ಅನುದಿನದ ಮನ್ನಾ
ಅತ್ಯಂತ ಸಾಮಾನ್ಯ ಭಯಗಳು
Tuesday, 19th of November 2024
2
0
94
Categories :
ಬಿಡುಗಡೆ (Deliverance)
ಭಯ (Fear)
ನೀವು ಸಾಮಾನ್ಯವಾಗಿ ಯಾವುದಕ್ಕೆ ಹೆಚ್ಚು ಹೆದರುತ್ತೀರಿ?
ಇಷ್ಟು ವರ್ಷಗಳ ಸೇವೆಯ ಅವಧಿಯಲ್ಲಿ ನಾನು ‘ಭಯ’ ಎನ್ನುವ ವಿಷಯದ ಕುರಿತು ಬೋಧಿಸುವಾಗಲೆಲ್ಲಾ ನಾನು ಜನರನ್ನು “ನೀವು ಯಾವುದಕ್ಕೆ ಹೆಚ್ಚು ಹೆದರುತ್ತೀರಿ?” ಕೇಳಿದಾಗ ನಾನು ವಿವಿಧ ಉತ್ತರಗಳನ್ನು ಅವರಿಂದ ಸ್ವೀಕರಿಸಿದ್ದೇನೆ - ಅವುಗಳಲ್ಲಿ ಕೆಲವು ತಮಾಷೆ ಉತ್ತರಗಳಾಗಿದ್ದರೆ ಮತ್ತು ಕೆಲವು ಬಹಳ ಚಿಂತನಶೀಲ ಉತ್ತರಗಳಾಗಿರುತ್ತವೆ .
ಜನರು ಭಯಪಡುವ ಅನೇಕ ವಿಷಯಗಳಿವೆ, ಆದರೆ ಇಲ್ಲಿ ಮೂರು ಸರ್ವೇ ಸಾಮಾನ್ಯವಾದ ಫೋಬಿಯಾಗಳಿವೆ:
ಅವು ಅತ್ಯಂತ ಸಾಮಾನ್ಯ ಭಯಗಳು
1. ಸಾರ್ವಜನಿಕ ಭಾಷಣ:
ವೃತ್ತಿ ಅಥವಾ ಭೌಗೋಳಿಕ ಸ್ಥಳವನ್ನು ಲೆಕ್ಕಿಸದೆಯೇ, ಬಹುಪಾಲು ಜನರು ಜನರ ಗುಂಪಿನ ಮುಂದೆ ಮಾತನಾಡಲು ಹಲವರು ಭಯಪಡುತ್ತಾರೆ. ಒಬ್ಬ ಪಾಸ್ಟರ್ ಆಗಿ , ನಾನು ನಾಯಕರುಗಳನ್ನು ಬೆಳೆಸಲು ಇಷ್ಟಪಡುತ್ತೇನೆ. ಆದಾಗ್ಯೂ, ನಾನು ಜನರನ್ನು ಮುಂದೆ ಬಂದು ಪ್ರಾರ್ಥಿಸಲು, ಅಥವಾ ವಾಕ್ಯವನ್ನು ಹಂಚಿಕೊಳ್ಳಲು ಆಹ್ವಾನಿಸಿದಾಗ, ಅವರಲ್ಲಿ ಕೆಲವರು ಭಯದಿಂದ ಸಾರಾಸಗಟಾಗಿ ಆ ಆಹ್ವಾನವನ್ನು ನಿರಾಕರಿಸುತ್ತಾರೆ . ಈ ರೀತಿಯ ಭಯವೇ ಅವರಲ್ಲಿ ಆತ್ಮೀಕ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ.
2. ಜನರಿಂದ ತಿರಸ್ಕರಿಸಲ್ಪಡುವ ಭಯ:
ತಿರಸ್ಕರಿಸಲ್ಪಡುವ ಭಯವು ಮೂಲತಃ 'ಆಗುವುದಿಲ್ಲ / ಬೇಡ' ಎಂಬ ಪದವನ್ನು ಕೇಳುವುದು ಅಥವಾ ನಮ್ಮ ಆಲೋಚನೆಗಳನ್ನು ತಿರಸ್ಕರಿಸುವುದನ್ನು ಒಳಗೊಂಡಿರುತ್ತದೆ. ಜೀವನ ಸಂಗಾತಿಯನ್ನು ಹುಡುಕುತ್ತಿರುವ ಜನರಲ್ಲಿ ಈ ಪ್ರತಿಕ್ರಿಯೆಯು ಹೆಚ್ಚು ಪ್ರಚಲಿತವಾಗಿದೆ. ಮದುವೆಯ ಪ್ರಸ್ತಾಪವನ್ನು ಹುಡುಕುತ್ತಿರುವಾಗ 11 ಬಾರಿ ತಿರಸ್ಕರಿಸಲ್ಪಟ್ಟಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವುದಾಗಿ ಹೇಳಿ ಯುವತಿಯೊಬ್ಬಳು ನನಗೆ ಬರೆದ ಪತ್ರವು ಇನ್ನೂ ನನಗೆ ನೆನಪಿದೆ. ನಾನು ಆಕೆಗಾಗಿ ಪ್ರಾರ್ಥಿಸಿದ ನಂತರ, ಆಕೆಯು ಆ ಭಯವನ್ನು ಗದರಿಸಬೇಕೆಂದು ಆಕೆಗೆ ಸಲಹೆ ನೀಡಿದೆ. ಒಳ್ಳೆಯ ಸುದ್ದಿ ಏನೆಂದರೆ, ಇಂದು ಆಕೆ ಮದುವೆಯಾಗಿ ಸಂತೋಷದಿಂದಿದ್ದಾರೆ. ತಿರಸ್ಕರಿಸಲ್ಪಡುವ ಭಯವು ಮಾರಾಟಗಾರರಲ್ಲಿ ಬಹಳ ಸಾಮಾನ್ಯವಾಗಿದೆ, ವಿಶೇಷವಾಗಿ ಮಾರಾಟ ಪ್ರತಿನಿಧಿಯಾಗಿ ಕರೆಗಳನ್ನು ಮಾಡುವವರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.
3. ವೈಫಲ್ಯದ ಭಯ:
ಯೇಸುಸ್ವಾಮಿಯು ಬೋದಿಸಿದ ತಲಾಂತುಗಳ ಸಾಮ್ಯವನ್ನು ನಾನಿಲ್ಲಿ ನೆನಪಿಸಿಕೊಳ್ಳುತ್ತೇನೆ. ಯಜಮಾನನಾದವನು ತನ್ನ ಪ್ರತಿಯೊಬ್ಬ ಸೇವಕನಿಗೂ "ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ" ಹೂಡಿಕೆ ಮಾಡಲು ತಲಾಂತನ್ನು ಕೊಟ್ಟನು.ಅದರಲ್ಲಿ ಇಬ್ಬರು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರು. ಆದರೆ , ಮೂರನೇ ವ್ಯಕ್ತಿ ತನ್ನ ತಲಾಂತನ್ನು ಹೂಳಿಟ್ಟನು. ಯಜಮಾನನು ಹಿಂದಿರುಗಿದಾಗ, "ಒಂದು ತಲಾಂತು ಹೊಂದಿದವನು ಸಹ ಮುಂದೆ ಬಂದು, ‘ಯಜಮಾನನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಆಗಿರುವ ಕಠಿಣ ಮನುಷ್ಯನು ಎಂದು ನಾನು ತಿಳಿದು ಹೆದರಿ, ಹೊರಟುಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು; ಇಗೋ, ನಿನ್ನದು ನಿನಗೇ ಸಲ್ಲಿಸುತ್ತಿದ್ದೇನೆ’ ಅಂದನು. (ಮತ್ತಾಯ 25:24-25).
ಆ ಮನುಷ್ಯನು ಏಕೆ ಹೂಡಿಕೆ ಮಾಡಲಿಲ್ಲ ಎಂಬುದನ್ನು ಎಚ್ಚರಿಕೆಯಿಂದ ಇಲ್ಲಿ ಗಮನಿಸಿ - ಅವನು ವೈಫಲ್ಯಕ್ಕೆ ಹೆದರುತ್ತಿದ್ದನು. ನಾವು ದೇವರ ಶಕ್ತಿಯನ್ನು ಹೆಚ್ಚು ಅನುಭವಿಸದಿರಲು ಮತ್ತು ಆತನ ಹೆಚ್ಚಿನ ಪವಾಡಗಳನ್ನು ನೋಡದಿರಲು ಪ್ರಾಥಮಿಕ ಕಾರಣವೆಂದರೆ, ವೈಫಲ್ಯದ ಭಯದಿಂದಲೇ ಎಂದು ನಾನು ನಂಬುತ್ತೇನೆ. ದುಷ್ಟ ಸೇವಕನಂತೆ, ನಾವು ನಮಗೆ ಅನುಗ್ರಹಿಸಲ್ಪಟ್ಟ ನಮ್ಮ ಅವಕಾಶಗಳನ್ನು ನೆಲದಲ್ಲಿ ಹೂತುಹಾಕುತ್ತೇವೆ ಮತ್ತು ಏನೂ ಆಗುತ್ತಿಲ್ಲ ಎಂದು ಗೊಣಗುತ್ತೇವೆ. ವೈಫಲ್ಯದ ಭಯವು ಅನೇಕ ವಿದ್ಯಾರ್ಥಿಗಳನ್ನು ಇಂದು ಪೀಡಿಸಿದೆ ಮತ್ತು ಅವರ ವೃತ್ತಿಜೀವನದಲ್ಲಿ ಅವರು ಮೇಲೇರುವುದನ್ನು ತಡೆದಿಟ್ಟಿದೆ. "ನನ್ನ ಸಹೋದರರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ. ಏಕೆಂದರೆ ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ. ಆ ತಾಳ್ಮೆಯು ಸಂಪೂರ್ಣವಾಗಿ ನಿಮ್ಮಲ್ಲಿ ಫಲಿಸಲಿ, ಆಗ ನೀವು ಸರ್ವಸುಗುಣಸಂಪನ್ನರೂ, ಪರಿಪೂರ್ಣರೂ, ಯಾವುದಕ್ಕೂ ಕಡಿಮೆಯಿಲ್ಲದವರೂ ಆಗುವಿರಿ. (ಯಾಕೋಬ 1: 2-4).
ಆದ್ದರಿಂದ ವೈಫಲ್ಯದಿಂದ ಎದೆಗುಂದಬೇಡಿ. ನೀವು ಪ್ರಯತ್ನ ಬಿಟ್ಟು ಬಿಟ್ಟರೆ ಮಾತ್ರ ಯಶಸ್ಸು ಅಸಾಧ್ಯ - ಆದ್ದರಿಂದ ಬಿಟ್ಟುಕೊಡಬೇಡಿ. ಕರ್ತನು ನಮ್ಮ ಪಕ್ಷ ಇದ್ದಾನೆ.
ಪ್ರಾರ್ಥನೆಗಳು
ತಂದೆಯೇ, ಭಾವನೆಗಳನ್ನು ಅವಲಂಬಿಸದೆ ನಂಬಿಕೆಯಿಂದ ನಡೆಯಲು ಕೃಪೆ ತೋರಿಸಬೇಕೆಂದು ಯೇಸುನಾಮದಲ್ಲಿ ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ.
Join our WhatsApp Channel
Most Read
● ಸ್ಥಿರತೆಯಲ್ಲಿರುವ ಶಕ್ತಿ● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದ -I
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II
● ಸಾಧನೆಯ ಪರೀಕ್ಷೆ.
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು