ಅನುದಿನದ ಮನ್ನಾ
ದುಷ್ಟ ಮಾದರಿಗಳಿಂದ ಹೊರಬರುವುದು.
Thursday, 19th of September 2024
2
1
184
Categories :
Breaking Evil Patterns
"ದಾವೀದನ ಕಾಲದಲ್ಲಿ ಮೂರು ವರುಷಗಳವರೆಗೂ ಬಿಡದೆ ಬರವಿತ್ತು. ದಾವೀದನು ಯೆಹೋವನನ್ನು ವಿಚಾರಿಸಲು ಆತನು - ಸೌಲನು ಗಿಬ್ಯೋನ್ಯರನ್ನು ಕೊಲ್ಲಿಸಿದ್ದರಿಂದ ಅವನ ಮೇಲೆಯೂ ಅವನ ಮನೆಯವರ ಮೇಲೆಯೂ ರಕ್ತಾಪರಾಧವಿರುತ್ತದೆ ಎಂದು ಉತ್ತರಕೊಟ್ಟನು."(2 ಸಮುವೇಲನು 21:1)
ದಾವೀದನು ಒಬ್ಬ ನೀತಿವಂತನಾದ ಅರಸನಾಗಿದ್ದನು ಮತ್ತು ದೇವರ ಹೃದಯ ಮೆಚ್ಚುವ ಮನುಷ್ಯನ್ನಾಗಿದ್ದನು. ಆದರೂ ಅವನು ಕ್ಷಾಮದ ದಿನಗಳನ್ನು ಎದುರಿಸಬೇಕಾಯಿತು. ಕೆಲವರು ಒಂದು ಸಾರಿ ಯೇಸುವನ್ನು ತಮ್ಮ ಸ್ವಂತ ರಕ್ಷಕನಾಗಿ ಕರ್ತನಾಗಿ ಅಂಗೀಕರಿಸಿಕೊಂಡ ಮೇಲೆ ಎಲ್ಲವೂ ಒಳ್ಳೆಯದೇ ಆಗುತ್ತದೆ ಜೀವನ ಹೂವಿನ ಹಾಸಿಗೆಯಂತಿರುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಅದು ಸತ್ಯವಲ್ಲ. ಅದೊಂದು ಸುಳ್ಳಾದ ಸುವಾರ್ತೆಯಾಗಿದೆ! ಕರ್ತನಾದ ಯೇಸುವು ಇದನ್ನು ಉದ್ದೇಶಿಸಿ ಸ್ಪಷ್ಟವಾಗಿ ಹೇಳಿದ್ದೇನೆಂದರೆ "ನೀವು ನನ್ನಲ್ಲಿದ್ದು ಮನಶ್ಶಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ ಎಂದು ಹೇಳಿದನು."(ಯೋಹಾನ 16:33)
ಕರ್ತನು ಒಮ್ಮೆಯೂ ಕೂಡ ನಾವು ಯಾವುದನ್ನೂ ಎದುರಿಸಬೇಕಾಗಿಲ್ಲ ಎಂದು ಹೇಳಿದ್ದಿಲ್ಲ. ಆದರೆ ನಾವು ಯೇಸುವಿಗೆ ಸೇರಿದವರಾದ್ದರಿಂದ ನಮ್ಮೊಳಗೆ ಈ ಎಲ್ಲಾ ಸಂಗತಿಗಳನ್ನು ಜಯಿಸಬಲ್ಲ ಬಲವನ್ನು ಹೊಂದಿದ್ದೇವೆ.
ಒಂದು ದಿನ ನನ್ನ ಗುಂಪಿನ ಸದಸ್ಯರೊಬ್ಬರು ನನ್ನ ಬಳಿ ಬಂದು "ಪಾಸ್ಟರ್ ಮೈಕಲ್ರವರೆ ನಮ್ಮ ಎಲ್ಲಾ ಸಮಸ್ಯೆಗಳು ದೂರಾಗುವಂತೆ ಪ್ರಾರ್ಥಿಸಿ ಎಂದು ಹೇಳಿದರು" ನಾನು ಅದಕ್ಕೆ ಒಪ್ಪಿ ಅವರ ತಲೆಯ ಮೇಲೆ ಕೈ ಇಟ್ಟು "ಕರ್ತನೇ, ಇವರನ್ನು ಪರಲೋಕಕ್ಕೆ ಸೇರಿಸು" ಎಂದೆನು. ಆಗ ಆಕೆಯ ತನ್ನ ತಲೆಯನ್ನು ಪಕ್ಕಕ್ಕೆ ಸರಿಸಿಕೊಂಡು ಗಾಬರಿಯಿಂದ ಪಾಸ್ಟರ್ ಏನೆಂದು ಪ್ರಾರ್ಥಿಸುತ್ತಿದ್ದೀರಿ? "ಎಂದರು. ಆಗ ನಾನು ಆಕೆಗೆ ಯೋಹಾನ 16: 33ರ ಈ ಮೇಲಿನ ವಚನವನ್ನು ನೆನಪಿಸಿದೆ.
ನಮ್ಮ ಜೀವಿತದಲ್ಲಿ ಸಮಸ್ಯೆಗಳು ಉದ್ಭವಿಸುವಾಗ ಅದು ಪುನರಾವರ್ತನೆಯಾಗಿ ಘಟಿಸುತ್ತಿದೆಯಾ ಎಂದು ಸೂಕ್ಷ್ಮವಾಗಿ ಗಮನಿಸಿ ನೋಡಬೇಕು.ದಾವೀದನ ಸಮಯದಲ್ಲಿ ಮೂರು ಬಾರಿ ಪುನರಾವರ್ತಿತವಾಗಿ ಕ್ಷಾಮ ಬಂದಿತ್ತು. "ಬಿಡದೆ ಮೂರು ವರ್ಷಗಳ ಕಾಲ" ಎಂದು ದೇವರ ವಾಕ್ಯ ಅದನ್ನು ಒತ್ತಿ ಹೇಳುತ್ತದೆ.
ದಾವೀದನು ಇದನ್ನು ಕಾಕತಾಳಿಯವೆಂದೋ ಅಥವಾ ಕೆಲವು ವಾತಾವರಣದ ಸಮಸ್ಯೆಯಿಂದ ಬಂದಿತು ಎಂದೋ ಯೋಚಿಸಲಿಲ್ಲ. ಬದಲಾಗಿ ಇದರ ಹಿಂದೆ ಏನೋ ಅಡಗಿದೆ ಎಂಬ ವಿಷಯಕ್ಕೆ ಅಂಟಿಕೊಂಡನು. ದಾವೀದನು ಇದೊಂದು ದುಷ್ಟ ಮಾದರಿ ಎಂದು ಅರ್ಥೈಸಿಕೊಂಡನು.
ದುಷ್ಟ ಮಾದರಿ ಎಂದರೇನು?
ಒಬ್ಬ ವ್ಯಕ್ತಿಯ ಜೀವಿತದಲ್ಲಿ, ಕುಟುಂಬದಲ್ಲಿ ಅಥವಾ ಒಂದು ಪ್ರದೇಶದಲ್ಲಿ ಪುನರಾವರ್ತನೆಯಾಗಿ ಒಂದೇ ರೀತಿಯ ಕೆಟ್ಟ ಸಂಗತಿಗಳು ಜರಗುತ್ತಿದ್ದರೆ ಅದನ್ನು ದುಷ್ಟ ಮಾದರಿ ಎಂದು ಕರೆಯುತ್ತಾರೆ. ಈ ದುಷ್ಟ ಮಾದರಿಗಳು ಕ್ರಮೇಣ ಬಲವಾದ ಕೋಟೆಗಳನ್ನು ನಿರ್ಮಿಸಿಕೊಳ್ಳುತ್ತವೆ.
ನೀವು ಎಂದಾದರೂ ಕೆಲವು ರಸ್ತೆಯಲ್ಲಿ "ಅಪಘಾತದ ವಲಯ" ಎಂದು ಬರೆಯಲ್ಪಟ್ಟ ಸೂಚನಾ ಪದಕಗಳನ್ನು ನೋಡಿದ್ದೀರಾ? ಕೆಲವು ಚಾಲಕರು ಇದಕ್ಕೆ ಲಕ್ಷ್ಯಕೊಟ್ಟು ತಮ್ಮ ಒಂದು ವಾಹನ ಚಾಲನೆಯ ವೇಗಮಿತಿಯನ್ನು ಕಡಿಮೆ ಮಾಡುತ್ತಾರೆ. ನೀವು ಆ ಒಂದು ಸ್ಥಳೀಯ ಜನರನ್ನು ಇದರ ಕುರಿತು ವಿಚಾರಿಸಿದಾಗ ನಿರ್ದಿಷ್ಟ ದಿನಗಳಲ್ಲಿ ನಿರ್ದಿಷ್ಟವಾದ ತಿಂಗಳಿನಲ್ಲಿ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದು ಒಂದು ದುಷ್ಟ ಮಾದರಿಯು ಆ ಪ್ರದೇಶದಲ್ಲಿ ಜರುಗುತ್ತಿರುವುದರ ಸ್ಪಷ್ಟವಾದಂತಹ ಪ್ರಕರಣವಾಗಿದೆ.
ಒಬ್ಬ ವ್ಯಕ್ತಿಯು ನನಗೆ ಪತ್ರವನ್ನು ಬರೆಯುತ್ತಾ, "ಪಾಸ್ಟರ್ ಅವರೇ ನಮ್ಮ ಮನೆಯಲ್ಲಿ ಯಾವುದೇ ಸಂಭ್ರಮಚಾರಣೆ ನಡೆದರೂ ಆ ದಿನದಲ್ಲಿ ಯಾರಿಗಾದರೂ ಒಬ್ಬರಿಗೆ ಅಪಘಾತ ಸಂಭವಿಸುವ ವಿಷಯವನ್ನು ಕೇಳೇ ಕೇಳುತ್ತೇವೆ " ಎಂದು ಹೇಳಿದರು. ಇದೂ ಸಹ ಒಂದು ದುಷ್ಟ ಮಾದರಿಗೆ ಉದಾಹರಣೆಯಾಗಿದೆ.
ಇವೆಲ್ಲವೂ ಕೇವಲ ಕಾಕತಾಳಿಯವಲ್ಲ. ನೀವು ಇದನ್ನು ಕಾಕತಾಳಿಯ ಎಂಬಂತೆ ನೋಡಿದರೆ, ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳುವಿರಿ. ಸೈತಾನನ ಬಲ ಈ ಒಂದು ಮೋಸಗೊಳಿಸುವ ಸುಳ್ಳುಗಳಲ್ಲಿಯೇ ನೆಲೆಗೊಂಡಿರುತ್ತದೆ.
ಸೈತಾನನು ಯಾವಾಗಲೂ ತನ್ನನ್ನು ತಾನು ಅಡಗಿಸಿಕೊಳ್ಳುತ್ತಾನೆ. ಆದರೆ ದೇವರಾದರೋ ಯಾವಾಗಲೂ ತನ್ನನ್ನು ತಾನು ಪ್ರಕಟಿಸಿಕೊಳ್ಳುತ್ತಾನೆ. ಅದಕ್ಕಾಗಿಯೇ ಸೈತಾನನನ್ನು ಒಬ್ಬ ಕಳ್ಳನು, ದರೋಡೆಕೋರನು ಎಂದು ಸತ್ಯವೇದ ಕರೆಯುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. (ಯೋಹಾನ 10:10)
ಈಗ ನಾವು ಸತ್ಯವೇದದಲ್ಲಿರುವ ಕೆಲವು ವ್ಯಕ್ತಿಗಳ ಜೀವಿತದಲ್ಲಿ ನಡೆದಂತಹ ದುಷ್ಟ ಮಾದರಿಗಳ ಉದಾಹರಣೆಗಳನ್ನು ನೋಡೋಣ.
ಅಬ್ರಹಾಮ, ಇವನ ಮಗ ಇಸಾಕನು ಮತ್ತು ಇವನ ಮೊಮ್ಮಗನಾದ ಯಾಕೋಬನು ಇವರೆಲ್ಲರ ಜೀವತದಲ್ಲಿಯೂ ಒಂದು ದುಷ್ಟ ಮಾದರಿಯಿತ್ತು ಅದೇನೆಂದರೆ ತಡವಾಗಿ ಮಕ್ಕಳನ್ನು ಪಡೆಯುವಂತದ್ದು. ಇದೊಂದು ರೀತಿಯಲ್ಲಿ ಶತ್ರು ಏನೋ ಒಂದು ಕಾರಣಕ್ಕಾಗಿ ಒಂದು ಹಿಡಿದಿಟ್ಟುಕೊಂಡಂತಹ ಮತ್ತು ಅವರ ಹೆಂಡತಿಯರನ್ನು ಗರ್ಭಿಣಿಯಾಗದಂತೆ ಮಾಡುತ್ತಿದ್ದಂತಹ ಕ್ರಿಯೆಗಳು ನಡೆಯುತ್ತಿದ್ದವು. ಅವರೆಲ್ಲರೂ ತಮ್ಮ ಮಕ್ಕಳಿಗೆ ಜನ್ಮ ನೀಡಲು ಪ್ರಯಾಸ ಪಟ್ಟರು.
ಪ್ರತಿಯೊಂದು ತಲೆಮಾರುಗಳಲ್ಲೂ ಉಂಟಾದ ಸುಳ್ಳು ಹೇಳುವ ದುಷ್ಟ ಮಾದರಿ.
- ಅಬ್ರಾಹಾಮನು ಸಾರಳ ಕುರಿತು ಎರಡು ಸಾರಿ ಸುಳ್ಳನ್ನು ಹೇಳಿದನು.
- ಇಸಾಕ ಹಾಗೂ ರೆಬೆಕ್ಕಳ ವೈವಾಹಿಕ ಜೀವಿತವು ಸುಳ್ಳಿನ ಮೇಲೆ ನಿರೂಪಿಸಲ್ಪಟ್ಟಿತ್ತು.
- ಯಾಕೋಬನು ಬಹುತೇಕ ಎಲ್ಲರಿಗೂ ಸುಳ್ಳನ್ನು ಹೇಳಿದನು. ಇವನ ಹೆಸರಿನ ಅರ್ಥವೇ ವಂಚಕನೆಂದು.
- ಯಾಕೋಬನ 10 ಮಕ್ಕಳು ಯೋಸೇಫನ ಮರಣದ ಕುರಿತು ಸುಳ್ಳನ್ನು ಹೇಳಿದರು.
ಕನಿಷ್ಠ ಒಂದು ತಲೆಮಾರಿನಲ್ಲಿ ಒಬ್ಬರಾದರೂ ಪಕ್ಷಪಾತದ ದುಷ್ಟ ಮಾದರಿಯನ್ನು ಹೊಂದಿದ್ದರು.
-ಅಬ್ರಹಾಮನು ಇಷ್ಮಯೇಲನನ್ನು ಹೆಚ್ಚಾಗಿ ಪ್ರೀತಿಸಿದನು.
- ಇಸಾಕನು ಏಸಾವನನ್ನು ಹೆಚ್ಚಾಗಿ ಪ್ರೀತಿಸಿದನು.
- ಯಾಕೋಬನು ಯೋಸೇಫನನ್ನು ಮತ್ತು ಆನಂತರ ಬೆನ್ಯಾಮೀನನನ್ನು ಹೆಚ್ಚಾಗಿ ಪ್ರೀತಿಸಿದನು.
ಸಹೋದರರಿಂದ ದೂರ ಆಗುವಂತಹ ದುಷ್ಟ ಮಾದರಿ.
-ಇಸಾಕ ಮತ್ತು ಇಸ್ಮಾಯಿಲ್
-ಯಾಕೋಬ ಮತ್ತು ಅವನ ಸಹೋದರನಾದ ಏಸಾವನು ಇವರು ಬಹಳ ವರ್ಷಗಳ ಕಾಲ ದೂರವಿದ್ದರು.
-ಯೋಸೇಫನು ತನ್ನ 10 ಜನ ಸಹೋದರರಿಂದ ದಶಕಗಳ ಕಾಲದವರೆಗೂ ದೂರವಿದ್ದನು.
ಪ್ರತಿಯೊಂದು ತಲೆಮಾರಿನಲ್ಲೂ ವೈವಾಹಿಕ ಸಂಬಂಧಗಳಲ್ಲಿ ಹೀನಾಯ ಅನ್ಯೋನ್ಯತೆ ಇರುವ ದುಷ್ಟ ಮಾದರಿ.
- ಅಬ್ರಹಾಮನು ಹಾಗರೊಳೊಡನೆ ವಿವಾಹೇತರ ಸಂಬಂಧದಿಂದ ಮಗನನ್ನು ಪಡೆದುಕೊಂಡನು.
-ರೆಬೆಕಾಳೊಂದಿಗಿನ ಇಸಾಕನ ಸಂಬಂಧವು ಭಯಂಕರವಾಗಿತ್ತು.
- ಯಾಕೋಬನಿಗಂತೂ ಇಬ್ಬರು ಹೆಂಡತಿಯರು ಮತ್ತು ಇಬ್ಬರು ಉಪ ಪತ್ನಿಯರಿದ್ದರು
ನೀವು ನನ್ನನ್ನು ವಿರೋಧಿಸಿ ಇವೆಲ್ಲವೂ ಹಳೆಯ ಒಡಂಬಡಿಕೆಯಲ್ಲಿದ್ದದ್ದು ಎಂದು ಹೇಳಬಹುದು. ಆದರೆ ನಾನು ನಿಮಗೆ ಹೊಸ ಒಡಂಬಡಿಕೆಯಲ್ಲೂ ಕೂಡ ಇದನ್ನು ತೋರಿಸಬಲ್ಲೆ.
ಯೋಹಾನ 4:18ರಲ್ಲಿ ಯೇಸುವು ಸಮಾರ್ಯದ ಸ್ತ್ರೀಯರನ್ನು ಯಾಕೋಬನ ಭಾವಿಯ ಬಳಿಗೆ ಸಂಧಿಸುತ್ತಾನೆ. ಆತನು ಆಗ ಆಕೆಯ ಜೀವಿತದ ಕುರಿತು ಪ್ರವಾದನೆಯಾಗಿ ಹೀಗೆ ಹೇಳುತ್ತಾನೆ. "ನಿನಗೆ ಐದುಮಂದಿ ಗಂಡಂದಿರಿದ್ದರು, ಈಗ ಇರುವವನು ನಿನಗೆ ಗಂಡನಲ್ಲ; ನೀನು ಹೇಳಿದ್ದು ನಿಜವಾದ ಸಂಗತಿ ಅಂದನು."(ಯೋಹಾನ 4:18)
ನಿಜವಾಗಿ ಹೇಳಬೇಕೆಂದರೆ ಆಕೆಯು ನಿಜವಾಗಿಯೂ ಒಬ್ಬ ಸಾಮಾನ್ಯ ಸ್ತ್ರೀ ಆಗಿರಲು ಸಾಧ್ಯವಿಲ್ಲ. ಆಕೆ ಬಹಳ ಸುಂದರವಾದಂತಹ ಸ್ತ್ರೀಯಾಗಿದ್ದಳೆಂದು ಎಂದು ನಾನು ನಂಬುತ್ತೇನೆ. ಆದರೂ ಆಕೆಯು ಒಂದು ಸ್ಥಿಮಿತವಾದಂತಹ ಸಂಬಂಧವನ್ನು ಏರ್ಪಡಿಸಿಕೊಳ್ಳಲು ವಿಫಲವಾಗಿದ್ದಳು. ಆಕೆಯ ಜೀವಿತದಲ್ಲಿ ಒಂದು ದುಷ್ಟ ಮಾದರಿಯ ಕಾರ್ಯ ಮಾಡುತ್ತಿತ್ತು.
ನಿಮ್ಮ ಜೀವಿತದಲ್ಲಿ ಕಾರ್ಯ ಮಾಡುತ್ತಿರುವಂತಹ ಅ ದುಷ್ಟ ಮಾದರಿಯನ್ನು ಹೇಗೆ ನೀವು ಮುರಿಯಬಹುದು?
ಮೊದಲು ನೀವು ನಿಮ್ಮ ಜೀವಿತದಲ್ಲಿ ಕಾರ್ಯ ಮಾಡುತ್ತಿರುವಂತಹ ದುಷ್ಟ ಮಾದರಿಯನ್ನು ಗುರುತಿಸಿಕೊಳ್ಳಬೇಕು.ನೀವು ಅದನ್ನು ಗುರುತಿಸಿದಾಗ ಮಾತ್ರವೇ ನೀವು ಅದರೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸಲು ಸಾಧ್ಯವಾಗುತ್ತದೆ.
ದುಷ್ಟ ಮಾದರಿಯನ್ನು ಒಬ್ಬನು ಗುರುತಿಸದೆ ಹೋದರೆ,ಅವನು ಯಾವ ಬದಲಾವಣೆಯನ್ನು ಕಾಣಲಾರನು. ಹಾಗೆಯೇ ಪವಿತ್ರಾತ್ಮ ದೇವರು ಒಬ್ಬನ ಕಣ್ಣುಗಳನ್ನು ತೆರೆದು ಈ ದುಷ್ಟ ಮಾದರಿಗಳನ್ನು ಗುರುತಿಸಲು ಅನುಮತಿಸದ ಹೊರತು ಒಬ್ಬನು ಇದನ್ನು ವಿವೇಚಿಸಲು ಸಾಧ್ಯವಿಲ್ಲ.
ಪ್ರಾರ್ಥನೆಗಳು
ತಂದೆಯೇ, ಯೇಸು ನಾಮದಲ್ಲಿ ನನ್ನ ಕಣ್ಣುಗಳನ್ನು ತೆರೆದು ನನ್ನ ಜೀವಿತದಲ್ಲಿ ಮತ್ತು ನನ್ನ ಕುಟುಂಬದಲ್ಲಿ ಉಪಸ್ಥಿತಿಯಲ್ಲಿದ್ದು, ಕಾರ್ಯ ಮಾಡುತ್ತಿರುವ ದುಷ್ಟ ಮಾದರಿಗಳನ್ನು ಗುರುತಿಸುವಂತ ವಿವೇಚನೆಯನ್ನು ದಯಪಾಲಿಸು.
Join our WhatsApp Channel
Most Read
● ಯಹೂದವು ಮುಂದಾಗಿ ಹೊರಡಲಿ● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಮಾತನಾಡುವ ವಾಕ್ಯದ ಶಕ್ತಿ
● ದಿನ 29:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಮಹಾತ್ತಾದ ಕಾರ್ಯಗಳು
● ಸಹವಾಸದಲ್ಲಿರುವ ಅಭಿಷೇಕ
ಅನಿಸಿಕೆಗಳು