ಅನುದಿನದ ಮನ್ನಾ
ನೋವಿನಲ್ಲೂ ದೇವರಿಗೆ ಒಡಂಬಟ್ಟು ನಡೆಯುವುದನ್ನು ಕಲಿಯುವುದು
Wednesday, 4th of September 2024
2
1
137
Categories :
ಶರಣಾಗತಿ (Surrender)
"ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು." (ಜ್ಞಾನೋಕ್ತಿಗಳು 3:6)
ಈ ಮೇಲಿನ ವಾಕ್ಯವು ನಾವು ಪರಿಪೂರ್ಣವಾಗಿ ಆತ್ಮನಿಗೆ ಅನುಸಾರವಾಗಿ ನಡೆಯುವುದು ಹೇಗೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಒಂದು ಸರಳವಾದ ಸತ್ಯವೇನೆಂದರೆ ಅದನ್ನು ಮಾಡಲು ಒಂದು ಮಾರ್ಗವಿದೆ ಅದೇನೆಂದರೆ ನಾವು ನಮ್ಮ ಎಲ್ಲಾ ಕಾರ್ಯಗಳಲ್ಲೂ ಆತನಿಗೆ ವಿಧೇಯರಾಗಿ ಆತನ ಚಿತ್ತದಂತೆ ನಡೆಯುವುದೇ ಆಗಿದೆ.
ದೇವರಿಗೆ ಒಡಂಬಟ್ಟು ನಡೆಯುವುದು ಎಂದರೆ ನಾವು ಕೇವಲ ನಮ್ಮ ಆತ್ಮಿಕ ಜೀವಿತದಲ್ಲಿ ಮಾತ್ರ ಎಂದು ಕೊಳ್ಳುತ್ತೇವೆ. ಅಂದರೆ ಪ್ರಾರ್ಥನೆಗಳು, ಆರಾಧನೆ, ಸತ್ಯವೇದ ಅಧ್ಯಯನ ಉಪವಾಸ ಇತ್ಯಾದಿಗಳನ್ನು ದೇವರಿಗೆ ಸಮರ್ಪಿಸಿಕೊಳ್ಳುತ್ತೇನೆ ಎಂದುಕೊಳ್ಳುತ್ತೇವೆ. ಆದರೆ ನಮ್ಮ ಜೀವನದ ಇನ್ನುಳಿದ ಕ್ಷೇತ್ರಗಳಾದ ಕುಟುಂಬ, ಮದುವೆ, ಕೆಲಸದ ಸ್ಥಳ ಮತ್ತು ಇತ್ಯಾದಿ ಈ ಸಾಮಾನ್ಯ ಜೀವಿತದ ಕುರಿತು ಏನು?
ಇಲ್ಲಿ ನಾನು ಪ್ರಾಮಾಣಿಕವಾಗಿ ನನ್ನ ಕುರಿತು ಹೇಳಬಯಸುವುದೇನೆಂದರೆ ನನ್ನ ಆದ್ಯತೆಗಳು ಮತ್ತು ದೈನಂದಿನ ದಿನಚರಿಗಳ ವಿಷಯಗಳು ಬಂದಾಗ ನಾನು ಸಂಪೂರ್ಣವಾಗಿ ದೇವರಿಗೆ ಒಳಗಾಗುವ ವಿಚಾರದಲ್ಲಿ ಹೆಣಗಾಡುತ್ತೇನೆ. ಇದು ನಿಜಕ್ಕೂ ಆನಂದಕರವಾದ ಅನುಭವವಂತೂ ಅಲ್ಲವೇ ಅಲ್ಲ ಮತ್ತು ಅದು ಅನೇಕ ಸಾರಿ ನೋವನ್ನು ತರುವ ಸಂಗತಿಯಾಗಿರುತ್ತದೆ. ಅಂತಹ ಸಮಯದಲ್ಲಿ ನಾನು ನನ್ನ ದೌರ್ಬಲ್ಯಗಳು ಮತ್ತು ವೈಫಲ್ಯತೆಗಳೊಂದಿಗೆ ಮುಖಾಮುಖಿಯಾಗಿ ಹೋರಾಡಿದ್ದೇನೆ. ಪರಿಶೋಧನೆಯ ಸಮಯದಲ್ಲಿ ದೇವರಿಗೆ ನಿಮ್ಮ ಬಯಕೆಗಳನ್ನು ಸಮರ್ಪಿಸಿಕೊಳ್ಳುವುದು ಪರಿಶೋಧನೆಗಿಂತ ಕಷ್ಟಕರವಾದದ್ದು.
ಪತನ ಹೊಂದುವ ಸ್ವಭಾವದ ಮನಸ್ಥಿತಿ ಕುರಿತು ಸತ್ಯವೇದವು ಹೀಗೆ ಹೇಳುತ್ತದೆ..
"ಯಾಕಂದರೆ ಶರೀರಭಾವದವುಗಳ ಮೇಲೆ ಮನಸ್ಸಿಡುವದು ದೇವರಿಗೆ ಶತ್ರುತ್ವವು; ಅಂಥ ಮನಸ್ಸು ದೇವರ ನಿಯಮಕ್ಕೆ ಒಳಪಡುವದೂ ಇಲ್ಲ, ಒಳಪಡುವದಕ್ಕಾಗುವದೂ ಇಲ್ಲ."(ರೋಮಾಪುರದವರಿಗೆ 8:7)
ಆದುದರಿಂದಲೇ ನಾವು ಕ್ರಿಸ್ತನಿಗೇ ವಿಧೇಯವಾಗಿರಬೇಕೆಂಬ ಆಯ್ಕೆಗಳನ್ನು ಮಾಡಿಕೊಳ್ಳುವಂತೆ ನಮ್ಮ ಮನಸ್ಸನ್ನು ಸಿದ್ಧಗೊಳಿಸಬೇಕು. ನಾವು ಆತ್ಮನುಸಾರ ನಡೆಯಬೇಕೆಂದರೆ ಆತ್ಮದಲ್ಲಿಯೇ ನೆಲೆಗೊಂಡವರಾಗಿರುವಂತದ್ದನ್ನು ಆಯ್ಕೆ ಮಾಡಿಕೊಳ್ಳಬೇಕು.ದೇವರು ನನಗೆ ಆತ್ಮಿಕ ಆಯಾಮದಲ್ಲಿ ಅನೇಕ ಅದ್ಭುತ ಅನುಭವಗಳನ್ನು ನೀಡಿದ್ದಾನೆ ಮತ್ತು ಅದಕ್ಕಾಗಿ ನಾನು ಆತನಿಗೆ ಸ್ತೋತ್ರ ಸಲ್ಲಿಸುತ್ತೇನೆ. ಆದರೂ ನನ್ನ ಜೀವನದಲ್ಲಿ ದಾವಂತದಲ್ಲಿ ಸಿಲುಕಿ ಹಾಕಿಕೊಂಡಿದ್ದೇನೆ. ಮತ್ತು ಈ ಎಲ್ಲಾ ಗದ್ದಲಗಳ ನಡುವೆ ದೇವರ ಧ್ವನಿಯನ್ನು ನಿರ್ಲಕ್ಷಿಸಿದ ಸಂದರ್ಭಗಳು ಸಹ ಇವೆ ಎಂದು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಹೆಚ್ಚಿನ ಸಮಯಗಳಲ್ಲಿ ನಾನು ಇಂತಿತದ್ದನ್ನು ಮಾಡಬೇಕೆಂದು ಆತನು ಹೇಳುವುದನ್ನು ಕೇಳಿಸಿಕೊಂಡರೂ ಅದನ್ನು ನಿಜವಾಗಿ ಮಾಡಲು ಆಗದೆ ಹೆಣಗಾಡಿದ್ದೇನೆ.. ನನ್ನ ಹೆಚ್ಚಿನ ಶೋಧನೆಗಳು ಯಾವಾಗಲೂ ಇದರಲ್ಲಿಯೇ ಇರುತ್ತದೆ.
"ಆ ತಂದೆಗಳು ಕೆಲವು ದಿವಸಗಳ ಪ್ರಯೋಜನವನ್ನು ಲಕ್ಷ್ಯಕ್ಕೆ ತೆಗೆದುಕೊಂಡು ತಮ್ಮ ಮನಸ್ಸಿಗೆ ತೋರಿದಂತೆ ನಮ್ಮನ್ನು ಶಿಕ್ಷಿಸಿದರು; ಆತನಾದರೋ ನಾವು ತನ್ನ ಪರಿಶುದ್ಧತೆಯಲ್ಲಿ ಪಾಲುಗಾರರಾಗಬೇಕೆಂದು ನಮ್ಮ ಹಿತಕ್ಕಾಗಿಯೇ ಶಿಕ್ಷಿಸುತ್ತಾನೆ. ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ."(ಇಬ್ರಿಯರಿಗೆ 12:10-11)
ಯಾವಾಗ ನೀವು ನಿಮ್ಮ ನೋವಿನ ಹಿಂದಿರುವ ಉದ್ದೇಶವನ್ನು ಅರಿತುಕೊಳ್ಳುತ್ತೀರೋ ಆಗ ನೀವು ದೇವರಿಗೆ ವಿಧೇಯರಾಗುವುದು ಸುಲಭವಾಗುತ್ತದೆ. ವಿಕ್ಟರ್ ಇಮಿಲ್ ಪ್ರಾಂಕ್ ರವರು "ಯಾವುದು ಬೆಳಕನ್ನು ನೀಡಲು ಬಯಸುತ್ತದೆಯೋ, ಅದು ಉರಿಯನ್ನು ತಡೆದುಕೊಳ್ಳಲೇಬೇಕು ಎಂದು ಒಮ್ಮೆ ಹೇಳಿದ್ದಾರೆ.
ನಾನು ನನ್ನ ಜೀವಿತವನ್ನು ಹಿಂದಿರುಗಿ ನೋಡುವಾಗ ನಾನು ಆತನ ನಿಶ್ಚಲವಾದ, ಮೆಲುವಾದ, ಸೌಮ್ಯವಾದ ದ್ವನಿಗೆ ಒಂದು ಸಲ ಕಿವಿ ಕೊಟ್ಟಿದ್ದರೆ ಇಂದು ಎಷ್ಟೋ ಸಂಕಟಗಳಿಂದ ತಪ್ಪಿಸಿಕೊಳ್ಳಬಹುದಿತ್ತು ಎಂದು ನನಗೆ ಬಹಳಷ್ಟು ಸಾರಿ ಅನಿಸಿದೆ.
ನನ್ನ ಮನಸ್ಸಿನಲ್ಲಿ ಆಗಾಗ ಏಳುವ ಒಂದು ಪ್ರಶ್ನೆ ಏನೆಂದರೆ "ದೇವರು ನನ್ನ ಜೀವಿತದಲ್ಲಿರುವ ಚಿಕ್ಕ ಚಿಕ್ಕ ಸಂಗತಿಗಳನ್ನು ಕುರಿತೂ ಕಾಳಜಿ ವಹಿಸುವವನಾಗಿದ್ದಾನಾ?"ಎಂಬುದೇ.
ಅದಕ್ಕೆ ಇರುವ ಸರಳವಾದ ಉತ್ತರವೆಂದರೆ "ಹೌದು". ದೇವರು ನಮ್ಮ ಜೀವಿತದಲ್ಲಿನ ಅತಿ ಸೂಕ್ಷ್ಮವಾದ ವಿಚಾರಗಳ ಕುರಿತೂ ಕಾಳಜಿ ಉಳ್ಳವನಾಗಿದ್ದಾನೆ. ಆತನು ನಮ್ಮ ತಲೆಗೂದಲುಗಳನ್ನು ಸಹಾ ಎಣಿಕೆಯಲ್ಲಿಟ್ಟಿದ್ದಾನೆ. (ಲೂಕ12:7). ಇನ್ನೊಂದು ಕೋನದಲ್ಲಿ ಹೇಳುವುದಾದರೆ "ಆತನ ಅಳತೆಯಲ್ಲಿ ಜನಾಂಗಗಳು ಧೂಳಿನಂತಿದ್ದರೆ ದೇವರಿಗೆ ಯಾವುದು ದೊಡ್ಡದು?(ಯೇಷಾಯ 40:15 ನೋಡಿರಿ)
ದೇವರು ನಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರದ ಕುರಿತು ಮಾತನಾಡಲು ಬಯಸುತ್ತಾನೆ. ಅದು ದೊಡ್ಡ ಸಂಗತಿಗಳಾದರೂ, ಚಿಕ್ಕ ಸಂಗತಿಗಳಾದರೂ ಸರಿಯೇ. ದಿನಗಳಾಗಲಿ ಗಂಟೆಗಲಾಗಲೀ ನಮ್ಮ ಜೀವನದ ಫಲ ರಹಿತ ಪ್ರಯತ್ನಗಳನ್ನು ತಡೆಯಬೇಕೆಂದೆ ಆತನು ಬಯಸುತ್ತಾನೆ. ಆದರೆ ಅದನ್ನು ಅರಿತುಕೊಳ್ಳಲು ನಾವು ಆತನೊಂದಿಗೆ ಸಾಗುವುದನ್ನು ತಡೆಯಬೇಕು.
ಅರಿಕೆಗಳು
ತಂದೆಯೇ, ನಿನ್ನ ಚಿತ್ತಕ್ಕೆ ವಿದೇಯವಾಗಿ ಮತ್ತು ನನ್ನೊಳಗೆ ವಾಸಿಸಲು ನೀವು ಕಳುಹಿಸಿಕೊಟ್ಟಂತಹ ಪವಿತ್ರಾತ್ಮನ ನಡೆಸುವಿಕೆಯಲ್ಲಿ ನನ್ನನ್ನು ನಡೆಸಬೇಕೆಂದು ಯೇಸುನಾಮದಲ್ಲಿ ನನ್ನನ್ನು ನಾನು ನಿನಗೆ ಸಮರ್ಪಿಸಿಕೊಡುತ್ತೇನೆ. ಆಮೇನ್.
Join our WhatsApp Channel
Most Read
● ನಿಮ್ಮ ಗತಿಯನ್ನು ಬದಲಾಯಿಸಿ● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಬಲವಾದ ಮೂರುಹುರಿಯ ಹಗ್ಗ
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ಧನ್ಯನಾದ ಮನುಷ್ಯ
● ದಿನ 04: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 35:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು