ಅನುದಿನದ ಮನ್ನಾ
ದೈವೀಕ ಶಿಸ್ತಿನ ಸ್ವರೂಪ: 2
Thursday, 31st of October 2024
1
1
132
Categories :
ಶಿಷ್ಯತ್ವ (Discipleship)
"ಪ್ರತಿಯೊಬ್ಬ ಕ್ರೀಡಾಪಟುವು ತನ್ನ ತರಬೇತಿಯ ಎಲ್ಲಾ ವಿಷಯಗಳಲ್ಲಿ ಶಮೆದಮೆಯುಳ್ಳವನಾಗಿರುತ್ತಾನೆ. ಅವರು ಬಾಡಿ ಹೋಗುವ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುತ್ತಾರೆ; ನಾವಾದರೋ ಬಾಡಿಹೋಗದ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುವವರಾಗಿದ್ದೇವೆ. (1 ಕೊರಿಂಥ 9:25)
ನಾವು ನಮ್ಮ ದೇಹಕ್ಕೆ ನಮ್ಮ ಮೇಲೆ ಆಳ್ವಿಕೆ ನಡೆಸದಂತೆ ತರಬೇತಿ ನೀಡಬೇಕು. ಇದರಿಂದ ನಾವು ನಮ್ಮ ಕರ್ತನಾದ ಕ್ರಿಸ್ತನಿಗೆ ಅಧೀನರಾಗಿರಬಹುದು. ಪ್ರಾಚೀನ ಗ್ರೀಸ್‌ನಲ್ಲಿ, ತರಬೇತಿಯ ಪದವು ಗಮ್ನೋಸ್ ಆಗಿತ್ತು. ಈ ಪದದ ಅಕ್ಷರಶಃ ಅರ್ಥ "ಬೆತ್ತಲೆ". ಇದು ವಾಸ್ತವವಾಗಿ, ಈ ಗ್ರೀಕ್ ಪದದಿಂದ ನಾವು "ಜಿಮ್ನಾಷಿಯಂ" ಎಂಬ ಇಂಗ್ಲಿಷ್ ಪದವನ್ನು ಪಡೆದುಕೊಂಡಿದ್ದೇವೆ.
ಪುರಾತನ ಗ್ರೀಕ್ ಸಂಸ್ಕೃತಿಯಲ್ಲಿ, ಅವರಿಗೆ ಅಡ್ಡಿಯಾಗುವ ಎಲ್ಲದರಿಂದ ತಮ್ಮನ್ನು ಮುಕ್ತಗೊಳಿಸುವುದರ ಮೂಲಕ, ತಮ್ಮ ಪೂರ್ಣ ಸಾಮರ್ಥ್ಯವನ್ನು ಸಾಧಿಸುವಂತೆ ತರಬೇತಿ ನೀಡಬಹುದು ಎಂದು ಅವರು ನಂಬಿದ್ದರು. ಆದ್ದರಿಂದ, ಅವರು ಬೆತ್ತಲೆಯಾಗಿಯೇ ವ್ಯಾಯಾಮ ಮಾಡುತ್ತಿದ್ದರು ಅಥವಾ ಬೆತ್ತಲೆಯಾಗಿಯೇ ತರಬೇತಿ ನೀಡುತ್ತಿದ್ದರು. ನಾನು ಖಂಡಿತವಾಗಿಯೂ ಇದನ್ನು ಯಾವುದೇ ರೀತಿಯಲ್ಲಿಯೂ ಶಿಫಾರಸು ಮಾಡುವುದಿಲ್ಲ, ಆದರೆ ಇದರಲ್ಲಿರುವ ತತ್ವವು ಗಮನಾರ್ಹವಾಗಿದೆ.
ಕ್ರೈಸ್ತರಾದ ನಾವು ಸಹ, ಶರೀರಭಾವದ ವಿಷಯಗಳನ್ನು ವಿಸರ್ಜಿಸಿ ದೈವಿಕತೆಯ ಫಲಗಳ ಕಡೆಗೆ ಸಾಗಲು ಸಾಧನೆ ಮಾಡಲೆಂದು ಕರೆಯಲ್ಪಟ್ಟಿದ್ದೇವೆ.ಉತ್ತಮ ದೈಹಿಕ ಆಕಾರವನ್ನು ಪಡೆಯಲು ಕಠಿಣ ಪರಿಶ್ರಮ ಬೇಕಾಗುತ್ತದೆ ಮತ್ತು ಉತ್ತಮ ದೈಹಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಬದ್ಧತೆ ಬೇಕಾಗುತ್ತದೆ. ಅದೇ ರೀತಿಯಲ್ಲಿ, ಉತ್ತಮ ಆತ್ಮಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲೂ ಸಹ ಕಠಿಣ ಪರಿಶ್ರಮ ಮತ್ತು ಬದ್ಧತೆ ಬೇಕಾಗುತ್ತದೆ.
ಮಹಾತ್ವಾಕಾಂಕ್ಷೆಗಳನ್ನು ಮತ್ತು ಕನಸುಗಳನ್ನು ಹೊಂದಿಕೊಳ್ಳುವಂಥದ್ದು ಒಂದು ಪ್ರಾರಂಭದ ಹಂತವಾಗಿದೆ. ಆದರೆ ಅಂತಿಮವಾಗಿ ಉತ್ತಮ ಆತ್ಮಿಕ ಆಕಾರವನ್ನು ಪಡೆಯಲು ಬಯಸುವ ಯಾರಾದರೂ ಆತ್ಮಿಕವಾಗಿ ಪ್ರಯಾಸಪಡಲು ಶ್ರದ್ಧೆ ಹೊಂದಿರಬೇಕು. ಅದಕ್ಕಾಗಿಯೇ ಅಪೊಸ್ತಲ ಪೌಲನು ತಿಮೊಥೆಯನಿಗೆ ಹೀಗೆ ಹೇಳಿದನು:
"ಅಜ್ಜಿ ಕಥೆಗಳನ್ನೂ ಪ್ರಾಪಂಚಿಕವಾದ ಆ ಕಥೆಗಳನ್ನೂ ತಳ್ಳಿಬಿಟ್ಟು, ನೀನು ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಿಕೋ."(1 ತಿಮೊ 4:7) ನಾವು ಭಕ್ತಿವೃದ್ಧಿಯಾಗುವ ಸಂಗತಿಗಳಲ್ಲಿ ಸಾಧನೆ ಮಾಡುವಂತದ್ದು ನಮ್ಮನ್ನು ಆತ್ಮೀಕವಾಗಿ ಸಧೃಡರನ್ನಾಗಿ ಮಾಡುತ್ತದೆ.
"ಆದಕಾರಣ ಇಷ್ಟು ಸಾಕ್ಷಿಗಳ ದೊಡ್ಡ ಗುಂಪು ಮೇಘದಂತೆ ನಮ್ಮ ಸುತ್ತಲು ಇರುವುದರಿಂದ ನಮಗೆ ಅಭ್ಯಂತರಪಡಿಸುವ ಎಲ್ಲಾ ಭಾರವನ್ನೂ, ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನು ಸಹ ನಾವು ತೆಗೆದಿಟ್ಟು, ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸಹನೆಯಿಂದ ಓಡೋಣ." (ಇಬ್ರಿ 12:1)
ನಾವು ನಮ್ಮಲ್ಲಿರುವ ಶಾರೀರಿಕ ದುರಿಚ್ಚೆಗಳನ್ನು ತೆಗೆದುಹಾಕುವ ಮೂಲಕ ಭಕ್ತಿಯ ಮಾರ್ಗದಲ್ಲಿ ಶಿಸ್ತಿನಿಂದ ಇರಬಹುದು.ಅನೇಕರು ಸುಲಭವಾದ ಮಾರ್ಗಗಳನ್ನು ಹುಡುಕುತ್ತಿರುವಲ್ಲಿ ನೀವಾದರೋ ಕರ್ತನಲ್ಲಿ ಬಲಗೊಳ್ಳಲು ಮತ್ತು ನಿಮ್ಮ ನಂಬಿಕೆಯನ್ನು ಸಧೃಡಗೊಳಿಸಿಕೊಳ್ಳಲು ಈ ಸಮಯವನ್ನು ಬಳಸಿಕೊಳ್ಳುತ್ತೀರಿ ಎಂದು ನಿರ್ಧರಿಸಿಕೊಳ್ಳಿರಿ.
ಪ್ರಾರ್ಥನೆಗಳು
ನಾನು ಕರ್ತನಲ್ಲಿ ದಿನೇ ದಿನೇ ಬಲಗೊಳ್ಳುತ್ತಿದ್ದೇನೆ ಎಂದು ಯೇಸುನಾಮದಲ್ಲಿ ಘೋಷಿಸುತ್ತೇನೆ. ನನ್ನ ಜೀವನದಲ್ಲಿ ಬರುವ ಯಾವುದೇ ಸಂಗತಿಗಳಾಗಲಿ ಅದನ್ನು ನನ್ನ ನಂಬಿಕೆಯ ಮಟ್ಟವನ್ನು ಸಾಧಿಸಲು ಮತ್ತು ನನ್ನ ಆತ್ಮೀಕತೆಯನ್ನು ಬೆಳೆಸಲು ಬಂದಿರುವ ಅವಕಾಶವೆಂದು ಎಂಬುದಾಗಿ ಸ್ವೀಕರಿಸುತ್ತೇನೆ ಎಂದು ಯೇಸುನಾಮದಲ್ಲಿ ನಿರ್ಧರಿಸಿದ್ದೇನೆ. ಆಮೆನ್.
Join our WhatsApp Channel
Most Read
● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?● ದ್ವಾರ ಪಾಲಕರು / ಕೋವರ ಕಾಯುವವರು
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
● ಕೊಡುವ ಕೃಪೆ - 1
● ಉತ್ತಮ ಹಣ ನಿರ್ವಹಣೆ
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
● ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ
ಅನಿಸಿಕೆಗಳು