ಅನುದಿನದ ಮನ್ನಾ
ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
Monday, 18th of November 2024
3
1
122
Categories :
Spiritual Clothes
" ಸೃಷ್ಟಿಕರ್ತನ ಸ್ವರೂಪವನ್ನು, ತಿಳುವಳಿಕೆಯಲ್ಲಿ ನವೀಕರಣ ಹೊಂದುತ್ತಿರುವ ಆ ನೂತನ ಸ್ವಭಾವವನ್ನೇ ಧರಿಸಿಕೊಂಡವರಾಗಿದ್ದೀರಲ್ಲಾ."(ಕೊಲೊಸ್ಸೆಯವರಿಗೆ 3:10)
ನಮ್ಮ ಕರ್ತನಾದ ಯೇಸು ಕ್ರಿಸ್ತನ ಪರಿಪೂರ್ಣ ತ್ಯಾಗದ ಮೂಲಕ ನಾವು ದೇವರ ಮಕ್ಕಳಾಗಿದ್ದರೂ, ಆಗಾಗ್ಗೆ, ನಾವು ಯಾವಾಗಲೂ ಹಾಗೆ ವರ್ತಿಸುವುದಿಲ್ಲ.
ನಮ್ಮ ಸುತ್ತಮುತ್ತಲಿನ ಜನರು ನಾವು ಕ್ರೈಸ್ತರೋ ಅಲ್ಲವೊ ಎಂಬುದನ್ನು ತಿಳಿದುಕೊಳ್ಳುವ ಏಕೈಕ ಮಾರ್ಗವೆಂದರೆ ನಮ್ಮ ನಡವಳಿಕೆ ಅಥವಾ ನಮ್ಮ ಜೀವನಶೈಲಿಯನ್ನು ಅವರು ನೋಡುವುದರಿಂದ. ಯೇಸು ಕ್ರಿಸ್ತನನ್ನು ನಮ್ಮ ಒಡೆಯನು ಮತ್ತು ರಕ್ಷಕನಾಗಿ ಸ್ವೀಕರಿಸುವ ಪ್ರಕ್ರಿಯೆಯು ಹೆಚ್ಚಾಗಿ ಖಾಸಗಿಯಾಗಿ ಮಾಡಲ್ಪಡುತ್ತದೆ. ಆದ್ದರಿಂದ ನೀವು ನಿಜವಾದ ಕ್ರೈಸ್ತರು ಎಂದು ಘೋಷಿಸುವ ಏಕೈಕ ಮಾರ್ಗವೆಂದರೆ ಆತ್ಮದ ಫಲವನ್ನು ವ್ಯಕ್ತಪಡಿಸುವುದಾಗಿದೆ. ಆಮೇಲೆ ಅದು ನಿಮ್ಮ ನಂಬಿಕೆಯ ನಿರ್ಣಾಯಕ ಸೂಚಕವಾಗುತ್ತದೆ ಎಂಬುದನ್ನು ನಾನು ಪ್ರತಿಪಾದಿಸುತ್ತೇನೆ. ಅಪೊಸ್ತಲನಾದ ಪೌಲನು ಹಳೆಯ ಜೀವನ ವಿಧಾನಗಳನ್ನು ತೊಡೆದುಹಾಕುವ ಪ್ರಾಮುಖ್ಯತೆಯನ್ನು ವಿವರಿಸುತ್ತಾನೆ. ನಮ್ಮಲ್ಲಿ ಅಡಗಿರುವ ದುಷ್ಟ ಬಯಕೆಯನ್ನು ಕೊಲ್ಲಲು (ಸಾಯಿಸಬೇಕೆಂದು /ಅದರ ಅಧಿಕಾರದಿಂದ ಬಿಡುಗಡೆಯಾಗಬೇಕೆಂದು)ಪೌಲನು ನಮಗೆ ಸೂಚಿಸುತ್ತಾನೆ, ಏಕೆಂದರೆ ನೀವು ಹಳೆಯ ಜೀವಿತವನ್ನು ಪ್ರತಿನಿಧಿಸುವ (ಪುನರುತ್ಪಾದನೆಯಾಗದ) ಆತ್ಮವನ್ನು ಅದರ ದುಷ್ಟ ಅಭ್ಯಾಸಗಳನ್ನು ಕಳಚಿ ಹೊಸದಾದ [ಆತ್ಮೀಕತೆ] ವಸ್ತ್ರಗಳನ್ನು ಧರಿಸಿಕೊಳ್ಳಬೇಕು ಎಂದು ಅವನು ಹೇಳುತ್ತಾನೆ (ಕೊಲಸ್ಸೇ 3: 5,9-10,)
"ಕಳಚಿ " ಮತ್ತು "ಧರಿಸಿ " ಎನ್ನುವಂತಹ ಪದಗಳು ನಮ್ಮ ಕಡೆಯಿಂದ ಆಗಬೇಕಾದ ಪ್ರಯತ್ನದ ಅಗತ್ಯತೆಯನ್ನು ತೋರಿಸುತ್ತವೆ.
ನಾವು ಏನೆಲ್ಲಾ ಧರಿಸಿಕೊಳ್ಳಬೇಕೆಂದು ಅಪೊಸ್ತಲ ಪೌಲನು ಸ್ಪಷ್ಟವಾಗಿ ಇಲ್ಲಿ ಸೂಚಿಸುತ್ತಾನೆ:
1. ದೇವರಿಂದ ಆಯ್ಕೆಯಾದವರೂ ಪರಿಶುದ್ಧರೂ ಪ್ರಿಯರೂ ಆಗಿರುವ ನೀವು ಕನಿಕರ, ದಯೆ, ದೀನತ್ವ, ಸಾತ್ವಿಕತ್ವ, ದೀರ್ಘಶಾಂತಿ ಇವುಗಳನ್ನು ಧರಿಸಿಕೊಳ್ಳಬೇಕು (ಕೊಲೊಸ್ಸೆಯವರಿಗೆ 3:12)
2. ಒಬ್ಬರನ್ನೊಬ್ಬರು ಸೈರಿಸಿಕೊಂಡು ಯಾರಿಗಾದರೂ ಮತ್ತೊಬ್ಬನ ಮೇಲೆ ತಪ್ಪುಹೊರಿಸುವುದಕ್ಕೆ ಕಾರಣವಿದ್ದರೂ, ತಪ್ಪುಹೊರಿಸದೆ ಕ್ಷಮಿಸಬೇಕು , ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಬೇಕು .(ಕೊಲೊಸ್ಸೆ 3:13)
ನೀವು ಮತ್ತು ನಾನು ಈ ಸ್ವಭಾವಗಳನ್ನು ಧರಿಸಿಕೊಂಡರೆ ನೀವು ಮತ್ತು ನಾನು ಯೇಸುವಿನಂತೆ ಆಗುವ ನಮ್ಮ ಗುರಿಯನ್ನು ಸಮೀಪಿಸುವವರಾಗುತ್ತೇವೆ.
ಕೆಲವು ನಿಜವಾದ ಆತ್ಮಶೋಧನೆ ಮಾಡುವಂತ ಸವಾಲನ್ನು ಇದು ನಿಮಗೆ ಹಾಕುತ್ತದೆ ಎಂದು ನಾನು ಭಾವಿಸುತ್ತೇನೆ.
ಒಂದು ವಿಷಯವನ್ನು ಯಾವಾಗಲೂ ನೆನಪಿಡಿರಿ: ನಾವು ಕ್ರಿಸ್ತನ ರಾಯಭಾರಿಗಳಾಗಿ ಇಲ್ಲಿದ್ದೇವೆ. ಆದ್ದರಿಂದ ನಾವು ಆತನನ್ನು ಸರಿಯಾಗಿ ಪ್ರತಿನಿಧಿಸಬೇಕು. ಪವಿತ್ರಾತ್ಮನು ದೇವರಿಗೆ ಮೆಚ್ಚಿಕೆಯಾಗುವ ಜೀವನವನ್ನು ನಾವು ನಡೆಸುವಂತೆಯೂ ನಮ್ಮ ಮಾತುಗಳಿಂದ ಮಾತ್ರವಲ್ಲದೆ ನಮ್ಮ ಕಾರ್ಯಗಳಿಂದಲೂ ಇತರರನ್ನು ತನ್ನತ್ತ ಸೆಳೆಯುವಂತೆಯೂ ಮಾಡಲಿ.
ಪ್ರಾರ್ಥನೆಗಳು
ತಂದೆಯೇ, ಯೇಸುನಾಮದಲ್ಲಿ , ನನಗೆ ತಪ್ಪು ಮಾಡಿದವರನ್ನು ಕ್ಷಮಿಸಲು ನನಗೆ ಕೃಪೆಯನ್ನು ಅನುಗ್ರಹಿಸು . ತಂದೆಯೇ, ನಿಮ್ಮ ಕನಿಕರ ಹೃದಯದ ಕರುಣೆ, ದಯೆ, ನಮ್ರತೆ, ಸೌಮ್ಯತೆ ಮತ್ತು ತಾಳ್ಮೆಯ ವಸ್ತ್ರವನ್ನು ನಾನೂ ಧರಿಸಿಕೊಳ್ಳುವಂತೆ ಸಹಾಯ ಮಾಡೆಂದು ಯೇಸುನಾಮದಲ್ಲಿ ಬೇಡಿಕೊಳ್ಳುತ್ತೇನೆ . ನಂಬಿಕೆಯಿಂದ, ನಾನು ಈ ನೂತನ ವಸ್ತ್ರವನ್ನು ಸ್ವೀಕರಿಸುತ್ತೇನೆ ಮತ್ತು ಅದಕ್ಕಾಗಿ ನಾನು ನಿಮಗೆ ಸ್ತೋತ್ರವನ್ನು ಸಲ್ಲಿಸುತ್ತೇನೆ..
Join our WhatsApp Channel
Most Read
● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ಹೊಗಳಿಕೆವಂಚಿತ ನಾಯಕರು
● ದಿನ 40:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕೊಡುವ ಕೃಪೆ -3
● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು