ಅನುದಿನದ ಮನ್ನಾ
ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
Tuesday, 3rd of December 2024
4
1
52
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಇದು ನನ್ನ ಅದ್ಭುತವಾದ ಬಿಡುಗಡೆಯ ಕಾಲ
"11ಯೆಹೋವನ ಮಂಜೂಷವು ಗತ್ ಊರಿನ ಓಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇತ್ತು. ಆ ಕಾಲದಲ್ಲಿ ಯೆಹೋವನು ಅವನನ್ನೂ ಅವನ ಮನೆಯವರನ್ನೂ ಆಶೀರ್ವದಿಸಿದನು. 12 ಯೆಹೋವನು ಹೀಗೆ ತನ್ನ ಮಂಜೂಷದ ದೆಸೆಯಿಂದ ಓಬೇದೆದೋಮನನ್ನೂ ಅವನಿಗಿರುವದೆಲ್ಲವನ್ನೂ ಆಶೀರ್ವದಿಸಿದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸವದಿಂದ ದಾವೀದನಗರಕ್ಕೆ ತಂದನು."(2 ಸಮುವೇಲನು 6:11-12).
ಹಳೆ ಒಡಂಬಡಿಕೆಯ ಕಾಲದಲ್ಲಿ ದೇವರ ಮಂಜೂಷ ಎಂಬುದು ತನ್ನ ಜನರ ಮಧ್ಯದಲ್ಲಿದ್ದ ಆತನ ಉಪಸ್ಥಿತಿಯನ್ನು ಸೂಚಿಸುತ್ತದೆ.ಆದರೆ ಹೊಸ ಒಡಂಬಡಿಕೆಯ ಯುಗದಲ್ಲಿ ದೇವರ ಉಪಸ್ಥಿತಿ ಕೇವಲ ಮಂಜೂಷ ಎಲ್ಲಿರುತ್ತದೋ ಅಲ್ಲಿಗೆ ಮಾತ್ರ ಸೀಮಿತವಾಗದೆ ನಮ್ಮ ದೇಹವೆಂಬ ಪವಿತ್ರಾತ್ಮನ ಗರ್ಭಗುಡಿ ಇರುವೆಡೆಗೆಲ್ಲಾ ಅದು ಅನ್ವಯಿಸುತ್ತದೆ. (1ಕೊರಿಯಂತೆ6:19-20)
ಕೇವಲ ಮೂರು ತಿಂಗಳು ಓಬೇದೆದೋಮನ ಮನೆಯಲ್ಲಿದ್ದ ದೇವರ ಪ್ರಸನ್ನತೆಯು ಓಬೇದೆದೋಮನ ಜೀವಿತವನ್ನು ಬದಲಾಯಿಸಿದ್ದರೆ ನಿಮ್ಮೊಳಗೆ ಸದಾಕಾಲ ಇರುವ ದೇವರ ಪ್ರಸನ್ನತೆಯು ಇನ್ನು ಎಷ್ಟೋ ಅಸಮಾನ್ಯವಾದ ಬಿಡುಗಡೆಯನ್ನು ನಿಮಗೆ ನೀಡಬಹುದಲ್ಲವೇ. ಈ ಪ್ರಸನ್ನತೆಯು ಇನ್ನೂ ಬಲದಿಂದ ಕೂಡಿದ್ದು ನಿಮ್ಮ ಸುತ್ತಲಿನ ಪರಿಸ್ಥಿತಿಯನ್ನು ಬದಲಾಯಿಸಬಲ್ಲದು. ಹೊಸ ಒಡಂಬಡಿಕೆಯಲ್ಲಿ ಕ್ರಿಸ್ತನು ದೇವರ ಪ್ರಸನ್ನತೆಯನ್ನು ಪ್ರತಿನಿಧಿಸುತ್ತಾನೆ. ಆತನು ಯಾವಗೆಲ್ಲಾ ತನ್ನನ್ನು ಹೊಸ ಒಡಂಬಡಿಕೆಯಲ್ಲಿ ಪ್ರಕಟಿಸಿಕೊಂಡಿದ್ದಾನೋ ಅಲ್ಲೆಲ್ಲಾ ಅದ್ಭುತ ಬಿಡುಗಡೆಯಾದ ದಾಖಲೆಯನ್ನು ನಾವು ಕಾಣಬಹುದು.
ಅದ್ಭುತವಾದ ಬಿಡುಗಡೆಯನ್ನು ಆನಂದಿಸುವುದು ಎಂಬುದರ ಅರ್ಥವೇನು?
1.ಅದ್ಭುತವಾದ ಬಿಡುಗಡೆ ಎಂದರೆ ನಿಮ್ಮ ಜೀವಿತದಲ್ಲಿ ಅಷ್ಟೇ ಏಕೆ ಇಡೀ ನಿಮ್ಮ ಕುಟುಂಬದ ಪರಂಪರೆಯಲ್ಲಿಯೇ ನೀವು ಎಂದೆಂದೂ ಕಂಡರಿಯದಂತ ಯಾವುದೋ ಒಂದು ವಿಷಯವಾಗಿರುತ್ತದೆ.
2. ಅದ್ಭುತವಾದ ಬಿಡುಗಡೆ ಎಂದರೆ ನಿಮ್ಮ ಪರಿಸ್ಥಿತಿ ಏನೇ ಇದ್ದರೂ ಅದರ ಮೇಲೆ ದೇವರ ಅದ್ಭುತವಾದ ಕಾರ್ಯವು ಉಂಟಾಗುವುದನ್ನು ನೀವು ನೋಡುತ್ತೀರಿ ಎಂದರ್ಥ.
3. ಅದ್ಭುತವಾದ ಬಿಡುಗಡೆ ಎಂದರೆ ಎಲ್ಲರ ಗಮನ ಸೆಳೆಯುವ ಆದರೆ ಯಾರೂ ನಿರಾಕರಿಸಲಾಗದ ಸಫಲತೆ ಸಾಕ್ಷಿ ಮತ್ತು ಸಾಧನೆಯಾಗಿದೆ.
4. ಇದರ ಅರ್ಥ ಮಾರ್ಗವೇ ಇಲ್ಲದ ಸ್ಥಳದಲ್ಲಿ ದೇವರು ಮಾಡುವ ಮಾರ್ಗವಾಗಿದೆ.
ಅದ್ಭುತವಾದ ಬಿಡುಗಡೆಗೆ ಸತ್ಯವೇದ ಆಧಾರಿತ ಉದಾಹರಣೆಗಳು.
1. ತನ್ನ ಸಾಲವನ್ನು ತೀರಿಸಲು ಸಿಕ್ಕ ಆರ್ಥಿಕ ಬಲ.
2ಅರಸು 4-7 ರಲ್ಲಿ ನಾವು ನೋಡುವಂತೆ ಒಬ್ಬ ವಿಧವೆಯು ಈ ರೀತಿಯ ಅದ್ಭುತವಾದ ಬಿಡುಗಡೆಯನ್ನು ಹೊಂದಿ ಸಾಲ ವಿಮುಕ್ತಳಾಗುತ್ತಾಳೆ. ದೇವರ ಅಭಿಷೇಕಕ್ಕೆ ನಿಮ್ಮನ್ನು ಸಾಲದ ಬಂಧನದಿಂದ ಹೊರ ತರುವ ಶಕ್ತಿ ಇದೆ.ನಾನಿಂದು ಇದು ನಿಮ್ಮ ಜೀವಿತದ ಅದ್ಭುತವಾದ ಬಿಡುಗಡೆಯ ಕಾಲವಾಗಲಿದೆ ಎಂದು ಯೇಸು ನಾಮದಲ್ಲಿ ನಿಮ್ಮ ಜೀವಿತದ ಕುರಿತು ಘೋಷಿಸುತ್ತೇನೆ.
2.ದೇವರ ಕೃಪೆಯು ನಿಮ್ಮ ಅವಮಾನವನ್ನು ಮುಚ್ಚಿಹಾಕುತ್ತದೆ.
ಖಾನ ಊರಿನಲ್ಲಿ ನಡೆದ ಮದುವೆಯಲ್ಲಿ ದ್ರಾಕ್ಷಾರಸದ ಕೊರತೆಯಾದಾಗ ಇನ್ನೇನು ಆ ಹೊಸ ದಂಪತಿಗಳು ಅವಮಾನಕ್ಕೆ ಈಡಾಗಬೇಕಿತ್ತು. ಆದರೆ ಯೇಸುಕ್ರಿಸ್ತನು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿ ಅದ್ಭುತವಾಗಿ ಅವರನ್ನು ನಾಚಿಕೆಗೆ ಈಡಾಗದಂತೆ ಬಿಡಿಸಿದನು. ದೇವರ ಪ್ರಸನ್ನತೆಗೆ ಬದಲಾವಣೆ ತರುವ ಶಕ್ತಿ ಇದೆ. ಈ ಶಕ್ತಿಯೇ ಅವಮಾನವನ್ನು ನಿಂದೆಯನ್ನು ಅಲ್ಲಿಂದ ತೆಗೆದು ಹಾಕಿತು.
ಅದ್ಭುತವಾದ ಬಿಡುಗಡೆಯನ್ನು ಆನಂದಿಸುವುದು ಹೇಗೆ?
1. ಏನಾದರೂ ಜರಗುವವರೆಗೂ ಬಿಡದೆ ಪ್ರಾರ್ಥಿಸುತ್ತಾ ಇರಿ.
ಪ್ರಾರ್ಥನೆಯು ನಿಮ್ಮ ಪರಿಸ್ಥಿತಿ ಮೇಲೆ ದೇವರ ಬಲವನ್ನು ಆಹ್ವಾನಿಸುತ್ತದೆ. ಪ್ರಾರ್ಥನೆಯು ಅಸಾಧ್ಯವಾದದನ್ನು ಸಾಧ್ಯವನ್ನಾಗಿ ಮಾಡಬಲ್ಲದು. ಪ್ರಾರ್ಥಿಸುವವರು ಇದ್ದಾರೆಂದರೆ ಪ್ರಾರ್ಥನೆಗೆ ಉತ್ತರಿಸುವ ದೇವರು ಕೂಡ ಇದ್ದಾನೆ ಅಷ್ಟೇ.
"ಎಲೀಯನು ನಮ್ಮಂಥ ಸ್ವಭಾವವುಳ್ಳವನಾಗಿದ್ದನು; ಅವನು ಮಳೆಬರಬಾರದೆಂದು ಬಹಳವಾಗಿ ಪ್ರಾರ್ಥಿಸಲು ಮೂರು ವರುಷ ಆರು ತಿಂಗಳವರೆಗೂ ಮಳೆಬೀಳಲಿಲ್ಲ. 18ತಿರಿಗಿ ಅವನು ಪ್ರಾರ್ಥನೆಮಾಡಲು ಆಕಾಶವು ಮಳೆಗರೆಯಿತು, ಭೂವಿುಯು ಬೆಳೆಯಿತು."(ಯಾಕೋಬನು 5:17-18)
2. ದೇವರ ವಾಕ್ಯಕ್ಕೆ ವಿಧೇಯರಾಗಿರಿ.
ದೇವರ ವಾಕ್ಯಕ್ಕೆ ವಿದೇಯರಾಗುವಂತದ್ದು ಅದ್ಭುತವಾದ ಬಿಡುಗಡೆಯನ್ನು ಹೊಂದುವ ಸ್ಥಾನಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ. ನಿಮ್ಮ ವಿಧೇಯತೆಯ ಮಟ್ಟವೇ ನೀವು ಹೊಂದಲಿರುವ ಅದ್ಭುತವಾದ ಬಿಡುಗಡೆಯ ಮಟ್ಟವನ್ನು ನಿರ್ಧರಿಸುತ್ತದೆ.
"ಅದಕ್ಕೆ ಸೀಮೋನನು - ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಹಾಕುತ್ತೇನೆ ಅಂದನು."(ಲೂಕ 5:5).
"ಆತನ ತಾಯಿಯು ಕೆಲಸದವರಿಗೆ - ಆತನು ನಿಮಗೆ ಏನು ಹೇಳುವನೋ ಅದನ್ನು ಮಾಡಿರಿ ಅಂದಳು."(ಯೋಹಾನ 2:5).
ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.ಆತನು ಬೆಂಕಿಯ ಮೂಲಕ ಉತ್ತರ ಕೊಡುವವನಾಗಿದ್ದಾನೆ.(ಇಬ್ರಿಯರಿಗೆ 12:29) (1 ಅರಸುಗಳು 18:24).
ದೇವರ ಉತ್ತರವು ನಾವು ನಿರೀಕ್ಷಿಸದ ಕಾಲದಲ್ಲಿ ನಮ್ಮಡೆಗೆ ಧಾವಿಸುತ್ತದೆ. ನಿಮ್ಮ ಉಪವಾಸ ಪ್ರಾರ್ಥನೆಗಳು ಯಾವುದೂ ಸಹ ವ್ಯರ್ಥವಾಗಿ ಹೋಗುವುದಿಲ್ಲ. ನೀವು ಖಂಡಿತವಾಗಿಯೂ ದೇವರ ಮಹಿಮೆಯನ್ನು ಜಗತ್ ಜಾಹಿರುಪಡಿಸುವ ಸಾಕ್ಷಿಯನ್ನು ಯೇಸು ನಾಮದಲ್ಲಿ ಹೊಂದೇ ತೀರುತ್ತೀರಿ.
3. ನಿಮ್ಮ ಪ್ರಯತ್ನವನ್ನು ಬಿಟ್ಟು ಬಿಡಬೇಡಿರಿ.
ದೇವರು ಎಲ್ಲವನ್ನು ಮಾಡಲು ಶಕ್ತನು ಎಂದು ನೀವು ನಂಬದಿದ್ದರೆ ನೀವು ಆತನಲ್ಲಿ ದೊರಕುವ ಅದ್ಭುತವಾದ ಬಿಡುಗಡೆಯನ್ನು ಆನಂದಿಸಲಾರಿರಿ. ಎಂತಹ ನಿರಾಶೆ ಪಡಿಸುವ ಪರಿಸ್ಥಿತಿ ಬಂದರೂ ನೀವು ನಿರೀಕ್ಷೆ ಉಳ್ಳವರಾಗಿರಿ ಈ ರೀತಿಯೇ ದೇವರು ನಿಮ್ಮ ಕಥೆಯನ್ನು ಬದಲಾಯಿಸಲು ಹೆಜ್ಜೆ ಇಡುವಂತದ್ದು. ನಂಬಿಕೆಯು ಯಾವಾಗಲೂ ನಿಮ್ಮನ್ನು ಅದ್ಭುತವಾದ ಅಭಿವೃದ್ಧಿ ಹೊಂದುವಂಥ ಸ್ಥಾನದಲ್ಲಿ ಇರುವಂತೆ ಮಾಡುತ್ತದೆ. ಆದ್ದರಿಂದ ನಿಮ್ಮ ಪ್ರಯತ್ನವನ್ನು ಬಿಟ್ಟುಬಿಡಬೇಡಿರಿ.
"ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವದು ಎಂಬದಾಗಿ ತನಗೆ ಹೇಳಲ್ಪಟ್ಟ ಮಾತು ನೆರವೇರುವದಕ್ಕೆ ಮಾರ್ಗ ತೋರದೆ ಇರುವದರಿಂದ ಅಬ್ರಹಾಮನು ತಾನು ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆನೆಂಬ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ನಿರೀಕ್ಷಿಸಿ ನಂಬಿದನು. 19 ಅವನು ಹೆಚ್ಚುಕಡಿಮೆ ನೂರು ವರುಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದುಹೋಯಿತೆಂದೂ ಯೋಚಿಸಿದಾಗ್ಯೂ ಅವನ ನಂಬಿಕೆಯು ಕುಂದಲಿಲ್ಲ. 20ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ. 21 ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು ದೃಢನಂಬಿಕೆಯುಳ್ಳವನಾದನು."(ರೋಮಾಪುರದವರಿಗೆ 4:18-21).
Bible Reading Plan: Luke 14- 19
ಪ್ರಾರ್ಥನೆಗಳು
1. ತಂದೆಯೇ, ಮರೆಯಾಗಿರುವ ಅವಕಾಶಗಳನ್ನು ನಾನು ಕಾಣುವಂತೆ ಯೇಸುನಾಮದಲ್ಲಿ ನನ್ನ ಕಣ್ಣುಗಳನ್ನು ತೆರೆಮಾಡು. (ಎಫಸ್ಸೆ 1:18)
2. ನನ್ನ ಉದ್ದಾರವನ್ನು ತಡೆಯುತ್ತಿರುವ ಎಲ್ಲಾ ಕೋಟೆಕೋತ್ತಲುಗಳನ್ನು ಯೇಸುನಾಮದಲ್ಲಿ ಕೆಡವಿ ಬೀಳಿಸುತ್ತೇನೆ. (2ಕೊರಿಯಂತೆ 10:4)
3.ನನ್ನ ಜೀವಿತದಲ್ಲಿರುವ ದೇವರಕರೆಯನ್ನು ವಿದ್ವಂಸಗೊಳಿಸುವ ಎಲ್ಲಾ ಸಂಬಂಧಗಳನ್ನು ಯೇಸುನಾಮದಲ್ಲಿ ಕಡಿದುಕೊಳ್ಳುತ್ತೇನೆ.(2ಕೊರಿಯಂತೆ 6:14)
4.ಕರ್ತನೇ, ಅಸಾಮಾನ್ಯವಾದ ಬಿಡುಗಡೆಯನ್ನು ಹೊಂದಲು ವಿವೇಕವನ್ನು ಯೇಸುನಾಮದಲ್ಲಿ ನನಗೆ ದಯಪಾಲಿಸು. (ಯಾಕೋಬ 1:5)
5.ತಂದೆಯೇ, ಹಣಕಾಸು, ವೈವಾಹಿಕ ಹಾಗೂ ಅಂತರಾಷ್ಟ್ರೀಯ ವಿಚಾರಗಳಲ್ಲಿ ನನಗೆ ಅದ್ಭುತ ಬಿಡುಗಡೆಯನ್ನು ಯೇಸುನಾಮದಲ್ಲಿ ಅನುಗ್ರಹಿಸು. (ಯೆರೆಮಿಯ 29:11)
6. ನನ್ನ ಸಾಕ್ಷಿಯನ್ನು ಹಾಳುಮಾಡಲು ಯತ್ನಿಸುವ ಎಲ್ಲಾ ಶಕ್ತಿಗಳು ಪವಿತ್ರಾತ್ಮನ ಅಗ್ನಿಯಿಂದ ಸುಟ್ಟು ಬೂದಿಯಾಗಲಿ (ಯೆಶಾಯ 54:17)
7. ನಾನು ಮುಂದಿನ ಹಂತಕ್ಕೆ ತಲುಪಲು ಆಗದಂತೆ ನನ್ನ ವಿರುದ್ಧವಾಗಿ ಹೋರಾಡುವ ಯಾವುದೇ ಬಲಶಾಲಿಯನ್ನು ಯೇಸುನಾಮದಲ್ಲಿ ಬಂಧಿಸುತ್ತೇನೆ. (ಮತ್ತಾಯ 12:29)
8. ಕರ್ತನೇ ನನಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ಆಶೀರ್ವಾದದ ನೂತನ ಬಾಗಿಲನ್ನು ಯೇಸುನಾಮದಲ್ಲಿ ತೆರೆಮಾಡು. (ಪ್ರಕಟಣೆ 3:8)
9. ನನ್ನ ಜೀವಿತದ ಪ್ರತಿಯೊಂದು ಕ್ಷೇತ್ರದ್ಲಲೂ ಯೇಸುನಾಮದಲ್ಲಿ ಈ ಕಾಲದಲ್ಲೇ ಬಿಡುಗಡೆ ಹೊಂದುವೆನು. (ಕೀರ್ತನೆ 84:11)
10. ನನ್ನ ಕರೆಯನ್ನು ನನ್ನ ಸಾಕ್ಷಿಯನ್ನು ಗುರಿಮಾಡಿಕೊಂಡು ಅದನ್ನು ದುರ್ಮಾರ್ಗಕ್ಕೆ ಎಳೆಯುವ ಶಕ್ತಿಯೇ ಯೇಸುನಾಮದಲ್ಲಿ ನಿನ್ನನ್ನು ನಾಶ ಪಡಿಸುತ್ತೇನೆ. (ಲೂಕ 10:19)
11. ನನ್ನ ಬಿಡುಗಡೆಗೆ ವಿರೋಧವಾಗಿ ಎಬ್ಬಿಸಲ್ಪಟ್ಟಿರುವ ಯಾವುದೇ ದುಷ್ಟಯಜ್ಞವೇಧಿಯಾಗಲೀ ಯೇಸುನಾಮದಲ್ಲಿ ಅದು ಕೆಡವಲ್ಪಡಲಿ. (ನ್ಯಾಯಸ್ಥಾಪಕರು 6:25-27)
12.ನನ್ನನ್ನು ಕೆಳದರ್ಜೆಗಿಳಿಸಲು ಮಾತಾಡುತ್ತಿರುವ ಯಾವುದೇ ಶಕ್ತಿಯಾಗಲೀ ಯೇಸುನಾಮದಲ್ಲಿ ಅದು ಮೌನವಾಗಲಿ. (ಯೇಶಾಯ 54:17)
13. ನನ್ನ ಜೀವಿತದಲ್ಲಿನ ದೇವರ ಕರೆಯು ಯೇಸುನಾಮದಲ್ಲಿ ನಿಷ್ಫಲವಾಗುವುದಿಲ್ಲ.(ಯೆರೆಮೆಯ 1:5)
14. ನನ್ನ ಉತ್ತಮ ನಿರೀಕ್ಷೆಗಳೆಲ್ಲಾ ಯೇಸುನಾಮದಲ್ಲಿ ನಿರರ್ಥಕವಾಗುವುದಿಲ್ಲ. (ಜ್ಞಾನೋಕ್ತಿ 23:18).
15. ಕರ್ತನೇ ನನ್ನನ್ನು ನನ್ನ ಕುಟುಂಬವನ್ನು ಪಾಸ್ಟರ್ ಮೈಕೆಲ್ ಅವರನ್ನು ಮತ್ತು ತಂಡದವರನ್ನು ಉನ್ನತ ಮಟ್ಟದ ಅಭಿಷೇಕಕ್ಕೆ ಯೇಸುನಾಮದಲ್ಲಿ ಕೊಂಡೊಯ್ಯಿ . (1ಸಮುವೇಲ 16:13).
16. ತಂದೆಯೇ, ನಾನು ಅಸಾಮಾನ್ಯ ಬಿಡುಗಡೆ ಹೊಂದುವಂತೆ ಯೇಸುನಾಮದಲ್ಲಿ ನನ್ನನ್ನು ಬಲಗೊಳಿಸು. (ಅಪೋಸ್ತಲರ ಕೃತ್ಯಗಳು 1:8)
17. ಯೇಸುನಾಮದಲ್ಲಿ ಇದು ನನ್ನ ಜೀವಿತದ ಅದ್ಭುತವಾದ ಅಭಿವೃದ್ಧಿಯ ಕಾಲ. (ಕೀರ್ತನೆ 75:6-7)
18. ಯೇಸುವಿನ ಪರಿಶುದ್ಧ ನಾಮದಲ್ಲಿ ನಾನು ಕಳೆದುಕೊಂಡ ಎಲ್ಲವನ್ನೂ ಬೆನ್ನಟ್ಟಿ ಹೋಗಿ ಹಿಂದಕ್ಕೆ ಪಡೆಯುತ್ತೇನೆ(1ಸಮುವೇಲ 30:8)
19.ಕರ್ತನೇ ನನ್ನನ್ನು ಮತ್ತು ಈ 40 ದಿನಗಳ ಉಪವಾಸ ಪ್ರಾರ್ಥನೆಯಲ್ಲಿ ನಿರತರಾಗಿರುವ ಎಲ್ಲರನ್ನೂ ಯೇಸುನಾಮದಲ್ಲಿ ಬಲಗೊಳಿಸು.
20. ಎಲ್ಲವೂ ಒಟ್ಟಾಗಿ ಯೇಸುನಾಮದಲ್ಲಿ ನನ್ನ ಒಳಿತಿಗಾಗಿ ಕಾರ್ಯ ಮಾಡಲೆಂದು ಯೇಸುನಾಮದಲ್ಲಿ ಘೋಷಿಸುತ್ತೇನೆ.(ರೋಮಾ8:28).
Join our WhatsApp Channel
Most Read
● ಕೊಡುವ ಕೃಪೆ -2● ದುಷ್ಟ ಮಾದರಿಗಳಿಂದ ಹೊರಬರುವುದು.
● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
● ವಿವೇಚನೆ v/s ತೀರ್ಪು
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ನಿಮ್ಮ ಅನುಭವವನ್ನು ವ್ಯರ್ಥ ಮಾಡಿಕೊಳ್ಳಬೇಡಿರಿ
ಅನಿಸಿಕೆಗಳು