"ನಿಮ್ಮ ದೇವರಾದ ಯೆಹೋವನು ತಾನೇ ನಿಮ್ಮ ಸಂಗಡ ಇದ್ದು ಶತ್ರುಗಳೊಡನೆ ನಿಮಗೋಸ್ಕರ ಯುದ್ಧಮಾಡಿ ನಿಮಗೆ ಜಯವನ್ನುಂಟುಮಾಡುವನು ಎಂದು ಹೇಳಬೇಕು."(ಧರ್ಮೋಪದೇಶಕಾಂಡ 20:4)
ವಿಮೋಚನ ಕಾಂಡದ ಪುಸ್ತಕವು ಒಂದು ರೋಚಕ ಪವಾಡಗಳ ಚರಿತ್ರೆಯಾಗಿದೆ. ಮೋಷೆ ಇಸ್ರಾಯೇಲ್ ಜನರನ್ನು ದಾಸತ್ವದಿಂದ ಬಿಡುಗಡೆಗೊಳಿಸಲು ಫರೋಹನ ಮುಂದೆ ಹೋಗಿ ಮೊದಲು ನಿಂತಾಗ, ಸದ್ಯ ನಮ್ಮ ವಿಮೋಚನೆಗಾಗಿ ಬಂದ ಸಹಾಯಕನೆಂದು ಮೋಶೆಗೆ ಧನ್ಯವಾದ ಸಲ್ಲಿಸುವ ಬದಲು ಆ ಜನರು ಮೋಶೆ ಫರೋಹನಿಗೆ ಮನವಿ ಮಾಡಿದ್ದಕ್ಕಾಗಿ ಅವನ ಮೇಲೆ ಕೋಪಗೊಂಡರು.
ಏಕೆಂದರೆ ಮೋಶೆ ಮನವಿ ಮಾಡಿದಕ್ಕಾಗಿ ಫರೋಹನು ಕೋಪಗೊಂಡು ಇಸ್ರೇಲ್ ಜನರಿಗಿದ್ದ ಬಿಟ್ಟಿ ಕೆಲಸವನ್ನು ಇನ್ನಷ್ಟು ಕಷ್ಟಮಯ ಮಾಡಿದನು. ದಾಸತ್ವದಲ್ಲಿ ಮುಳುಗಿ ಹೋದ ಈ ಜನರು ತಮಗೆ ಶೀಘ್ರದಲ್ಲಿ ದೊರಕಲಿರುವ ಬಿಡುಗಡೆಯನ್ನು ಅರ್ಥ ಮಾಡಿಕೊಳ್ಳಲು ಅಥವಾ ಅದಕ್ಕಾಗಿ ಪ್ರಶಂಶಿಸಲು ಸಂಪೂರ್ಣವಾಗಿ ವಿಫಲರಾಗುವರಾದರು.
ಹೌದು! ವಿಮೋಚನೆಗಾಗಿ ಒಂದು ತಾತ್ಕಾಲಿಕವಾದ ಬೆಲೆಯನ್ನು ತೆತ್ತಲೇಬೇಕು. ಅದಕ್ಕಾಗಿ ಅವರ ಕೆಲಸದಲ್ಲಿ ಕಷ್ಟ ಹಾಗೂ ಭಯಂಕರವಾದ ಒತ್ತಡವನ್ನು ಅವರಿಗೆ ದೊರಕಲಿರುವ ಬಿಡುಗಡೆಗಾಗಿ ಅಂತಿಮ ಹಂತವಾಗಿ ಹೇರಲಾಯಿತು. ಅವರು ಹಸಿವೆಯಲ್ಲೂ ದಾಹದಲ್ಲೂ ಇರಬೇಕಾದ ಕೆಲವೊಂದು ಸಮಯವಿತ್ತು. ಆ ಸಮಯದಲ್ಲಿ ದೇವರು ತಮ್ಮ ಕೈ ಬಿಟ್ಟುಬಿಟ್ಟಿದ್ದಾನೆ ತಮ್ಮ ಕಾಳಜಿ ಆತನಿಗೆ ಇಲ್ಲ ಎಂಬುದಾಗಿ ಅವರು ಅಂದುಕೊಂಡರು. ಆದರೂ ದೇವರು ಇವೆಲ್ಲವೂಗಳ ಮಧ್ಯೆ ತನ್ನ ಜನರಿಗಾಗಿ ಮಾರ್ಗ ಮಾಡುತ್ತಲೇ ಬಂದನು. ಯಾರೆಲ್ಲಾ ದೇವರನ್ನು ನಂಬಿದರೋ ತಮ್ಮ ಭರವಸೆಯನ್ನು ಮುಂದುವರಿಸಿಕೊಂಡು ಹೋದರೋ ಅವರೆಲ್ಲರೂ ತಮ್ಮ ಬಯಕೆಯ ಬಿಡುಗಡೆಯ ಸ್ಥಾನವನ್ನು ಅಂದರೆ ವಾಗ್ದಾತ್ತ ದೇಶವನ್ನು ತಲುಪಿದರು.
ಅದೇ ಸಂಗತಿಯೂ ನಮಗೂ ಸಂಭವಿಸುತ್ತದೆ.ಯಾವಾಗಲೂ ಹೇಳುವ ಒಂದು ಸಂಗತಿ ಎಂದರೆ "ಮುಂಜಾನೆಗೆ ಮುಂಚೆಯೇ ಕಾರ್ಗತ್ತಲು ಕವಿಯುವಂಥದ್ದು" ಎಂದು.ಪ್ರಾಯಶಃ ಶತ್ರುವಿಗೆ ತನ್ನ ಸೋಲು ಹತ್ತಿರವಾಗಿದೆ ಎಂಬುದು ಮನವರಿಕೆಯಾದಾಗ ತನ್ನ ಕೈಲಾದನೆಲ್ಲ ಮಾಡಲು ಮುಂದಾಗುತ್ತಾನೆ.
ಏಕೆಂದರೆ, ನೀವು ವಿಮೋಚನೆ ಹೊಂದಿದರೂ ನಿಮ್ಮ ಪ್ರೀತಿ ಪಾತ್ರರು ಸೆರೆಯಲ್ಲೇ ಉಳಿಯಬೇಕೆಂದು ಅವನು ಪ್ರಯತ್ನಿಸುತ್ತಿರುತ್ತಾನೆ. ಪ್ರಾಯಶಃ ಕರ್ತನೂ ಸಹ ಒಂದು ಒಳ್ಳೆಯ ನಾಟಕವನ್ನು ನೋಡಲು ತನ್ನ ನಾಮವನ್ನು ಮಹಿಮೆ ಪಡಿಸಿಕೊಳ್ಳಲು ಇಷ್ಟಪಡುತ್ತಾನೆ ಎಂದು ತೋರುತ್ತದೆ. ಈಗ, ಒಂದು ಒಳ್ಳೆಯ ಕಥೆಯನ್ನು ಯಾರು ತಾನೇ ಇಷ್ಟಪಡದೇ ಇರುತ್ತಾರೆ?
"ದೇವರ ಚಿತ್ತಕ್ಕೆ ಒಡಂಬಟ್ಟು ಸಮಾಧಾನಹೊಂದು, ಇದರಿಂದ ನಿನಗೆ ಶುಭವಾಗುವದು. ಆತನ ಬಾಯಿಂದಲೇ ಬೋಧನೆಯನ್ನು ಸ್ವೀಕರಿಸಿ ಆತನ ಮಾತುಗಳನ್ನು ಹೃದಯದಲ್ಲಿ ಇಟ್ಟುಕೋ."(ಯೋಬನು 22:21-22)
ಶತ್ರು ತನ್ನ ಅತ್ಯಂತ ಕೆಟ್ಟದಾದ ಬಾಣವನ್ನು ನಿಮ್ಮ ಮೇಲೆ ಎಸೆಯುವಾಗ ನೀವು ಅದರ ವಸ್ತುಸ್ಥಿತಿಯ ಆಳವನ್ನು ಗ್ರಹಿಸಿಕೊಳ್ಳಬೇಕು. ಒಬ್ಬ ದೊಡ್ಡ ದೇವರ ಸೇವಕರು ಒಮ್ಮೆ ಹೀಗೆ ಹೇಳಿದ್ದಾರೆ " ಸೈತಾನನು ಹೋರಾಡುವಾಗ ನಾವು ಕೂಡ ಯುದ್ಧವನ್ನು ಘೋಷಿಸಬೇಕಾಗುತ್ತದೆ" ಎಂದು. ನಾವು ಇದನ್ನು ಹೇಗೆ ಮಾಡಲು ಸಾಧ್ಯ?
ನಾವು ಹೆಚ್ಚು ಹೆಚ್ಚಾಗಿ ಕರ್ತನನ್ನು ಅರಿತುಕೊಳ್ಳುವುದರಿಂದ ನಾವು ಹೆಚ್ಚು ಹೆಚ್ಚು ಆತನ ಸಮಾಧಾನವನ್ನು ಆತನ ಚಿತ್ತವನ್ನು ಆತನ ಉದ್ದೇಶವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಆಗ ನಮ್ಮ ಜೀವಿತದಲ್ಲಿ ಆತನ ಉದ್ದೇಶವು ಪೂರೈಸಲ್ಪಡುತ್ತದೆ. ಮತ್ತೊಂದೆಡೆ ನಾವು ಹೀಗೆ ಮಾಡುವಾಗ ಸೈತಾನನ ಕುತಂತ್ರಗಳು ನಾಶಕರವಾದ ಬಲೆಗಳು ಸರ್ವನಾಶವಾಗಿ ಹೋಗುತ್ತದೆ.
ಇದರಲ್ಲಿರುವ ರಹಸ್ಯವೇನೆಂದರೆ ನಾವು ಯಾವುದೇ ರೀತಿಯಾದ ದಾಸತ್ವದ ನೊಗದಲ್ಲಿ ಸಿಲುಕಿಕೊಳ್ಳಬಾರದು ಅದರ ಬದಲಾಗಿ ಕರ್ತನ ಪ್ರಸನ್ನತೆಯಿಂದ ಪ್ರಭಾವಿತರಾಗಬೇಕೆಂಬುದೇ ಆಗಿದೆ. ನಾವು ಹೀಗೆ ಮಾಡುವಾಗ ಆತನು ನಮಗಾಗಿ ಮಾಡಿರುವ ಎಲ್ಲಾ ಒಳ್ಳೆಯ ವಾಗ್ದಾನಗಳು ನಮ್ಮ ಜೀವಿತದಲ್ಲಿ ಸಾಕಾರಗೊಳ್ಳುತ್ತವೆ.
ಅರಿಕೆಗಳು
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರ ವಿರುವುದರಿಂದ ಕೇಡಿಗೆ ಹೆದರೆನು. ನನ್ನ ಕರ್ತನು ನನ್ನ ಸಂಗಡ ಇರುವನು. ಆತನೇ ನನ್ನ ಬೆಳಕು ನನ್ನ ಜೀವವು ಆಗಿದ್ದಾನೆ.
Join our WhatsApp Channel
Most Read
● ಕರ್ತನ ಆನಂದ● ದಿನ 22:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಪರಿಶೋಧನೆಯ ಸಮಯದಲ್ಲಿ ನಂಬಿಕೆ
● ನೆಪ ಹೇಳುವ ಕಲೆ
● ಕೃಪೆಯಿಂದಲೇ ರಕ್ಷಣೆ
● ದೈವೀಕ ಶಿಸ್ತಿನ ಸ್ವರೂಪ-1
● ದೇವರಿಗೇ ಪ್ರಥಮ ಸ್ಥಾನ ನೀಡುವುದು #2.
ಅನಿಸಿಕೆಗಳು