ಅನುದಿನದ ಮನ್ನಾ
ದಿನ 01 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Friday, 22nd of November 2024
3
1
43
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ದೇವರೊಂದಿಗೆ ಆಳವಾದ ಅನ್ಯೋನ್ಯತೆಯಲ್ಲಿರುವುದು
"ದೇವರೇ, ನೀನೇ ನನ್ನ ದೇವರು; ನಾನು ನಿನ್ನ ದರ್ಶನವನ್ನು ಕುತೂಹಲದಿಂದ ಎದುರುನೋಡುತ್ತೇನೆ. ನನ್ನ ಆತ್ಮವೂ ನಿನಗಾಗಿ ಹಂಬಲಿಸುತ್ತದೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿಗಾಗಿಯೋ ಎಂಬಂತೆ, ನನ್ನ ಶರೀರವು ನಿನಗಾಗಿ ದಾಹಗೊಳ್ಳುತ್ತದೆ. ನಿನ್ನ ಮಂದಿರದಲ್ಲಿ ನಾನು ನಿನ್ನ ಮಹತ್ತನ್ನೂ, ಪ್ರಭಾವವನ್ನೂ ಕಂಡ ಪ್ರಕಾರ, ಈಗಲೂ ಕಾಣಬೇಕೆಂದು ಅಪೇಕ್ಷಿಸುತ್ತೇನೆ. ನಿನ್ನ ಪ್ರೇಮಾನುಭವವು ಜೀವಕ್ಕಿಂತಲೂ ಶ್ರೇಷ್ಠ; ನನ್ನ ಬಾಯಿ ನಿನ್ನನ್ನು ಕೀರ್ತಿಸುವುದು. "(ಕೀರ್ತನೆಗಳು 63:1-3)
ಯೇಸುವನ್ನು ಹಿಂಬಾಲಿಸುವ ಬಗ್ಗೆ ನೀವು ಎಷ್ಟು ಗಂಭೀರವಾಗಿದ್ದೀರಿ? "ಯೇಸು ಜನರಿಂದ ಪ್ರತ್ಯೇಕಿಸಿಕೊಂಡು ನಿರ್ಜನ ಪ್ರದೇಶಗಳಿಗೆ ಹೋಗಿ ಪ್ರಾರ್ಥನೆಯನ್ನು ಮಾಡುತ್ತಿದ್ದನು. (ಲೂಕ 5:16). ಆತನು "ಪ್ರಾರ್ಥನೆ ಮಾಡಲು ಏಕಾಂತವಾಗಿ ಎಣ್ಣೆಗುಡ್ಡದ ಮೇಲೆ ಹೋದನು" (ಮತ್ತಾಯ 14:23). ವಂಚಕನಾದ ಯಾಕೋಬನು "ಇಸ್ರೇಲ್, ದೇವರ ಮಗನಾದದ್ದು" ಹೇಗೆ ? (ಆದಿಕಾಂಡ 32:28 ಓದಿ). ಅವನು "ಏಕಾಂಗಿಯಾಗಿ ಉಳಿದುಕೊಂಡನು ಮತ್ತು ಒಬ್ಬ ಮನುಷ್ಯನು (ಕರ್ತನ ದೂತನು) ಅವನೊಂದಿಗೆ ಬೆಳಗಿನ ತನಕ ಸೆಣಸಾಡಿದನು" (ಆದಿಕಾಂಡ 32:24) ಎಂದು ಸತ್ಯವೇದ ಹೇಳುತ್ತದೆ.
ಪತಿ-ಪತ್ನಿಯರು ಎಂದಿಗೂ ಏಕಾಂತದಲ್ಲಿರದಿದ್ದರೆ ದಾಂಪತ್ಯವು ಹೇಗೆ ಹದಗೆಡುತ್ತದೆಯೋ ಹಾಗೆಯೇ, ನಮ್ಮ ಆತ್ಮಿಕ ಜೀವನವು ಆತನೊಂದಿಗೆ ಏಕಾಂತವಾಗಿ ಕಳೆಯುವ ಸಮಯವನ್ನು ಒಳಗೊಂಡಿರದಿದ್ದರೆ ಕ್ರಿಸ್ತನೊಂದಿಗಿನ ನಮ್ಮ ಸಂಬಂಧವು ವಿಫಲಗೊಳ್ಳುತ್ತದೆ. ಗೊಂದಲದ ಈ ಯುಗದಲ್ಲಿ, ದೇವರೊಂದಿಗೆ ಏಕಾಂತವಾಗಿ ಇರುವ ಸಮಯವು ನಮ್ಮ ಆದ್ಯತೆಯಾಗಬೇಕು.
ದೇವರೊಂದಿಗೆ ಏಕಾಂತದಲ್ಲಿರುವುದು ಹೇಗೆ?
1. ಪ್ರಾರ್ಥನೆಗಾಗಿ ನಿರ್ದಿಷ್ಟ ಸಮಯವನ್ನು ಬದಿಗಿರಿಸಿ.
ದಾನಿಯೇಲನು ದಿನಕ್ಕೆ ಮೂರು ಬಾರಿ ಪ್ರಾರ್ಥಿಸುವ ಅಭ್ಯಾಸವನ್ನು ಹೊಂದಿದ್ದನು."ಶಾಸನಕ್ಕೆ ರುಜುವಾದದ್ದು ದಾನಿಯೇಲನಿಗೆ ತಿಳಿದಾಗ ಅವನು ತನ್ನ ಮನೆಗೆ ಹೋಗಿ ಯೆರೂಸಲೇಮಿನ ಕಡೆಗೆ ಕದವಿಲ್ಲದೆ ಕಿಟಕಿಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ವಾಡಿಕೆಯ ಪ್ರಕಾರ ದಿನಕ್ಕೆ ಮೂರಾವರ್ತಿ ಮೊಣಕಾಲೂರಿ ತನ್ನ ದೇವರಿಗೆ ಪ್ರಾರ್ಥನೆಮಾಡಿ ಸ್ತೋತ್ರ ಸಲ್ಲಿಸುತ್ತಿದ್ದನು"(ದಾನಿಯೇಲ 6:10).
ಈ ಉಪವಾಸದ ಕಾಲದಲ್ಲಿ , ನೀವು ಪ್ರಾರ್ಥನೆ ಮತ್ತು ದೇವರ ಅನ್ಯೋನ್ಯತೆ ಎಂದು ದೇವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬೇಕೆಂದು ಖಚಿತಪಡಿಸಿಕೊಳ್ಳಿ. ಯೆರೆಮಿಯನು , "ನಿನ್ನ ಕೈ ನನ್ನ ಮೇಲೆ ಇದ್ದುದರಿಂದ ನಾನು ಒಬ್ಬಂಟಿಗನಾಗಿ ಕುಳಿತಿದ್ದೇನೆ" ಎಂದು ಬರೆದನು (ಯೆರೆಮಿಯ 15:17).
2. ನೀವು ಆರಾಧನೆ ಮತ್ತು ಕೃತಜ್ಞತಾ ಸ್ತೋತ್ರ ಮತ್ತು ಸ್ತುತಿಗಳೊಂದಿಗೆ ದೇವರ ಪ್ರಸನ್ನತೆಯನ್ನು ಪ್ರವೇಶಿಸಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
"ಕೃತಜ್ಞತಾ ಸ್ತುತಿಯೊಡನೆ ಆತನ ಮಂದಿರದ್ವಾರಗಳಿಗೂ,
ಸ್ತುತಿಸ್ತೋತ್ರದೊಡನೆ ಆತನ ಅಂಗಳಗಳಿಗೂ ಬನ್ನಿರಿ;
ಆತನ ಉಪಕಾರಗಳನ್ನು ಸ್ಮರಿಸಿರಿ;
ಆತನ ನಾಮವನ್ನು ಕೊಂಡಾಡಿರಿ.(ಕೀರ್ತನೆಗಳು 100:4)
3. ಆತ್ಮಿಕ ಪ್ರಾರ್ಥನೆ :
ಪ್ರಾರ್ಥನೆಯಲ್ಲಿ ಎರಡು ವಿಧಗಳಿವೆ:
- ಬುದ್ದಿಯಿಂದ ಮಾಡುವ ಪ್ರಾರ್ಥನೆ ಮತ್ತು
- ಆತ್ಮಿಕವಾಗಿ ಮಾಡುವ ಪ್ರಾರ್ಥನೆ
ಬುದ್ದಿಯಿಂದ ಮಾಡುವ ಪ್ರಾರ್ಥನೆಯು ನೀವು ನಿಮ್ಮ ತಿಳುವಳಿಕೆ ಮತ್ತು ಬುದ್ದಿಯಿಂದ ಪ್ರಾರ್ಥಿಸುವಂತದ್ದು , ಆತ್ಮಿಕವಾಗಿ ಮಾಡುವ ಪ್ರಾರ್ಥನೆಯು ನೀವು ಅನ್ಯಭಾಷೆಯಲ್ಲಿ ಪ್ರಾರ್ಥಿಸುವಂತದ್ದು.
"ಯಾಕೆಂದರೆ ನಾನು ಅನ್ಯಭಾಷೆಯಲ್ಲಿ ದೇವರನ್ನು ಪ್ರಾರ್ಥಿಸಿದರೆ ನನ್ನಾತ್ಮವು ಪ್ರಾರ್ಥಿಸುತ್ತಿರುತ್ತದೆ. ಆದರೆ ನನ್ನ ಬುದ್ಧಿಯು ನಿಷ್ಫಲವಾಗಿರುವುದು. ಆದ್ದರಿಂದ ನಾನಾದರೋ ಆತ್ಮನಿಂದಲೂ ಪ್ರಾರ್ಥಿಸುವೆನು, ಬುದ್ಧಿಯಿಂದಲೂ ಪ್ರಾರ್ಥಿಸುವೆನು; ಆತ್ಮನಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು."(1 ಕೊರಿ 14:14-15)
4. ದೇವರವಾಕ್ಯವನ್ನು ಅಧ್ಯಯನ ಮಾಡಿ ಮತ್ತು ಆತನನ್ನು ಹುಡುಕಿರಿ.
ನೀವು ವಾಕ್ಯವನ್ನು ಓದುವಾಗ, ನೀವು ದೇವರೊಂದಿಗೆ ನೇರ ಸಹಭಾಗಿತ್ವದಲ್ಲಿದ್ದೀರಿ. ವಾಕ್ಯವು ದೇವರಾಗಿದ್ದಾನೆ. ಹಾಗಾಗಿ ನೀವು ದೇವರ ವಾಕ್ಯವನ್ನು ಓದುವ ಅನುಭವವು ನಿಮಗೆ ದೇವರೊಂದಿಗೆ ವೈಯಕ್ತಿಕವಾಗಿ ಸಂಭಾಷಣೆ ನಡೆಸುವಂತೆಯೇ ಸಂಬಂಧವನ್ನು ಉಂಟುಮಾಡಿಕೊಡುತ್ತದೆ .
ದೇವರೊಂದಿಗೆ ಏಕಾಂತದಲ್ಲಿರುವುದರ ಪ್ರಯೋಜನಗಳು.
- ರಹಸ್ಯಗಳನ್ನು ಪ್ರಕಟಗೊಳ್ಳುತ್ತದೆ.
ಕರ್ತನು ಸರ್ವಜ್ಞಾನಿ ಮತ್ತು ಆತನಿಗೆ ತಿಳಿಯದ್ದು ಒಂದೂ ಇಲ್ಲ. ನೀವು ಅವನೊಂದಿಗೆ ಏಕಾಂತವಾಗಿ ಸಮಯ ಕಳೆಯುವಾಗ ನೀವಿನ್ನೂ ಅಜ್ಞಾನಿಯಾಗಿ ಉಳಿಯಲು ಸಾಧ್ಯವಿರುವುದಿಲ್ಲ. "ಆತನು ಅಗಾಧ ವಿಷಯಗಳನ್ನೂ ಗೂಢಾರ್ಥಗಳನ್ನೂ ಬಯಲಿಗೆ ತರುತ್ತಾನೆ; ಕಗ್ಗತ್ತಲೆಯಲ್ಲಿ ಅಡಗಿರುವುದೂ ಆತನಿಗೆ ಗೋಚರವಾಗುವುದು; ತೇಜಸ್ಸು ಆತನಲ್ಲೇ ನೆಲೆಗೊಂಡಿದೆ." (ದಾನಿಯೇಲ 2:22)
- ನೀವು ಬಲವನ್ನು ಹೊಂದುವಿರಿ.
ನೀವು ದೇವರೊಂದಿಗೆ ಏಕಾಂತವಾಗಿ ಸಮಯ ಕಳೆಯುವಾಗ, ನೀವು ನಿಮ್ಮ ದೈಹಿಕ ಶಕ್ತಿಯನ್ನು ನವೀಕರಿಸುಕೊಳ್ಳುವುದು ಮಾತ್ರವಲ್ಲದೇ , ಆತ್ಮೀಕ ಇಂಧನದಿಂದಲೂ ತುಂಬಿಸಲ್ಪಟ್ಟು ಉಲ್ಲಾಸವನ್ನು ಸಹ ಆನಂದಿಸುವವರಾಗುತ್ತೀರಿ. ಯೆಶಾಯ 40:31 ಹೇಳುತ್ತದೆ, "ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು; ಅವರು ಓಡಿ ದಣಿಯರು, ನಡೆದು ಬಳಲರು.
" ಕೀರ್ತನೆ 68:35 ರ ಪ್ರಕಾರ, ಇಸ್ರಾಯೇಲಿನ ದೇವರು "ತನ್ನ ಜನರಿಗೆ ಶಕ್ತಿ ಮತ್ತು ಬಲವನ್ನು ಅನುಗ್ರಹಿಸುವವನಾಗಿದ್ದಾನೆ ."ಎಂದು
- ದೇವರೊಂದಿಗೆ ಏಕಾಂತವಾಗಿ ಸಮಯ ಕಳೆಯಿರಿ, ಆಗ ಆತನು ನಿಮಗೆ ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತಾನೆ.
ನೀವು ಪವಿತ್ರಾತ್ಮದಿಂದ ತುಂಬಿಸಲ್ಪಡುವಿರಿ " ಮದ್ಯಪಾನ ಮಾಡಿ ಮತ್ತರಾಗಬೇಡಿರಿ. ಅದರಿಂದ ಪಟಿಂಗತನವು ಹುಟ್ಟುತ್ತದೆ. ಆದರೆ ಪವಿತ್ರಾತ್ಮಭರಿತರಾಗಿದ್ದು, ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ, ಆತ್ಮೀಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನನ್ನು ಹಾಡಿ ಕೊಂಡಾಡಿರಿ. (ಎಫೆಸ 5:18, 19)
- ನೀವು ದೇವರ ಆತ್ಮದಿಂದ ತುಂಬಲ್ಪಟ್ಟಾಗ, ನಿಮ್ಮ ಜೀವನವು ಪವಿತ್ರಾತ್ಮದಿಂದ ಸಂಪೂರ್ಣವಾಗಿ ಪ್ರಭಾವಿತವಾಗಿರುತ್ತದೆ.
ನೀವು ದೇವರೊಂದಿಗೆ ಅನ್ಯೋನ್ಯತೆಯ ಸಮಯದಲ್ಲಿರುವಾಗ ದೇವರ ಅಭಿಷೇಕವು ಸೈತಾನನ ಎಲ್ಲಾ ನೊಗಗಳನ್ನು ಮುರಿದು ಹಾಕುತ್ತದೆ."ಆ ದಿನದಲ್ಲಿ ಅವರು ಹೊರಿಸಿದ ಹೊರೆಯು ನಿಮ್ಮ ಬೆನ್ನಿನಿಂದಲೂ, ಹೂಡಿದ ನೊಗವು ನಿಮ್ಮ ಕುತ್ತಿಗೆಯಿಂದಲೂ ತೊಲಗುವುದು ಮತ್ತು ನೀವು ಕೊಬ್ಬಿದ ಕಾರಣ ನೊಗವು ಮುರಿದು ಹೋಗುವುದು"(ಯೆಶಾಯ 10:27)
- ನೀವು ದೇವರ ಪ್ರತಿರೂಪವಾಗಿ ರೂಪಾಂತರಗೊಳ್ಳುವಿರಿ.
" ನಾವೆಲ್ಲರೂ ಮುಸುಕು ತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೋ ಎಂಬಂತೆ ದೃಷ್ಟಿಸುವವರಾಗಿದ್ದು ನಾವೆಲ್ಲರೂ ಕರ್ತನ ದಾನವಾಗಿರುವ ಆತ್ಮದ ಮಹಿಮೆಯಿಂದ ಅಧಿಕ ಮಹಿಮೆಗೆ ಹೋಗುತ್ತಾ, ಆ ಮಹಿಮೆಯ ಸಾರೂಪ್ಯವುಳ್ಳವರೇ ಆಗುತ್ತೇವೆ. ಇದು ಆತ್ಮನಾಗಿರುವ ಕರ್ತನ ಕಾರ್ಯವೇ ಸರಿ.(2 ಕೊರಿಂಥ 3:18)
ದೇವರಿಗೆ ನಿಮ್ಮ ಸಂಪೂರ್ಣ ಹೃದಯವನ್ನು ಮತ್ತು ಗುಣಮಟ್ಟದ ಸಮಯವನ್ನು ನೀಡಿರಿ. ಇವೇ ದೇವರೊಂದಿಗೆ ಆಳವಾದ ಆತ್ಮೀಯತೆ ಹೊಂದಲು ಇರುವ ಎರಡು ಪ್ರಮುಖ ಷರತ್ತುಗಳಾಗಿವೆ.
Bible Reading Plan : Matthew 1-7
ಪ್ರಾರ್ಥನೆಗಳು
1. ಕರ್ತನೇ, ನನ್ನನ್ನು ನಿನ್ನಿಂದ ದೂರಮಾಡುವ ಎಲ್ಲಾ ಪಾಪಗಳಿಂದ ನನ್ನನ್ನು ಬಿಡಿಸಿ, ನನ್ನ ನ್ನು ಕರುಣಿಸು. (ಕೀರ್ತನೆ 51:1-2, 1 ಯೋಹಾನ 1:9)
2. ದೇವರೊಂದಿಗಿನ ನನ್ನ ಸಂಬಂಧದ ಮೇಲೆ ಪರಿಣಾಮ ಬೀರುವ ಎಲ್ಲಾ ಪಾಪದ ಪ್ರತಿ ಭಾರವನ್ನು ಯೇಸುನಾಮದಲ್ಲಿ ನಾನು ಕಿತ್ತೊಗೆಯುತ್ತೇನೆ . (ಇಬ್ರಿಯ 12:1, ರೋಮ 6:12-14)
3. ನನ್ನ ಮನಸ್ಸಿನಲ್ಲಿ ಹೋರಾಡುತ್ತಿರುವ ದೋಷಗಳು, ಸುಳ್ಳುಗಳು, ಅನುಮಾನಗಳು ಮತ್ತು ಭಯಗಳನ್ನು ಯೇಸುನಾಮದಲ್ಲಿ ನಾನು ಕಿತ್ತೊಗೆಯುತ್ತೇನೆ.
(2 ಕೊರಿಂಥ 10:4-5, ಯೆಶಾಯ 41:10)
4. ತಂದೆಯೇ! ನಿಮ್ಮ ಧರ್ಮಶಾಸ್ತ್ರದಲ್ಲಿರುವ ಅದ್ಭುತವಾದ ವಿಷಯಗಳನ್ನು ನಾನು ನೋಡುವಂತೆ ನನ್ನ ಕಣ್ಣುಗಳನ್ನು ಯೇಸುವಿನ ಹೆಸರಿನಲ್ಲಿ ತೆರೆಯಿರಿ. (ಕೀರ್ತನೆ 119:18, ಎಫೆಸ 1:17-18)
5. ನನ್ನ ಪರಲೋಕದ ತಂದೆಯೊಂದಿಗೆ ಅನ್ಯೋನ್ಯತೆಯನ್ನು ಪುನಃಸ್ಥಾಪಿಸಿಕೊಳ್ಳಲು ಯೇಸುವಿನ ಹೆಸರಿನಲ್ಲಿ ನಾನು ಕೃಪೆಯನ್ನು ಪಡೆಯುತ್ತೇನೆ. (2 ಕೊರಿಂಥ 13:14, ಯಾಕೋಬ 4:8)
6. ಓ ಕರ್ತನೇ! ನನ್ನ ಆತ್ಮೀಕ ಮನುಷ್ಯನಿಗೆ ಚೈತನ್ಯವನ್ನು ಯೇಸುನಾಮದಲ್ಲಿ ಅನುಗ್ರಹಿಸು (ಎಫೆಸ 3:16, ಯೆಶಾಯ 40:29-31)
7. ನನ್ನ ಆತ್ಮೀಕ ಶಕ್ತಿಯನ್ನು ಬರಿದುಮಾಡುವ ಯಾವುದೇ ಸಂಗತಿಗಳಾಗಲೀ ಯೇಸುನಾಮದಲ್ಲಿ ನಾಶವಾಗಿ ಹೋಗಲಿ (ಯೆಶಾಯ 40:29, ಮತ್ತಾಯ 11:28-30)
8. ದೇವರ ವಿಷಯಗಳಿಂದ ನನ್ನನ್ನು ದೂರವಿಡಲು ವಿನ್ಯಾಸಗೊಳಿಸಿದ ಐಶ್ವರ್ಯದ ಪ್ರತಿಯೊಂದು ಮೋಸವನ್ನು ಯೇಸುನಾಮದಲ್ಲಿ ಕಿತ್ತೊಗೆಯುತ್ತೇನೆ . (ಮತ್ತಾಯ 6:24, 1 ತಿಮೋತಿ 6:9-10)
9. ತಂದೆಯೇ, ನಿನ್ನ ಪ್ರೀತಿಯಲ್ಲಿಯೂ ಮತ್ತು ನಿನ್ನ ಜ್ಞಾನದಲ್ಲಿಯೂ ನಾನು ಬೆಳೆಯುವಂತೆ ಯೇಸುವಿನ ಹೆಸರಿನಲ್ಲಿ ಕೃಪೆ ಮಾಡು. (ಫಿಲಿಪ್ಪಿ 1:9, ಕೊಲೊಸ್ಸೆ 1:10)
10. ಕರ್ತನೇ, ನಿನ್ನ ದಯೆಯಲ್ಲಿಯೂ ಮತ್ತು ಜ್ಞಾನ-ವಿವೇಕದಲ್ಲಿಯೂ ಬೆಳೆಯುವಂತೆ ಯೇಸುನಾಮದಲ್ಲಿ ಕೃಪೆ ಮಾಡು. (ಲೂಕ 2:52, ಯಾಕೋಬ 1:5)
2. ದೇವರೊಂದಿಗಿನ ನನ್ನ ಸಂಬಂಧದ ಮೇಲೆ ಪರಿಣಾಮ ಬೀರುವ ಎಲ್ಲಾ ಪಾಪದ ಪ್ರತಿ ಭಾರವನ್ನು ಯೇಸುನಾಮದಲ್ಲಿ ನಾನು ಕಿತ್ತೊಗೆಯುತ್ತೇನೆ . (ಇಬ್ರಿಯ 12:1, ರೋಮ 6:12-14)
3. ನನ್ನ ಮನಸ್ಸಿನಲ್ಲಿ ಹೋರಾಡುತ್ತಿರುವ ದೋಷಗಳು, ಸುಳ್ಳುಗಳು, ಅನುಮಾನಗಳು ಮತ್ತು ಭಯಗಳನ್ನು ಯೇಸುನಾಮದಲ್ಲಿ ನಾನು ಕಿತ್ತೊಗೆಯುತ್ತೇನೆ.
(2 ಕೊರಿಂಥ 10:4-5, ಯೆಶಾಯ 41:10)
4. ತಂದೆಯೇ! ನಿಮ್ಮ ಧರ್ಮಶಾಸ್ತ್ರದಲ್ಲಿರುವ ಅದ್ಭುತವಾದ ವಿಷಯಗಳನ್ನು ನಾನು ನೋಡುವಂತೆ ನನ್ನ ಕಣ್ಣುಗಳನ್ನು ಯೇಸುವಿನ ಹೆಸರಿನಲ್ಲಿ ತೆರೆಯಿರಿ. (ಕೀರ್ತನೆ 119:18, ಎಫೆಸ 1:17-18)
5. ನನ್ನ ಪರಲೋಕದ ತಂದೆಯೊಂದಿಗೆ ಅನ್ಯೋನ್ಯತೆಯನ್ನು ಪುನಃಸ್ಥಾಪಿಸಿಕೊಳ್ಳಲು ಯೇಸುವಿನ ಹೆಸರಿನಲ್ಲಿ ನಾನು ಕೃಪೆಯನ್ನು ಪಡೆಯುತ್ತೇನೆ. (2 ಕೊರಿಂಥ 13:14, ಯಾಕೋಬ 4:8)
6. ಓ ಕರ್ತನೇ! ನನ್ನ ಆತ್ಮೀಕ ಮನುಷ್ಯನಿಗೆ ಚೈತನ್ಯವನ್ನು ಯೇಸುನಾಮದಲ್ಲಿ ಅನುಗ್ರಹಿಸು (ಎಫೆಸ 3:16, ಯೆಶಾಯ 40:29-31)
7. ನನ್ನ ಆತ್ಮೀಕ ಶಕ್ತಿಯನ್ನು ಬರಿದುಮಾಡುವ ಯಾವುದೇ ಸಂಗತಿಗಳಾಗಲೀ ಯೇಸುನಾಮದಲ್ಲಿ ನಾಶವಾಗಿ ಹೋಗಲಿ (ಯೆಶಾಯ 40:29, ಮತ್ತಾಯ 11:28-30)
8. ದೇವರ ವಿಷಯಗಳಿಂದ ನನ್ನನ್ನು ದೂರವಿಡಲು ವಿನ್ಯಾಸಗೊಳಿಸಿದ ಐಶ್ವರ್ಯದ ಪ್ರತಿಯೊಂದು ಮೋಸವನ್ನು ಯೇಸುನಾಮದಲ್ಲಿ ಕಿತ್ತೊಗೆಯುತ್ತೇನೆ . (ಮತ್ತಾಯ 6:24, 1 ತಿಮೋತಿ 6:9-10)
9. ತಂದೆಯೇ, ನಿನ್ನ ಪ್ರೀತಿಯಲ್ಲಿಯೂ ಮತ್ತು ನಿನ್ನ ಜ್ಞಾನದಲ್ಲಿಯೂ ನಾನು ಬೆಳೆಯುವಂತೆ ಯೇಸುವಿನ ಹೆಸರಿನಲ್ಲಿ ಕೃಪೆ ಮಾಡು. (ಫಿಲಿಪ್ಪಿ 1:9, ಕೊಲೊಸ್ಸೆ 1:10)
10. ಕರ್ತನೇ, ನಿನ್ನ ದಯೆಯಲ್ಲಿಯೂ ಮತ್ತು ಜ್ಞಾನ-ವಿವೇಕದಲ್ಲಿಯೂ ಬೆಳೆಯುವಂತೆ ಯೇಸುನಾಮದಲ್ಲಿ ಕೃಪೆ ಮಾಡು. (ಲೂಕ 2:52, ಯಾಕೋಬ 1:5)
Join our WhatsApp Channel
Most Read
● ಕಳೆದು ಹೋದ ರಹಸ್ಯ● ಹಣವು ಚಾರಿತ್ರ್ಯವನ್ನು ವಿವರಿಸುತ್ತದೆ
● ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ.
● ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?
● ನಿರ್ಣಯಾಕ ಅಂಶವಾಗಿರುವ ವಾತಾವರಣದ ಒಳನೋಟ -2
● ಮಳೆಯಾಗುತ್ತಿದೆ
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
ಅನಿಸಿಕೆಗಳು