ಅನುದಿನದ ಮನ್ನಾ
ಯೇಸುವನ್ನು ನೋಡುವ ಬಯಕೆ
Friday, 8th of November 2024
3
1
107
Categories :
ಶಿಷ್ಯತ್ವ (Discipleship)
ಅನೇಕ ಜನರು ಕರ್ತನನ್ನು ನೋಡಲು ಹಾತೊರೆಯುತ್ತಿದ್ದರು ಎಂಬುದನ್ನು ಸತ್ಯವೇದಲ್ಲಿನಾವು ನೋಡುವವರಾಗಿದ್ದೇವೆ. ಯೋಹನ 12 ರಲ್ಲಿ, ಪಸ್ಕಹಬ್ಬವನ್ನು ವೀಕ್ಷಿಸಲು ಗಲಿಲಾಯಕ್ಕೆ ಬಂದ ಕೆಲವು ಗ್ರೀಕರ ಬಗ್ಗೆ ನಾವು ಓದುತ್ತೇವೆ. ಅಂತಹ ಮಹೋನ್ನತ ಪವಾಡಗಳನ್ನು ಮಾಡಿದ ಕರ್ತನಾದ ಯೇಸುವಿನ ಕುರಿತು ಅವರು ಕೇಳಿದಾಗ, ಅವರು ಆತನನ್ನು ಪ್ರತ್ಯಕ್ಷವಾಗಿ ನೋಡಲು ಬಯಸಿದ್ದರು.
"ಇದಲ್ಲದೆ ಆರಾಧನೆ ಮಾಡಬೇಕೆಂದು ಹಬ್ಬಕ್ಕೆ ಬಂದವರಲ್ಲಿ ಕೆಲವು ಮಂದಿ ಗ್ರೀಕರಿದ್ದರು. ಇವರು ಗಲಿಲಾಯದಲ್ಲಿರುವ ಬೇತ್ಸಾಯಿದ ಊರಿನ ಫಿಲಿಪ್ಪನ ಬಳಿಗೆ ಬಂದು, “ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆಂದು” ಅವನನ್ನು ಬೇಡಿಕೊಂಡರು. (ಯೋಹಾನ 12:21).
ಯೇಸುವನ್ನು ದರ್ಶಿಸುವಂತದ್ದು ಒಂದು ಸಣ್ಣ 'ಬಯಕೆ'ಯಿಂದ ಪ್ರಾರಂಭವಾಗುತ್ತದೆ. ಈ ಬಯಕೆಯು ಪವಿತ್ರಾತ್ಮದಿಂದಲೇ ನಮ್ಮಲ್ಲಿ ಹುಟ್ಟುತ್ತದೆ. ಅನೇಕ ಮಹಾನ್ ದೇವ ಮನುಷ್ಯರು ಕೇವಲ ಈ ಒಂದು ಆಸೆಯೊಂದಿಗೆ ಪ್ರಾರ್ಥನೆಯಲ್ಲಿ ದೀರ್ಘಕಾಲದ ವರೆಗೂ ಕಾದರು - ಆತನನ್ನು ಮುಖಾಮುಖಿಯಾಗಿ ನೋಡಲು ಕಾದರು. ಅವರಿಗೆ ಆಶಾಭಂಗವಾಗಲಿಲ್ಲ ಎಂಬುದೇ ನಮಗಿರುವ ಒಳ್ಳೆಯ ಸುದ್ದಿ. ಅವರ ಜೀವಿತವು ಸಾವಿರಾರು ಜನರಿಗೆ ಆಶೀರ್ವಾದಕರವಾಯಿತು.
"ಯೇಸು ಯೆರಿಕೋ ಊರನ್ನು ಪ್ರವೇಶಿಸಿ ಹಾದುಹೋಗುವಾಗ, ಅಲ್ಲಿ ಜಕ್ಕಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಸುಂಕವಸೂಲಿಯ ಮುಖ್ಯಸ್ಥನು ಮತ್ತು ಐಶ್ವರ್ಯವಂತನಾಗಿದ್ದನು. ಅವನು ಯೇಸು ಹೇಗಿದ್ದಾನೆಂದು ನೋಡಲು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದುದರಿಂದ, ಜನರ ಗುಂಪಿನ ನಿಮಿತ್ತ ನೋಡಲಾರದೆ ಹೋದನು. ಆದಕಾರಣ ಆತನನ್ನು ನೋಡುವುದಕ್ಕಾಗಿ ಮುಂದೆ ಓಡಿಹೋಗಿ ಆತನು ಬರುತ್ತಿರುವ ಮಾರ್ಗದಲ್ಲಿದ್ದ ಆಲದ ಮರವನ್ನು ಹತ್ತಿದನು."(ಲೂಕ 19:1-4)
ಯೇಸುವನ್ನು ನೋಡುವ ಕಾರ್ಯವು ಅಷ್ಟೊಂದು ಸುಲಭವಲ್ಲ ಮತ್ತು ನಿಮ್ಮ ಕಡೆಯಿಂದ ಅದು ಕೆಲವು ಶಿಸ್ತುಗಳನ್ನು ನಿರೀಕ್ಷಿಸುತ್ತದೆ . ಜಕ್ಕಾಯನ ವಿಷಯದಲ್ಲಿ ನೀವು ನೋಡುವುದಾದರೆ ಅವನು ಜನಸಮೂಹಕ್ಕಿಂತ ಮುಂದಾಗಿ ಓಡಿ ಆಲದ ಮರವನ್ನು ಹತ್ತಬೇಕಾಗಿತ್ತು. ಅವನ ವಯಸ್ಸನ್ನು ಪರಿಗಣಿಸಿದರೆ, ಇದು ಖಂಡಿತವಾಗಿಯೂ ಸುಲಭವಾದ ಕಾರ್ಯವಾಗಿರಲಿಲ್ಲ.
ಅರಸನಾದ ದಾವೀದನು , ಈ ಕೆಳಗಿನ ಕೀರ್ತನೆಗಳಲ್ಲಿ, ಕರ್ತನನ್ನು ಹುಡುಕುವ ಒಂದು ತಂತ್ರವನ್ನು (ಒಂದು ಯೋಜನೆ) ವಿವರಿಸುತ್ತಾನೆ. "ಸಂಜೆ, ಮುಂಜಾನೆ, ಮಧ್ಯಾಹ್ನಗಳಲ್ಲಿ ಹಂಬಲಿಸಿ ಮೊರೆಯಿಡುವೆನು. ದೇವರು ನನ್ನ ಧ್ವನಿಯನ್ನು ಕೇಳುವನು"(ಕೀರ್ತನೆಗಳು 55:17)
ಗ್ರೀಕರು ಯೇಸುವನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದಾಗ, ಆತನು ಅವರಿಗೆ ಬಹಳ ಅಗಾಧವಾದ ವಿಷಯವನ್ನು ಹೇಳಿದನು. ಅನೇಕರಿಗೆ ಇದು ಅರ್ಥವಾಗುವುದಿಲ್ಲ. "ಗೋಧಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ತನ್ನಷ್ಟಕ್ಕೆ ತಾನೇ ಉಳಿಯುತ್ತದೆ; ಆದರೆ ಅದು ಸತ್ತರೆ ಅದು ಹೆಚ್ಚು ಫಲವನ್ನು ನೀಡುತ್ತದೆ" ಎಂದು ಯೇಸು ಹೇಳಿದ್ದು ಇಲ್ಲಿದೆ. (ಲೂಕ 12:24)
ಯೇಸುವನ್ನು ನೋಡುವುದಕ್ಕೂ ಇದಕ್ಕೂ ಏನು ಸಂಬಂಧ? ಯೇಸುವಿನ ಅರ್ಥವೇನೆಂದರೆ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಶಿಲುಬೆಯನ್ನು ಹೊತ್ತುಕೊಳ್ಳಲು ಅನುಮತಿಸುವ ಮೂಲಕ ಅವನ ಆಸೆಗಳು ಮತ್ತು ಶಾರೀರಿಕ ಈರ್ಶೆಗಳು ಸಾಯದೇ ಹೋದರೆ , ಆತನನ್ನು ನಿಜವಾಗಿಯೂ ನೋಡಲು ಸಾಧ್ಯವಿಲ್ಲ ಎಂಬುದೇ. ಪ್ರಾರ್ಥನೆ ಮತ್ತು ಆರಾಧನೆಯ ಸಮಯದಲ್ಲಿ ನಿಮ್ಮ ಆತ್ಮವು ಶಾರೀರಿಕ ಕಣ್ಣುಗಳಿಂದ ಯೇಸುವನ್ನು ದರ್ಶನ ಮಾಡುವಂತದ್ದು ನಿಮ್ಮಲ್ಲಿ ನಿಜವಾಗಿಯೂ ಪರಿವರ್ತನೆ ತರುತ್ತದೆ ಮತ್ತು ಅದು ನಿಮ್ಮನ್ನು ಸಾವಿರಾರು ಜನರಿಗೆ ಆಶೀರ್ವಾದಪಾತ್ರರನ್ನಾಗಿ ಮಾಡುತ್ತದೆ.
ಪ್ರಾರ್ಥನೆಗಳು
1. ದೇವರಾತ್ಮನೇ, ಕರ್ತನಾದ ಯೇಸುವನ್ನು ಮುಖಾಮುಖಿಯಾಗಿ ನೋಡುವ ಬಯಕೆ ನನ್ನಲ್ಲಿ ಹುಟ್ಟಿದೆ.
2. ತಂದೆಯೇ, ಶಿಸ್ತಿನ ಪ್ರಾರ್ಥನಾ ಜೀವನವನ್ನು ಹೊಂದಲು ನಿಮ್ಮ ಕೃಪೆಯನ್ನು ಮತ್ತು ಬಲವನ್ನು ಯೇಸುನಾಮದಲ್ಲಿ ನನಗೆ ಅನುಗ್ರಹಿಸಿ.
Join our WhatsApp Channel
Most Read
● ನಿರುತ್ಸಾಹದ ಬಾಣಗಳನ್ನು ಗೆಲ್ಲುವುದು -II● ಸರ್ವಬೀಗದ ಕೈ
● ಕರ್ತನ ಸೇವೆ ಮಾಡುವುದು ಎಂದರೇನು II
● ಅನುಕರಣೆ
● ಇನ್ನು ಸಾವಕಾಶವಿಲ್ಲ.
● ದೇವರಿಗೇ ಪ್ರಥಮ ಸ್ಥಾನ ನೀಡುವುದು.#1
● ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?
ಅನಿಸಿಕೆಗಳು