ಅನುದಿನದ ಮನ್ನಾ
ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Monday, 16th of December 2024
4
1
110
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ನನಗಾಗಿ ಇಟ್ಟಿರುವ ಬಾಗಿಲುಗಳು ತೆರೆಯಲ್ಪಡಲಿ
"ಆದರೆ ಕರ್ತನ ದೂತನು ರಾತ್ರಿಯಲ್ಲಿ ಸೆರೆಮನೆಯ ಬಾಗಿಲುಗಳನ್ನು ತೆರೆದು ಅವರನ್ನು ಹೊರಕ್ಕೆ ಕರೆದುಕೊಂಡು ಬಂದನು.. "(ಅಪೊಸ್ತಲರ ಕೃತ್ಯಗಳು 5:19)
ಬಾಗಿಲುಗಳಿಗೆ ಸಂಬಂಧಿಸಿದಂತೆ ಆತ್ಮಿಕವಾದ ಅನೇಕ ವಿಚಾರಗಳಿವೆ. ಶಾಸ್ತ್ರದಲ್ಲಿ ಬರೆದಿರುವಂತ ಎಲ್ಲವೂ ನಾವು ಕಲಿಯಲಿಕ್ಕಾಗಿಯೇ ಬರೆಯಲ್ಪಟ್ಟಿದೆ. ಅವುಗಳಲ್ಲಿ ಮುಖ್ಯವಾಗಿ ಬಾಗಿಲುಗಳನ್ನು ಕುರಿತಾದ ಪಾಠವನ್ನು ನಾವು ಕಲಿತುಕೊಳ್ಳಬೇಕೆಂದು ದೇವರು ನಮ್ಮಿಂದ ಬಯಸುತ್ತಾನೆ. ಭೌತಿಕ ಆಯಾಮದಲ್ಲಿ ಇರುವಂತದ್ದು ಆತ್ಮಿಕ ವಿಚಾರಗಳಿಗೆ ಪ್ರತಿರೂಪವಾಗಿದೆ. ನೀವು ಈ ತತ್ವವನ್ನು ಅರಿತು ಕೊಂಡಾಗ ನೀವು ದೇವರಿಂದ ಒದಗುವ ಆಶೀರ್ವಾದಗಳನ್ನು ಸಂಪೂರ್ಣವಾಗಿ ಅನುಭವಿಸುವಂತೆ ಅದು ನಿಮಗೆ ಸಹಾಯ ಮಾಡುತ್ತದೆ.
ಭೌತಿಕ ಆಯಾಮದಲ್ಲೂ ಬಾಗಿಲುಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಭೌತಿಕ ಆಯಾಮದಲ್ಲಿ ಬಾಗಿಲುಗಳ ಕಾರ್ಯಗಳು ಯಾವುವೆಂದು ನಾವು ಅರಿತುಕೊಂಡಿದ್ದರೆ ಬಹಳ ಸುಲಭವಾಗಿ ಆತ್ಮಿಕ ಆಯಾಮದಲ್ಲಿಯೂ ಸಹ ಇದರ ಕಾರ್ಯಗಳನ್ನು ನಾವು ವಿವೇಚಿಸಬಹುದು. ಏಕೆಂದರೆ ಆತ್ಮಿಕ ಆಯಾಮದಲ್ಲಿಯೂ ಸಹ ಬಾಗಿಲುಗಳು ಇವೆ.
ಬಾಗಿಲುಗಳು ಜನರು ಅಥವಾ ವಸ್ತುಗಳು ಕೈಗೆ ಸಿಗಲಾರದಂತೆ ಅಟ್ಟಗೋಡೆಯಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.
ಬಾಗಿಲುಗಳ ಅಸ್ತಿತ್ವದಿಂದ ಆಗುವ ಪರಿಣಾಮಗಳು ಯಾವುವು?
1. ಬಾಗಿಲುಗಳು ಪ್ರವೇಶಕ್ಕೆ ಅನುವು ನೀಡುತ್ತದೆ. ಕೆಲವು ವ್ಯವಹಾರಸ್ಥರು ತಮ್ಮ ವ್ಯವಹಾರಗಳಲ್ಲಿ ಮುನ್ನೋಟವನ್ನು ಕಾಣಲಾರವೆಂದು ಗುಣಗುಟ್ಟುತ್ತಾರೆ. ಅವರ ಬಳಿ ಮಹತ್ತರವಾದ ವ್ಯವಹಾರವಿರುತ್ತದೆ ಅದ್ಭುತವಾದ ವಸ್ತುಗಳಿಂದಲೂ ಸೇವೆಗಳಿಂದಲೂ ಅದು ಕೂಡಿರುತ್ತದೆ ಆದರೂ ಅವರು ಗ್ರಾಹಕರಿಲ್ಲದೆ ಸೊರಗುತ್ತಿರುತ್ತಾರೆ. ಕೆಲವೊಮ್ಮೆ ಇವರ ವಿರುದ್ಧವಾಗಿ ಇಲ್ಲವೇ ಇವರ ವ್ಯವಹಾರಕ್ಕೆ ವಿರುದ್ಧವಾಗಿ ಒಂದು ಆತ್ಮಿಕ ಬಾಗಿಲು ಮುಚ್ಚಲ್ಪಟ್ಟಿರುತ್ತದೆ.
ಬನ್ನಿ ಸತ್ಯವೇದ ಈ ವಾಕ್ಯಗಳನ್ನು ನೋಡೋಣ
"ದ್ವಾರಗಳೇ, ಉನ್ನತವಾಗಿರ್ರಿ; ಪುರಾತನವಾದ ಕದಗಳೇ, ತೆರೆದುಕೊಂಡಿರ್ರಿ; ಮಹಾಪ್ರಭಾವವುಳ್ಳ ಅರಸನು ಆಗವಿುಸುತ್ತಾನೆ. [8] ಮಹಾಪ್ರಭಾವವುಳ್ಳ ಈ ಅರಸನು ಯಾರು? ಮಹಾ ಬಲಿಷ್ಠನೂ ವಿಶೇಷ ಪರಾಕ್ರವಿುಯೂ ಆಗಿರುವ ಯೆಹೋವ, ಯುದ್ಧವೀರನಾಗಿರುವ ಯೆಹೋವ. [9] ದ್ವಾರಗಳೇ, ಉನ್ನತವಾಗಿರ್ರಿ; ಪುರಾತನವಾದ ಕದಗಳೇ, ತೆರೆದುಕೊಂಡಿರ್ರಿ; ಮಹಾಪ್ರಭಾವವುಳ್ಳ ಅರಸನು ಆಗವಿುಸುತ್ತಾನೆ. [10] ಮಹಾಪ್ರಭಾವವುಳ್ಳ ಈ ಅರಸನು ಯಾರು? ಸೇನಾಧೀಶ್ವರನಾದ ಯೆಹೋವನೇ; ಮಹಾಪ್ರಭಾವವುಳ್ಳ ಅರಸನು ಈತನೇ. ಸೆಲಾ."(ಕೀರ್ತನೆಗಳು 24:7-10).
ಈ ಒಂದು ವಾಕ್ಯ ಭಾಗವೂ ಆತ್ಮಿಕವಾದ ಅನೇಕ ಬಾಗಿಲುಗಳು ಅಸ್ತಿತ್ವದಲ್ಲಿದ್ದು ಅವುಗಳು ಉನ್ನತಿಕರಿಸಲ್ಪಡುವುದಕ್ಕೆ ಅಥವಾ ತೆರೆಯಲ್ಪಡುವುದಕ್ಕೆ ಒಂದು ಆಜ್ಞಾಘೋಷವಿತ್ತು ಎಂಬುದನ್ನು ಪ್ರಕಟಿಸುತ್ತದೆ.
2. ಈ ಮುಚ್ಚಲ್ಪಟ್ಟ ಬಾಗಿಲುಗಳ ದೆಸೆಯಿಂದಾಗಿ ವ್ಯವಹಾರ ನಷ್ಟ, ಹೊಸ ವ್ಯವಹಾರದ ಅವಕಾಶಗಳನ್ನು ಆಕರ್ಷಲಾರದೆ, ಮದುವೆ ಇಲ್ಲದೆ ಮತ್ತು ಅನೇಕ ಕಾರ್ಯಗಳಲ್ಲಿ ವಿಳಂಬವನ್ನು ಜನರು ಅನುಭವಿಸುತ್ತಿದ್ದಾರೆ. ನೀವು ಇಂಥ ಪರಿಸ್ಥಿತಿಗಳನ್ನು ಹಾದು ಹೋಗುವಾಗ ನೀವು ಆತ್ಮಿಕ ಆಯಾಮದಲ್ಲಿ ಇದನ್ನು ಉದ್ದೇಶಿಸಿ ಪ್ರಾರ್ಥಿಸಬೇಕಾದ ಅಗತ್ಯವಿದೆ.
"ಜನಾಂಗಗಳ ಐಶ್ವರ್ಯವನ್ನು ನಿನ್ನಲ್ಲಿಗೆ ತರುತ್ತಿರುವರು, ಅವುಗಳ ಅರಸರು ಮೆರವಣಿಗೆಯಾಗಿ ಬರುತ್ತಿರುವರು; ಇದರಿಂದ ನಿನ್ನ ಬಾಗಿಲುಗಳು ಹಗಲಿರುಳೂ ಮುಚ್ಚದೆ ಸದಾ ತೆರೆದಿರುವವು."(ಯೆಶಾಯ 60:11)
ಮೇಲಿನ ಈ ಒಂದು ವಾಕ್ಯ ಭಾಗವೂ ತೆರೆದಿಟ್ಟ ಬಾಗಿಲುಗಳಿಂದ ಆಗುವ ಪರಿಣಾಮವಾಗಿ ಸಂಪತ್ತು ನಮ್ಮ ಕಡೆಗೆ ಹರಿದು ಬರುವಂತೆ ಮಾಡುತ್ತದೆ ಎಂಬುದನ್ನು ಪ್ರಕಟಿಸುತ್ತದೆ. ಹಾಗೆಯೇ ಬಾಗಿಲುಗಳು ಮುಚ್ಚಲ್ಪಟ್ಟಿದ್ದರೆ ದೇಶದಲ್ಲಿರುವ ಯಾವ ಮನುಷ್ಯನಾದರೂ ನಿಮಗೆ ಸಂಪತ್ತನ್ನು ತಂದುಕೊಡಲು ಸಾಧ್ಯವಿಲ್ಲ. ನೀವು ಮಾನಸಾಂತರಗೊಂಡಾಗ ಬಾಗಿಲುಗಳು ನಿಮಗಾಗಿ ತೆರೆದಿರಬೇಕೆಂಬುದೇ ದೇವರ ಚಿತ್ತವಾಗಿದೆ. ಆದರೆ ಆತ್ಮಿಕ ಬಾಗಿಲುಗಳ ಬಗ್ಗೆ ನಿಮಗೆ ಜ್ಞಾನಹೀನತೆ ಇದ್ದರೆ ನೀವು ಹೊಂದುವ ಸಂತೋಷವು ಮಿತವಾಗುತ್ತದೆ.
3.ವೈರಿಯುಮುಚ್ಚಿರುವ ಬಾಗಿಲನ್ನು ತೆರೆಯಲು ದೇವರಿಗೆ ಶಕ್ತಿ ಇದ್ದು ಎಂಥ ಬಾಗಿಲನ್ನಾದರೂ ಆತನು ತೆರೆಯಬಲ್ಲನು. ದೇವರು ತೆರೆದ ಬಾಗಿಲನ್ನು ವೈರಿಯುಮುಚ್ಚಲು ಸಾಧ್ಯವೇ ಇಲ್ಲ. ಆದರೆ ನೀವು ಅದರೊಳಗೆ ಪ್ರವೇಶಿಸಿದಂತೆ ಅವನು ನಿಮಗೆ ತಡೆ ಮಾಡಬಹುದು. ನಾವು ಯೋಚಿಸುವಷ್ಟು ಸೈತಾನನು ಅಷ್ಟೇನೂ ಬಲಶಾಲಿಯಲ್ಲ. ಅವನು ಸಹ ದೇವರಿಂದ ಸೃಷ್ಟಿಸಲ್ಪಟ್ಟವನೇ ಆಗಿದ್ದು ಅವನು ಸಹ ದೇವರ ನಿಯಮಕ್ಕನುಸಾರವಾಗಿಯೇ ಕಾರ್ಯ ಮಾಡಬೇಕು.
ದೇವರು ಮಾಡಿದ್ದನ್ನು ಬದಲಾಯಿಸಲು ಅವನಿಗೆ ಯಾವ ಹಕ್ಕಾಗಲಿ ಬಲವಾಗಲಿ ಇಲ್ಲ. ಈ ಭೂಮಿಯಲ್ಲಿ ಎರಡು ಚಿತ್ತಗಳಿವೆ (1) ದೇವರ ಚಿತ್ತ ಮತ್ತು (2) ಮನುಷ್ಯರ ಚಿತ್ತ. ಯಾವಾಗ ಮನುಷ್ಯನ ಚಿತ್ತವು ದೇವರಚಿತ್ತದೊಂದಿಗೆ ಒಡಂಬಡುತ್ತದೆಯೋ ಆಗ ಸೈತಾನನ ಚಿತ್ತವನ್ನು ಮನುಷ್ಯನು ಬಹಳ ಸುಲಭವಾಗಿ ತಡೆಹಿಡಿಯಬಹುದು.
"ಯಾಕಂದರೆ ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭವು ನನಗುಂಟು ಮತ್ತು ವಿರೋಧಿಗಳು ಬಹಳ ಮಂದಿ ಇದ್ದಾರೆ."(1 ಕೊರಿಂಥದವರಿಗೆ 16:9)
ಅಪೋಸ್ತಲನಾದ ಪೌಲನು ಕಂಡುಕೊಂಡ ಈ ಆತ್ಮಿಕ ಸತ್ಯವನ್ನು ನಾನಿಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ದೇವರು ಪೌಲನಿಗಾಗಿ ಮಹಾಸಂದರ್ಭದ ಬಾಗಿಲುಗಳನ್ನು ತೆರೆದಿಟ್ಟಿದನು ಆದರೆ ಅದರೊಳಗೆ ಪೌಲನು ಪ್ರವೇಶಿಸಲು ಆಗದಂತೆ ಅನೇಕ ಅಡೆತಡೆಗಳು ಅವನ ಬಾಗಿಲುಗಳನ್ನು ಮುತ್ತುಕೊಂಡು ಅವನು ಅದರೊಳಗೆ ಪ್ರವೇಶಿಸಿ ಅದರ ಆನಂದವನ್ನು ಅನುಭವಿಸದಂತೆ ತಡೆಯುತ್ತಿವೆ ಎಂಬುದನ್ನು ಪೌಲನು ಅರಿತುಕೊಂಡಿದ್ದನು. ಈ ದಿನ ಅಂತಹ ಮಹಾಸಂದರ್ಭಗಳ ಬಾಗಿಲುಗಳು ತೆರೆಯಲ್ಪಡಬೇಕೆಂದು ಅತಿ ಉತ್ಸಾಹದಿಂದ ನೀವು ಪ್ರಾರ್ಥಿಸಬೇಕೆಂದು ನಾನು ಬಯಸುತ್ತೇನೆ. ಈ ಪ್ರಾರ್ಥನೆ ಬಳಿಕ ನೀವು ನಿಶ್ಚಯವಾಗಿ ನಿಮ್ಮ ಜೀವಿತದಲ್ಲಿ ಬದಲಾವಣೆಯನ್ನು ಕಾಣುತ್ತೀರಿ ಎಂದೂ ಹೊಸ ಕಾರ್ಯಗಳು ಮತ್ತು ಹೊಸ ಅವಕಾಶಗಳು ತೋರ್ಪಡಲು ಆರಂಭಿಸುತ್ತವೆ ಎಂದೂ ನಾನು ಬಲವಾಗಿ ನಂಬುತ್ತೇನೆ.
Bible Reading Plan : Romans 11 - 1 Corinthians 1
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ನನ್ನ ಜೀವನಕ್ಕೆ ವಿರೋಧವಾಗಿ ಮುಚ್ಚಲ್ಪಟ್ಟಿರುವ ಎಲ್ಲಾ ಬಾಗಿಲುಗಳು ಯೇಸುವಿನ ರಕ್ತದ ಮೂಲಕ ಯೇಸು ನಾಮದಲ್ಲಿ ತೆರೆಯಲ್ಪಡಲಿ. (ಪ್ರಕಟಣೆ 3:8)
2. ನನಗಾಗಿ ಇಟ್ಟಿರುವ ಬಾಗಿಲುಗಳನ್ನು ಮುಚ್ಚಲು ಹವಣಿಸುವ ಯಾವುದೇ ಶಕ್ತಿಗಳಾಗಲಿ, ಯೇಸು ನಾಮದಲ್ಲಿ ಅವುಗಳನ್ನು ನಿಷ್ಕ್ರಿಯಗೊಳಿಸುತ್ತೇನೆ. (ಯೆಶಾಯ 22:22).
3. ನನಗಾಗಿ ಇಟ್ಟಿರುವ ಬಾಗಿಲುಗಳ ಒಳಗೆ ಪ್ರವೇಶಿಸಲು ಅಡ್ಡಿಪಡಿಸುತ್ತಿರುವ ಎಲ್ಲವನ್ನು ಯೇಸುನಾಮದಲ್ಲಿ ಬಂಧಿಸುತ್ತೇನೆ. (ಮತ್ತಾಯ 18:18).
4. ತಂದೆಯೇ ಈ ವರ್ಷದಲ್ಲಿ ನನಗಾಗಿ ದೊಡ್ಡ ಬಾಗಿಲುಗಳು ಯೇಸು ನಾಮದಲ್ಲಿ ತೆರೆಯಲ್ಪಡಲಿ. (1ಕೊರಿಯಂತೆ 16:9)
5.ದ್ವಾರಗಳೇ ಉನ್ನತವಾಗಿರಿ ಪ್ರವೇಶ ದ್ವಾರಗಳೇ ತೆರೆದುಕೊಂಡಿರಿ. ನಾನು ನನ್ನ ಆಶೀರ್ವಾದಗಳ, ಸಂಭ್ರಮದ ಮತ್ತು ಮಹಿಮೆಯ ಬಾಗಿಲುಗಳನ್ನು ಪ್ರವೇಶಿಸುವಂತೆ ಯೇಸು ನಾಮದಲ್ಲಿ ಅವು ತೆರೆಯಲ್ಪಡಲಿ. (ಕೀರ್ತನೆ 24:7-10)
6.ನನ್ನ ಜೀವಿತಕ್ಕೆ ವಿರೋಧವಾಗಿ ತೆರೆದಿರುವ ಎಲ್ಲಾ ವ್ಯಾಧಿಗಳ ರೋಗಗಳ ಸಾಲಗಳ ಮತ್ತು ದುಷ್ಟತ್ವದ ಬಾಗಿಲುಗಳು ಯೇಸು ನಾಮದಲ್ಲಿ ಮುಚ್ಚಲ್ಪಡಲಿ.(ಪ್ರಕಟಣೆ 3:7)
7. ಓ ಕರ್ತನೆ ನನ್ನನ್ನು ಕರುಣಿಸು, ವೈರಿಯು ನನ್ನ ಆಶೀರ್ವಾದಕ್ಕೆ ವಿರೋಧವಾಗಿ ಯಾವುದೇ ಬಾಗಿಲನ್ನು ಮುಚ್ಚಿದ್ದರೂ ಆ ಬಾಗಿಲನ್ನು ಯೇಸು ನಾಮದಲ್ಲಿ ನನಗಾಗಿತೆರೆಯಿರಿ.(ಲೂಕ 1:78-79)
8.ಜನಾಂಗಗಳಲ್ಲಿರುವ ಸಕಲ ಸಂಪತ್ತುಗಳು ನನ್ನ ಕಡೆಗೆ ಹರಿದು ಬರುವಂತೆ ಯೇಸು ನಾಮದಲ್ಲಿ ನನಗಾಗಿ ಇಟ್ಟಿರುವ ಬಾಗಿಲುಗಳು ತೆರೆಯಲ್ಪಡಲಿ. (ಯೆಶಾಯ 60:11)
9 ದೇವದೂತರುಗಳಿರಾ, ಪೂರ್ವ ಪಶ್ಚಿಮ ಉತ್ತರ ದಕ್ಷಿಣ ದಿಕ್ಕುಗಳಿಗೆ ಹೋಗಿ ರಾಷ್ಟ್ರೀಯ ಅಂತರಾಷ್ಟ್ರೀಯ ಸಹಾಯದ, ಆಶೀರ್ವಾದದ ಬಾಗಿಲುಗಳನ್ನು ಯೇಸು ನಾಮದಲ್ಲಿ ನನಗಾಗಿಯೂ ನನ್ನ ಕುಟುಂಬಕ್ಕಾಗಿಯೂ ಮತ್ತು ನನ್ನ ವ್ಯಾಪಾರಕ್ಕಾಗಿಯೂ ತೆರೆದು ಬನ್ನಿ.(ಕೀರ್ತನೆ 103:20)
10. ನಾನು ನನಗಾಗಿ ದೇವರು ಇಟ್ಟಿರುವ ಸಂಮೃದ್ಧಿಯನ್ನು ಸಹಾಯ ಹಸ್ತವನ್ನು ಆಶೀರ್ವಾದಗಳನ್ನು ಮತ್ತು ಮಹಿಮೆಯನ್ನು ನನ್ನ ಬಳಿಗೆ ಬರಲೆಂದು ಯೇಸು ನಾಮದಲ್ಲಿ ಕರೆ ನೀಡುತ್ತೇನೆ. (ಯೋಹಾನ 10:10)
Join our WhatsApp Channel
Most Read
● ನಮ್ಮ ಆಯ್ಕೆಯ ಪರಿಣಾಮಗಳು● ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?
● ಕ್ರಿಸ್ತನ ರಾಯಭಾರಿಗಳು
● ಹನ್ನಾಳ ಜೀವಿತದಿಂದ ಕಲಿಯಬೇಕಾದ ಪಾಠ
● ಕ್ರಿಸ್ತನೊಂದಿಗೆ ಸಿಂಹಾಸನದಲ್ಲಿ ಕೂತುಕೊಳ್ಳುವುದು
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?
● ಕೊರತೆಯಿಲ್ಲ
ಅನಿಸಿಕೆಗಳು