ಅನುದಿನದ ಮನ್ನಾ
ದಿನ 22:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Friday, 13th of December 2024
4
2
66
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಪಿತ್ರಾರ್ಜಿತವಾಗಿ ಬಂದ ಮಾಧರಿಗಳೊಂದಿಗೆ ವ್ಯವಹರಿಸುವುದು
"ಆಗ ಗಿದ್ಯೋನನು ಆತನಿಗೆ - ಸ್ವಾಮೀ, ನಾನು ಇಸ್ರಾಯೇಲ್ಯರನ್ನು ರಕ್ಷಿಸುವದು ಹೇಗೆ? ಮನಸ್ಸೆ ಕುಲದಲ್ಲಿ ನನ್ನ ಮನೆಯು ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು ಅನ್ನಲು."(ನ್ಯಾಯಸ್ಥಾಪಕರು 6:15).
ನಾವಿಂದು ದೇವರ ಪಾದದ ಬಳಿ ಪ್ರಾರ್ಥನೆಯಲ್ಲಿ ಕುಳಿತಿರುವಾಗ ನಮ್ಮ ವಂಶಾವಳಿಗಳಲ್ಲಿ ಯಾವುದಾದರೂ ದುಷ್ಟ ಮಾದರಿಗಳು ಕಾರ್ಯ ಮಾಡುತ್ತಿವೆಯೇ ಎಂದು ಗುರುತಿಸಿಕೊಂಡು ಆ ಸೈತಾನನ ಪ್ರಭಾವವನ್ನು ಮುರಿಯಬೇಕು. ಗಿದ್ಯೋನನನ್ನು ದೇವರು ಸಂಧಿಸಿದಾಗ ಹೇಗೆ ತನ್ನ ಜನರನ್ನು ಬಿಡುಗಡೆಗೂ ಮತ್ತು ಆಶೀರ್ವಾದಕ್ಕೂ ಮುನ್ನಡೆಸಲು ನೇಮಕಗೊಂಡ ಎಂಬುದನ್ನು ಸತ್ಯವೇದವು ನಮಗೆ ಪ್ರಕಟಿಸುತ್ತದೆ. ಆದರೂ ಅವನು ತನ್ನ ಹಿನ್ನೆಲೆ ಬಗ್ಗೆ ಚಿಂತಿಸುತ್ತಿರುವುದನ್ನು ಸಹ ನಾವು ಅವನ ಮಾತುಗಳಲ್ಲಿ ನೋಡಬಹುದು."ಅವನು 'ನನ್ನ ಮನೆತನವು ಮನಸ್ಸೆ ಕುಲದಲ್ಲಿಯೇ ಕನಿಷ್ಠವಾದದ್ದು" ಎಂದನು. ಗಿದ್ಯೋನನ ಕುಟುಂಬದಲ್ಲಿ ಬಡತನ ಮಾದರಿ ಕಾರ್ಯ ಮಾಡುತ್ತಿದ್ದದ್ದನ್ನು ನಾವು ಇಲ್ಲಿ ಸ್ಪಷ್ಟವಾಗಿ ಕಾಣಬಹುದು.
ನಿಮ್ಮ ಕುಟುಂಬದಲ್ಲಿ ಯಾವುದಾದರೂ ಮಾದರಿಯು ಪುನರಾವರ್ತಿತವಾಗಿ ಕಾರ್ಯ ಮಾಡುತ್ತಿರುವುದನ್ನು ನೀವು ಗಮನಿಸಿದ್ದೀರಾ? ನೀವು ಕೆಲವೊಂದನ್ನು ಬಹುಶಹ ಗಮನಿಸಿರಬಹುದು ಉದಾರಣೆಗೆ ಆರೋಗ್ಯ ಸಮಸ್ಯೆ ಮದುವೆಗಳಲ್ಲಿ ತೊಂದರೆ ಹಣಕಾಸಿನ ಸಮಸ್ಯೆ ಇಂಥವುಗಳು ಮೇಲಿಂದ ಮೇಲೆ ಮರುಕಳಿಸುತ್ತಲೇ ಇರುತ್ತವೆ. ಇವುಗಳು ನಿಮ್ಮ ಪೂರ್ವಜರಿಂದ ಬಂದಂತಹ ಮಾದರಿಗಳಾಗಿದ್ದು ಇವುಗಳನ್ನು ಮುರಿಯಬೇಕಾದ ಅಗತ್ಯವಿದೆ.
ನೀವು ಕೆಲಸ ಮಾಡುವ ಸ್ಥಳದಲ್ಲಿ ಅಥವಾ ಬೇರೆ ಯಾವುದೇ ಸ್ಥಳವಾಗಿರಬಹುದು ಅಲ್ಲಿ ನೀವು ಊಹಿಸಲಾರದಂತ ದ್ವೇಷ ಮತ್ತು ಕಷ್ಟಗಳನ್ನು ನಿಮ್ಮ ಜೀವಿತದಲ್ಲಿ ಪುನರಾವರ್ತಿತವಾಗಿ ಎದುರಿಸುತ್ತಿದ್ದರೆ ಅದು ನಿಮ್ಮ ಪೂರ್ವಜರಿಂದ ಬಂದಂತಹ ಮಾದರಿಯಿಂದ ಆಗಿರಬಹುದು. ಕೆಲವು ವಿಶ್ವಾಸಿಗಳು ಗೊಂದಲಕ್ಕೆ ಈಡಾಗಿ ಬಿಡುತ್ತಾರೆ. ಏಕೆಂದರೆ ಕೆಲವು ಸಮಸ್ಯೆಗಳ ನಿವಾರಣೆಗಾಗಿ ಅವರು ಪ್ರಾರ್ಥಿಸಿರುತ್ತಿರುತ್ತಾರೆ,ಅದಕ್ಕಾಗಿ ಉಪವಾಸ ಮಾಡಿರುತ್ತಾರೆ ಮತ್ತು ತಮಗೆ ತೋಚಿದ್ದನ್ನೆಲ್ಲಾ ಮಾಡಿ ಮುಗಿಸಿರುತ್ತಾರೆ ಆದರೂ ಆ ಸಮಸ್ಯೆಗಳು ಬೇರೆ ಬೇರೆ ಸಮಯಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತಲೇ ಇರುತ್ತದೆ. ಅವರು ನಿರ್ದಿಷ್ಟವಾದ ಆ ಸಮಸ್ಯೆಗೆ ನಿರ್ದಿಷ್ಟವಾದ ರೀತಿಯ ಪ್ರಾರ್ಥನೆಯನ್ನು ನಾವು ಮಾಡಿಲ್ಲ ಎಂಬುದನ್ನು ಅರಿಯದವರಾಗಿರುತ್ತಾರೆ ಇದರಿಂದ ಅವರು ತಮ್ಮ ಪ್ರಾರ್ಥನೆಯಿಂದ ತಮಗೆ ಬೇಕಾದ ಪ್ರತಿಫಲವನ್ನು ಸಹ ಅವರು ಪಡೆದಿರುವುದಿಲ್ಲ. ನಿಮ್ಮ ಜಯವನ್ನು ನಿಮ್ಮ ಜೀವಿತದಲ್ಲಿ ನೀವು ಪ್ರತ್ಯಕ್ಷವಾಗಿ ಕಾಣಲು ಬಯಸುವವರಾಗಿದ್ದರೆ ನಿರ್ದಿಷ್ಟವಾದ ರೀತಿಯಲ್ಲಿ ನೀವು ಪ್ರಾರ್ಥಿಸಬೇಕೆಂಬುದನ್ನು ನೀವು ಮುಖ್ಯವಾಗಿ ಕಲಿಯಬೇಕು.
ಕ್ರೈಸ್ತರಾದಂತವರು ಈ ರೀತಿಯ ಪೂರ್ವಜರಿಂದ ಬಂದ ಮಾದರಿಗಳ ಬಲದಿಂದ ತೊಂದರೆಗೆ ಈಡಾಗಲು ಸಾಧ್ಯವೇ?
ಹೌದು, ಕ್ರೈಸ್ತರಾದವರು ಸಹ ಈ ರೀತಿ ಪೂರ್ವಜರಿಂದ ಬಂದ ಮಾದರಿಗಳ ಬಲದಿಂದ ತೊಂದರೆಗೆ ಈಡಾಗಬಹುದು. ದೇವರ ವಾಕ್ಯದ ಪ್ರಕಾರ ಪೂರ್ವಜರಿಂದ ಬಂದ ಮಾದರಿಗಳೂ ಅಥವಾ ಅದರ ಶಕ್ತಿಗಳೂ ಕ್ರೈಸ್ತರ ಮೇಲೆ ಪ್ರಭಾವ ಬೀರಬಾರದು. ಯಾಕೆಂದರೆ ನಾವು ಹೊಸದಾಗಿ ಹುಟ್ಟಿದವರಾಗಿದ್ದೇವೆ. ಆದಾಗಿಯೂ ಕೆಲವು ಪರಿಸ್ಥಿತಿಗಳು ಅವರು ಈ ರೀತಿಯ ಮಾದರಿಗಳ ಪ್ರಭಾವಕ್ಕೆ ಒಳಗಾಗುವಂತೆ ಮಾಡಬಲ್ಲದು. ಕೆಳಕಂಡ ಕೆಲವು ಪರಿಸ್ಥಿತಿಗಳು ಅವುಗಳನ್ನು ಒಳಗೊಂಡಿವೆ.
1. ಜ್ಞಾನಹೀನತೆ: ಹೊಶೇಯ 4:6 ಪ್ರಕಟಿಸುವುದು ಏನೆಂದರೆ ಒಬ್ಬ ವಿಶ್ವಾಸಿಯು ಯೇಸುಕ್ರಿಸ್ತನು ಪೂರೈಸಿದ ಕಾರ್ಯಗಳನ್ನು, ಕ್ರಿಸ್ತನಲ್ಲಿರುವ ತಮ್ಮ ಅಧಿಕಾರವನ್ನು ಮತ್ತು ದೇವರು ವಿಮೋಚನ ಕ್ರಯ ಕೊಟ್ಟು ಏನೆಲ್ಲಾ ಖರೀದಿಸಿದ್ದಾನೋ ಅವುಗಳ ಬಗ್ಗೆ ಜ್ಞಾನವಿಲ್ಲದವರಂತೆ ನಡೆದುಕೊಂಡರೆ ಅಂತವರ ಜೀವಿತದಲ್ಲಿ ಈ ರೀತಿಯ ಮಾದರಿಯ ಪ್ರಭಾವವು ಕಾರ್ಯ ಮಾಡಬಲ್ಲದು.
2.ಪಾಪ: ಯೆಶಾಯ59:1-2 ಪ್ರಕಟಿಸುವಂತೆ ಪಾಪವು ನಮ್ಮನ್ನು ದೇವರಿಂದ ಅಗಲಿಸುತ್ತದೆ. ಒಬ್ಬ ವಿಶ್ವಾಸಿಯು ಪಾಪದಲ್ಲಿ ಮುಳುಗಿದ್ದರೆ ಪೂರ್ವಜರಿಂದ ಬಂದ ಮಾದರಿಗಳು ಅವಕಾಶ ಹೊಂದಿ ಆ ವ್ಯಕ್ತಿಯ ಮೇಲೆ ದಾಳಿ ಮಾಡುತ್ತವೆ. ಪಾಪಕ್ಕೆ ಸ್ಥಳಾವಕಾಶ ಕೊಡಬಾರದೆಂದು ಸತ್ಯವೇದವು ಸಲಹೆ ನೀಡುತ್ತದೆ(ಎಫಸ್ಸೆ 4:27). ಪಾಪವು ಪೂರ್ವಜರಿಂದ ಬಂದ ಮಾದರಿಗಳು ಕಾರ್ಯ ಮಾಡಲು ಬಾಗಿಲನ್ನು ತೆರೆದುಕೊಡುತ್ತದೆ.
3.ಪ್ರಾರ್ಥನಾ ರಹಿತ ಜೀವಿತ: ವಿಶ್ವಾಸಿಗಳು ಇರುವಂತದ್ದೇ ಕ್ರಿಸ್ತನಿಂದ ಉಂಟಾದ ಜಯವನ್ನು ಪ್ರಾರ್ಥನೆಯ ಮೂಲಕ ಜಾರಿಗೆ ತರಲು. ನಾವು ಪ್ರಾರ್ಥನೆ ಮಾಡುವಲ್ಲಿ ವಿಫಲರಾಗುವಾಗ ದುಷ್ಟ ಬಲಗಳಿಗೆ ಕಾರ್ಯಮಾಡಲು ಯಾವುದೇ ಅಡೆತಡೆ ಇಲ್ಲದಂತಾಗುತ್ತದೆ. ಯಾಕೋಬ 5:16ರ ವಾಕ್ಯವು ವಿಶ್ವಾಸಿಗಳು ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡಬೇಕು ಎಂಬುದಕ್ಕೆ ಉತ್ತೇಜನ ಕೊಡುತ್ತದೆ. ಆಗ ದುರಾತ್ಮಗಳ ಕಾರ್ಯವನ್ನು ಮಾಡದಂತೆ ಪ್ರಾರ್ಥನೆಯು ತಡೆಯುತ್ತಿರುತ್ತದೆ.
"ತಂದೆಗಳು ಹುಳಿದ್ರಾಕ್ಷೆಯನ್ನು ತಿಂದರು, ಮಕ್ಕಳ ಹಲ್ಲುಗಳು ಚಳಿತುಹೋಗಿವೆ ಎಂದು ಆ ಕಾಲದಲ್ಲಿ ಜನರು ಮತ್ತೆ ಅನ್ನರು. [30] ಸಾಯತಕ್ಕವನು ತನ್ನ ತನ್ನ ದೋಷದಿಂದ ಸಾಯುವನು. ಹುಳಿದ್ರಾಕ್ಷೆಯನ್ನು ತಿನ್ನುವವನ ಹಲ್ಲುಗಳೇ ಚಳಿತುಹೋಗುವವು. [31] ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು; [32] ಈ ಒಡಂಬಡಿಕೆಯು ನಾನು ಇವರ ಪಿತೃಗಳನ್ನು ಕೈಹಿಡಿದು ಐಗುಪ್ತದೇಶದೊಳಗಿಂದ ಕರತಂದಾಗ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ; ನಾನು ಅವರಿಗೆ ಪತಿಯಾಗಿದ್ದರೂ ಆ ನನ್ನ ಒಡಂಬಡಿಕೆಯನ್ನು ಅವರು ಮೀರಿದರಷ್ಟೆ. "(ಯೆರೆಮೀಯ 31:29-32).
ತಂದೆಯಿಂದ ಮಕ್ಕಳಿಗೆ ಹರಿದು ಬರುವ ದೋಷಗಳನ್ನು ತ್ಯಜಿಸು ಬಿಡುವಂತ ಒಂದು ಹೊಸದಾದ ಉಡಂಬಡಿಕೆಯ ಕುರಿತು ಈ ಮೇಲಿನ ವಾಕ್ಯಗಳು ಸ್ಪಷ್ಟವಾಗಿ ತಿಳಿಸುತ್ತವೆ. ಈಗಿನ ಹೊಸ ಒಡಂಬಡಿಕೆಯು ಅಪರಾಧ ಮಾಡುವ ಮನುಷ್ಯನನ್ನೇ ವೈಯಕ್ತಿಕ ಹೊಣೆಗಾರನನ್ನಾಗಿ ಮಾಡುತ್ತದೆ. ಇದು ಐಗುಪ್ತದಿಂದ ಹೊರಟು ಬಂದ ದಿನಗಳಲ್ಲಿ ಮಾಡಿಕೊಂಡ ಹಳೆಯ ಒಡಂಬಡಿಕೆಗೆ ತದ್ವಿರುದ್ಧವಾಗಿದೆ.
ದುರದೃಷ್ಟವಶಾತ್, ಅನೇಕ ಮಂದಿ ಜನರು ಈ ರೀತಿಯ ಪಿತ್ರಾರ್ಜಿತವಾದ ಮಾದರಿಗಳ ಬಗ್ಗೆ ಜ್ಞಾನಹೀನರಾಗಿದ್ದು ಈ ಸಮಸ್ಯೆಯನ್ನು ಉದ್ದೇಶಿಸಿ ಪ್ರಾರ್ಥಿಸಲು ವಿಫಲರಾಗುತ್ತಾರೆ. ಜ್ಞಾನಹೀನತೆಯೇ ದುರಾತ್ಮಗಳು ಕಾರ್ಯ ಮಾಡಲು ಅನುದಾನ ನೀಡುತ್ತದೆ ಆದ್ದರಿಂದ ಈ ಮಾದರಿಗಳನ್ನು ಗುರುತಿ ಹಿಡಿದು ಅವುಗಳ ಬಲವನ್ನು ಪ್ರಾರ್ಥನೆಯಲ್ಲಿ ಮುರಿಯುವಂತದ್ದು ಬಹಳ ಮುಖ್ಯವಾದ ಕಾರ್ಯವಾಗಿದೆ.
ಹೀಗಾಗಿ ನಾವಿಂದು ಸ್ವಲ್ಪ ಸಮಯ ನಮ್ಮ ಜೀವಿತದಲ್ಲಿ ಯಾವುದಾದರೂ ಪೂರ್ವಜರಿಂದ ಬಂದ ಮಾದರಿಗಳು ಕಾರ್ಯ ಮಾಡುತ್ತಿದ್ದರೆ ಅವುಗಳನ್ನು ದೇವರು ಪ್ರಕಟಿಸಬೇಕೆಂದು ಪ್ರಾರ್ಥಿಸೋಣ. ಇದರಿಂದ ನಾವು ಜಯಪ್ರದವಾದ ಮತ್ತು ಬಿಡುಗಡೆಯ ಜೀವಿತವನ್ನು ಸಾಗಿಸಬಹುದು.
Bible Reading Plan : Act 21-26
ಪ್ರಾರ್ಥನೆಗಳು
1.ನನ್ನ ಹಾಗೂ ನನ್ನ ಕುಟುಂಬದಲ್ಲಿ ಅದಕ್ಕದೇ ಪುನಾರಾವರ್ತಿತವಾಗಿ ಕಾರ್ಯ ಮಾಡುತ್ತಿರುವ ನನ್ನ ರಕ್ತ ಸಂಬಂಧದಿಂದ ಬಂದ ಯಾವುದೇ ನಕರಾತ್ಮಕ ಮಾದರಿಗಳಾಗಲಿ ಯೇಸು ನಾಮದಲ್ಲಿ ಅದನ್ನು ತ್ಯಜಿಸುತ್ತೇನೆ. (ವಿಮೋಚನಾ ಕಾಂಡ 20:5-6).
2.ನನ್ನ ವಂಶಾವಳಿಯಲ್ಲಿಯೂ ಮತ್ತು ನನ್ನ ರಕ್ತ ಸಂಬಂಧದಿಂದಲೂ ಬಂದಂತಹ ಕೈಬರಹಗಳನ್ನು ಯೇಸುವಿನ ಪರಿಶುದ್ಧ ರಕ್ತದ ಮೂಲಕ ಯೇಸುನಾಮದಲ್ಲಿ ಅಳಿಸಿ ಹಾಕುತ್ತೇನೆ. (ಕೊಲಸ್ಸೆ 2:14).
3.ನನಗೆ ವಿರುದ್ಧವಾದ ಯಾವುದೇ ಮರಣದ ಕೋಟೆ ಕೊತ್ತಲುಗಳು ದುರಂತದ ಬಲಗಳಾಗಲೀ ಯೇಸುನಾಮದಲ್ಲಿ ಅಂತ್ಯವಾಗಲಿ. (2ಕೊರಿಯಂತೆ 10:4).
4.ನನ್ನ ಕುಟುಂಬದಲ್ಲಿ ಕಾರ್ಯಚರಣೆ ಮಾಡುತ್ತಿರುವ ಯಾವುದೇ ಮರಣದ, ದುರಂತದ ಬಡತನದ ಸಂದೇಶಗಾರನಾಗಲೀ ಯೇಸುನಾಮದಲ್ಲಿ ನಾಶವಾಗಿ ಹೋಗಲಿ.(ಕೀರ್ತನೆಗಳು 107:20)
5.ನನ್ನ ಕುಟುಂಬದ ಮೇಲಿರುವ ಯಾವುದೇ ಅವ್ಯವಸ್ಥೆಯ, ವಿವಾಹ ವಿಚ್ಛೇದನದ ವಿಳಂಬದ ಶಾಪವಾಗಲಿ ಯೇಸುನಾಮದಲ್ಲಿ ಪವಿತ್ರಾತ್ಮನ ಬೆಂಕಿ ಬಿದ್ದು ಅವುಗಳೆಲ್ಲಾ ಮುರಿದು ಬೀಳಲಿ. (ಗಲಾತ್ಯ 3:13).
6.ಕರ್ತನೇ ನಿನ್ನ ಮಹಿಮೆಯನ್ನು ಯೇಸುನಾಮದಲ್ಲಿ ಪ್ರಕಟಪಡಿಸು(ವಿಮೋಚನಾ ಕಾಂಡ 33:18).
7. ನಮ್ಮ ಮೂಲದಲ್ಲಿರುವ ಯಾವುದೇ ವೈಫಲ್ಯದ, ಸಾಧನೆಹೀನತೆಯ ಮಾದರಿಗಳಾಗಲೀ ಯೇಸುನಾಮದಲ್ಲಿ ಲಯವಾಗಿ ಹೋಗಲಿ.(ಫಿಲಿಪ್ಪಿ 4:13)
8. ಈ ವರ್ಷದಲ್ಲಿ ದೈವೀಕ ಸಹಾಯಕರನ್ನು ದೊಡ್ಡ ದೊಡ್ಡ ಸಾಕ್ಷಿಗಳನ್ನು ಹಣಕಾಸಿನ ಸಂವೃದ್ಧಿಯನ್ನು ಯೇಸುನಾಮದಲ್ಲಿ ನಾನು ಆನಂದಿಸುವೆನು. (ಧರ್ಮೋಪದೇಶಕಾಂಡ 28:12).
9. ನನ್ನ ಜೀವಿತದಲ್ಲಿ ಇರುವ ಯಾವುದೇ ರೀತಿಯ ಲೈಂಗಿಕ ಮಲಿನತೆಗಳು ಸುಟ್ಟು ಬೂದಿ ಮಾಡುವ ಆತ್ಮನ ಅಗ್ನಿಯನ್ನು ಯೇಸುನಾಮದಲ್ಲಿ ನಾನು ಹೊಂದುವೆ. (1ಕೊರಿಯಂತೆ 6:18)
10. ನನ್ನ ಜೀವಿತದಲ್ಲಿರುವ ಯಾವುದೇ ಸೈತಾನ ಸಂಬಂಧಿ ಪ್ರಭಾವಗಲಾಗಲೀ ಪವಿತ್ರಾತ್ಮನ ಅಗ್ನಿಯಿಂದ ಯೇಸುನಾಮದಲ್ಲಿ ನಂದಿಸಲ್ಪಡಲಿ. ( ಯಾಕೋಬ 4:7)
Join our WhatsApp Channel
Most Read
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟ -3● ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ.
● ಕೃಪೆಯ ಉಡುಗೊರೆ
● ನೋವಿನಲ್ಲೂ ದೇವರಿಗೆ ಒಡಂಬಟ್ಟು ನಡೆಯುವುದನ್ನು ಕಲಿಯುವುದು
● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ದಿನ 06:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಪುರುಷರು ಏಕೆ ಪತನಗೊಳ್ಳುವರು -6
ಅನಿಸಿಕೆಗಳು