ಅನುದಿನದ ಮನ್ನಾ
ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?
Wednesday, 18th of September 2024
4
3
163
Categories :
ಅಂತಿಮ ಸಮಯ (End Time)
"ಭೂಲೋಕದ ಮೇಲೆ ಸಮಾಧಾನ ಹುಟ್ಟಿಸುವದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವದಕ್ಕೆ ಬಂದೆನು. 35 ಹೇಗಂದರೆ ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದ ಹುಟ್ಟಿಸುವದಕ್ಕೆ ಬಂದೆನು.36ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು."(ಮತ್ತಾಯ 10:34-36)
ಸತ್ಯವೇದದಲ್ಲಿ ಬಹಳ ತಪ್ಪಾಗಿ ಅರ್ಥೈಸಿಕೊಂಡ ಈ ವಾಕ್ಯವೃಂದದಲ್ಲಿ ಒಂದಾದ ಈ ವಾಕ್ಯದಲ್ಲಿ ಯೇಸು ಸ್ವಾಮಿಯು ಮೀಕನ ಮಾತುಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದಾನೆ(ಮೀಕ 7:6) ಅಷ್ಟೇ ಅಲ್ಲದೆ ಯೇಸು ಇಲ್ಲಿ ಹೇಳಿರುವ ಮಾತಿನಲ್ಲಿ ಉಪಯೋಗಿಸಿರುವ "ಖಡ್ಗ"ಎಂಬ ಪದವು ಅಕ್ಷರ ಖಡ್ಗವಲ್ಲ ಅದನ್ನು ಸಾಂಕೇತಿಕವಾಗಿ ಬಳಸಲಾಗಿದೆ ಅಷ್ಟೇ.
ಪೇತ್ರನು ಗೆತ್ಸೆಮನೆ ತೋಟದಲ್ಲಿ ಯೇಸುವನ್ನು ರಕ್ಷಿಸುವ ಸಲುವಾಗಿ ಕತ್ತಿಯನ್ನು ತೆಗೆದುಕೊಂಡು ಮಹಾಯಾಜಕನ ಸೇವಕನ ಕಿವಿಯನ್ನು ಕತ್ತರಿಸಿದಾಗ ಸ್ವತಃ ಯೇಸುವೇ ಪೇತ್ರನನ್ನು ಗದರಿಸಿ "ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು." ಎಂದು ಹೇಳಿದನು (ಮತ್ತಾಯ 26:52)ನಂತರ ಇಡೀಲೋಕದ ರಕ್ಷಣೆಗಾಗಿ ಸ್ವಯಿಚ್ಚೆಯಿಂದಲೇ ತನ್ನ ಪ್ರಾಣವನ್ನು ಮರಣಕ್ಕೆ ಒಪ್ಪಿಸಿಕೊಟ್ಟನು.
ಅನೇಕರು ಬಂದು ನನ್ನನ್ನು "ನಾನು ಸಮಾಧಾನವನ್ನು ತರಲು ಬಂದಿಲ್ಲ ಖಡ್ಗವನ್ನು ಹಾಕಲಿಕ್ಕೆ ಬಂದಿದ್ದೇನೆ ಎಂದು ಯೇಸು ಏಕೆ ಹೀಗೆ ಹೇಳುತ್ತಾನೆ? "ಎಂದು ಪ್ರಶ್ನಿಸಿದ್ದಾರೆ.
ಯೇಸು ಕ್ರಿಸ್ತನಿಗೆ ಇರುವ ಮತ್ತೊಂದು ಹೆಸರೆಂದರೆ "ಸಮಾಧಾನದ ಅರಸ"( ಯೇಶಾಯ 9:6)
"ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ." ಎಂದು ಯೋಹಾನ 14:27ರಲ್ಲಿ ಯೇಸು ಹೇಳಿದ್ದಾನೆ.
ಮೇಲಿನ ವಾಕ್ಯಗಳು ಮತ್ತು ಸತ್ಯವೇದದಲ್ಲಿನ ಬಹುತೇಕ ವಾಕ್ಯಗಳು ಯೇಸುವು ಮನುಷ್ಯರ ಮತ್ತು ದೇವರ ನಡುವೆ ಸಮಾಧಾನ ಏರ್ಪಡಿಸಲೆಂದು ಬಂದಿದ್ದಾನೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಇದಲ್ಲದೆ ಯೇಸುವು"ಯೇಸು ಅವನಿಗೆ - ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ." ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ (ಯೋಹಾನ 14:6)
ಯಾರು ದೇವರನ್ನು ಮತ್ತು ಆತನು ಏರ್ಪಡಿಸಿರುವ ರಕ್ಷಣೆಯ ಏಕೈಕ ಮಾರ್ಗವಾಗಿರುವ ಯೇಸುವನ್ನು ತಿರಸ್ಕರಿಸುತ್ತಾರೋ ಅವರು ದೇವರೊಂದಿಗೆ ಶಾಶ್ವತವಾಗಿಯೇ ಹೋರಾಡುವವರಾಗುತ್ತಾರೆ. ಆದರೆ ಪಶ್ಚಾತಾಪದಿಂದ ಮನ ತಿರುಗಿದವರು ದೇವರೊಂದಿಗೆ ಸಮಾಧಾನ ಹೊಂದುತ್ತಾರೆ.
ಈ ಒಂದು ಅಂತ್ಯಕಾಲದ ಸಮಯದಲ್ಲಿ ಒಳ್ಳೆಯದರ ಮತ್ತು ಕೆಟ್ಟದರ, ಕ್ರಿಸ್ತನಿಗೂ ಮತ್ತು ಕ್ರಿಸ್ತ ವಿರೋಧಿಗಳಿಗೂ ಕ್ರಿಸ್ತನನ್ನು ಅಂಗೀಕರಿಸಿದವರಿಗೂ ಮತ್ತು ಅಂಗೀಕರಿಸದೆ ಹೋದವರ ನಡುವೆ ಸಂಘರ್ಷ ಇದ್ದೇ ಇರುತ್ತದೆ. ಅನೇಕ ಬಾರಿ ಈ ಗುಂಪು ಘರ್ಷಣೆಯು ಕುಟುಂಬದಲ್ಲೇ ಇರುತ್ತದೆ.ಒಂದೇ ಕುಟುಂಬದಲ್ಲಿ ಕೆಲವರು ವಿಶ್ವಾಸಿಗಳಾಗಿರುತ್ತಾರೆ, ಮಿಕ್ಕವರು ಅವಿಶ್ವಾಸಿಗಳಾಗಿರುತ್ತಾರೆ.
ಮತ್ತಾಯ 10:34-36 ರಲ್ಲಿ ಯೇಸು ನಾನು ಭೂಮಿಯ ಮೇಲೆ ಸಮಾಧಾನವನ್ನು ಹುಟ್ಟಿಸುವುದಕ್ಕೆ ಬರಲಿಲ್ಲ. ಖಡ್ಗ ಹಾಕಲೆಂದೆ ಬಂದದ್ದು ಎಂದು ಹೇಳುವಂತದರಲ್ಲಿ " ಖಡ್ಗ" ಎಂಬುದು ವಿಭಾಗಿಸುವಂಥದ್ದು ಎಂಬುದರ ಸಾಂಕೇತಿಕ ರೂಪವಾಗಿದೆ. ಆತನು ಈ ಭೂಮಿ ಮೇಲೆ ಬಂದದರ ಪರಿಣಾಮವಾಗಿ ಕೆಲವು ಮಕ್ಕಳು ತಮ್ಮ ತಂದೆ ತಾಯಿಗಳ ವಿರುದ್ಧ ತಿರುಗಿ ಬೀಳುವರು ಮತ್ತು ಒಬ್ಬ ಮನುಷ್ಯನಿಗೆ ತನ್ನ ಮನೆಯವರೇ ವೈರಿಗಳಾಗುತ್ತಾರೆ ಎಂಬ ಅರ್ಥದಲ್ಲಿದೆ.
ಇದು ತಮ್ಮ ಸ್ವಂತ ಕುಟುಂಬದವರಿಂದ ತಿರಸ್ಕಾರಕ್ಕೊಳಗಾದರೂ ಚಿಂತೆ ಇಲ್ಲ ನಾವು ಕ್ರಿಸ್ತನನ್ನೇ ಹಿಂಬಾಲಿಸುತ್ತೇವೆ ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಆಗುತ್ತದೆ. ಇದು ಕ್ರಿಸ್ತನನ್ನು ನಿಜವಾಗಿ ಹಿಂಬಾಲಿಸಿದಕ್ಕೆ ಅವರ ತೆತ್ತ ಬೆಲೆಯಾಗಿರುತ್ತದೆ.
ಯೇಸುಕ್ರಿಸ್ತನ ಮೇಲಿನ ಪ್ರೀತಿಯು ನಮ್ಮ ಕುಟುಂಬದವರ ಮೇಲಿನ ಪ್ರೀತಿಗಿಂತ ಹೆಚ್ಚಾಗಿರಬೇಕೆಂದು ಕರ್ತನಾದ ಯೇಸು ಸ್ಪಷ್ಟವಾಗಿ ಹೇಳಿದ್ದಾನೆ.(ಮತ್ತಾಯ 10:32 ಓದಿರಿ )
ಇತಿಹಾಸದುದ್ದಕ್ಕೂ ತಾವು ಮಾಡುವ ಹಿಂಸೆಯನ್ನು ಸಮರ್ಥಿಸಿಕೊಳ್ಳಲು ಈ ವಾಕ್ಯ ವೃಂದವನ್ನು ಕೆಲವರು ತಪ್ಪಾಗಿ ತಮ್ಮ ಹಿಂಸಾತ್ಮಕ ಆಕಾಂಕ್ಷೆಗಳಿಗೆ ಸರಿಹೊಂದುವಂತೆ ತಿರುಚಿದ್ದಾರೆ.
ಪ್ರಾರ್ಥನೆಗಳು
ತಂದೆಯೇ ನಿನ್ನ ವಾಕ್ಯದ ಮೂಲಕ ನೀನು ಕೊಡುವ ಸ್ಪಷ್ಟತೆ, ಉತ್ತೇಜನ ಮತ್ತು ನಿರೀಕ್ಷೆಗಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ.
ತಂದೆಯೇ, ನಾನು ಅನುದಿನ ವಾಕ್ಯವನ್ನು ಓದುವಾಗ ನಿನ್ನೊಂದಿಗೆ ನನ್ನ ಬಾಂಧವ್ಯವು ಮತ್ತಷ್ಟು ಗಾಢವಾಗಿ ಬೆಳೆಸಿಕೊಳ್ಳಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ.
ತಂದೆಯೇ, ನಿನ್ನ ವಾಕ್ಯದ ಮೂಲಕವೇ ನಿನ್ನನ್ನೂ, ನಿನ್ನ ಚಿತ್ತವನ್ನೂ ನನಗೆ ತಿಳಿಸಿಕೊಟ್ಟು ನನ್ನ ಸ್ವಂತ ಚಿತ್ತದ ಮೇಲೆ ನಾನು ಎಂದಿಗೂ ಆಧಾರಗೊಳ್ಳದಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡಿರಿ. ಆಮೆನ್.
ತಂದೆಯೇ, ನಾನು ಅನುದಿನ ವಾಕ್ಯವನ್ನು ಓದುವಾಗ ನಿನ್ನೊಂದಿಗೆ ನನ್ನ ಬಾಂಧವ್ಯವು ಮತ್ತಷ್ಟು ಗಾಢವಾಗಿ ಬೆಳೆಸಿಕೊಳ್ಳಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ.
ತಂದೆಯೇ, ನಿನ್ನ ವಾಕ್ಯದ ಮೂಲಕವೇ ನಿನ್ನನ್ನೂ, ನಿನ್ನ ಚಿತ್ತವನ್ನೂ ನನಗೆ ತಿಳಿಸಿಕೊಟ್ಟು ನನ್ನ ಸ್ವಂತ ಚಿತ್ತದ ಮೇಲೆ ನಾನು ಎಂದಿಗೂ ಆಧಾರಗೊಳ್ಳದಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡಿರಿ. ಆಮೆನ್.
Join our WhatsApp Channel
Most Read
● ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.● ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I
● ಕೊಡುವ ಕೃಪೆ -3
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
● ಆ ಸಂಗತಿಗಳನ್ನು ಸಕ್ರಿಯ ಗೊಳಿಸಿ
● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ಆಟ ಬದಲಿಸುವವ
ಅನಿಸಿಕೆಗಳು