು ಕಾರಣವಾಗುತ್ತದೆ.
ವಿಶ್ವಾಸಿಗಳಾದ ನಮಗೆ ದೇವರು ಬಲ ಪ್ರೀತಿ ಮತ್ತು ಶಿಸ್ತಿನ ಆತ್ಮವನ್ನು ಕೊಟ್ಟಿದ್ದಾನೆ ಹೊರತು ಹೇಡಿಯ ಆತ್ಮವಲ್ಲ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು.(1 ತಿಮೋತಿ 1:7) ಎಲ್ಲಾ ಸವಾಲುಗಳನ್ನು ಜಯಿಸುವ ಬಲವನ್ನು ಮತ್ತು ಸಾಮರ್ಥ್ಯವನ್ನು ನಾವು ಕ್ರಿಸ್ತನ ಮೂಲಕ ಹೊಂದಿದ್ದೇವೆ. "ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ." ಎನ್ನುವ ಫಿಲಿಪ್ಪಿಯವರಿಗೆ 4:13ರ ವಾಕ್ಯವನ್ನು ಪ್ರೇರಣೆಯಾಗಿ ತೆಗೆದುಕೊಳ್ಳೋಣ ನಾವು ದೇವರ ಬಲದ ಮೇಲೆ ಆಧಾರ ಗೊಳ್ಳುವುದಾದರೆ ಯಾವುದೇ ನೆಪ ಹೇಳಬೇಕಾದ ಅಗತ್ಯವಿರುವುದಿಲ್ಲ ಎಂಬುದನ್ನು ಇದು ನಮಗೆ ನೆನಪಿಗೆ ತರುತ್ತದೆ.
ನೀವು ಈ ಒಂದು ಆಯ್ಕೆ ಮೇಲೆ ಮನಸ್ಸು ಇಡುವರಾದರೆ ದೇವರ ಶಕ್ತಿಯೇ ನಿಮಗೆ ಸಾಕಾದದ್ದಾಗಿದೆ. ಮತ್ತು ಆತನ ಬಲವೇ ನಿಮ್ಮ ಬಲಹೀನತೆಯಲ್ಲಿ ಸಾಧಕವಾಗುತ್ತದೆ. (2 ಕೊರಿ 12:9) ನಮ್ಮ ಜೀವಿತದ ಉದ್ದೇಶಗಳನ್ನು ನೆರವೇರಿಸಲು ಈ ನೆಪಗಳಿಂದ ಹೊರಬರೋಣ. ಶಿಸ್ತಿನ ಜೀವಿತವನ್ನು ಅಳವಡಿಸಿಕೊಳ್ಳೋಣ. ದೇವರು ನಮಗಾಗಿ ಇಟ್ಟಿರುವ ಜೀವನಕ್ಕೆ ಭರವಸೆಯಿಂದ ಹೆಜ್ಜೆ ಇಡೋಣ.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನೆಪಗಳಿಂದ ಹೊರಬಂದು ಶಿಸ್ತಿನ ಜೀವನ ನಡೆಸಲು ನನಗೆ ಬಲವನ್ನು ಅನುಗ್ರಹಿಸು. ನನ್ನ ಜೀವಿತಕ್ಕಾಗಿ ನೀನು ಇಟ್ಟಿರುವ ಉದ್ದೇಶವನ್ನು ಪೂರೈಸುವಂತೆಯೂ ನಿನ್ನನ್ನೇ ಆಧಾರ ಮಾಡಿಕೊಳ್ಳುವಂತೆಯೂ ನಿನ್ನ ಧೈರ್ಯವನ್ನು ಜ್ಞಾನವನ್ನು ಯೇಸು ನಾಮದಲ್ಲಿ ನನ್ನಲ್ಲಿ ತುಂಬು. ಆಮೇನ್.
Join our WhatsApp Channel
Most Read
● ಪುರುಷರು ಏಕೆ ಪತನಗೊಳ್ಳುವರು -3● ಎತ್ತಲ್ಪಡುವಿಕೆ ಮತ್ತು ರೋಶ್ ಹಸನ್ನ
● ನೀವು ದೇವರನ್ನು ಎದುರಿಸುತ್ತಿದ್ದೀರಾ?
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
● ನಿಮ್ಮ ಗತಿಸಿ ಹೋದ ಕಾಲವು ನಿಮ್ಮ ಹೆಸರಾಗುವುದಕ್ಕೆ ಅವಕಾಶ ಕೊಡಬೇಡಿರಿ.
● ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?
ಅನಿಸಿಕೆಗಳು