ಅನುದಿನದ ಮನ್ನಾ
ದಿನ 27:40 ದಿನಗಳ ಉಪವಾಸ ಪ್ರಾರ್ಥನೆ
Wednesday, 18th of December 2024
4
1
78
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಪವಿತ್ರಾತ್ಮನೊಂದಿಗೆ ಅನ್ಯೋನ್ಯತೆ
"ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು."(ಯೋಹಾನ 14:16).
ಪವಿತ್ರಾತ್ಮ ಎಂಬುವವನು ವ್ಯಕ್ತಿಯಾಗಿದ್ದಾನೆ ಮತ್ತು ತ್ರಯೇಕತ್ವದಲ್ಲಿ ಒಬ್ಬನಾಗಿದ್ದಾನೆ.ಅನೇಕ ಮಂದಿ ದೇವ ಮನುಷ್ಯರು ಆತನ ಬಗ್ಗೆ ಅನೇಕ ವಿಚಾರಗಳನ್ನು ಬರೆದಿದ್ದರೂ, ಆತನ ಕುರಿತು ನಾವು ಏನೆಲ್ಲಾ ಹೇಳಬಹುದಾಗಿದಿಯೋ ಅದಕ್ಕಿಂತಲೂ ಬಹು ಕಡಿಮೆಯಾಗಿಯೇ ಆ ದೇವ ಮನುಷ್ಯರು ಪವಿತ್ರ ಗ್ರಂಥದಲ್ಲಿ ಬರೆದಿದ್ದಾರೆ ಎಂದು ಎನಿಸುತ್ತದೆ.
ಮೂಲಭೂತವಾಗಿ ಹೇಳಬೇಕೆಂದರೆ ಪವಿತ್ರಾತ್ಮನ ಕುರಿತು ನಾವು ಹೇಳಲು ಸಾಕಷ್ಟಿದೆ ಆದರೆ ಈ ಅನೇಕ ವರ್ಷಗಳಲ್ಲಿ ನಾವು ಹೇಳಿರುವಂಥದ್ದು ಅತಿ ಕಡಿಮೆಯೇ. ಪವಿತ್ರಾತ್ಮನು ತ್ರಯೇಕತ್ವದಲ್ಲಿ ಮೂರನೆಯ ವ್ಯಕ್ತಿಯಾಗಿದ್ದು ಆತನ ಪಾತ್ರವನ್ನು ಕಡೆಗಣಿಸುವ ಹಾಗಿಲ್ಲ ಮತ್ತು ಕಡೆಗಣಿಸಬಾರದು.
ಆದಿಯಲ್ಲಿ ದೇವರಾತ್ಮನು ಚಲಿಸುತ್ತಿದ್ದನು.(ಆದಿಕಾಂಡ1:2). ಸೃಷ್ಟಿ ಕಾರ್ಯದಲ್ಲಿ ದೇವರಾತ್ಮನು ಸಕ್ರಿಯನಾಗಿದ್ದನು. ನಾವೆಲ್ಲರೂ ಪವಿತ್ರಾತ್ಮನ ಅನ್ಯೋನ್ಯತೆಯನ್ನು ಹೊಂದಿಕೊಂಡು ಆತನೊಂದಿಗೆ ಸಹಭಾಗಿತ್ವದಲ್ಲಿ ನಡೆಯಬೇಕೆಂದು ನಾನಿಂದು ಬಯಸುತ್ತೇನೆ.
ಪವಿತ್ರಾತ್ಮನು ಯಾರು?
1.ಪವಿತ್ರಾತ್ಮನು ದೇವರಾಗಿದ್ದಾನೆ. ಆತನು ದೇವರ ತ್ರಯೇಕತ್ವಗಳಾದ ತಂದೆ ದೇವರು- ದೇವ ಕುಮಾರನು ಮತ್ತು ದೇವರಾತ್ಮನು ಎಂಬುದರಲ್ಲಿ ಒಂದು ಭಾಗವಾಗಿದ್ದಾನೆ.
ಆತನು ವ್ಯಕ್ತಿಯಾಗಿದ್ದಾನೆ ಮತ್ತು ಆತನು ದೇವರು ಸಹ ಆಗಿದ್ದಾನೆ. ಪವಿತ್ರಾತ್ಮನೆಂದರೆ ಕೆಲವರು ತಪ್ಪಾಗಿ ಅರ್ಥೈಸಿಕೊಂಡಿರುವ ಪ್ರಕಾರ ಆತನು ಒಂದು ಶಕ್ತಿಯಲ್ಲ. ಆತನು ಬೆಂಕಿಯಲ್ಲ ಅಥವಾ ಪಕ್ಷಿಯಲ್ಲ ಅಥವಾ ಪಾರಿವಾಳವಲ್ಲ ಅಥವಾ ನೀರಲ್ಲ. ಈ ಎಲ್ಲಾ ಚಿನ್ಹೆಗಳನ್ನು ಆತನ ವ್ಯಕ್ತಿತ್ವವನ್ನು ಆತನ ಬಲವನ್ನು ತೋರಿಸಲು ಬಳಸಿದ್ದರೂ ಸಹ ಆತನು ಏನಾಗಿದ್ದಾನೋ ಅದು ಇವುಗಳಲ್ಲ
ಆತನು ದೇವರಾಗಿದ್ದಾನೆ ಮತ್ತು ಆತನು ವ್ಯಕ್ತಿಯೂ ಆಗಿದ್ದಾನೆ ಆತನಿಗೆ ಭಾವನೆಗಳಿವೆ ಆತನು ಸ್ಪಂದಿಸ ಬಲ್ಲನು. ಆತನು ದುಃಖಿಸುತ್ತಾನೆ ಹಾಗೆ ಆತನು ಸಂತೋಷಪಡುತ್ತಾನೆ ಆತನು ಮಾತನಾಡಬಲ್ಲನು ಈ ಎಲ್ಲಾ ಸೂಚನೆಗಳು ಜೀವವುಳ್ಳವರಿಗೆ ಮಾತ್ರ ಇರುವಂತದ್ದು.
2. ಪವಿತ್ರಾತ್ಮನೆಂಬುವವನು ನಮ್ಮೊಳಗಿರುವ ದೇವರಾತ್ಮನಾಗಿದ್ದಾನೆ.
ಈ ಲೋಕದಲ್ಲಿ ಅನೇಕ ವಿಧವಾದ ಆತ್ಮಗಳಿವೆ ಅವುಗಳು ಯಾವುವೆಂದರೆ ಮಾನವನ ಆತ್ಮ, ದೇವದೂತರ ಆತ್ಮ ಮತ್ತು ದುರಾತ್ಮಗಳು. ಪವಿತ್ರಾತ್ಮ ದೇವರು ನಮ್ಮೊಳಗೆ ವಾಸಿಸುವ ದೇವರ ಆತ್ಮನಾಗಿದ್ದಾನೆ.
3. ಆತನು ದೇವರಲ್ಲಿನ ಜೀವವನ್ನು ಪ್ರೀತಿಯನ್ನು, ಸ್ವಭಾವವನ್ನು ಮತ್ತು ಬಲವನ್ನು ನಮ್ಮ ಜೀವಿತದಲ್ಲಿ ಬಿಡುಗಡೆ ಮಾಡುತ್ತಾನೆ.
ನಮ್ಮ ಜೀವಿತದಲ್ಲಿ ದೇವರ ಬಲವು ನಮ್ಮೊಳಗೆ ಚಲಿಸುವಂತೆ ಮಾಡಲು ಆತನ ಪ್ರಸನ್ನತೆಯು ಇಂಧನವಾಗಿ ಕಾರ್ಯ ಮಾಡುತ್ತದೆ. ಪವಿತ್ರಾತ್ಮನ ಪ್ರಸನ್ನತೆಯೇ ದೇವರ ಪ್ರೀತಿ ಮತ್ತು ದೇವರ ಸ್ವಭಾವ ಮತ್ತು ದೇವರ ಬಲವು ನಮ್ಮೊಳಗೆ ತುಂಬಿರುವಂತೆ ಮಾಡುತ್ತದೆ.
4. ಆತನು ನಿತ್ಯನು.
ಪವಿತ್ರಾತ್ಮ ದೇವರು ತಂದೆ ದೇವರು ಹಾಗೂ ದೇವ ಕುಮಾರನಂತೆಯೇ ಮರಣವಿಲ್ಲದವನಾಗಿದ್ದಾನೆ. ಆತನಿಗೂ ಸಹ ಆದಿಯೂ ಇಲ್ಲ ಅಂತ್ಯವೂ ಇಲ್ಲ ಮಿಕ್ಕದಂತೆ ಮನುಷ್ಯ ದೇವದೂತರು
ದುರಾತ್ಮಗಳು ಸೃಷ್ಟಿ ಆಕಾಶಗಳು ಭೂಮಿ ಎಲ್ಲವೂ ಸೃಷ್ಟಿಸಲ್ಪಟ್ಟವುಗಳಾಗಿವೆ.
ಈಗ ನಾವು ನೋಡುವ ದೆವ್ವಗಳಾಗಲಿ ದುರಾತ್ಮಗಳಾಗಲಿ ದೇವರು ಅವರುಗಳನ್ನು ಸೃಷ್ಟಿಸಲಿಲ್ಲ. ಆತನು ಅವರನ್ನು ದೇವದೂತರನ್ನಾಗಿ ನಿರ್ಮಿಸಿದನು ಕಾಲಾಂತರದಲ್ಲಿ ಅವರುಗಳು ದೆವ್ವಗಳಾಗಿಯೂ ದುರಾತ್ಮಗಳಾಗಿಯೂ ಮಾರ್ಪಟ್ಟು ಸ್ಥಳಾಂತರಗೊಂಡರು
ಹೇಗೂ ಪವಿತ್ರಾತ್ಮನು ನಿತ್ಯನಾಗಿದ್ದಾನೆ ಆತನು ಜೀವಾತ್ಮ(ಜೋವೆ)ನಾಗಿದ್ದಾನೆ. ಆತನು ಮರಣಿಸುವುದೂ ಇಲ್ಲ ಮತ್ತು ಆತನಿಗೆ ದೇವರಂತೆ ಆದಿಯೂ ಅಂತ್ಯವೂ ಇಲ್ಲ ಹಾಗಾಗಿ ಆತನು ನಿತ್ಯನಾಗಿದ್ದಾನೆ.
5.ನಾವು ದೇವರನ್ನು ಮೆಚ್ಚಿಸಲು ಪವಿತ್ರಾತ್ಮನು ನಮಗೆ ಸಹಾಯ ಮಾಡುತ್ತಾನೆ.
ಇದು ಆತನ ಪಾತ್ರವಾಗಿದೆ. ಆತನು ಸಹಾಯಕನಾಗಿದ್ದಾನೆ
6.ಆತನು ನಮ್ಮ ಪ್ರಾರ್ಥನಾ ಜೀವಿತಕ್ಕೆ ಸಹಕಾರಿಯಾಗಿದ್ದಾನೆ(ರೋಮ 8:26).
ಈ ಎಲ್ಲಾ ಕಾರ್ಯಗಳನ್ನು ಪವಿತ್ರಾತ್ಮನು ಒಬ್ಬ ವಿಶ್ವಾಸಿಯ ಜೀವಿತದಲ್ಲಿ ಸಕ್ರಿಯವಾಗಿ ಮಾಡುತ್ತಾ ಬರುತ್ತಿದ್ದಾನೆ.
7.ಆತನು ನಮಗೆ ಅಸಾಧ್ಯವಾದ ಕಾರ್ಯಗಳನ್ನು ನಾವು ಮಾಡಲು ಸಹಾಯ ಮಾಡುತ್ತಾನೆ.
ಆತನ ವಿಶೇಷತೆಯೇ ಅಸಾಧ್ಯವಾದುದನ್ನು ಸಾಧ್ಯವಾಗುವಂತೆ ಮಾರ್ಪಡಿಸುವಂತದ್ದು.
8.ನಮ್ಮ ಜೀವಿತದಲ್ಲಿ ಶತ್ರುವಿನ ಮೇಲೆ ಜಯ ಸಾಧಿಸಲು ಪವಿತ್ರಾತ್ಮನು ನಮಗೆ ನೆರವಾಗುತ್ತಾನೆ.
ಯೆಶಾಯ 59:19 ಹೇಳುತ್ತದೆ " ಶತ್ರುಗಳು ಪ್ರವಾಹೋಪಾದಿಯಲ್ಲಿ ಬರುವಾಗ ದೇವರು ತನ್ನ ಆತ್ಮನನ್ನು ಅದಕ್ಕೆ ತಡೆಗೋಡೆಯಾಗಿ ನಿಲ್ಲಿಸುವನು" ಎಂದು. ದೇವರ ಆತ್ಮನು ನಮಗೆ ಶತ್ರುವಿನ ಮೇಲೆ ಜಯ ಸಾಧಿಸಲು ನೆರವಾಗುತ್ತಾನೆ.
9. ಪವಿತ್ರಾತ್ಮನು ನಮ್ಮ ಜೀವಿತವನ್ನು ದೇವರ ಪರಿಪೂರ್ಣವಾದ ಚಿತ್ತದ ಮಾರ್ಗದಲ್ಲಿ ನಡೆಸುತ್ತಾನೆ.
ಪ್ರಸ್ತುತ ಸಮಯದಲ್ಲಿ ನಮ್ಮ ಜೀವಿತದಲ್ಲಿ ಆತನು ಮಾಡುವ ಮುಖ್ಯವಾದ ಏಳು ಸೇವಾಕಾರ್ಯಗಳು ಯಾವುವು?
ಯೋಹಾನ 14:16. ರ ಆಂಪ್ಲಿಫೈಡ್ ಬೈಬಲ್ ಭಾಷಾಂತರವು ಈ ಕೆಳಕಂಡ 7 ಪವಿತ್ರಾತ್ಮನ ಸೇವಾಕಾರ್ಯದ ಮಹತ್ತರ ಅಂಶಗಳನ್ನು ನಮಗೆ ಪ್ರಕಟಿಸುತ್ತದೆ.
1. ಆತನು ಸಂತೈಸುವವನಾಗಿದ್ದಾನೆ
2. ಹಿತಲೋಚಕನಾಗಿದ್ದಾನೆ.
3. ನಮ್ಮ ಸಹಾಯಕನಾಗಿದ್ದಾನೆ.
4. ನಮಗಾಗಿ ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವವ
5. ನಮ್ಮ ಪರವಾಗಿ ವಕಾಲತ್ತು ವಹಿಸುವವ.
6. ಬಲಪಡಿಸುವವ
7. ಜೊತೆಯಾಗಿ ನಿಲ್ಲುವವ.
ಇವು ಪವಿತ್ರಾತ್ಮನ ಏಳು ಸೇವಕಾರ್ಯಗಳಾಗಿವೆ. ನಾವು ಇವುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೆ ಆತ ನೊಂದಿಗೆ ಈ ಕ್ಷೇತ್ರಗಳಲ್ಲಿ ಅನ್ಯೋನ್ಯತೆಯಿಂದನಡೆಯಬಹುದು.
ಈಗ ಮೊದಲನೆಯ ಅಂಶವನ್ನು ನೋಡೋಣ.
1. ಆತನು ನಮ್ಮನ್ನು ಸಂತೈಸುವವನು.
ನೀವು ಆತನೊಂದಿಗೆ ಅನ್ಯೋನ್ಯತೆಯಿಂದ ಇರುವಾಗ ಆತನ ಸಂತೈಸುವಿಕೆಯ ಸೇವಾಕಾರ್ಯವನ್ನು ನೀವು ಅನುಭವಿಸಬಹುದು. ಕೆಲವು ಸಮಯಗಳಲ್ಲಿ ಯಾರೂ ಸಹ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಆದರೆ ನೀವು ಪವಿತ್ರಾತ್ಮನ ಅನ್ಯೋನ್ಯತೆಯಲ್ಲಿ ನಡೆಯುವಾಗ ಆತನು ನಿಮ್ಮನ್ನು ಸಂತೈಸುತ್ತಾನೆ. ಏಕೆಂದರೆ ಕೆಲವು ನಿಶ್ಚಿತ ಸಮಯದಲ್ಲಿ ಯಾವ ಮನುಷ್ಯನು ಸಹ ನಿಮಗೆ ಸಹಾಯ ಮಾಡಲು ಆಗುವುದಿಲ್ಲ. ಈ ಮನುಷ್ಯ ಲೋಕವು ನಿಮ್ಮನ್ನು ಘಾಸಿಗೊಳಿಸಬಲ್ಲದು ಆದರೆ ಪವಿತ್ರಾತ್ಮನ ಲೋಕವು ನಿಮ್ಮನ್ನು ಸಂತೈಸುತ್ತದೆ.
2.ಆತನು ನಿಮ್ಮ ಹಿತಾಲೋಚಕ :
ಕೆಲವು ಸಮಯಗಳಲ್ಲಿ ನಿಮಗೆ ಏನು ಮಾಡಬೇಕು ತಿಳಿಯುತ್ತಿಲ್ಲ ಎನ್ನುವ ಸಮಸ್ಯೆ ಎದುರಾಗುತ್ತದೆ ನೀವು ಪವಿತ್ರಾತ್ಮನೊಂದಿಗೆ ನಿಜವಾದ ಅನ್ಯೋನ್ಯತೆಯನ್ನು ಹೊಂದಿದ್ದರೆ ನೀವು ಎಲ್ಲಿಗೆ ಹೋಗಬೇಕು,?ಏನು ಮಾಡಬೇಕು?ಎಂಬ ಆಲೋಚನೆಯನ್ನು ನೀವು ಆತನಿಂದ ಹೊಂದಿಕೊಳ್ಳುವಿರಿ.
3.ಆತನು ನಿಮ್ಮ ಸಹಾಯಕನಾಗಿದ್ದಾನೆ.
ನೀವು ಪವಿತ್ರಾತ್ಮನ ಅನ್ಯೂನತೆಯಲ್ಲಿ ನಡೆಯುವಾಗ ಸಮಯೋಚಿತವಾದ ಸಹಾಯವನ್ನು ನೀವು ಆನಂದಿಸುವಿರಿ. ನಿಮ್ಮ ಸಮಯಕ್ಕೆ ತಕ್ಕ ಹಾಗೆ ಸಹಾಯವು ನಿಮಗೆ ದೊರಕುತ್ತದೆ.
4. ಆತನು ನಿಮಗಾಗಿ ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವವನಾಗಿದ್ದಾನೆ. ಪವಿತ್ರಾತ್ಮನು ನಿಮ್ಮ ಜೀವಿತದಲ್ಲಿ ದೇವರ ಪರಿಪೂರ್ಣವಾದ ಚಿತ್ತ ಏನೆಂಬುದನ್ನು ತಿಳಿದು ಅದರಂತೆಯೇ ನಿಮಗಾಗಿ ಪ್ರಾರ್ಥಿಸುವವನಾಗಿದ್ದಾನೆ (ರೋಮ 8:26). ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವುದನ್ನು ನಾನು ನಂಬುತ್ತೇನೆ. ನಾವು ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಾಗ ಪವಿತ್ರಾತ್ಮನು ನಮಗಾಗಿ ವಿಜ್ಞಾಪಿಸುತ್ತಾನೆ ನಮಗಾಗಿ ಗೋಳಾಡುತ್ತಾನೆ ನಮ್ಮ ಪರವಾಗಿ ವಕಾಲತು ವಹಿಸುತ್ತಾನೆ. ನಮಗಾಗಿ ಮಧ್ಯಸ್ಥಿಕೆಯನ್ನು ವಹಿಸುತ್ತಾನೆ ಇವುಗಳೆಲ್ಲವೂ ಪವಿತ್ರಾತ್ಮನ ಸೇವಾ ಕಾರ್ಯಗಳಾಗಿದ್ದು ನಾವು ಆತನೊಂದಿಗೆ ಅನ್ಯೋನ್ಯವಾಗಿ ನಡೆಯುವಾಗ ಆತನ ವ್ಯಕ್ತಿಗತ ಪ್ರಸನ್ನತೆಯನ್ನು ಆತನ ಸೇವಾ ಕಾರ್ಯವನ್ನು ಅನುಭವಿಸುವ ಸ್ಥಾನದಲ್ಲಿರುತ್ತೇವೆ.
ಪವಿತ್ರಾತ್ಮನ ಜೊತೆ ಅನ್ಯೋನ್ಯತವಾಗಿರುವಂತ್ತದ್ದೆ ಆತನ ಸಹಭಾಗಿತ್ವದಲ್ಲಿ ಇರುವಂತದ್ದಾಗಿದೆ. ನೀವು ಆತನೊಂದಿಗೆ ಸಹಭಾಗಿತ್ವದಲ್ಲಿ ನಡೆಯುವ ಸಮಯದಲ್ಲಿ ಮತ್ತು ಆತನೊಂದಿಗೆ ಅನ್ಯೋನ್ಯತೆಯಲ್ಲಿ ಇರುವಾಗ ಆತನ ಏಳು ಸೇವಾ ಕಾರ್ಯಗಳು ನಿಮ್ಮ ಜೀವಿತದಲ್ಲಿ ಸಂಪೂರ್ಣವಾಗಿ ಸಕ್ರಿಯೆಗೊಳ್ಳುತ್ತದೆ.
ಪವಿತ್ರಾತ್ಮ ನೊಂದಿಗೆ ಐಕ್ಯತೆ ಸಾಧಿಸಲು ಇರುವ ಮಾರ್ಗಗಳಾವುವು?
1. ಆತನ ಅಸ್ತಿತ್ವವನ್ನು ಒಪ್ಪಿಕೊಳ್ಳಿ.
"ನಿಮ್ಮ ಎಲ್ಲಾ ಮಾರ್ಗಗಳಲ್ಲೂ ಒಡಂಬಟ್ಟು ನಡೆಯಿರಿ" ಎಂದು ಜ್ಞಾನೋಕ್ತಿ 3:6 ಹೇಳುತ್ತದೆ. ನೀವು ಒಬ್ಬ ವಿಶ್ವಾಸಿಯಾಗಿರುವುದರಿಂದ ಆತನು ನಿಮ್ಮೊಳಗೆ ಇದ್ದಾನೆ. ಆದರೆ ನೀವು ಆತನನ್ನು ಒಪ್ಪಿಕೊಳ್ಳದಿದ್ದರೆ ನೀವು ಆತನೊಂದಿಗೆ ಸಹಭಾಗಿತ್ವವನ್ನಾಗಲಿ ಆತನ ಜೊತೆಗಾರಿಕೆಯನ್ನಾಗಲಿ ಆತನ ಸೇವಕಾರ್ಯಗಳನ್ನಾಗಲಿ ಅನುಭವಿಸಲು ಸಾಧ್ಯವಿಲ್ಲ.
2.ಆತನಿಗೆ ವಿಧೇಯರಾಗಿರಿ :
ಅವಿಧೇಯತ್ವ ಮತ್ತು ಪಾಪವು ಪವಿತ್ರಾತ್ಮನು ದುಃಖ ಪಡುವಂತೆ ಮಾಡುತ್ತದೆ. (ಎಫಸ್ಸೆ 4:30). ನೀವು ಪಾಪಮಯ ಕಾರ್ಯಗಳಲ್ಲಿ ನಿರತರಾಗಿರುವಾಗ ಅಥವಾ ಆತನ ಸೂಚನೆಗಳನ್ನು ಉಪೇಕ್ಷೆ ಮಾಡಿದಾಗ ನೀವು ನೇರವಾಗಿಯೂ ಮತ್ತು ಪರೋಕ್ಷವಾಗಿಯೂ ದೇವರಾತ್ಮನನ್ನು ದುಃಖ ಪಡಿಸುತ್ತೀರಿ.
3.ಆತನಿಗೆ ಪ್ರಶ್ನೆಗಳನ್ನು ಕೇಳಿರಿ.
"ನನ್ನನ್ನು ಕೇಳಿಕೋ, ನಾನು ನಿನಗೆ ಸದುತ್ತರವನ್ನು ದಯಪಾಲಿಸಿ ನಿನಗೆ ತಿಳಿಯದ ಮಹತ್ತಾದ ಗೂಢಾರ್ಥಗಳನ್ನು ಗೋಚರಪಡಿಸುವೆನು." ಎಂದು ಯೆರೆಮೀಯ 33:3 ಹೇಳುತ್ತದೆ
ನಿಮ್ಮ ಸಹಾಯಕ್ಕಾಗಿಯೇ ಆತನಿದ್ದಾನೆ ನೀವು ಕಷ್ಟಗಳನ್ನು ಎದುರಿಸುವಾಗ ನೀವು ಪ್ರಾರ್ಥಿಸುವುದು ಒಳ್ಳೆಯದೇ ಆದರೆ ಪ್ರಶ್ನೆ ಕೇಳುವಂಥದ್ದು ಪ್ರಾರ್ಥನೆಗಿಂತ ವ್ಯತ್ಯಾಸವಾದುದ್ದು. ಪ್ರಾರ್ಥನೆಯಲ್ಲಿ ಸೂಚನೆಗಳನ್ನು ಕೇಳುತ್ತಿದ್ದೀರಿ ಎಂದರೆ ನೀವು ಪವಿತ್ರಾತ್ಮನನ್ನು ಪ್ರಶ್ನೆ ಕೇಳುತ್ತಿದ್ದೀರಿ ಎಂದರ್ಥ. ಪವಿತ್ರಾತ್ಮನೇ ಈ ವಿಷಯಗಳಿಗಾಗಿ ನಾನು ಏನು ಮಾಡಬೇಕು ಈ ವ್ಯಕ್ತಿ ಯಾರು? ನಾನು ಎಲ್ಲಿಗೆ ಹೋಗಬೇಕು ನೀವು ಈ ರೀತಿ ಪ್ರಶ್ನಿಸುವಾಗ ನೀವು ಆತನೊಂದಿಗೆ ಸಂಪರ್ಕದಲ್ಲಿ ಇರುತ್ತೀರಿ. ಆಗ ಆತನು ನಿಮಗೆ ಸ್ಪಂದಿಸುತ್ತಾನೆ ಏಕೆಂದರೆ ಆತನಿಗೆ ಸ್ವರವಿದ್ದು ಆತನು ವ್ಯಕ್ತಿಯಂತೆ ಮಾತಾಡಬಲ್ಲನು.
4.ಆತನ ಮೇಲೆ ಆಧಾರಗೊಳ್ಳಿರಿ.
ಯಾವುದೇ ವೈದ್ಯರಾಗಲಿ ಅಥವಾ ನುರಿತ ತಜ್ಞರಾಗಲಿ ಹೇಳುವುದೇನೆಂದರೆ ನಿಮ್ಮ ಸ್ವಜ್ಞಾನದ ಮೇಲೆ ಆಧಾರ ಗೊಳ್ಳಬೇಡಿರಿ ಎಂದು. ನಿಮ್ಮ ಭೌತಿಕ ಕಣ್ಣುಗಳಿಂದ ವಾಸ್ತವವಾಗಿ ನೈಸರ್ಗಿಕ ಆಯಾಮದಲ್ಲಿ ಏನನ್ನು ನೋಡುತ್ತಿದ್ದೀರೋ ಅದರ ಮೇಲೆ ಆಧಾರಗೊಳ್ಳಬೇಡಿರಿ ಆದರೆ ಪವಿತ್ರಾತ್ಮನ ಮೇಲೆ ಆಧಾರಗೊಳ್ಳಿರಿ.
ಯೆಶಾಯ 42:16 ಹೇಳುತ್ತದೆ "ಕುರುಡರನ್ನು ನೆಪ್ಪಿಲ್ಲದ ಮಾರ್ಗದಲ್ಲಿ ಬರಮಾಡುವೆನು, ಅವರಿಗೆ ಗೊತ್ತಿಲ್ಲದ ದಾರಿಗಳಲ್ಲಿ ಅವರನ್ನು ನಡೆಯಿಸುವೆನು; ಅವರೆದುರಿನ ಕತ್ತಲನ್ನು ಬೆಳಕುಮಾಡಿ ಡೊಂಕನ್ನು ಸರಿಪಡಿಸುವೆನು. ಈ ಕಾರ್ಯಗಳನ್ನು ಬಿಡದೆ ಮಾಡುವೆನು." ಎಂದು
ಯೆಶಾಯ 42:16 ರ ಈ ವಾಕ್ಯವು ನಿಮ್ಮ ಜೀವಿತದಲ್ಲಿ ನೆರವೇರಬೇಕೆಂದೇ ಪವಿತ್ರಾತ್ಮನನ್ನು ನಿಮಗೆ ಅನುಗ್ರಹಿಸಿರುವಂಥದ್ದು. ಹಾಗಾಗಿ ನೀವು ಇನ್ನೂ ಕುರುಡರಾಗಿಯೇ ಉಳಿಯಬೇಕಿಲ್ಲ. ಆತನೊಂದಿಗೆ ನೀವು ಐಕ್ಯತೆಯಿಂದ ಇರುವುದರಿಂದ ಆತನು ನೀವು ಕಾಣುವಂತೆ ನಿಮಗೆ ಮಾರ್ಗವನ್ನು ತೋರಿಸುವನು. ಆತನೊಂದಿಗೆ ನೀವು ಅನ್ಯೋನ್ಯತೆಯಲ್ಲಿರುವಾಗ ನೀವು ಅರಿಯದ ಮಾರ್ಗದಲ್ಲೂ ಸಹ ಆತನು ನಿಮ್ಮನ್ನು ನಡೆಸುವರು ಅಂಧಕಾರವು ಬೆಳಕಾಗಿ ಮಾರ್ಪಡುವುದು ಮತ್ತು ಹಳ್ಳ ದಿಣ್ಣೆಗಳು ನೆಟ್ಟನೆಯ ಮಾರ್ಗವಾಗಿ ಬದಲಾಗುವುದು. ದೇವರು ತಾನೇ ನಿಮ್ಮನ್ನು ಕೈಬಿಡುವುದಿಲ್ಲ ದೊರೆಯುವುದಿಲ್ಲ ಎಂದು ವಾಗ್ದಾನ ನೀಡಿದ್ದಾನೆ ಆದರೆ ನೀವು ಪವಿತ್ರಾತ್ಮನೊಂದಿಗೆ ಅನ್ಯೋನ್ಯತೆಯನ್ನು ನಡೆಯುವಾಗ ಮಾತ್ರ ದೇವರ ಈ ವಾಗ್ದಾನಗಳು ನಿಮ್ಮ ಜೀವನದಲ್ಲಿ ನೆರವೇರಿಸಲ್ಪಡುತ್ತದೆ. ಪವಿತ್ರಾತ್ಮ ದೇವರು ಇದ್ದಾನೆ ನೀವು ಆತನೊಂದಿಗೆ ಅನ್ಯೋನ್ಯತೆಯಿಂದ ಇರಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಜೀವಿತದಲ್ಲಿ ಆತನು ಇದ್ದಾನೆ ಎಂಬ ಪ್ರಜ್ಞೆ ಇಟ್ಟುಕೊಂಡು ಜೀವಿಸಿರಿ.
ನೀವು ಈ ಕಾರ್ಯಗಳನ್ನೆಲ್ಲ ಮಾಡುವಾಗ ನೀವು ಕ್ರಿಸ್ತನ ಪರಿಜ್ಞಾನದಲ್ಲಿಯೂ ಪವಿತ್ರಾತ್ಮನ ಪರಿಜ್ಞಾನದಲ್ಲಿಯೂ ಬೆಳೆಯುವಿರಿ ಮತ್ತು ನೀವು ಆತನ ಸೇವಾ ಕಾರ್ಯಗಳನ್ನು ಆತನ ಆತನ ವ್ಯಕ್ತಿಗತವಾದ ಜೊತೆಗಾರಿಕೆಯನ್ನು ಆನಂದಿಸುವಿರಿ
Bible Reading Plan : 1 Corinthians 10 - 15
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ತಂದೆಯೇ ನಾನು ನಿನ್ನ ಪಾದದ ಬಳಿಗೆ ಬರುತ್ತೇನೆ ನನ್ನೆಲ್ಲಾ ಸ್ವಾತಂತ್ರ್ಯವನ್ನು ಸಮರ್ಪಿಸಿ ನನ್ನನ್ನೇ ನಿನಗಾಗಿಯೇ ಸಮರ್ಪಿಸಿ ನಿನಗೇ ಶರಣಾಗುತ್ತೇನೆ ಓ ದೇವರೇ. ಹಾಗೆಯೇ ನನ್ನ ಜೀವಿತದಲ್ಲಿ ನಿನ್ನ ಅಸ್ತಿತ್ವವನ್ನು ಮನಸಾರೆ ಒಪ್ಪಿಕೊಳ್ಳುತ್ತೇನೆ.
2. ಓ ದೇವರೇ ಎಲ್ಲಾ ದಿನಗಳಲ್ಲೂ ಎಲ್ಲಾ ಸಮಯಗಳಲ್ಲೂ ನಿನ್ನ ಪವಿತ್ರಾತ್ಮನೊಂದಿಗೆ ಅನ್ಯೋನ್ಯತೆಯಿಂದ ಇರುವಂತೆ ಕೃಪೆಯನ್ನು ಯೇಸು ನಾಮದಲ್ಲಿ ಅನುಗ್ರಹಿಸು.
3. ಪವಿತ್ರಾತ್ಮನೇ ನನ್ನ ಜೀವಿತದಲ್ಲಿ ನನ್ನ ಕುಟುಂಬದಲ್ಲಿ ನನ್ನ ವ್ಯವಹಾರದಲ್ಲಿ ನನ್ನ ವೃತ್ತಿಯಲ್ಲಿ ನನ್ನ ಆರೋಗ್ಯದಲ್ಲಿ ಎಲ್ಲಿ ನಾನು ಕಳೆದು ಹೋಗಿದ್ದೇನೆ ಅದನ್ನು ಯೇಸು ನಾಮದಲ್ಲಿ ನನಗೆ ಪ್ರಕಟಿಸಿ.
4. ಪವಿತ್ರಾತ್ಮ ದೇವರೇ ನನಗೆ ಸಹಾಯ ಮಾಡಿ ನನಗೆ ಅದರ ಅಗತ್ಯವಿದೆ ನಾನು ಈ ಕಾರ್ಯವನ್ನು ನನ್ನ ಸ್ವಂತ ಬಲದಲ್ಲಿ ಮಾಡಲಾಗುವುದಿಲ್ಲ ಯೇಸು ನಾಮದಲ್ಲಿ ನನಗೆ ನಿಮ್ಮ ಸಹಾಯದ ಅಗತ್ಯವಿದೆ
5. ಪವಿತ್ರಾತ್ಮ ದೇವರೇ ಯೇಸು ನಾಮದಲ್ಲಿ ನನ್ನ ಆತ್ಮಿಕ ಕಿವಿಗಳನ್ನು ತೆರೆ ಮಾಡಿರಿ ಆಗ ನಾನು ನಿಮ್ಮ ಸ್ವರವನ್ನು ಕೇಳಲಾರಂಬಿಸುವೆನು. ನನ್ನ ಆತ್ಮಿಕ ಕಣ್ಣುಗಳನ್ನು ಯೇಸು ನಾಮದಲ್ಲಿ ತೆರೆಮಾಡಿರಿ ಆಗ ನಾನು ನಿಮ್ಮನ್ನು ಕಾಣಲಾರಂಬಿಸುವೆನು. ನನಗೆ ಯೇಸು ನಾಮದಲ್ಲಿ ವಿವೇಕವನ್ನು ದಯಪಾಲಿಸಿರಿ ಆಗ ನಾನು ನಿಮ್ಮನ್ನು ಅರಿತುಕೊಳ್ಳಲು ಆರಂಭಿಸುವೆನು.
6. ಸ್ವಲ್ಪ ಸಮಯ ಅನ್ಯ ಭಾಷೆಯಲ್ಲಿ ಪ್ರಾರ್ಥಿಸಿರಿ
7. ಪವಿತ್ರಾತ್ಮ ದೇವರೇ ಯೇಸು ನಾಮದಲ್ಲಿ ನನ್ನ ಮನೋ ನೇತ್ರಗಳನ್ನು ಬೆಳಗಿಸಿ, ನನ್ನನ್ನು ಬಲಪಡಿಸಿ ಇದರಿಂದ ವಿಮೋಚನೆಯಲ್ಲಿರುವ ಹೆಚ್ಚಳವನ್ನು ನಾನು ಅರಿತುಕೊಳ್ಳಲು ಸಾಧ್ಯವಾಗುವುದು.
8.ತಂದೆಯೇ ನಾನು ನನ್ನ ಜೀವಿತದಲ್ಲಿ ಸಂತೋಷದಿಂದಲೂ ಆನಂದಭರಿತವಾಗಿಯೂ ಚೈತನ್ಯದಿಂದ ಕೂಡಿರುವಂತೆ ನಿನ್ನ ಆನಂದದ ಅಭಿಷೇಕದ ಆತ್ಮವನ್ನು ಹೊರತುಂಬಿ ಚೆಲ್ಲುವ ಹಾಗೆ ಯೇಸು ನಾಮದಲ್ಲಿ ನನಗೆ ಅನುಗ್ರಹಿಸು.
9.ನನ್ನ ಜೀವಿತದಲ್ಲಿರುವ ಯಾವುದೇ ವಿಳಂಬದ ದುರಾತ್ಮವನ್ನು ಆತ್ಮಿಕ ಬರಡುತನವನ್ನು ಯೇಸು ನಾಮದಲ್ಲಿ ಮುರಿದು ಹಾಕುತ್ತಿದ್ದೇನೆ.
10. ನನ್ನ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕರ್ತನಾದ ಯೇಸುವಿಗೆ ಫಲ ತರುವಂತೆ ಪವಿತ್ರಾತ್ಮನೊಂದಿಗೆ ಜೊತೆ ಕೆಲಸದವನಾಗಿ ಮತ್ತು ಆತನೊಂದಿಗೆ ಅನ್ಯೋನ್ಯತೆಯಿಂದ ಇರುವಂತಹ ಕೃಪೆಯನ್ನು ಯೇಸು ನಾಮದಲ್ಲಿ ಹೊಂದುಕೊಂಡಿದ್ದೇನೆ.
Join our WhatsApp Channel
Most Read
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ಮಾತಿನಲ್ಲಿರುವ ಶಕ್ತಿ
● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದು-ll
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
● ಶ್ರೇಷ್ಠತೆಯ ಬೆನ್ನಟ್ಟುವಿಕೆ.
● ದೇವರ ಕನ್ನಡಿ
ಅನಿಸಿಕೆಗಳು