ಅನುದಿನದ ಮನ್ನಾ
ಸ್ವಸ್ಥ ಬೋಧನೆಯ ಪ್ರಾಮುಖ್ಯತೆ
Saturday, 26th of October 2024
1
0
232
Categories :
ದೇವರವಾಕ್ಯ (Word of God)
ಸಿದ್ಧಾಂತ (Doctrine)
"ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು, ಆಗ ನೀನು ನಿನ್ನನ್ನೂ ಮತ್ತು ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ."(1 ತಿಮೊ 4:16)
ಎಂದು ಅಪೋಸ್ತಲನಾದ ಪೌಲನು ಯೌವ್ವನಸ್ಥನಾದ ತಿಮೋತಿಯನಿಗೆ ಸೂಚಿಸಿದಂತೆ ಇಂದು ನಾವೂ ಸಹ ನಮ್ಮ ವಿಷಯದಲ್ಲಿಯೂ ನಮ್ಮ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರಬೇಕು.ಇಂದು ಅನೇಕ ಜನರು ಸುಳ್ಳಾದ ಅಥವಾ ಮೋಸಗೊಳಿಸುವ ಬೋಧನೆಗಳಿಗೆ ಬಲಿಯಾಗಲು ಒಂದು ಕಾರಣವೆಂದರೆ ಅವರು ತಮ್ಮ ಸಿದ್ಧಾಂತವನ್ನು ಕ್ರಮವಾಗಿ ಹೊಂದಿಲ್ಲದಿರುವುದಾಗಿದೆ.
ನೀವು ಸ್ವಸ್ತವಾದ ಬೋಧನೆಗಳನ್ನು ಕ್ರಮವಾಗಿ ಹೊಂದಿಕೊಂಡಿದ್ದರೆ, ಸತ್ಯವೇದ ನಿಜವಾಗಿಯೂ ಏನನ್ನು ಬೋದಿಸುತ್ತದೆ ಎಂಬುದನ್ನು ನೀವು ತಿಳಿದಿದ್ದರೆ, ನೀವು ಸುಳ್ಳು ಬೋಧನೆಯನ್ನು ನಿರಾಕರಿಸಲು ಮತ್ತು ನಿಮ್ಮ ನಂಬಿಕೆಯನ್ನು ರಕ್ಷಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಇದುವೇ " ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ, ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು."(ಯೂದ 1:3) ಎಂದು ಯೂದನು ಹೇಳುವ ಮಾತಿನ ಅರ್ಥವಾಗಿದೆ.
ಕ್ರೈಸ್ತರಾದ ನಾವು ಸತ್ಯವೇದದ ಸಿದ್ಧಾಂತಗಳ ಸರಿಯಾದ ತಿಳುವಳಿಕೆಯನ್ನು ಹೊಂದಿರಬೇಕು ಎಂಬುದಕ್ಕೆ ಎರಡು ಪ್ರಮುಖ ಕಾರಣಗಳನ್ನು ನೀಡಲು ನನಗೆ ಅನುಮತಿಸಿರಿ.
1. ಏಕೆಂದರೆ ನಾವು ದೇವರನ್ನು ಪ್ರೀತಿಸುತ್ತೇವೆ.
ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ನೀವು ಅವರ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ತಿಳಿದುಕೊಳ್ಳಲು ಬಯಸುತ್ತೀರಿ - ಅವರ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳು ಇತ್ಯಾದಿ. ಅಂತೆಯೇ, ನಾವು ನಿಜವಾಗಿಯೂ ದೇವರನ್ನು ಪ್ರೀತಿಸಿದರೆ, ಆತನ ಬಗ್ಗೆ ಅಂದರೆ ಆತನ ಸ್ವಭಾವ, ಆತನ ಗುಣಲಕ್ಷಣ, ಆತನ ಕಾರ್ಯಗಳು ಇತ್ಯಾದಿ ಎಲ್ಲವನ್ನೂ ತಿಳಿದುಕೊಳ್ಳುವ ದಾಹ ನಮ್ಮಲ್ಲಿ ಇರುತ್ತದೆ - ಸರಳ ಪದಗಳಲ್ಲಿ ಹೇಳುವುದಾದರೆ, ಇದನ್ನು ಸಿದ್ಧಾಂತದ (doctrine) ಅಧ್ಯಯನ ಎಂದು ಕರೆಯಲಾಗುತ್ತದೆ.
ಒಂದು ವರ್ಷದಲ್ಲಿ ಸತ್ಯವೇದವನ್ನು ಆದಿಕಾಂಡಾ ದಿಂದ ಪ್ರಕಟಣೆವರೆಗೆ ಓದಿ ಮುಗಿಸ ಬೇಕೆಂಬುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿ. ದಾವೀದನು "ನಿನ್ನ ವಾಕ್ಯವೇ ಸಂಪೂರ್ಣ ಸತ್ಯ" (ಕೀರ್ತನೆ 119:160)ಎಂದು ಹೇಳಿದ್ದನ್ನು ಎಚ್ಚರಿಕೆಯಿಂದ ಗಮನಿಸಿ. ಸರಳವಾಗಿ ಹೇಳುವುದಾದರೆ, ನೀವು ಸತ್ಯವೇದವನ್ನು ಅಧ್ಯಾಯದಿಂದ ಅಧ್ಯಾಯದ ಹಾಗೆ ನಿರಂತರವಾಗಿ ಓದಿದಾಗ, ಸತ್ಯವೇದದ ದೇವರು ಏನನ್ನು ಹೇಳುತ್ತಾನೆ ಮತ್ತು ಆತನು ಯಾವ ಸ್ಥಾನದಲ್ಲಿದ್ದಾನೆ ಎಂಬುದರ ಸಂಪೂರ್ಣ ಚಿತ್ರವನ್ನು ನೀವು ನೋಡುವವರಾಗುತ್ತೀರಿ.
2. ಏಕೆಂದರೆ ನೀವು ಏನನ್ನು ನಂಬುತ್ತೀರೋ ಅದುವೇ ನಿಮ್ಮ ಆತ್ಮೀಕ ಜೀವನವನ್ನು ರೂಪಿಸುತ್ತದೆ.
ನೀವು ದೇವರ ಬಗ್ಗೆ ಹೇಗೆ ಯೋಚಿಸುವಿರೋಅದುವೇ ನೀವು ದೇವರೊಂದಿಗೆ ಸಂಬಂಧ ಹೊಂದುವುದರ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ನಾನು ಹೇಳಬಯಸುವುದಾದರೂ ಏನು? ಉದಾಹರಣೆಗೆ: ನಿಮ್ಮ ಜೀವನದಲ್ಲಿ ಒಳ್ಳೆಯ ಸಂಗತಿಗಳು ಸಂಭವಿಸಿದಾಗ ಮಾತ್ರ ನಿಮ್ಮ ಜೀವನವು ದೇವರ ನಿಯಂತ್ರಣದಲ್ಲಿದೆ ಎಂದು ನೀವು ನಂಬಿ, ಸಂಗತಿಗಳೆಲ್ಲಾ ವ್ಯತಿರಿಕ್ತವಾಗಿ ನಡೆಯುವ ಸಮಯದಲ್ಲಿ ನೀವು ಆತನನ್ನು ನಂಬದೇ ಹೋಗುವಂತದ್ದು ತಪ್ಪಾದ ಸಿದ್ಧಾಂತದ ಗ್ರಹಿಕೆಯ ಪ್ರಭಾವವಾಗಿರುತ್ತದೆ. ಸಿದ್ಧಾಂತವನ್ನು ಅಧ್ಯಯನ ಮಾಡುವಂತದ್ದು ಎಂದರೆ ದೇವರ ಕುರಿತ ಸತ್ಯವನ್ನು ಕಂಡು ಕೊಳ್ಳುವುದಾಗಿದೆ. ಹಾಗಾಗಿ ಆ ಕಾರ್ಯವನ್ನು ಸರಿಯಾಗಿ ಮಾಡೋಣ. ಆದ್ದರಿಂದ ದೇವರನ್ನು ಆತನು ಏನಾಗಿದ್ದಾನೋ ಹಾಗೆಯೇ ಆತನನ್ನು ತಿಳಿದುಕೊಳ್ಳುವುದು ಸರಿಯಾದ ಸಿದ್ಧಾಂತದ ಬೋದನೆಯಾಗಿದ್ದೆಯೋ ಹೊರತು ನಾವು ಆತನನ್ನು ಹೇಗೆ ಕಲ್ಪಿಸಿಕೊಳ್ಳುತ್ತೇವೋ ಹಾಗಲ್ಲ.
ಪ್ರಾರ್ಥನೆಗಳು
ಮಹಿಮೆಯುಳ್ಳ ಪವಿತ್ರಾತ್ಮ ದೇವನೇ , ನಾನು ನಿಮ್ಮನ್ನು ಯೇಸುವಿನ ಹೆಸರಿನಲ್ಲಿ ನನ್ನ ಜೀವಿತಕ್ಕೆ ಸ್ವಾಗತಿಸುತ್ತೇನೆ. ನೀನು ನಮ್ಮನ್ನು ಸಕಲ ಸತ್ಯದ ಕಡೆಗೆ ಕರೆದೊಯ್ಯುವವನಾಗಿದ್ದೀಯ.ಆದ್ದರಿಂದ ನನಗೆ ನಿನ್ನ ವಾಕ್ಯವನ್ನು ಬೋದಿಸಿ ನಿನ್ನ ವಾಕ್ಯದಲ್ಲಿರುವ ಅಮೂಲ್ಯವಾದ ಸತ್ಯಗಳನ್ನು ನನಗೆ ತೋರ್ಪಡಿಸು. ನಾನು ಯೇಸುವನ್ನು ಸರಿಯಾಗಿ ತಿಳಿದುಕೊಳ್ಳಲು ಬಯಸುತ್ತೇನೆ. ಆಮೆನ್.
Join our WhatsApp Channel
Most Read
● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ● ನಂಬಿಕೆಯಿಂದ ಹೊಂದಿಕೊಳ್ಳುವುದು
● ಅಂತಿಮ ಸುತ್ತನ್ನೂ ಗೆಲ್ಲುವುದು
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿ ಕೊಳ್ಳುವುದು
● ದಿನ 07 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
ಅನಿಸಿಕೆಗಳು