ಅನುದಿನದ ಮನ್ನಾ
ದೈವೀಕ ಶಿಸ್ತಿನ ಸ್ವರೂಪ-1
Wednesday, 30th of October 2024
1
1
104
Categories :
ಶಿಷ್ಯತ್ವ (Discipleship)
ಒಲಂಪಿಕ್ ಕ್ರೀಡಾಪಟುಗಳು ಭೂಮಿಯ ಮೇಲೆ ಅತ್ಯಂತ ಶಿಸ್ತಿನ, ದೃಢನಿರ್ಧಾರದ ಮತ್ತು ಸಮರ್ಪಣಾ ಜೀವಿತ ನಡೆಸುವ ಜನರಲ್ಲಿ ಸೇರಿದಂತ ಜನರಗಿರುತ್ತಾರೆ. ಒಲಿಂಪಿಕ್ ಅಥ್ಲೀಟ್ ಗಳು ಪ್ರತಿದಿನವೂ ಸ್ವಯಂ-ಶಿಸ್ತನ್ನು ಅಭ್ಯಾಸ ಮಾಡಬೇಕಾಗುತ್ತದೆ, ಇಲ್ಲದಿದ್ದರೆ ಅವರ ಗೆಲ್ಲುವ ಭರವಸೆಯನ್ನು ಅವರು ಕಳೆದುಕೊಳ್ಳುತ್ತಾರೆ.
ಅಪೋಸ್ತಲನಾದ ಪೌಲನು ತಾನು ಬರೆದ ಪತ್ರಿಕೆಗಳಲ್ಲಿಯೂ ಈ ಸಂಗತಿಯನ್ನು ಸಮ್ಮತಿಸುತ್ತಾನೆ "ಕ್ರೀಡಾಂಗಣದಲ್ಲಿ ಅನೇಕರು ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ, ಆದರೂ ಒಬ್ಬನು ಮಾತ್ರ ಜಯಮಾಲೆಯನ್ನು ಪಡೆಯುತ್ತಾನೆ ಎಂಬುದು ನಿಮಗೆ ತಿಳಿಯದೋ? ಅವರಂತೆ ನೀವೂ ಸಹ ಬಹುಮಾನವನ್ನು ಗೆಲ್ಲಬೇಕೆಂದು ಓಡಿರಿ." ಎಂದು ಬರೆಯುತ್ತಾನೆ.
ಕ್ರಿಸ್ತೀಯ ಜೀವನವನ್ನು ಒಲಿಂಪಿಕ್ ಕ್ರೀಡಾಪಟುವಿಗೆ ಹೋಲಿಸಬಹುದು. ನಾವೆಲ್ಲರೂ ಕೃಪೆಯಿಂದ ರಕ್ಷಿಸಲ್ಪಟ್ಟಿದ್ದೇವೆ ಮತ್ತು ಆ ಕೃಪೆಯಿಂದಲೇ ಬದುಕುತ್ತೇವೆ ಎಂಬುದು ಬಹಳ ಸತ್ಯವಾದ ಮಾತು. ಆದಾಗ್ಯೂ, ಅಪೋಸ್ತಲನಾದ ಪೌಲನು ಬರೆಯುವುದನ್ನು ನೋಡಿ: "ಆದರೆ ನಾನು ಈಗ ಎಂಥವನಾಗಿದ್ದೇನೊ ಅದು ದೇವರ ಕೃಪೆಯಿಂದಲೇ ಮತ್ತು ಆತನ ಕೃಪೆಯು ನನ್ನಲ್ಲಿ ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿರುವ ದೇವರ ಕೃಪೆಯೇ." (1 ಕೊರಿಂಥ 15:10)
ನಾವು ಇಂದು ಏನಾಗಿದ್ದೆವೋ ಅದು ದೇವರ ದಯೆಯಿಂದ ಮಾತ್ರವೇ. ಅಪೋಸ್ತಲನಾದ ಪೌಲನು ಅದನ್ನು ಒಪ್ಪಿಕೊಂಡನು. ಆದಾಗ್ಯೂ, ಅವನು ಹೇಳುವುದೇನೆಂದರೆ "ನಾನು ಉಳಿದವರಿಗಿಂತ ಹೆಚ್ಚು ಪ್ರಯಾಸ ಪಟ್ಟಿದ್ದೇನೆ" ಎಂದು. ಬೇರೆ ರೀತಿಯಲ್ಲಿ ಅದನ್ನು ಹೇಳುವುದಾದರೆ, "ದೇವರು ತನ್ನ ಭಾಗದ ಕಾರ್ಯಮಾಡಿದ್ದಾನೆ ಈಗ ಪೌಲನಾದ ನಾನು ನನ್ನ ಭಾಗದ ಕಾರ್ಯ ಮಾಡಿತ್ತಿದ್ದೇನೆ" ಎಂದರ್ಥ.
ಒಬ್ಬ ಕ್ರೈಸ್ತನು ಮೊದಲು ತಾನು ಭರಿಸಬೇಕಾದ ವೆಚ್ಚವನ್ನು ಲೆಕ್ಕಿಸದೆ ಕರ್ತನೊಂದಿಗೆ ನಡೆಯಲು ಸಾಧ್ಯವಿಲ್ಲ. ಸರಳವಾಗಿ ಹೇಳುವುದಾದರೆ, ಯೇಸುವನ್ನು ಅನುಸರಿಸಲು ಭರಿಸಬೇಕಾದ ಒಂದು ವೆಚ್ಚವಿದೆ. ಯೇಸು ನಮ್ಮಿಂದ ಯಾವುದನ್ನೂ ಮುಚ್ಚಿಡಲಿಲ್ಲ. ಯೇಸುವಿನ ಬಳಿ ಪ್ರತ್ಯೇಕ ಜನರಿಗೆ ಯಾವುದೇ ಪ್ರತ್ಯೇಕವಾದ ವಾಕ್ಯವಿಲ್ಲ: ಎಲ್ಲಾ ವಾಕ್ಯಗಳು ಬಹಿರಂಗವಾದದ್ದೂ ಮತ್ತು ಸ್ಪಷ್ಟವಾದಾದ್ದು ಆಗಿವೆ.
"ನಿಮ್ಮಲ್ಲಿ ಯಾವನಾದರೂ ಒಂದು ಗೋಪುರವನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕುಳಿತುಕೊಂಡು, ಅದಕ್ಕೆ ಎಷ್ಟು ಖರ್ಚು ಆದೀತು, ಅದನ್ನು ತೀರಿಸುವುದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಇದೆಯೋ ಎಂದು ಲೆಕ್ಕಮಾಡುವುದಿಲ್ಲವೇ? (ಲೂಕ 14:28)
ಶಾರೀರಿಕ ಈರ್ಶೆಗಳನ್ನು ನಿರಾಕರಿಸಿ ನಮ್ಮ ಶಿಲುಬೆಗಳನ್ನು ಹೊತ್ತು ನಾವು ಸಾಗಬೇಕೆಂದು ಕರ್ತನು ನಮ್ಮನ್ನು ಕರೆಯುತ್ತಾನೆ. ಇಲ್ಲದಿದ್ದರೆ ನಾವು ಓಟವನ್ನು ಯಶಸ್ವಿಯಾಗಿ ಓಡಿ ಮುಗಿಸಲಾರೆವು. ಆದ್ದರಿಂದ, ನಾವು ವೆಚ್ಚವನ್ನು ಲೆಕ್ಕಿಸಬೇಕಾಗುತ್ತದೆ ಮತ್ತು ನಮ್ಮ ಎಲ್ಲಾ ನಡವಳಿಕೆಯಲ್ಲಿಯೂ ಸ್ವಯಂ-ಶಿಸ್ತಿನಿಂದಿರಬೇಕಾಗುತ್ತದೆ.
ಅಪೋಸ್ತಲನಾದ ಪೌಲನ ಸೇವೆಯ ಶ್ರೇಷ್ಠತೆ ಮತ್ತು ಪರಿಣಾಮಕಾರಿತ್ವದ ರಹಸ್ಯವು ಈ ವಾಕ್ಯಗಳಲ್ಲಿದೆ: "ಪ್ರತಿಯೊಬ್ಬ ಕ್ರೀಡಾಪಟುವು ತನ್ನ ತರಬೇತಿಯ ಎಲ್ಲಾ ವಿಷಯಗಳಲ್ಲಿ ಶಮೆದಮೆಯುಳ್ಳವನಾಗಿರುತ್ತಾನೆ. ಅವರು ಬಾಡಿ ಹೋಗುವ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುತ್ತಾರೆ; ನಾವಾದರೋ ಬಾಡಿಹೋಗದ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುವವರಾಗಿದ್ದೇವೆ. ಆದ್ದರಿಂದ ನಾನು ಸಹ ಗೊತ್ತುಗುರಿಯಿಲ್ಲದವನಂತೆ ಓಡುವುದಿಲ್ಲ; ಗಾಳಿಯೊಂದಿಗೆ ಗುದ್ದಾಡುವವನಂತೆ ಹೋರಾಡುವುದಿಲ್ಲ. ಇತರರಿಗೆ ಬೋಧಿಸಿದ ಮೇಲೆ ನಾನೇ ಅಯೋಗ್ಯನಾಗದಂತೆ, ನನ್ನ ದೇಹವನ್ನು ದಂಡಿಸಿ ಸ್ವಾಧಿನದಲ್ಲಿಟ್ಟುಕೊಳ್ಳುತ್ತೇನೆ."(1 ಕೊರಿಂಥ 9:25-27)
ಪ್ರಾರ್ಥನೆಗಳು
ನಾನು ದಿನೇ ದಿನೇ ನಂಬಿಕೆಯಿಂದ ನಂಬಿಕೆಗೆ, ಮಹಿಮೆಯಿಂದ ಮಹಿಮೆಗೆ ಸಾಗುತ್ತಿದ್ದೇನೆ. ಕರ್ತನು ನನ್ನ ಪಕ್ಷದಲ್ಲಿದ್ದಾನೆ ನನ್ನ ವಿರುದ್ಧ ಯಾರು ನಿಲ್ಲಬಲ್ಲರು? ನಾನು ಯೇಸುವನ್ನು ಹಿಂಬಾಲಿಸಲು ನಿರ್ಧರಿಸಿದ್ದೇನೆ; ನಾನು ಹಿಂತಿರುಗೆನು, ನಾನು ಹಿಂತಿರುಗೆನು.
Join our WhatsApp Channel
Most Read
● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ● ಕರ್ತನೇ ನನ್ನ ದೀಪವನ್ನು ಬೆಳಗಿಸು.
● ಲಂಬಕೋನ ಹಾಗೂ ಸಮತಲದ ಕ್ಷಮಾಪಣೆ.
● ನಿರುತ್ಸಾಹದ ಬಾಣಗಳನ್ನು ಗೆಲ್ಲುವುದು -II
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು-1
● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.
ಅನಿಸಿಕೆಗಳು