ಇಂದು ನಮ್ಮ ಜೀವಿತಗಳು ಅನೇಕ ಬೇಡಿಕೆಗಳು, ಗಡವುಗಳು ಮತ್ತು ಉನ್ನತ ನಿರೀಕ್ಷೆಗಳಿಂದ ತುಂಬಿಹೋಗಿವೆ. ಕೆಲವೊಂದು ದಿನಗಳಲ್ಲಿ ಯಾವುದೇ ಪ್ರೇರಣೆಗಳೆಲ್ಲದಂತೆ ಕೂಡ ನಾವು ಎದ್ದೇಳಬಹುದು. ಒಂದು ಬಾರಿ ನನಗೆ ಒಬ್ಬ ಯೌವ್ವನಸ್ತ ಕಾರ್ಯವಾಹಕನಿಂದ ಸಂದೇಶ ಬಂದಿತ್ತು. ಅದರಲ್ಲಿ "ಪಾಸ್ಟರ್ ದಯಮಾಡಿ ನನಗಾಗಿ ಪ್ರಾರ್ಥಿಸಿ ಎಂದು ನನಗೇಕೋ ಕೆಲಸ ಮಾಡುವ ಮನಸ್ಸಿಲ್ಲ" ಎಂದು ಬರೆದಿತ್ತು. ಒಂದು ಸರಳ ಸತ್ಯವೇನೆಂದರೆ ನಾವು ನಮ್ಮ ಮನಸ್ಥಿತಿಯನ್ನು ನಮ್ಮ ಕೆಲಸಗಳನ್ನು ಮುನ್ನಡೆಸಲು ಬಿಟ್ಟರೆ ನಾವೆಂದೂ ಸಹ ನಮ್ಮ ಸಂಪೂರ್ಣತೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಮನಸ್ಥಿತಿಯ ಮೇಲೆ ಆಧಾರವಾಗಿ ಕೆಲಸಮಾಡುವ ಅಭ್ಯಾಸದ ಸಮಸ್ಯೆಯಿಂದ ನೀವು ಹೇಗೆ ಹೊರ ಬರಬಹುದು? ನಿಮಗೆ ಮನಸ್ಸಿಲ್ಲದಿದ್ದರೂ ಎಲ್ಲಾ ದಿನಗಳಲ್ಲಿಯೂ ಏಕ ರೀತಿಯಾಗಿ ಹೇಗೆ ಇರಬಹುದು?
ನಿಮ್ಮ ಮನಸ್ಸು ಸರಿಯಾಗಿದ್ದಾಗ ಮಾತ್ರ ಕೆಲಸ ಮಾಡುವ
ಇಲ್ಲದಿದ್ದರೆ ಸುಮ್ಮನಾಗುವ ಪ್ರಲೋಬನೆಯು ನಿಮ್ಮ ಯಶಸ್ಸನ್ನು ಕುಂಟಿತಗೊಳಿಸುತ್ತದೆ. "ನಿಮ್ಮ ಉತ್ಸಾಹವನ್ನು ಹಿಂಬಾಲಿಸಿ" ಅಥವಾ "ನೀವು ಮಾಡುವ ಕೆಲಸವು ನಿಮಗೆ ಆಹ್ಲಾದಕರವಾಗಿರಬೇಕು" ಎನ್ನುವ ಮಾತುಗಳನ್ನು ನೀವು ಕೇಳಿರಬಹುದು. ನೀವು ಮಾಡುವ ಕೆಲಸವನ್ನು ಆನಂದಿಸಬೇಕೆನ್ನುವಾಗಲು ಆ ರೀತಿ ಪ್ರತಿದಿನವೂ ಉತ್ಸಹ ದಿಂದ ಕೆಲಸ ಮಾಡಲು ಆಗುವುದಿಲ್ಲ.
ಒಬ್ಬ ಓಟಗಾರನು ತನಗೆ ಮನಸ್ಸು ಬಂದಾಗ ಮಾತ್ರ ತರಬೇತಿ ಹೊಂದಿದರೇ ಹೇಗಿರುತ್ತದೆ? ಒಂದು ಸಾರಿ ಕಲ್ಪಿಸಿಕೊಳ್ಳಿ. ಹಾಗೆ ಉದ್ಯೋಗವೂ ಕೂಡ. ನಿಮ್ಮ ಭಾವನೆಗಳನ್ನು ನಿಮ್ಮ ಕೆಲಸವನ್ನು ನಿಯಂತ್ರಿಸುವುದಕ್ಕಾಗಿ ಬಿಟ್ಟರೆ ನೀವು ವರ್ಧಿಸಲಾರಿರಿ. ಜ್ಞಾನೋಕ್ತಿ 14:23 "ಶ್ರಮೆಯಿಂದ ಸಮೃದ್ಧಿ; ಹರಟೆಯಿಂದ ಕೊರತೆ." ಎಂದು ಹೇಳುತ್ತದೆ.ಯಾವುದಕ್ಕೂ ತಲೆಕೆಡಿಸಿಕೊಳ್ಳಲು ಶ್ರದ್ದೆಯಿಂದ ಮಾಡುವ ಕೆಲಸದಿಂದ ಯಶಸ್ಸು ದೊರಕುತ್ತದೆ ಎಂದು ಈ ದೇವರ ವಾಕ್ಯ ನಮಗೆ ಹೇಳುತ್ತದೆ. ಕಠಿಣ ದಿನಗಳನ್ನು ತಳ್ಳುವುದರಲ್ಲೂ ಒಂದು ಮೌಲ್ಯವಿದೆ. ದಿನನಿತ್ಯದ ಜಂಜಾಟದ ಮಧ್ಯದಲ್ಲಿ ಸಹ ಒಂದು ಹಿರಿಮೆ ಸಿಗಲಿದೆ. ನಿಮ್ಮ ಭಾವನೆಗಳನ್ನು, ನಿಮ್ಮ ಮನಸ್ಥಿತಿಯನ್ನು ಹಿಡಿತದಲ್ಲಿಟ್ಟುಕೊಳ್ಳುವ ಮೊದಲು ನೀವು ಅವುಗಳನ್ನು ಅರ್ಥಮಾಡಿಕೊಳ್ಳಬೇಕಾದುದು ತುಂಬಾ ಮುಖ್ಯ.
ಒತ್ತಡ ನಿದ್ರಾಹೀನತೆ
ಹಸಿವು ಮತ್ತು ಪರಿಹರಿಸಲಾಗದ ವೈಯಕ್ತಿಕ ಸಮಸ್ಯೆಗಳು ಇಂತಹ ಹಲವಾರು ಸರಳ ಅಂಶಗಳಿಂದ ನಮ್ಮ ಭಾವನೆಗಳು ಪ್ರಭಾವಕ್ಕೊಳಗಾಗಬಹುದು. ಇಂತಹ ಬಲಹೀನತೆಯ ದಿನಗಳಲ್ಲಿ ನೀವೇಕೆ ರೀತಿ ಭಾವಿಸುತ್ತಿದ್ದೀರಿ ಎಂದು ಕೇಳಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ.
ಸಮಸ್ಯೆ ಮೂಲ ಕಾರಣವನ್ನು ಗುರುತಿಸಿಕೊಳ್ಳುವುದೇ ಕೆಲವೊಮ್ಮೆ ಅದನ್ನು ಜಯಿಸಲು ಇರುವ ಮೊದಲ ಹೆಜ್ಜೆ ಆಗಿರಬಹುದು. ಜ್ಞಾನೋಕ್ತಿ 4:23 "ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು."ಎಂದು ನಮ್ಮ ಸ್ವಂತ ಅರಿವುಗಳನ್ನು ಕುರಿತು ಎಚ್ಚರಿಕೆ ವಹಿಸಬೇಕೆಂದು ತಿಳಿಸುತ್ತದೆ. ನಿಮ್ಮ ಭಾವನಾತ್ಮಕ ಮತ್ತು ಆತ್ಮಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಕ್ರಿಯೆಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಉತ್ತಮವಾಗಿ ನಿಯಂತ್ರಿಸಬಹುದು.
ಭಾವನೆಗಳನ್ನು ಬಿಟ್ಟು ಬದ್ಧತೆ ಕಡೆಗೆ ಹೊರಳಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಒಂದು ಸಾರಿ ನೀವು ಕಂಡುಕೊಂಡರೆ ಭಾವನೆಗಳಿಂದ ಬದ್ಧತೆ ಕಡೆಗೆ ತೆರಳಬೇಕಾದ ಹೆಜ್ಜೆ ಇಡಲು ಸಾಧ್ಯವಾಗುತ್ತದೆ. ನಿಮ್ಮ ಮನಸ್ಥಿತಿಯಿಂದ ನಿಮ್ಮ ಕೆಲಸದಲ್ಲಿರುವ ನಿಮ್ಮ ಬದ್ಧತೆಯನ್ನು ನಿರ್ಧರಿಸುವಂತೆ ಇರಬಾರದು. ನೀವು ಮಾಡುವ ಕೆಲಸದಲ್ಲಿ ಬದ್ಧತೆ, ಸ್ಥಿರತೆ ಇದ್ದರೆ ದೀರ್ಘವಧಿಯ ಯಶಸ್ಸನ್ನು ಹೊಂದುವ ಶಿಸ್ತನ್ನು ಬೆಳೆಸಿಕೊಳ್ಳುವವರಾಗುತ್ತೀರಿ.
ಕರ್ತನಾದ ಯೇಸುವೆ ಸ್ವತಃ ಈ ಸಿದ್ಧಾಂತವನ್ನು ಪ್ರದರ್ಶಿಸಿದ್ದಾನೆ.
ಆತನು ಗೆತ್ಸೆಮನೆ ತೋಟದಲ್ಲಿ ಪ್ರಾರ್ಥಿಸುವಾಗ ಆತನು ಬಹಳವಾಗಿ ಕುಗ್ಗಿ ಹೋದವನಾಗಿ "ಸಾಧ್ಯವಾದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು" ಎಂದು ಪ್ರಾರ್ಥಿಸಿದನು. (ಮತ್ತಾಯ 26:39). ಆದರೂ ಆತನು ತನ್ನ ಭಾವನೆಗಳಿಗಿಂತ ತನ್ನ ಬದ್ಧತೆಯನ್ನೇ ಆಯ್ಕೆ ಮಾಡಿಕೊಂಡು "ನನ್ನ ಚಿತ್ತವಲ್ಲ ನಿನ್ನ ಚಿತ್ತವೇ ನೆರವೇರಲಿ"ಎಂದನು. ನಾವು ನಮ್ಮ ಜೀವಿತದಲ್ಲಿ ನಮಗೆ ಆರಾಮದಾಯಕವಲ್ಲದಂತಹ ಭಾವನೆಗಳನ್ನು ಬದಿಗೊತ್ತಿ ಬದ್ಧತೆಯನ್ನೇ ಆಯ್ಕೆ ಮಾಡಿಕೊಂಡು ನಮ್ಮ ಜೀವಿತದಲ್ಲಿರುವ ಉದ್ದೇಶವನ್ನು ಪೂರೈಸಬೇಕೆಂಬುದಕ್ಕೆ ಇದೊಂದು ಬಲವಾದ ಎಚ್ಚರಿಕೆ ಗಂಟೆಯಾಗಿದೆ.
ನಿಮ್ಮ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು ಕೆಲವು ಪ್ರಾಯೋಗಿಕ ಸಲಹೆಗಳು
ನಿಮ್ಮ ಮನಸ್ಥಿತಿ ಆಧಾರದ ಮೇಲೆ ಕೆಲಸ ಮಾಡುವ ಅಭ್ಯಾಸಗಳನ್ನು ಜಯಿಸಲು ನಿಮಗೆ ಸಹಾಯ ಮಾಡುವ ಕೆಲವು ಪ್ರಾಯೋಗಿಕ ತಂತ್ರಗಾರಿಕೆಗಳು ಇಲ್ಲಿವೆ
1) ಕಾರ್ಯಗಳನ್ನು ಸಣ್ಣ ಸಣ್ಣ ಹಂತಗಳಾಗಿ ವಿಭಜಿಸಿ
ಸಾಮಾನ್ಯವಾಗಿ ಅತಿಯಾದ ಭಾವನೆಗಳು ಆಲಸ್ಯಕ್ಕೆ ಕಾರಣವಾಗಬಹುದು. ಅದಕ್ಕಾಗಿ ನಿಮ್ಮ ಕೆಲಸಗಳನ್ನೆಲ್ಲ ಸಣ್ಣ ಸಣ್ಣ ಹಂತವಾಗಿ ವಿಭಜಿಸಿದರೆ ಹತ್ತಿಕ್ಕುವ ಭಾರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ಹಾಗೆ ಇದರಿಂದ ಸಾಧಿಸುವ ಪ್ರಜ್ಞೆಯನ್ನು ಈ ಮೂಲಕ ಹೆಚ್ಚಿಸಿಕೊಳ್ಳಬಹುದು.
2) ದಿನಚರಿಯ ವೇಳಾಪಟ್ಟಿ ಯನ್ನು ರಚಿಸಿಕೊಳ್ಳಿರಿ.
ಕ್ರೀಡಾಪಟುಗಳಿಗೆ ಅವರ ಮನಸ್ಸಿಗೆ ತಕ್ಕಂತೆ ಅವರ ಭಾವನೆಗೆ ತಕ್ಕಂತೆ ಅವರಿಗೆ ತರಬೇತಿ ನೀಡಲು ನಿರ್ಧರಿಸಲಾಗುವುದಿಲ್ಲ. ಅವರ ತರಬೇತಿಯು ಅವರ ದಿನಚರಿಯ ವೇಳಾಪಟ್ಟಿಯ ನಿಶ್ಚಿತ ಭಾಗವಾಗಿರುತ್ತದೆ.ಕೆಲಸದ ದಿನಚರಿಯ ವೇಳಾಪಟ್ಟಿ ಗಳನ್ನು ರಚಿಸಿಕೊಳ್ಳುವ ಮೂಲಕ ನಿಮಗೆ ಇಷ್ಟವಿಲ್ಲದಿದ್ದರೂ ನಿಮ್ಮ ಮನಸ್ಸು ಆ ಕೆಲಸ ಮಾಡುವಂತೆ ತರಬೇತಿಗೊಳಿಸಬಹುದು. "ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ." ಎಂದು ಪ್ರಸಂಗಿ 9:10 ನಮಗೆ ಸಲಹೆ ನೀಡುತ್ತದೆ
3) ಏಕೆ ಮಾಡಬೇಕು? ಎನ್ನುವುದರ ಮೇಲೆ ಲಕ್ಷ್ಯ ವಿಡಿರಿ
ನಿಮ್ಮಲ್ಲಿ ಪ್ರೇರೇಪಣೆ ಮಾಯವಾದಾಗ ನೀವು ಏಕೆ ಈ ಕಾರ್ಯವನ್ನು ಕೈಗೆತ್ತಿಕೊಂಡಿರಿ ಎಂಬ ದೊಡ್ಡ ಚಿತ್ರಣವನ್ನು ನೆನಪಿಸಿಕೊಳ್ಳಿ. ಅದು ನಿಮ್ಮ ಕುಟುಂಬಕ್ಕೆ ಬೆಂಬಲ ನೀಡುವಂಥದ್ದು ಆಗಿದೆಯೇ? ನಿಮಗೆ ಅನುಭವ ನೀಡುವಂತದ್ದಾಗಿದೆಯೇ? ಅಥವಾ ಕನಸನ್ನು ಸಾಕಾರಗೊಳಿಸುವಂತಹದ್ದಾಗಿದೆಯೇ?ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಈ ಒಂದು ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಅದು ನಿಮಗೆ ಮಾನಸಿಕ ಶಕ್ತಿಯನ್ನು ಒದಗಿಸಿ ನಿಮಗೆ ಕಷ್ಟಕರ ಎನಿಸುವ ದಿನಗಳನ್ನು ಸಹ ದೂಡು ವಂತೆ ಸಹಕರಿಸುತ್ತದೆ.
4) ಪ್ರಾರ್ಥನೆ ಮತ್ತು ದೇವರ ವಾಕ್ಯ
ನಿಮ್ಮ ಕೆಲಸಗಳ ಮಧ್ಯದಲ್ಲಿ ನಿಮ್ಮ ಭಾವನೆಗಳು ಅಡ್ಡ ಬಂದಾಗಲೆಲ್ಲ ಸ್ವಲ್ಪ ವಿರಾಮ ತೆಗೆದು ಕೊಂಡು ಪ್ರಾರ್ಥಿಸಿರಿ.
" ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ." ಎಂದು ಫಿಲಿಪ್ಪಿಯವರಿಗೆ 4:13 ಹೇಳುತ್ತದೆ ಪ್ರಾರ್ಥನೆಯು ನಿಮ್ಮನ್ನು ಮತ್ತೊಮ್ಮೆ ಲಕ್ಷ್ಯ ಕೊಡುವಂತೆಯೂ, ಮುನ್ನಡೆಯುವಂತೆಯೂ ಬೇಕಾದ ಆತ್ಮಿಕವಾದ ಭಾವನಾತ್ಮಕವಾದ ಶಕ್ತಿಯನ್ನು ಒದಗಿಸುತ್ತದೆ.
5) ಮುನ್ನುಗ್ಗುತ್ತಿರಿ.
ಕೆಲವೊಮ್ಮೆ ನಾವು ಇಡುವ ಒಂದು ಸಣ್ಣ ಹೆಜ್ಜೆ ಅಥವಾ ಶಾರೀರಿಕ ಚಲನೆಯು ಆಲಸ್ಯದ ಹಿಡಿತವನ್ನು ಮುರಿಯಬಹುದು.ದೈಹಿಕವಾದ ಚಲನೆಯು ನಿಮ್ಮ ಮನಸ್ಸನ್ನು ಹಗುರಗೊಳಿಸಿ ಎಂಡೋರ್ಪಿನ್ಎಂಬ ಗ್ರಂಥಿಯನ್ನು ನಿಮ್ಮಲ್ಲಿ ಬಿಡುಗಡೆ ಮಾಡುತ್ತದೆ ಅದು ನಿಮ್ಮ ಮನಸ್ಸನ್ನು ಚೈತನ್ಯಗೊಳಿಸುತ್ತದೆ.
ನಿಮ್ಮ ಮನಸ್ಸನ್ನು ನೂತನ ಪಡಿಸಿಕೊಳ್ಳಿ
ಕಡೆಯದಾಗಿ ಭಾವನೆಗಳ ಆಧಾರದಲ್ಲಿ ಕೆಲಸ ಮಾಡುವ ಅಭ್ಯಾಸದಿಂದ ಹೊರಬರಲು ನಿಮ್ಮ ಮನಸ್ಸನ್ನು ನೂತನಗೊಳಿಸಿಕೊಳ್ಳಬೇಕು. "ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ." ಎಂದು ರೋಮಾಪುರದವರಿಗೆ 12:2 ಬೋದಿಸುತ್ತದೆ
ಈ ಲೋಕವು "ನಿಮ್ಮ ಹೃದಯದ ಮಾತನ್ನು ಅನುಸರಿಸಿ" ಅಥವಾ "ನಿಮಗೆ ಪ್ರೇರೇಪಿಸಲ್ಪಟ್ಟಾಗ ನೀವು ಕೆಲಸಗಳನ್ನು ಮಾಡಿರಿ" ಎಂದು ಹೇಳಬಹುದು. ಆದರೆ ಸತ್ಯವೇದವು ಶ್ರದ್ದೆ ಶಿಸ್ತು ಮತ್ತು ಪರಿಶ್ರಮದಿಂದ ನಮ್ಮ ಕಾರ್ಯಗಳಿಗೆ ಬದ್ದರಾಗುವಂತೆ ನಮ್ಮನ್ನು ಉತ್ತೇಜಿಸುತ್ತದೆ
ನೀವು ಈ ಸಿದ್ಧಾಂತಗಳನ್ನು ಸತತವಾಗಿ ಅಭ್ಯಾಸ ಮಾಡಿದರೆ ಫಲದಾಯಕತೆ ಉಳ್ಳವರಾಗುತ್ತೀರಿ ಮತ್ತು ಚಿತ್ತ ಚಂಚಲತೆ ಪ್ರಭಾವಕ್ಕೆ ಒಳಗಾಗುವುದು ನಿಮ್ಮಲ್ಲಿ ವಿರಳವಾಗುತ್ತದೆ. ಪರಿಪೂರ್ಣ ಮನಸ್ಥಿತಿ ಬರುವ ವರೆಗೆ ಕಾಯುವವರಿಗೆ ಎಂದಿಗೂ ಯಶಸ್ಸು ಸಿಗುವುದಿಲ್ಲ. ಆದರೆ ಕಾರ್ಯೋನ್ಮುಖರಾಗುವವರಿಗೆ ಅದು ದೊರಕುವಂತದ್ದಾಗಿದೆ
ಈ ಒಂದು ಸಂಘರ್ಷವೂ ಕೇವಲ ನಿಮಗೆ ಮಾತ್ರ ಸಂಭವಿಸುವಂಥದ್ದಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಅವನು ಎಷ್ಟೇ ಯಶಸ್ವಿ ವ್ಯಕ್ತಿಯಾಗಿದ್ದರೂ ಕೆಲಸ ಮಾಡಲು ಮನಸ್ಸಿಲ್ಲದ ದಿನಗಳನ್ನು ಅವನು ಹೋಗಬೇಕಾಗುತ್ತದೆ.
ಆದರೆ ಯಶಸ್ವಿಯಾದವರ ಮತ್ತು ಆಗದವರ ನಡುವಿನ ವ್ಯತ್ಯಾಸವೆಂದರೆ ಅವರಲ್ಲಿರುವ ತಮ್ಮನ್ನು ತಾವೇ ತಳ್ಳಿಕೊಂಡು ಬಂದೆ ಸಾಗುವ ಪ್ರವೃತ್ತಿ ಮತ್ತು ಸಾಮರ್ಥ್ಯವಾಗಿದೆ. ಪ್ರಾರ್ಥನೆ ಮತ್ತು ದೇವರ ವಾಕ್ಯದ ಬಲದಿಂದ ಉತ್ತೇಜಿಸಲ್ಪಟ್ಟ ಚಿಕ್ಕ ಚಿಕ್ಕದಾದ ಸ್ಥಿರತೆಯುಳ್ಳ ಹಂತಗಳಿಗೆ ಬದ್ದರಾಗುವ ಮೂಲಕ ಇಂದೆ ನಿಮ್ಮ ಕೆಲಸಗಳನ್ನು ಆರಂಭಿಸಿ. ಆಗ ನಿಮ್ಮಲ್ಲಿರುವ ಫಲದಾಯಕ ಮನಸ್ಥಿತಿಯಲ್ಲಿ ಸೋಲಂಬ ಮಾತಿಲ್ಲ ಎಂಬುದನ್ನು ಶೀಘ್ರವಾಗಿ ನೀವು ಕಂಡುಕೊಳ್ಳುವಿರಿ.
ಪ್ರಾರ್ಥನೆಗಳು
ಪರಲೋಕದ ತಂದೆಯೇ ನನ್ನ ಬಲವು ಕುಂದಿ ಹೋದಾಗ ಮತ್ತು ಚೈತನ್ಯವು ಅಡಗಿದಾಗ ನಿನ್ನ ಬಲ ಹಾಗೂ ಉದ್ದೇಶದಿಂದ ನನ್ನನ್ನು ಬಲಪಡಿಸು.
ನಿನ್ನ ಯೋಜನೆಯಲ್ಲಿ ಭರವಸೆ ಇಟ್ಟು ಪ್ರತಿಯೊಂದು ಸವಾಲನ್ನು ಎದುರಿಸಲು ನನಗೆ ಯೇಸು ನಾಮದಲ್ಲಿ ಸಹಾಯ ಮಾಡಿರಿ. ಆಮೆನ್.
Join our WhatsApp Channel
Most Read
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ದೇವರವಾಕ್ಯವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಿರಿ.
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #2
● ಭಕ್ತಿವೃದ್ಧಿಮಾಡುವ ಅಭ್ಯಾಸಗಳು.
● ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ
● ಕ್ಷಮಿಸಲು ಇರುವ ಪ್ರಾಯೋಗಿಕ ಹಂತಗಳು.
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
ಅನಿಸಿಕೆಗಳು