ಅನುದಿನದ ಮನ್ನಾ
ದಿನ 04: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Monday, 25th of November 2024
3
1
124
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಒಳ್ಳೆಯ ಸಂಗತಿಗಳ ಮರುಸ್ಥಾಪನೆ
“ಮತ್ತು ಯೋಬನು ತನ್ನ ಸ್ನೇಹಿತರಿಗಾಗಿ ಪ್ರಾರ್ಥಿಸಿದಾಗ ಯೆಹೋವನು ಅವನ ನಷ್ಟವನ್ನು ಪುನಃಸ್ಥಾಪಿಸಿದನು. ಯೆಹೋವನು ಯೋಬನನ್ನು ಮೊದಲಿಗಿಂತಲೂ ಎರಡು ಪಟ್ಟು ಆಶೀರ್ವಧಿಸಿದನು .” (ಯೋಬ 42:10)
ಮರುಸ್ಥಾಪನೆ, ಭೌಗೋಳಿಕವಾದ ಸಾಮಾನ್ಯ ಭಾಷೆಯಲ್ಲಿ, ಹಳೆಯದಾದ, ಸವೆದಿರುವ, ಶಿಥಿಲವಾದ ಅಥವಾ ಮುರಿದುಹೋದ ಯಾವುದನ್ನಾದರೂ ಹಿಂದೆ ಇದ್ದ ರೀತಿಯಲ್ಲಿ ಹಿಂತಿರುಗಿಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಆದಾಗ್ಯೂ, ದೇವರ ವಾಕ್ಯದ ಪ್ರಕಾರ ಪುನಃಸ್ಥಾಪನೆಯು ಲೌಕಿಕ ಪುನಃಸ್ಥಾಪನೆಗಿಂತ ವಿಭಿನ್ನವಾಗಿದೆ. ಸತ್ಯವೇದದ ಪ್ರಕಾರ, "ಪುನಃಸ್ಥಾಪನೆ" ಎಂಬ ಪದವು ಯಾವುದನ್ನಾದರೂ ಅದರ ಹಿಂದಿನ ಸ್ಥಿತಿಗೆ ಹಿಂದಿರುಗಿಸುವ ಆದರೆ ಅದು ಮೊದಲಿಗಿಂತಲೂ ಇನ್ನೂ ಹೆಚ್ಚು ಉತ್ತಮವಾಗಿರುವ ರೀತಿಯಲ್ಲಿ ಸುಧಾರಿಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ.
ಯೋಬನ ಕಥೆಯಲ್ಲಿ ಇದು ಇನ್ನೂ ಹೆಚ್ಚು ಸ್ಪಷ್ಟವಾಗಿದೆ "ಯೆಹೋವನು ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಹೆಚ್ಚಾಗಿ ಆಶೀರ್ವದಿಸಿದನು." ಎಂದು ಯೋಬ 42:12 ಹೇಳುತ್ತದೆ
ಅದು ನಿಮ್ಮ ಆರೋಗ್ಯವಾಗಿರಲಿ , ನಿಮ್ಮ ಆರ್ಥಿಕ ಭದ್ರತೆಯಾಗಿರಲಿ , ನಿಮ್ಮ ಮನಸ್ಸಿನ ಶಾಂತಿ ಅಥವಾ ನಿಮಗೆ ಪ್ರಿಯವಾದ ಯಾವುದಾದರೂ ಆಗಿರಲಿ ಇಂದು ವೈರಿಯು ಏನೇ ಕದ್ದಿದ್ದರೂ-ದೇವರು ಅದನ್ನು ಪುನಃಸ್ಥಾಪಿಸುವೆನು ಎಂಬ ಭರವಸೆ ನೀಡುತ್ತಾನೆ. ಶತ್ರು ಏನೇ ಹೇಳಿದರೂ, ಕರ್ತನಾದ ಯೇಸುವಿನ ಮಾತೇ ಅಂತಿಮ. ಏಕೆಂದರೆ ನಮ್ಮಲ್ಲಿ ದೇವರ ಚಿತ್ತವೇ ಪುನಃಸ್ಥಾಪಿಸಲಾಗುವಂತದ್ದು.
ದೇವರು ನಿಶ್ಚಯ ಪಡಿಸಿರುವ ಆತ್ಮೀಕ ತತ್ವಗಳಿಗೆ ಅನುಗುಣವಾಗಿ, ಕಳ್ಳನು ಕದಿಯುವ, ಕೊಲ್ಲುವ ಮತ್ತು ನಾಶಮಾಡುವ ಉದ್ದೇಶದಿಂದಲೇ ಬರುತ್ತಾನೆ. ಆ ಕಳ್ಳನು ಸಿಕ್ಕಿಬಿದ್ದಾಗ ಅವನು ನಮ್ಮಿಂದ ತೆಗೆದುಕೊಂಡಿದ್ದನ್ನು ಏಳು ಪಟ್ಟು ಹಿಂದಿರುಗಿಸಬೇಕಾಗುತ್ತದೆ. (ಜ್ಞಾನೋಕ್ತಿ 6:31 ಓದಿ). ದೇವರು ನಮ್ಮ ಜೀವನದಲ್ಲಿ ಕಂಠ ಪೂರ್ತಿ ತುಂಬಿರುವ ಹಂತಕ್ಕೆ ಸಂಪೂರ್ಣವಾಗಿ ಪುನಃಸ್ಥಾಪನೆಯನ್ನು ತರುತ್ತಾನೆ. ಆತನು ಎಲ್ಲವನ್ನೂ ಮೊದಲಿಗಿಂತ ಉತ್ತಮವಾಗಿ ಮಾಡುತ್ತಾನೆ.
ಸೈತಾನನು ವಿಶ್ವಾಸಿಗಳಿಂದ ಕದ್ದುಕೊಳ್ಳಬಹುದೇ?
ಹೌದು. ಸೈತಾನನು ಅನುಮತಿಯೊಂದಿಗೆ ಕೆಲಸ ಮಾಡುತ್ತಾನೆ ಅನುಮತಿಯಿಲ್ಲದೇ, ಅವನು ವಿಶ್ವಾಸಿಗಳಿಂದ ಏನನ್ನೂ ಕದಿಯಲು ಸಾಧ್ಯವಿಲ್ಲ (ಎಫೆಸ 4:27).
ಸೈತಾನನು ದೇವಜನರಿಂದ ಕದಿಯುವ ಕೆಲವು ವಿಧಾನಗಳು ಇಲ್ಲಿವೆ.
1. ದೈವಿಕ ಸೂಚನೆಗೆ ಅವಿಧೇಯತೆ:
ಸೈತಾನನು ದೇವರ ಸೂಚನೆಗಳಿಗೆ ಅವಿಧೇಯನಾಗುವಂತೆ ಮಾಡುವ ಮೂಲಕ ಭೂಮಿಯ ಮೇಲಿನ ಆದಾಮನ ಅಧಿಕಾರವನ್ನು ಕದ್ದನು. ಯಾವುದೇ ಸಮಯದಲ್ಲಿ ನೀವು ದೇವರಿಗೆ ಅವಿಧೇಯರಾದರೆ ನೀವು ಸೈತಾನನಿಗೆ ನಿಮ್ಮಿಂದ ಕದಿಯಲು ಅವಕಾಶ ಕೊಡುವವರಾಗುತ್ತೀರಿ.
2. ತಪ್ಪಾದ ಆಲೋಚನೆಗಳು.
ನಿಮ್ಮ ಆಲೋಚನೆಗಳು ದೇವರ ವಾಕ್ಯಕ್ಕೆ ಅನುಗುಣವಾಗಿಲ್ಲದಿದ್ದರೆ ಸೈತಾನನು ಕದಿಯಲು, ಕೊಲ್ಲಲು ಮತ್ತು ನಿಮ್ಮನ್ನು ನಾಶಮಾಡಲು ಪ್ರಯತ್ನಿಸುತ್ತಾನೆ. ದೇವರ ವಾಕ್ಯಕ್ಕೆ ವಿರುದ್ಧವಾಗಿರುವ ಆ ಕಲ್ಪನೆಗಳು, ಆಲೋಚನೆಗಳು ಮತ್ತು ಕುತರ್ಕ ಜ್ಞಾನವನ್ನೂ ನೀವು ತ್ಯಜಿಸಬೇಕು. (2 ಕೊರಿಂಥ 10:5). ಜನರು ತಪ್ಪಾದ ಆಲೋಚನೆಗಳನ್ನು ಮಾಡುವಾಗ , ಅದು ಅವರ ಬಾಯಿಂದ ತಪ್ಪಾದ ಅರಿಕೆಗಳು ಮಾಡುವಂತೆ ಮಾಡಿ ತತ್ಪರಿಣಾಮ ಅವರು ಮಾಡುವ ಕಾರ್ಯಗಳ ಮೇಲೆ ಅದು ಪರಿಣಾಮ ಬೀರುತ್ತದೆ.
3. ತಪ್ಪಾದ ಬಾಯ ಅರಿಕೆಗಳು:
ಸೈತಾನನು ದೇವರನ್ನು ಶಪಿಸುವಂತೆಯೂ ಯೋಬನು ತಪ್ಪಾದ ವಿಷಯಗಳನ್ನು ಅರಿಕೆ ಮಾಡುವಂತೆಯೂ ಪ್ರಯತ್ನಿಸಿದನು, ಆದರೆ ಯೋಬನು ಅದನ್ನು ನಿರಾಕರಿಸಿದನು. ಅಸಡ್ಡೆಯಾದ ಮಾತುಗಳು ಮತ್ತು ನಕಾರಾತ್ಮಕ ಅರಿಕೆಗಳು ನಿಮ್ಮಿಂದ ಕದ್ದುಕೊಳ್ಳುವಂತೆ ಸೈತಾನನಿಗೆ ಅನುಮತಿಯನ್ನು ನೀಡುತ್ತದೆ.
"ನೀನು ನುಡಿದ ನಿನ್ನ ಬಾಯಿ ಮಾತುಗಳಿಂದಲೇ ಸಿಕ್ಕಿಕೊಂಡಿರುವೆ. ನಿನ್ನ ಬಾಯಿ ಮಾತುಗಳೇ ನಿನ್ನನ್ನು ಸೆರೆಹಿಡಿದಿದೆ" (ಜ್ಞಾನೋಕ್ತಿ 6:2)
4. ತಪ್ಪಾದ ಸಹವಾಸ.
ದೇವರು ನಿಮ್ಮನ್ನು ಆಶೀರ್ವದಿಸಲು ಬಯಸಿದಾಗ, ಆತನು ಒಬ್ಬ ಮನುಷ್ಯನನ್ನು ನಿಮ್ಮ ಬಳಿಗೆ ಕಳುಹಿಸುತ್ತಾನೆ. ಸೈತಾನನು ಸಹ ನಿಮ್ಮನ್ನು ನಾಶಮಾಡಲು ಬಯಸಿದಾಗ, ಅವನೂ ಕೂಡ ಒಬ್ಬ ಮನುಷ್ಯನನ್ನು ಕಳುಹಿಸುತ್ತಾನೆ. ನೀವು ಜೊತೆಯಲ್ಲಿರಿಸಿಕೊಳ್ಳುವ ನಿಮ್ಮ ಸ್ನೇಹಿತರು ಮತ್ತು ನೀವು ಸೇರಿರುವ ವಲಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಅನೇಕ ಜನರು ತಪ್ಪು ಸಹವಾಸದಿಂದ ಉತ್ತಮವಾದ ಆಶೀರ್ವಾದಗಳನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ "ಮೋಸಹೋಗಬೇಡಿ ಮತ್ತು ದಾರಿ ತಪ್ಪಬೇಡಿ! ದುಸ್ಸಹವಾಸವೂ (ಕಮ್ಯುನಿಯನ್, ಸಂಘಗಳು) ಸನ್ನಡತೆ ಮತ್ತು ನೈತಿಕತೆ ಮತ್ತು ಚಾರಿತ್ರ್ಯವನ್ನು ಭ್ರಷ್ಟಗೊಳಿಸುತ್ತವೆ ಮತ್ತು ಕೆಡಿಸುತ್ತವೆ. (1 ಕೊರಿಂಥ 15:33)
ನೀವು ಅನುಭವಿಸಿದ ಹಿನ್ನಡೆಗಳು, ನಷ್ಟಗಳು, ಸಂಕಟಗಳು, ತಪ್ಪುಗಳು ಮತ್ತು ಹಾನಿಗಳ ಹೊರತಾಗಿಯೂ ಪುನಃಸ್ಥಾಪನೆ ಸಾಧ್ಯ.
ಸೈತಾನನು ಅನೇಕ ವಸ್ತುಗಳನ್ನು ತೆಗೆದುಕೊಂಡು ಹೋಗಿರಬಹುದು, ಆದರೆ ಕರ್ತನು ಎಲ್ಲವನ್ನೂ ಪುನಃಸ್ಥಾಪಿಸುವೆವೆಂಬ ಭರವಸೆ ನೀಡಿದ್ದಾನೆ ಮತ್ತು ಆತನು ಎಲ್ಲವನ್ನೂ ಪುನಃಸ್ಥಾಪಿಸಲು ಸಮರ್ಥನಾಗಿದ್ದಾನೆ.
ಪುನಃಸ್ಥಾಪನೆಯ ಪ್ರಮುಖ ಕ್ಷೇತ್ರಗಳು.
- ದೇವರೊಂದಿಗಿನ ನಮ್ಮ ಐಕ್ಯತೆಯ ಪುನಃಸ್ಥಾಪನೆ:
"ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ನೀನು ತಣ್ಣಗೂ ಇಲ್ಲ, ಬಿಸಿಯೂ ಇಲ್ಲ, ನೀನು ತಣ್ಣಗಾಗಲಿ, ಬಿಸಿಯಾಗಲಿ ಇದ್ದಿದ್ದರೆ ಚೆನ್ನಾಗಿತ್ತು. [16] ನೀನು ಬಿಸಿಯಾಗಲೀ, ತಣ್ಣಗಾಗಲೀ ಇಲ್ಲದೆ ಉಗುರುಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರಿ ಬಿಡುವೆನು."(ಪ್ರಕಟನೆ 3:15-16)
“ನಾನೇ ದ್ರಾಕ್ಷಿಯ ಬಳ್ಳಿ, ನೀವು ಕವಲುಬಳ್ಳಿಗಳು. ನೀವು ನನ್ನಲ್ಲಿ ಮತ್ತು ನಾನು ನಿಮ್ಮಲ್ಲಿ ನೆಲೆಗೊಂಡಿದ್ದರೆ ನೀವು ಬಹಳ ಫಲಕೊಡುವಿರಿ. ಏಕೆಂದರೆ ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ.(ಯೋಹಾನ 15:5)
- ನಮ್ಮ ಮಹಿಮೆ ಮತ್ತು ಒಳ್ಳೆಯ ಸಂಗತಿಗಳ ಮರುಸ್ಥಾಪನೆ
ಏಸಾವನು ತನ್ನ ಜನ್ಮಸಿದ್ಧ ಹಕ್ಕನ್ನು ಕಳೆದುಕೊಂಡನು ಮತ್ತು ಅದನ್ನು ಅವನಿಗೆ ಪುನಃಸ್ಥಾಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಹಾರ, ಲೈಂಗಿಕ ಸಂತೃಪ್ತಿ ಮತ್ತು ತಾತ್ಕಾಲಿಕ ಲಾಭದ ಬಯಕೆಗಳಿಂದ ಅನೇಕ ಜನರು ಇನ್ನೂ ತಮ್ಮ ಮಹಿಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಆಗ ." ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ, ಅಲಸಂದಿ ಗುಗ್ಗರಿಯನ್ನೂ ಕೊಟ್ಟನು. ಅವನು ತಿಂದು, ಕುಡಿದು ಎದ್ದು ಹೋದನು. ಹೀಗೆ ಏಸಾವನು ತನ್ನ ಜೇಷ್ಠ ಪುತ್ರನ ಹಕ್ಕನ್ನು ತಾತ್ಸಾರದಿಂದ ಕಂಡನು".(ಆದಿಕಾಂಡ 25:34)
" ತರುವಾಯ ಅವನು ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಬಯಸಿ, ಕಣ್ಣೀರನ್ನು ಸುರಿಸುತ್ತಾ ಬೇಡಿಕೊಂಡರೂ ಪಶ್ಚಾತ್ತಾಪಕ್ಕೆ ಮಾರ್ಗವಿಲ್ಲದೆ ನಿರಾಕರಿಸಲಾದವನೆಂದು ನೀವು ಬಲ್ಲಿರಿ." (ಇಬ್ರಿಯ 12:17)
- ಕಳೆದುಕೊಂಡ ವರ್ಷಗಳು ಮತ್ತು ಅವಕಾಶಗಳ ಮರುಸ್ಥಾಪನೆ
“ನಾನು ನಿಮ್ಮಲ್ಲಿ ಕಳುಹಿಸಿದಂಥ
ನನ್ನ ದೊಡ್ಡ ಸೈನ್ಯವಾದ ಮಿಡತೆಗಳು,
ಗುಂಪು ಮಿಡತೆಗಳು,
ಕಂಬಳಿ ಮಿಡತೆಗಳು,
ಚೂರಿ ಮಿಡತೆಗಳು
ತಿಂದು ಬಿಟ್ಟ ವರ್ಷಗಳನ್ನು ನಿಮಗೆ ಪುನಃಸ್ಥಾಪಿಸಿ ಕೊಡುವೆನು.
(ಯೋವೇಲ 2:25)
ನೀವು ಕಳೆದುಕೊಂಡ ವರ್ಷಗಳನ್ನು ದೇವರು ಪುನಃಸ್ಥಾಪಿಸಿ ಕೊಡುವಾಗ, ಆ ವರ್ಷಗಳಲ್ಲಿ ನೀವು ಗಳಿಸಿದ ಮತ್ತು ಬಿಟ್ಟುಕೊಟ್ಟ ಲಾಭವನ್ನು ಹೆಚ್ಚುವರಿಯಾಗಿ ಸೇರಿಸಿ ನಿಮಗೆ ಕೊಡಲಾಗುತ್ತದೆ.
ನಿಮ್ಮ ಜ್ಞಾಪಕಶಕ್ತಿ ಕೂಡ ಚುರುಕಾಗುತ್ತದೆ.
"ಮೋಶೆಯು ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ. ಅವನ ಬಲ ಕುಂದಿಹೋಗಿರಲಿಲ್ಲ. (ಧರ್ಮೋಪದೇಶಕಾಂಡ 34:7).
ಅದು ನಿಮ್ಮ ಸಾಕ್ಷಿಯೂ ಆಗಿರುತ್ತದೆ!
- ಸಂತೋಷದ ಪುನಃಸ್ಥಾಪನೆ
ಯೋಬನಿಗೆ ಸಂತೋಷವನ್ನು ಕೊಡುತ್ತಿದ್ದ ಎಲ್ಲಾ ವಸ್ತುಗಳು ಅವನಿಂದ ಕಿತ್ತು ಕೊಳ್ಳಲ್ಪಟ್ಟಿತ್ತು , ಆದರೆ ದೇವರು ಅವನಿಗೆ ಎಲ್ಲವನ್ನೂ ಎರಡರಷ್ಟು ಪುನಃಸ್ಥಾಪಿಸಿ ಕೊಟ್ಟನು.
"ನಿನ್ನ ರಕ್ಷಣಾನಂದವನ್ನು ನಾನು ಪುನಃ ಅನುಭವಿಸುವಂತೆ ಮಾಡು; ನನ್ನಲ್ಲಿ ಸಿದ್ಧಮನಸ್ಸನ್ನು ಹುಟ್ಟಿಸಿ ನನಗೆ ಆಧಾರನಾಗು (ಕೀರ್ತನೆ 51:12)
ಸತ್ಯವೇದ ಓದುವ ಯೋಜನೆ : ಮತ್ತಾಯ 19-24
ಪ್ರಾರ್ಥನೆಗಳು
1. ತಂದೆಯೇ, ನನ್ನ ಜೀವನದಲ್ಲಿ ಎಲ್ಲಾ ಒಳ್ಳೆಯ ಸಂಗತಿಗಳು ಯೇಸುವಿನ ಹೆಸರಿನಲ್ಲಿ ಪುನಃಸ್ಥಾಪನೆಯಾಗಲಿ.
2. ನನ್ನ ಜೀವನದ ವಿರುದ್ಧ ಕೆಲಸ ಮಾಡುವ ಆತ್ಮಿಕ ದರೋಡೆಕೋರರು ಮತ್ತು ವಿನಾಶಕರ ಕಾರ್ಯಾಚರಣೆಗಳನ್ನು ಯೇಸುವಿನ ಹೆಸರಿನಲ್ಲಿ ನಾನು ನಿಷ್ಕ್ರಿಯೆಗೊಳಿಸುತ್ತೇನೆ.
3. ನನ್ನ ಜೀವನದಲ್ಲಿ ಒಳ್ಳೆಯ ವಿಷಯಗಳನ್ನು ನಾಶಮಾಡುವ ಸೈತಾನನ ದೂತರ ಚಟುವಟಿಕೆಗಳನ್ನು ನಾನು ಯೇಸುವಿನ ಹೆಸರಿನಲ್ಲಿ ನಿಷ್ಕ್ರಿಯೆಗೊಳಿಸುತ್ತೇನೆ.
4. ಓ ಕರ್ತನೇ, ದಯವಿಟ್ಟು ನಾನು ಕಳೆದುಕೊಂಡ ಎಲ್ಲಾ ಆಶೀರ್ವಾದಗಳನ್ನು, ಉದ್ದೇಶ ಸಹಾಯಕರುಗಳನ್ನು ಮತ್ತು ಚಾರಿತ್ರ್ಯವನ್ನೂ ಯೇಸುವಿನ ಹೆಸರಿನಲ್ಲಿ ನನ್ನಲ್ಲಿ ಪುನಃ ಸ್ಥಾಪಿಸಿ.
5. ತಂದೆಯೇ, ನನ್ನ ದೇಹ ಮತ್ತು ಜೀವನದಲ್ಲಿ ಹಾನಿಗೊಳಗಾದ ಎಲ್ಲವನ್ನೂ ಯೇಸುವಿನ ಹೆಸರಿನಲ್ಲಿ ಸರಿಪಡಿಸಿ.
6. ತಂದೆಯೇ, ಕಳೆದುಹೋದ ಎಲ್ಲಾ ಆಶೀರ್ವಾದಗಳನ್ನು ಹೊಂದಿ ಕೊಳ್ಳಲು , ವಶಪಡಿಸಿಕೊಳ್ಳಲು ಮತ್ತು ಚೈತನ್ಯ ಪಡಿಸಲು ಯೇಸುವಿನ ಹೆಸರಿನಲ್ಲಿ ನನಗೆ ಬಲ ನೀಡಿ.
7. ತಂದೆಯೇ ಪ್ರತಿಯೊಂದು ಮುಚ್ಚಿದ ಆಶೀರ್ವಾದದ ಬಾಗಿಲನ್ನು ಯೇಸುವಿನ ಹೆಸರಿನಲ್ಲಿ ಪುನಃ ತೆರೆಯಿರಿ.
8. ತಂದೆಯೇ, ನನ್ನಿಂದ ಸಂಪರ್ಕ ಕಡಿತಗೊಂಡ ದೈವೋದ್ದೇಶ ಸಹಾಯಕರೊಂದಿಗೆ ಯೇಸುವಿನ ಹೆಸರಿನಲ್ಲಿ ನನ್ನನ್ನು ಮರುಸಂಪರ್ಕಿಸಿ.
9. ನನ್ನ ಜೀವನದಲ್ಲಿ ಸಂಪತ್ತು, ಆಶೀರ್ವಾದ ಮತ್ತು ಮಹಿಮೆಯು ಏಳು ಪಟ್ಟು ಪುನಃಸ್ಥಾಪನೆಯಾಗಲಿ ಎಂದು ಯೇಸುವಿನ ಹೆಸರಿನಲ್ಲಿ ನಾನು ಆದೇಶಿಸುತ್ತೇನೆ.
10. ತಂದೆಯೇ, ಯೇಸುವಿನ ಹೆಸರಿನಲ್ಲಿ ನಿಮ್ಮ ಸನ್ನಿಧಾನದಿಂದ ನನಗೆ ಸಹಾಯವನ್ನು ಕಳುಹಿಸಿ.
Join our WhatsApp Channel
Most Read
● ಅತ್ಯುನ್ನತವಾದ ರಹಸ್ಯ● ಬೀಜದಲ್ಲಿರುವ ಶಕ್ತಿ -2
● ಆತ್ಮೀಕ ಚಾರಣ
● ಸರ್ವಬೀಗದ ಕೈ
● ಕಳೆದು ಹೋದ ರಹಸ್ಯ
● ಐಕ್ಯತೆ ಮತ್ತು ವಿಧೇಯತೆಯ ಒಂದು ದರ್ಶನ
● ಕರ್ತನ ಸೇವೆ ಮಾಡುವುದು ಎಂದರೇನು II
ಅನಿಸಿಕೆಗಳು