ಅನುದಿನದ ಮನ್ನಾ
ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
Monday, 4th of November 2024
3
2
85
"ಇಸ್ರಾಯೇಲರು ಯೆಹೋವನಿಗೆ ಮೊರೆಯಿಟ್ಟಾಗ ಆತನು ಅವರನ್ನು ಬಿಡಿಸುವುದಕ್ಕೋಸ್ಕರ ರಕ್ಷಕನನ್ನು ಎಬ್ಬಿಸಿದನು. ಕಾಲೇಬನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲನೇ ಆ ರಕ್ಷಕನು".(ನ್ಯಾಯಸ್ಥಾಪಕರು 3:9)
ಒತ್ನಿಯಲ್ ಎಂಬ ವ್ಯಕ್ತಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?ಪ್ರಾಯಶಃ ಇಲ್ಲಾ ಎಂದು ಎನಿಸುತ್ತದೆ.
ಅವನು ಕಾಲೇಬನ ಸೋದರಳಿಯನಾಗಿದ್ದನು. ಇಸ್ರಾಯೇಲ್ಯರು ವಾಗ್ದತ್ತ ದೇಶಕ್ಕೆ ಹೋದಾಗ, ಅವರಲ್ಲಿ ಯೆಹೋಶುವ ಮತ್ತು ಕಾಲೇಬರು ತಮ್ಮ ನಂಬಿಕೆಯಿಂದ ಮಾಡಿದ ಧೈರ್ಯದ ಪ್ರಯತ್ನಗಳ ಮೂಲಕ ವಿಜಯಶಾಲಿಗಳಾಗಿದ್ದರು. ಈ ತಲೆಮಾರು ಕಳೆದು ಹೋದಂತೆಲ್ಲಾ ಹೊಸ ಪೀಳಿಗೆ ಹುಟ್ಟಿಕೊಳ್ಳತೊಡಗಿತು. ಆಗ ವಿಗ್ರಹಗಳನ್ನು ಆರಾಧಿಸುವ ಮೂಲಕ ಇಸ್ರೇಲ್ ಮತ್ತೆ ಪಾಪದಲ್ಲಿ ಬಿದ್ದಿತು. ಇದರಿಂದ ಕರ್ತನ ಕೋಪವು ಇಸ್ರಾಯೇಲ್ಯರ ವಿರುದ್ಧ ಉರಿದು ಮತ್ತೊಮ್ಮೆ ಆತನು ಇಸ್ರಾಯೆಲ್ಯರನ್ನು ಶತ್ರುಗಳಿಗೇ ಗುಲಾಮರಾಗಲು ಬಿಟ್ಟುಕೊಟ್ಟನು. ಆಗ, ಜನರು ಮತ್ತೆ ಕರ್ತನಿಗೇ ಮೊರೆಯಿಟ್ಟರು, ಮತ್ತು ದೇವರು ಅವರ ಮೊರೆಯನ್ನು ಕೇಳಿದನು.
ದೇವ ಜನರು ಕರ್ತನಿಗೆ ಮೊರೆಯಿಡುವಾಗಲೆಲ್ಲಾ, ಅವರು ಯಥಾರ್ಥವಾಗಿ ಪಶ್ಚಾತ್ತಾಪಪಡುವಾಗಲೆಲ್ಲಾ ಆತನು ಅವರ ಮೊರೆಯನ್ನು ಕೇಳುವವನೇ ಆಗಿದ್ದಾನೆ. ಅಂತಹ ಸಮಯಕ್ಕಾಗಿ ಆತನು ಸಿದ್ಧಪಡಿಸಿದವರನ್ನು ಎಬ್ಬಿಸುವ ಮೂಲಕ ಆತನು ಪ್ರತಿಕ್ರಿಯಿಸುತ್ತಾನೆ. ಪ್ರತಿಯೊಬ್ಬ ಸೈನಿಕನೂ ತಾನು ಪಡೆದ ತರಬೇತಿಯನ್ನು ಬಳಸಿಕೊಳ್ಳುವ ದಿನಕ್ಕಾಗಿ ಎದುರು ನೋಡುತ್ತಾನೆ. ಅಂತಹ ಸಮಯಕ್ಕಾಗಿಯೇ ದೇವರು ಕಾಲೇಬನ ಸೋದರಳಿಯನನ್ನು ಸಿದ್ಧಪಡಿಸುತ್ತಿದ್ದನು. ಅವನು ತನ್ನ ಸೋದರಮಾವನಾದ ಕ್ಯಾಲೆಬ್ನಂತೆಯೇ ಅದೇ ರೀತಿಯ ಆತ್ಮವನ್ನು ಹೊಂದಿದ್ದನು.
"ಯೆಹೋವನ ಆತ್ಮವು ಅವನ ಮೇಲೆ ಬಂದುದರಿಂದ ಅವನು ಇಸ್ರಾಯೇಲರ ನ್ಯಾಯಸ್ಥಾಪನೆಗೋಸ್ಕರ ಯುದ್ಧಕ್ಕೆ ಹೊರಟನು. ಯೆಹೋವನು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮನನ್ನು ಅವನ ಕೈಗೆ ಒಪ್ಪಿಸಿಕೊಟ್ಟದ್ದರಿಂದ ಅವನು ಅವನನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟನು. ದೇಶದಲ್ಲಿ ನಲ್ವತ್ತು ವರ್ಷಗಳ ಕಾಲ ಸಮಾಧಾನವಿತ್ತು. ತರುವಾಯ ಕೆನಜನ ಮಗನಾದ ಒತ್ನೀಯೇಲನು ಮರಣಹೊಂದಿದನು."(ನ್ಯಾಯ 3:10-11)
ನಿಮ್ಮನ್ನು ನೀವು ತಿರಸ್ಕರಿಸಲ್ಪಟ್ಟವರು, ಜಜ್ಜಿಹೋದವರು ಮತ್ತು ಯಾವುದಕ್ಕೂ ಬಾರದಂತವರು ಎಂದು ಎಣಿಸಿಕೊಳ್ಳಬೇಡಿ. ದೇವರು ತನ್ನ ಜನರನ್ನು ನೀವು ತಲುಪವವರಾಗಬೇಕೆಂದು ಅಥವಾ ಅವರಿಗೆ ಸಹಾಯ ಮಾಡುವವರಾಗಬೇಕೆಂದು ನಿಮ್ಮನ್ನು ಕರೆಯುವ ಸಮಯಕ್ಕಾಗಿ ದೇವರು ನಿಮ್ಮನ್ನು ಸಿದ್ಧಪಡಿಸುತ್ತಿರಬಹುದು.
ಇಂದು ನೀವು "ಗೊತ್ತಿಗೆ ಬಾರದ" ವ್ಯಕ್ತಿಗಳೇ ಆಗಿರಬಹುದು, ಆದರೆ ಕರ್ತನ ಆತ್ಮವು ನಿಮ್ಮ ಮೇಲೆ ಬಂದಾಗ, ನೀವು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗುತ್ತೀರಿ. ದೇವರ ಆತ್ಮವು ನಿಮ್ಮ ಮೇಲೆ ನೆಲೆಸಲಿ ಎಂದು ಶ್ರದ್ಧೆಯಿಂದ ಪ್ರಾರ್ಥಿಸಿರಿ.
ಕರ್ತನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವಾರ್ತೆಯನ್ನು ಸಾರುವುದಕ್ಕಾಗಿ ಅಭಿಷೇಕಿಸಿರುವನು. ಸೆರೆಯಲ್ಲಿರುವವರನ್ನು ಬಿಡುಗಡೆಮಾಡುವುದಕ್ಕೂ, ಮತ್ತು ಕುರುಡರಿಗೆ ಕಣ್ಣು ಬರುವುದಕ್ಕೂ ಹಿಂಸಿಸಲ್ಪಟ್ಟವರನ್ನು ಬಿಡಿಸಿ ಕಳುಹಿಸುವುದಕ್ಕೂ ಕರ್ತನು ನೇಮಿಸಿರುವ ಶುಭವರ್ಷವನ್ನು ಪ್ರಚಾರಪಡಿಸುವುದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ
ಪ್ರಾರ್ಥನೆಗಳು
ಕರ್ತನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವಾರ್ತೆಯನ್ನು ಸಾರುವುದಕ್ಕಾಗಿ ಅಭಿಷೇಕಿಸಿರುವನು. ಸೆರೆಯಲ್ಲಿರುವವರನ್ನು ಬಿಡುಗಡೆಮಾಡುವುದಕ್ಕೂ, ಮತ್ತು ಕುರುಡರಿಗೆ ಕಣ್ಣು ಬರುವುದಕ್ಕೂ ಹಿಂಸಿಸಲ್ಪಟ್ಟವರನ್ನು ಬಿಡಿಸಿ ಕಳುಹಿಸುವುದಕ್ಕೂ ಕರ್ತನು ನೇಮಿಸಿರುವ ಶುಭವರ್ಷವನ್ನು ಪ್ರಚಾರಪಡಿಸುವುದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ. ಯೆಹೋವನ ಆತ್ಮವು ಯೇಸುವಿನ ಹೆಸರಿನಲ್ಲಿ ನನ್ನ ಮೇಲೆ ನೆಲೆಗೊಂಡಿರುವುದರಿಂದ ನಾನು ಮಹತ್ಕಾರ್ಯಗಳನ್ನು ಮಾಡಲು ಕರೆಯಲ್ಪಟ್ಟಿದ್ದೇನೆ. ಆಮೆನ್.
Join our WhatsApp Channel
Most Read
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ದೇವರ ಪ್ರೀತಿಯನ್ನು ಅನುಭವಿಸುವುದು
● ಲಂಬಕೋನ ಹಾಗೂ ಸಮತಲದ ಕ್ಷಮಾಪಣೆ.
● ಸೆರೆಯಲ್ಲಿ ದೇವರ ಸ್ತೋತ್ರ
● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು
● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
ಅನಿಸಿಕೆಗಳು