ಅನುದಿನದ ಮನ್ನಾ
ಅಪ್ಪನ ಮಗಳು - ಅಕ್ಷಾ
Friday, 27th of September 2024
3
1
178
Categories :
ನಂಬಿಕೆ (Faith)
ಪ್ರಾರ್ಥನೆ (prayer)
"ಅಲ್ಲಿಂದ ದೆಬೀರಿನವರಿಗೆ ವಿರೋಧವಾಗಿ ಹೋದರು; ದೆಬೀರಕ್ಕೆ ಮುಂಚೆ ಕಿರ್ಯತ್‍ಸೇಫೆರ್ ಎಂಬ ಹೆಸರಿತ್ತು. 12 ಕಿರ್ಯತ್‍ಸೇಫೆರನ್ನು ಹಿಡಿದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆಮಾಡಿಕೊಡುತ್ತೇನೆಂದು ಕಾಲೇಬನು ಹೇಳಲು 13 ಅವನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲನು ಅದನ್ನು ಹಿಡಿದನು. ಆಗ ಕಾಲೇಬನು ತನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಅವನಿಗೆ ಮದುವೆಮಾಡಿಕೊಟ್ಟನು."(ನ್ಯಾಯಸ್ಥಾಪಕರು 1:11-13)
ಕಾಲೇಬನು 85 ವರ್ಷದವನಾಗಿದ್ದರೂ ದೇವರ ವಾಗ್ದಾನದ ಮೇಲೆ ಸಂಪೂರ್ಣವಾಗಿ ನಂಬಿಕೆ ಇಟ್ಟಿದ್ದನು. ಅದಕ್ಕಿಂತ ಹೆಚ್ಚಾಗಿ ಅವನೊಬ್ಬ ಬಲವಾದ ಸಾಕ್ಷಿ ಯುಳ್ಳ ಒಳ್ಳೆಯ ಮನುಷ್ಯನಾಗಿದ್ದನು. ಅವನಿಗೆ ಅಕ್ಷ ಎಂಬ ಒಬ್ಬ ಮಗಳಿದ್ದಳು. ಅವಳನ್ನು ಒತ್ನಿಯೆಲಾ ಎಂಬುವವನಿಗೆ ವಿವಾಹ ಮಾಡಿಕೊಡಲಾಗಿತ್ತು.
ತಂದೆ ತಾಯಿಗಳಲ್ಲಿ ಎದ್ದು ಕಾಣುವಂತಹ ನಂಬಿಕೆಯು ಮಕ್ಕಳ ಮೇಲೆ ಪ್ರಭಾವ ಬೀರುವಂತಹದ್ದಾಗಿದೆ ಮತ್ತು ಅವು ಆತ್ಮಿಕ ಪ್ರಭಾವದಿಂದಲೂ ಕೂಡಿರುತ್ತದೆ.
ನಾನೊಬ್ಬ ಚಿಕ್ಕ ಬಾಲಕನಾಗಿದ್ದಾಗ ನನ್ನ ತಾಯಿಯು ನನ್ನನ್ನು ಸಭೆಗೆ ಕರೆದುಕೊಂಡು ಹೋಗುತ್ತಿದ್ದಳು. ಆಕೆ ಅಷ್ಟೇನೂ ಓದುಬರಹ ತಿಳಿಯದವಳಾಗಿದ್ದರೂ ರಾತ್ರಿಯ ಊಟದ ಸಮಯದಲ್ಲಿ ಆಕೆ ನಿಯಮಿತವಾಗಿ ಸತ್ಯವೇದದ ಕಥೆಗಳನ್ನು ನನಗೂ ಮತ್ತು ನನ್ನ ಅಣ್ಣನಿಗೆ ಹೇಳುತ್ತಿದ್ದಳು. ಸ್ವಾಭಾವಿಕವಾಗಿ ಒಬ್ಬ ಚಿಕ್ಕ ಹುಡುಗನಾಗಿ ನನ್ನ ಮೇಲೆ ಅದು ಮಹತ್ತರವಾಗಿ ಪರಿಣಾಮ ಬೀರಿತು.
ನನ್ನ ಹದಿಹರೆಯದ ವರ್ಷಗಳಲ್ಲಿ ನಾನು ತಿರುಗಿಬಿದ್ದವನಾಗಿ ಲೋಕದ ಸಂಗೀತ ಹಾಗೂ ಮಾರ್ಷಲ್ ಆರ್ಟ್ ಜಗತ್ತಿನಲ್ಲಿ ಅಲೆದಾಡುತ್ತಿದ್ದೆ. ಆದರೆ ಆಗಲೂ ಸಹ ನನ್ನ ತಾಯಿ ಬಿಡದೆ ನಾನು ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು ನಿರಂತರವಾಗಿ ಪ್ರಾರ್ಥಿಸುತ್ತಿದ್ದಳು ಮತ್ತು ನನಗಾಗಿ ಉಪವಾಸ ಮಾಡುತ್ತಿದ್ದನ್ನು ನಾನು ನೋಡಿದ್ದೇನೆ. ಅನೇಕ ಬಾರಿ ನಾನು ರಾತ್ರಿಯಲ್ಲಿ ತಡವಾಗಿ ಮನೆಗೆ ಬಂದಾಗ ನಾನು ಸುರಕ್ಷಿತವಾಗಿ ಬರಬೇಕೆಂದು ಪ್ರಾರ್ಥಿಸುತ್ತಲೇ ಕೂತಿರುತ್ತಿದ್ದಳು. ಇದು ನನ್ನ ಜೀವನದ ಮೇಲೆ ಆಳವಾಗಿ ಪ್ರಭಾವ ಬೀರಿ ಕ್ರಮೇಣ ನನ್ನನ್ನು ಕರ್ತನ ಕಡೆಗೆ ತಿರುಗಿಸಿತು.
ಒಬ್ಬ ತಾಯಿ ಅಥವಾ ಅಜ್ಜಿಯ ನಂಬಿಕೆಯು ಕುಟುಂಬದವರ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಬಹುದು ಎಂದು ಅಪೋಸ್ತಲನಾದ ಪೌಲನು ನಮಗೆ ನೆನಪಿಸುತ್ತಾನೆ. "ನಿನ್ನಲ್ಲಿರುವ ನಿಷ್ಕಪಟವಾದ ನಂಬಿಕೆಯು ನನ್ನ ನೆನಪಿಗೆ ಬಂತು. ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಲ್ಲಿಯೂ ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು; ಹಾಗೆಯೇ ನಿನ್ನಲ್ಲಿಯೂ ವಾಸವಾಗಿದೆ ಎಂದು ದೃಢವಾಗಿ ನಂಬಿದ್ದೇನೆ."(2 ತಿಮೊಥೆಯನಿಗೆ 1:5)
ಇದುವೇ ತಿಮೋತಿಯ ಜೀವಿತದಲ್ಲಿ ಒಂದು ಭದ್ರವಾದ ಬುನಾದಿಯನ್ನು ಸ್ಥಾಪಿಸಿ ಆದಿ ಸಭೆಯಲ್ಲಿ ಬಲವಾಗಿ ಕರ್ತನ ಸುವಾರ್ತೆ ಸಾರುವ ಸೇವೆಯನ್ನು ಮಾಡುತ್ತಿದ್ದ ಅಪೋಸ್ತಲನಾದ ಪೌಲನ ಜೊತೆ ಸೇವಕನಾಗಿ ಕಾರ್ಯ ಮಾಡಲು ಕರ್ತನಲ್ಲಿ ಬೆಳೆಯಲು ಮಾರ್ಗ ಮಾಡಿತು.
"ಆಕೆಯು ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಭೂವಿುಯನ್ನು ಕೇಳಬೇಕೆಂದು ಗಂಡನನ್ನು ಪ್ರೇರೇಪಿಸಿ ತಾನು ಕತ್ತೆಯಿಂದ ಇಳಿದಳು. ಕಾಲೇಬನು ನಿನಗೇನು ಬೇಕೆಂದು ಆಕೆಯನ್ನು ಕೇಳಲು ಆಕೆಯು - ನನಗೊಂದು ದಾನಕೊಡಬೇಕು; ನನ್ನನ್ನು ಬೆಗ್ಗಾಡಿಗೆ ಕೊಟ್ಟುಬಿಟ್ಟಿಯಲ್ಲಾ, ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡು ಅಂದಳು. ಆಗ ಅವನು ಆಕೆಗೆ ಮೇಲಣ ಮತ್ತು ಕೆಳಗಣ ಬುಗ್ಗೆಗಳನ್ನು ಕೊಟ್ಟನು. "(ನ್ಯಾಯಸ್ಥಾಪಕರು 1:14-15)
ಒಬ್ಬ ನೂತನ ಮದುಮಗಳಾಗಿ ಅಕ್ಷಳು ತನ್ನ ತಂದೆ ಬಳಿಗೆ ಬಂದು ತನ್ನ ಜೀವನ ಮತ್ತು ವೈವಾಹಿಕ ಜೀವಿತವನ್ನು ಆಶೀರ್ವದಿಸಬೇಕೆಂದು ಕೇಳಿಕೊಂಡಳು.ದೇವರ ಆಶೀರ್ವಾದದ ಅಗತ್ಯ ತನಗಿದೆ ಎಂಬುದನ್ನು ಆಕೆ ಆರಿತವಳಾಗಿದ್ದಳು.
ಮೊದಲು ಆಕೆಯು ತನ್ನ ಗಂಡನನ್ನು ಆಶೀರ್ವಾದ ಹೊಂದುವಂತೆ ಒತ್ತಾಯ ಪಡಿಸಿದಳು. ಆದರೆ ಅವನು ಸುಮ್ಮನಾದಾಗ ಆಕೆಯೇ ಧೈರ್ಯವಾಗಿ ಮುಂದೆ ಹೋಗಿ ತನ್ನ ತಂದೆಯ ಬಳಿಯ ಆಶೀರ್ವಾದವನ್ನು ಕೇಳಿದಳು.
ಇದರಿಂದ ಆಕೆಯು ಒಬ್ಬ ಮಗಳಾಗಿ ತನ್ನ ತಂದೆಯ ಬಳಿ ಉತ್ತಮ ಬಾಂಧವ್ಯ ಹೊಂದಿದಳು ಎಂಬುದನ್ನು ನಾನು ತಿಳಿದುಕೊಂಡೆ. ಆಕೆಗೆ ತಂದೆಯೊಡನೆ ಇದ್ದ ಈ ಬಾಂಧವ್ಯವೇ ಆಕೆಯು ಧೈರ್ಯವಾಗಿ ಮುಂದೆ ಹೋಗಿ ಆಶೀರ್ವಾದವನ್ನು ಕೇಳುವಂತ ಭರವಸೆಯನ್ನು ಆಕೆಗೆ ಕೊಟ್ಟಿತು. ತಾನು ಏನನ್ನೇ ಕೇಳಿದರೂ ತನ್ನ ತಂದೆಯು ಅದನ್ನು ನಿರಾಕರಿಸುವುದಿಲ್ಲ ಎಂಬ ಸಂಪೂರ್ಣ ಭರವಸೆ ಆಕೆಗಿತ್ತು.
ಇದುವೇ ಪ್ರಾರ್ಥನೆಯಲ್ಲಿ ನಾವು ಕಲಿಯಬೇಕಾದ ಪಾಠ.
"ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ ಧೈರ್ಯವು ಆತನ ವಿಷಯವಾಗಿ ನಮಗುಂಟು. ನಾವು ಏನು ಬೇಡಿಕೊಂಡರೂ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬದು ನಮಗೆ ಗೊತ್ತಾಗಿದ್ದರೆ ನಾವು ಬೇಡಿದವುಗಳು ಆತನಿಂದ ನಮಗೆ ದೊರೆತವೆಂಬದೂ ನಮಗೆ ಗೊತ್ತಾಗಿದೆ."(1 ಯೋಹಾನನು 5:14-15)
ಪ್ರಾರ್ಥನೆಯಲ್ಲಿ ಭರವಸೆದಿಂದಿರುವಂಥದ್ದು ದಿನನಿತ್ಯ ಕರ್ತನೊಂದಿಗೆ ಬೆಳೆಸಿಕೊಳ್ಳುವ ಬಾಂಧವ್ಯದಿಂದ ಬರುತ್ತದೆ. ಭರವಸವು ಬೇಡಿಕೊಳ್ಳುವುದಕ್ಕೆ ನಮಗೆ ಧೈರ್ಯ ಕೊಡುತ್ತದೆ. ಕರ್ತನೊಂದಿಗೆ ಇರುವ ಭಾಂದವ್ಯದ ದೆಸೆಯಿಂದ ನಾವು ಆತನ ಮೆಚ್ಚದಿರುವ ಯಾವುದನ್ನೂ ಬೇಡಿಕೊಳ್ಳುವುದಿಲ್ಲ ಎಂಬ ಖಚಿತತೆ ನಮಗೆ ಕೊಡುತ್ತದೆ. ಇದುವೇ ಉತ್ತರ ದೊರೆಯುವಂತ ಪ್ರಾರ್ಥನೆಯ ರಹಸ್ಯವಾಗಿದೆ ಅಕ್ಷಳ ವಿವಾಹ ಮತ್ತು ಆಕೆಯ ಮನೆಯು ಆಶೀರ್ವದಿಸಲ್ಪಟ್ಟಿತು. ಹಾಗೆಯೇ ನಾವು ಸಹ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವಾಗ ನಿಮ್ಮ ಹಾಗೂ ನಮ್ಮ ಜೀವಿತ ಹಾಗೂ ಕುಟುಂಬ ಕೂಡ ಆಶೀರ್ವದಿಸಲ್ಪಡುತ್ತದೆ.
ಪ್ರಾರ್ಥನೆಗಳು
ತಂದೆಯೇ, ಯೇಸು ನಾಮದಲ್ಲಿ ಅಮಿತವಾದ ಯಶಸ್ಸು ಮತ್ತು ದಯೆಎಡೆಗೆ ನನ್ನನ್ನು ನಿನ್ನ ಆತ್ಮನ ಹಾಗೂ ವಾಕ್ಯದ ಮೂಲಕ ನಡೆಸು.ತಂದೆಯೇ ನನ್ನ ಜೀವಿತ ಹಾಗೂ ಕುಟುಂಬಕ್ಕೆ ವಿರೋಧವಾಗಿ ಉಂಟಾಗುವ ಎಲ್ಲಾ ವಿಧವಾದ ಸೈತಾನನ ಕ್ರಿಯೆಗಳು ಯೇಸು ನಾಮದಲ್ಲಿ ಪವಿತ್ರಾತ್ಮನ ಬಿರುಗಾಳಿಗೆ ಸಿಕ್ಕಿ, ಚದುರಿ ಹೋಗಲಿ.
Join our WhatsApp Channel
Most Read
● ದೈವೀಕ ಶಿಸ್ತಿನ ಸ್ವರೂಪ-1● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸಿ ಮತ್ತು ಆತ್ಮಿಕವಾದ ನವಚೇತನವನ್ನು ಹೊಂದಿಕೊಳ್ಳಿರಿ
● ದೇವರ ವಾಕ್ಯದಲ್ಲಿರುವ ನಂಬಿಗಸ್ಥಿಕೆ
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನೆಪ ಹೇಳುವ ಕಲೆ
ಅನಿಸಿಕೆಗಳು