ಅನುದಿನದ ಮನ್ನಾ
ದಿನ 30:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Saturday, 21st of December 2024
5
0
91
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ದೇವರ ಬಹುರೂಪದ ಜ್ಞಾನದೊಂದಿಗೆ ಸಂಪರ್ಕ ಹೊಂದುವುದು
"ಅವನಿಗೆ ದಿವ್ಯಾತ್ಮವನ್ನು ಕೊಟ್ಟು ಬೇಕಾದ ಜ್ಞಾನ ವಿದ್ಯಾ ವಿವೇಕಗಳನ್ನೂ ಸಕಲಶಿಲ್ಪಶಾಸ್ತ್ರಜ್ಞಾನವನ್ನೂ ಅನುಗ್ರಹಿಸಿದ್ದೇನೆ."(ವಿಮೋಚನಕಾಂಡ 31:5).
ನಮ್ಮ ದೇವರು ಸೃಜನಶೀಲನಾದ ದೇವರಾಗಿದ್ದಾನೆ ಮತ್ತು ನಾವಿದನ್ನು ಆತನು ಸೃಷ್ಟಿಸಿರುವ ಈ ಪ್ರಕೃತಿಯಲ್ಲಿ ಕಾಣಬಹುದಾಗಿದೆ. ಆತನು ಸೃಷ್ಟಿಸಿದಂತ ಎಲ್ಲದರಲ್ಲಿಯೂ ನಾವಿದನ್ನು ಕಾಣಬಹುದು. ಆತನು ಎಲ್ಲವನ್ನು ಸುಂದರವಾಗಿಯು ಅದ್ಭುತವಾಗಿಯೂ ಮಾಡಿದ್ದಾನೆ. ನೀವು ಪಕ್ಷಿಗಳನ್ನು ನೋಡುವಾಗ,ಮರಗಳನ್ನು ನೋಡುವಾಗ, ವಿವಿಧ ರೀತಿಯ ಮೀನುಗಳನ್ನು ಕಾಣುವಾಗ ಮತ್ತು ಪ್ರಾಣಿಗಳನ್ನು ನೋಡುವಾಗ ಎಲ್ಲಿ ನೋಡಿದರು ಅಲ್ಲೆಲ್ಲವೂ ಸೃಷ್ಟಿಯ ಸೌಂದರ್ಯವನ್ನು ಕಾಣಬಹುದು
ಆತನ ಸೃಷ್ಟಿ ಕಾರ್ಯದಲ್ಲಿರುವ ಆತನ ಜ್ಞಾನದಿಂದಲೇ ನಾವು ಈ ಎಲ್ಲವನ್ನು ನೋಡಲು ಸಾಧ್ಯವಿದೆ. ಹಾಗಾಗಿ ದೇವರು ಸೃಜನಶೀಲನಾಗಿರುವುದರಿಂದ ಆತನ ಮಕ್ಕಳಾದ ನಾವು ಸಹ ಸೃಜನಶೀಲರಾಗಿರಬೇಕೆಂದು ಬಯಸುತ್ತಾನೆ. ನಾವು ಕ್ರಿಸ್ತನ ಮನಸ್ಸನ್ನು ಹೊಂದಿದವರಾಗಿದ್ದೇವೆ ಎಂದು ಸತ್ಯವೇದವು ಹೇಳುತ್ತದೆ. (1ಕೊರಿಯಂತೆ 2:16) ಕ್ರಿಸ್ತನ ಮನಸ್ಸು ಎಂಬುದರ ಒಂದು ಗುಣಲಕ್ಷಣವೆಂದರೆ ಆತನ ಜ್ಞಾನವಾಗಿದೆ. ಕ್ರಿಸ್ತನೇ ದೇವರ ಜ್ಞಾನವಾಗಿದ್ದಾನೆ (1ಕೊರಿಯಂತೆ 1:24) ನಾವು ಕ್ರಿಸ್ತನ ಮನಸ್ಸನ್ನು ಹೊಂದಿದ್ದೇವೆ ಎಂದು ಹೇಳುವಲ್ಲಿ ನಾವು ಕ್ರಿಯಾಶೀಲತೆಯಿಂದ ಸಮಸ್ಯೆಗಳನ್ನು ಬಗೆಹರಿಸ ಬಲ್ಲವರೆಂದು ನಮ್ಮ ಮೇಲೆ ಯಾರಾದರೂ ನಿರೀಕ್ಷೆ ಇಡುವವರಾಗಿದ್ದೇವೆ.
ಅನೇಕ ಜನರು ತಮ್ಮ ಆರ್ಥಿಕ ಸ್ಥಿತಿಯಲ್ಲಿ ಒಂದೇ ಮಟ್ಟದಲ್ಲಿ ಇರುತ್ತಾರೆ. ಯಾಕೆಂದರೆ ಅವರು ಕ್ರಿಯಾಶೀಲತೆಯಿಂದ ಪರಿಹಾರ ಸೃಷ್ಟಿಸಲಾರರು. ಇಂದಿನ ವ್ಯವಹಾರಿಕ ಲೋಕವು ಸೃಜನಾತ್ಮಕ ಪರಿಹಾರಗಳಲ್ಲಿಯೂ ಉತ್ಪನ್ನಗಳಲ್ಲಿಯೂ ಅಭಿವೃದ್ಧಿ ಹೊಂದುತ್ತಾ ಇದೆ. ಒಂದು ಸಮಸ್ಯೆ ಇದೆ ಎಂದರೆ ಅದಕ್ಕೆ ತಕ್ಕ ಪರಿಹಾರವೂ ಸಹ ಇದೆ. ಆದ್ದರಿಂದ ಆರ್ಥಿಕತೆಯ ಅದ್ಭುತ ಬಿಡುಗಡೆಗೆ ಜ್ಞಾನದ ಆತ್ಮವನ್ನು ವಶೀಕರಿಸಿಕೊಳ್ಳುವ ಅಗತ್ಯವಿದೆ.
ಇಂದಿನ ನಮ್ಮ ವಾಕ್ಯ ಧ್ಯಾನದಲ್ಲಿ ದೇವರು ತನ್ನ ಜನರಿಗೆ ಜ್ಞಾನದ,ತಿಳುವಳಿಕೆಯ, ವಿವೇಕದ ಆತ್ಮದ ಅಭಿಷೇಕವನ್ನು ತುಂಬುತ್ತಾನೆ ಎಂಬುದನ್ನು ಎದುರು ನೋಡೋಣ. ಇದರಿಂದಾಗಿ ಅವರೆಲ್ಲರೂ ಸೃಷ್ಟಿ ಮಾಡಶಕ್ತರಾಗುತ್ತಾರೆ ಇಂದಿನ ನಮ್ಮ ಪ್ರಾರ್ಥನೆಯನ್ನು ದೇವರ ಬಹು ಮುಖಜ್ಞಾನದ ಮೇಲೆ ಕೇಂದ್ರೀಕರಿಸೋಣ. ಇದರಿಂದಾಗಿ ನಮ್ಮ ಜೀವಿತದ ವಿವಿಧ ಕ್ಷೇತ್ರಗಳಲ್ಲಿ ನಾವು ಬಲವಾಗಿ ಮುನ್ನುಗ್ಗಬಹುದು.
ವಿಮೋಚನ ಕಾಂಡ 3:2 ಹೇಳುತ್ತದೆ
"ಬೆಚಲೇಲನನ್ನೂ ಒಹೊಲೀಯಾಬನನ್ನೂ ಮತ್ತು ಯಾರಾರ ಹೃದಯದಲ್ಲಿ ಯೆಹೋವನು ಜ್ಞಾನವನ್ನು ಇಟ್ಟಿದ್ದನೋ ಯಾರಾರನ್ನು ಈ ಕೆಲಸಮಾಡುವದಕ್ಕೆ ಹೃದಯ ಪ್ರೇರಿಸಿತೋ ಆ ಜಾಣರೆಲ್ಲರನ್ನೂ ಮೋಶೆ ತನ್ನ ಹತ್ತಿರಕ್ಕೆ ಕರಿಸಿದನು."ಎಂದು.
ಈ ವಾಕ್ಯವು ಅನೇಕ ವಿಶೇಷ ಜ್ಞಾನ ಹೃದಯವುಳ್ಳ ವಿಶಿಷ್ಟ ವ್ಯಕ್ತಿಗಳಿದ್ದಾರೆ ಎಂಬುದನ್ನು ನಾವಿಲ್ಲಿ ನೋಡಬಹುದು. ಇವರೆಲ್ಲರೂ ದೇವರು ತನ್ನ ಜ್ಞಾನದ ಆತ್ಮವನ್ನು ಇವರೊಳಗೆ ಇರಿಸಲ್ಪಟ್ಟ ವ್ಯಕ್ತಿಗಳಾಗಿದ್ದಾರೆ. ದೇವರ ಮಗುವಾಗಿ ದೇವರ ಜ್ಞಾನದ ಆತ್ಮವು ಕ್ರಿಸ್ತನ ರೂಪದಲ್ಲಿ ನಿಮ್ಮೊಳಗೆ ಉಂಟು ಕ್ರಿಸ್ತನು ದೇವರ ಜ್ಞಾನವಾಗಿದ್ದಾನೆ ಹಾಗಾಗಿ ನೀವು ದೇವರ ಜ್ಞಾನ ಹೊಂದಿದ್ದೀರಿ ಆಗಿರುವುದರಿಂದ ನಿಮಗೆ ಯಾವುದೂ ತುಂಬಾ ಕಷ್ಟವಲ್ಲ ಯಾವುದೂ ಸಹ ಕಠಿಣವಲ್ಲ ಯಾವುದೂ ಸಹ ನಿಮಗೆ ಸಮಸ್ಯೆಯಾಗಲಾರದು. ಏಕೆಂದರೆ ನಿಮಗಿರುವ ಮನಸ್ಸು ಜ್ಞಾನದ ಮನಸ್ಸಾಗಿದೆ ನಿಮ್ಮ ಮುಂದೆ ಯಾವ ಸಮಸ್ಯೆ ಬಂದರೂ ನೀವು ಅದನ್ನು ಬಗೆಹರಿಸಲು ಶಕ್ತರಾಗಿದ್ದೀರಿ
1 ಅರಸು 4:29-30ರಲ್ಲಿ ಹೀಗೆ ಹೇಳಲ್ಪಟ್ಟಿದೆ.
"ದೇವರು ಸೊಲೊಮೋನನಿಗೆ ಸಮುದ್ರತೀರದ ಉಸುಬಿನಷ್ಟು ಅಪರಿವಿುತವಾದ ಜ್ಞಾನವಿವೇಕಗಳನ್ನೂ ಮನೋವಿಶಾಲತೆಯನ್ನೂ ಅನುಗ್ರಹಿಸಿದನು. [30] ಅವನ ಜ್ಞಾನವು ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲೂ ಐಗುಪ್ತ್ಯರ ಜ್ಞಾನಕ್ಕಿಂತಲೂ ವಿುಗಿಲಾದದ್ದು." ಎಂದು
ಎಲ್ಲಾ ಮೂಡಣ ದೇಶದವರಿಗಿಂತಲೂ ಐಗುಪ್ತದೇಶದವರಿಗಿಂತಲೂ ಮಿಗಿಲಾದ ಜ್ಞಾನವು ಒಬ್ಬ ವ್ಯಕ್ತಿಯಲ್ಲಿ ಇತ್ತು ಎಂಬುದನ್ನು ನಾವಿಲ್ಲಿ ನೋಡಬಹುದು. ಇದೇ ದೇವರ ಜ್ಞಾನ ಮಾಡುವಂತಹ ಕಾರ್ಯವಾಗಿದೆ.ಈ ಜ್ಞಾನವು ಸೋಲೋಮನನ ಮೇಲೆ ಹಾಗೆಯೇ ಉದುರಿ ಬೀಳಲಿಲ್ಲ. ಬದಲಾಗಿ ಸೋಲೋಮನನು ತನ್ನ ಕನಸಿನಲ್ಲಿ ಪ್ರಾರ್ಥಿಸುವಾಗ ಅದನ್ನು ಹೃತ್ಪೂರ್ವಕವಾಗಿ ಬಯಸಿದನು. (1ಅರಸು 3:5-12). ಆದುದರಿಂದ ದೇವರ ಜ್ಞಾನದ ಸಂಪರ್ಕಕ್ಕೆ ಬರಲು ನೀವು ಅದಕ್ಕಾಗಿ ದೇವರಲ್ಲಿ ಪ್ರಾರ್ಥಿಸಬೇಕು- ಬೇಡಿಕೊಳ್ಳಬೇಕು.
ಸೋಲೋಮನನ ಜೀವಿತದಿಂದ ಎರಡನೆಯದಾಗಿ ನಾವು ಕಲಿಯಬೇಕಾದದ್ದು ಅವನು ಈ ಜ್ಞಾನವನ್ನು ತನ್ನ ಸ್ವಾರ್ಥದು ದ್ದೇಶಕ್ಕಾಗಿ ಕೇಳಿಕೊಳ್ಳಲಿಲ್ಲ. ಬದಲಾಗಿ ದೇವರ ಜನರನ್ನು ಮುನ್ನಡೆಸುವುದಕ್ಕಾಗಿ ಅವನಿಗೆ ಈ ಜ್ಞಾನವೂ ಬೇಕಿತ್ತು. ದೇವರ ರಾಜ್ಯ ಆತನ ಜನರ ಕುರಿತಾದ ಆಸಕ್ತಿಗಳು ಇವೇ ಸೋಲೋಮನನಲ್ಲಿ ಪ್ರೇರಕ ಶಕ್ತಿಯಾಗಿ ಸೋಲೋ ಮನನು ದೇವರ ಜ್ಞಾನದ ಆತ್ಮವನ್ನು ಬೇಡಿಕೊಳ್ಳುವಂತೆ ಕಾರ್ಯ ಮಾಡಿತು.
ನಿಮ್ಮ ಜೀವಿತದಲ್ಲಿ ಜ್ಞಾನದ ಆತ್ಮವನ್ನು ದೇವರು ಬಿಡುಗಡೆ ಮಾಡಬೇಕೆಂದು ನೀವು ಯಾತಾಕ್ಕಾಗಿ ಬಯಸುತ್ತಿದ್ದೀರಾ?
ಇದು ನಿಮ್ಮ ಸ್ವಾರ್ಥದಾಸೆಗಾಗಿ ಇರಲೇ ಕೂಡದು. ನೀವು ದೇವರ ರಾಜ್ಯಕ್ಕೋಸ್ಕರ ಇದನ್ನು ಬೇಡುವಾಗ ಅದು ನಿಮಗಾಗಿ ಬಿಡುಗಡೆಯಾಗುತ್ತದೆ. ನೀವು ಇದನ್ನು ಭೂಮಿಯ ಮೇಲೆ ದೇವರ ರಾಜ್ಯವನ್ನೂ -ನೀತಿಯನ್ನೂ ಕಟ್ಟುವುದಕ್ಕಾಗಿಯೂ ವಿಸ್ತರಿಸುವುದಕ್ಕಾಗಿಯೂ ಬೆಳೆಸುವುದಕ್ಕಾಗಿಯೂ ತವಕ ಪಡುವ ಹೃದಯವುಳ್ಳವರಾದಾಗ ಅದು ನಿಮಗಾಗಿ ಬಿಡುಗಡೆಗೊಳ್ಳುತ್ತದೆ. ಬಡತನಕ್ಕೆ ಮದ್ದು ದೇವರ ಜ್ಞಾನದ ಆತ್ಮವಾಗಿದೆ. ಏಕೆಂದರೆ ಜ್ಞಾನವು ಸಂಪತ್ತನ್ನು ಉಂಟುಮಾಡುತ್ತದೆ(ಜ್ಞಾನೋಕ್ತಿ 3:16)
ಜ್ಞಾನದಲ್ಲಿ ಮೂರು ವಿಧಗಳಿವೆ.
1). ನಮ್ಮಲ್ಲಿ ದೇವರ ಜ್ಞಾನ ಎಂಬುದಿದೆ ಅದೇ ಕಟ್ಟ ಕಡೆಯದ್ದು. (ಯಾಕೋಬ 1:5)
2). ನಮಗೆ ಮನುಷ್ಯ ಜ್ಞಾನವಿದೆ. ಇದು ಸರಿ ಯಾವುದು ತಪ್ಪು ಯಾವುದು ಎಂದು ಹೇಳುವ ಮನಸ್ಸಾಕ್ಷಿ ಅಥವಾ ಮಾನಸಿಕ ಜ್ಞಾನದ ಮೇಲೆ ಆಧಾರಗೊಂಡಿದೆ (1ಕೊರಿಯಂತೆ 3: 18- 20).
3).ದೆವ್ವಗಳು ಸಹ ಅಲ್ಪಮಟ್ಟಿಗೆ ಜ್ಞಾನವನ್ನು ಪ್ರದರ್ಶಿಸುತ್ತವೆ (ಯಾಕೋಬ 3:15)
ದೇವರ ಬಹುರೂಪವುಳ್ಳ ಜ್ಞಾನವು ಯೇಸು ನಾಮದಲ್ಲಿ ನಿಮ್ಮ ಜೀವಿತದ ಮೇಲೆ ಬಿಡುಗಡೆಯಾಗುವುದರಿಂದ ನೀವು ಇಂದಿನಿಂದ ನಿಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲಿಯೂ ದೇವರ ಜ್ಞಾನದಲ್ಲಿ ನಡೆಸಲ್ಪಡುತ್ತೀರಿ ಎಂದು ನಾನು ಬಲವಾಗಿ ನಂಬುತ್ತೇನೆ.
Bible Reading Plan : Galatians 5 - Philippians 1
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ಕರ್ತನೆ ಯೇಸುಕ್ರಿಸ್ತನ ನಾಮದಲ್ಲಿ ನನ್ನ ಜೀವಿತದ ಮೇಲೆ ನಿನ್ನ ಜ್ಞಾನದ ಆತ್ಮವು ಇಂದೇ ಬಿಡುಗಡೆಯಾಗಲಿ. (ಯಾಕೋಬ 1:5)
2. ನಾನು ಯೇಸುನಾಮದಲ್ಲಿ ನನ್ನ ಜೀವಿತದ ಎಲ್ಲಾ ಕ್ಷೇತ್ರಗಳಲ್ಲಿಯೂ ದೇವರ ಬಹುಮುಕವುಳ್ಳ ಜ್ಞಾನದೊಂದಿಗೆ ಸಂಪರ್ಕ ಹೊಂದಿ ಬಲವಾಗಿ ಮುನ್ನುಗ್ಗುತ್ತೇನೆ. (ಎಫಸ್ಸೆ 3:10)
3.ನಾನು ಕ್ರಿಸ್ತನ ಮನಸ್ಸನ್ನು ಹೊಂದಿರುವುದರಿಂದ ಯೇಸು ನಾಮದಲ್ಲಿ ದೇವರ ಜ್ಞಾನದೊಂದಿಗೆ ಕಾರ್ಯ ಮಾಡಲು ಆರಂಭಿಸುತ್ತೇನೆ. (1ಕೊರಿಯಂತೆ 2:16)
4. ನಾನು ಅನುಭವಿಸುತ್ತಿರುವ ಪ್ರತಿಯೊಂದು ಕಷ್ಟಗಳಿಗೂ ಸಮಸ್ಯೆಗಳಿಗೂ ಪರಿಹಾರ ನೀಡುವ ಜ್ಞಾನದ ಆತ್ಮವನ್ನು ಯೇಸು ನಾಮದಲ್ಲಿ ಹೊಂದಿಕೊಳ್ಳುತ್ತೇನೆ. (ಜ್ಞಾನೋಕ್ತಿ 2:6)
5. ತಂದೆಯೇ, ನನ್ನೆಲ್ಲ ಸಮಸ್ಯೆಗಳಿಂದ ಅದ್ಬುತವಾದ ಬಿಡುಗಡೆ ಹೊಂದುವಂಥ ಆಂತರಿಕ ದೃಷ್ಟಿಯನ್ನು ಅದ್ಬುತವಾದ ಪರಿಹಾರವನ್ನು ಮತ್ತು ಸೃಜನಶೀಲವಾದ ಜ್ಞಾನವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು. (ಜ್ಞಾನೋಕ್ತಿ 8:12)
6. ಕರ್ತನೇ, ಜನರು ಆಶ್ಚರ್ಯ ಪಡುವಂತ ಉತ್ಪನ್ನವನ್ನು ಮತ್ತು ಸೇವೆಯನ್ನು ಹುಟ್ಟು ಹಾಕುವ ಆಂತರಿಕ ದೃಷ್ಟಿಯ ಆಶೀರ್ವಾದಗಳನ್ನು ನಿನ್ನ ಪರಲೋಕದ ದ್ವಾರಗಳನ್ನು ತೆರೆದು ಸ್ಥಳ ಹಿಡಿಸಲಾರದಷ್ಟು ವರಗಳನ್ನು ಯೇಸು ನಾಮದಲ್ಲಿ ನನ್ನ ಮೇಲೆ ಸುರಿಸು. (ಮಲಾಕಿ 3:10)
7. ನನ್ನ ಜೀವಿತಕ್ಕೆ ವಿರೋಧವಾಗಿ ದುಷ್ಟರಿಂದ ಉಂಟಾಗಿರುವ ಎಲ್ಲಾ ಗೋಜಲುಗಳಿಂದಲೂ,ಎಲ್ಲಾ ಜಟಿಲತೆಗಳಿಂದಲೂ ಮತ್ತು ದೋಷಾರೋಪಣೆಗಳಿಂದಲೂ ಹೊರಬರುವ ದೇವರ ಜ್ಞಾನವನ್ನು ಯೇಸು ನಾಮದಲ್ಲಿ ಹೊಂದಿದ್ದೇನೆ. (ಯಾಕೋಬ 3:17)
8. ಕರ್ತನೇ,ನನಗಿಂತಲೂ ಶ್ರೇಷ್ಠರಾದ, ನನಗೆ ಸಮಾನರಾದ ಮತ್ತು ನನಗಿಂತ ಕಡಿಮೆಯಾಗಿರುವ ವ್ಯಕ್ತಿಗಳೊಂದಿಗೆ ಹೇಗೆ ವ್ಯವರಿಸಬೇಕೆಂಬ ಜ್ಞಾನವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು. (ಲೂಕ 2:52).
9. ಕರ್ತನೇ ನೀನು ನನಗೆ ಅನುಗ್ರಹಿಸಿರುವಂತಹ ಅವಕಾಶಗಳನ್ನು ಸಂಪನ್ಮೂಲಗಳನ್ನು ಸಮಯವನ್ನು ಮತ್ತು ತಲಾಂತುಗಳನ್ನು ಗರಿಷ್ಠ ಮಟ್ಟದಲ್ಲಿ ಉಪಯೋಗಿಸಿಕೊಳ್ಳುವಂತಹ ಜ್ಞಾನವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸಿರಿ. (ಎಫಸ್ಸೆ 5:10)
10. ದೇವರ ರಾಜ್ಯದ ಅಭಿವೃದ್ಧಿಗೆ ಇರುವ ತೊಡಕುಗಳನ್ನು ನಿವಾರಿಸುವಂತಹ ಪರಿಹಾರ ನೀಡುವಂತಹ ದೇವರ ಜ್ಞಾನವನ್ನು ಯೇಸು ನಾಮದಲ್ಲಿ ನಾನು ಹೊಂದಿದ್ದೇನೆ. (ಜ್ಞಾನೋಕ್ತಿ 4:7)
Join our WhatsApp Channel
Most Read
● ನಿಮ್ಮ ಭೂಮಿಯನ್ನು ಉತ್ತು ಹದಮಾಡಿರಿ● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
● ದಿನ 04: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕರ್ತನ ಆಲೋಚನೆಯನ್ನು ಕೇಳಬೇಕಾದ ಅಗತ್ಯತೆ
● ಸರಿಯಾದವುಗಳ ಮೇಲೆ ಲಕ್ಷ್ಯವಿಡಿರಿ
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವುದು
ಅನಿಸಿಕೆಗಳು