ಅನುದಿನದ ಮನ್ನಾ
ದಿನ 32:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Monday, 23rd of December 2024
4
0
110
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ದೇಶಕ್ಕಾಗಿಯೂ, ನಾಯಕರಿಗಾಗಿಯೂ, ಸಭೆಗಳಿಗಾಗಿಯೂ ಮಾಡುವ ಪ್ರಾರ್ಥನೆ.
" ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ. 2ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು. 3ಹಾಗೆ ಮಾಡುವದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ."(1 ತಿಮೊಥೆಯನಿಗೆ 2:1-3)
ಪ್ರಾರ್ಥನೆ ಎಂಬುದು ಕ್ರೈಸ್ತರ ಕೈಗಳಲ್ಲಿರುವ ಒಂದು ಪ್ರಬಲವಾದ ಅಸ್ತ್ರವಾಗಿದೆ. ಇದರ ಮೂಲಕವೇ ದೇವರ ಚಿತ್ತವು ಭೂಮಿಯ ಆಯಾಮದಲ್ಲಿ ನೆರವೇರಲು ಸಾಧ್ಯವಾಗಿದೆ. ನಾವು ಎಡಬಿಡದೆ ಪ್ರಾರ್ಥಿಸಬೇಕು ಅಷ್ಟೇ ಅಲ್ಲದೆ ನಾವು ಬೇಸರಗೊಳ್ಳದೆ ಪ್ರಾರ್ಥಿಸುತ್ತಲೇ ಇರಬೇಕು ಎಂಬುದನ್ನು ದೇವರು ನಮ್ಮಿಂದ ಬಯಸುತ್ತಾನೆ. ಇಂದು ಪ್ರಾರ್ಥನೆಯ ಕೊರತೆಯು ದೇವರ ಅನೇಕ ಚಿತ್ತಗಳು ಭೂಮಿಯಲ್ಲಿ ನೆರವೇರಲು ಅಡ್ಡಿಪಡಿಸುತ್ತಿದೆ.ಏಕೆಂದರೆ ಪ್ರಾರ್ಥನೆಯೊಂದೇ ದೇವರಿಗೆ ತನ್ನ ಚಿತ್ತವನ್ನು ಭೂಮಿಯಲ್ಲಿ ನೆರವೇರಿಸಲು ದೇವರಿಗೆ ನಾವು ಬಿಟ್ಟು ಕೊಡುವ ನಿಯಮ ಬದ್ಧ ಹಾದಿಯಾಗಿದೆ. ದೇವರು ಸಾರ್ವಭೌಮನಾಗಿದ್ದಾನೆ ಮತ್ತು ಆತನು ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಹೋಗಬಹುದು ಆದರೆ ಆತನು ಪ್ರಾರ್ಥನೆ ಎಂಬ ಶರತ್ತಿಗೆ ಒಳಪಟ್ಟಿದ್ದಾನೆ ನಾವು ಪ್ರಾರ್ಥಿಸಿದರೆ ಆತನು ಅದನ್ನು ಕೇಳಿಸಿಕೊಳ್ಳುತ್ತಾನೆ, ಆತನು ಅದಕ್ಕೆ ಉತ್ತರಿಸುತ್ತಾನೆ ಮತ್ತು ನಮ್ಮೆಲ್ಲ ಬಯಕೆಗಳನ್ನು ಪೂರೈಸುತ್ತಾನೆ.
ನಾವು ನಮ್ಮ ನಾಯಕರಿಗಾಗಿ ಏಕೆ ಪ್ರಾರ್ಥಿಸಬೇಕು?
1). ನಮ್ಮ ಪ್ರಾರ್ಥನೆಗಳು, ದೇವರ ಹೃದಯಕ್ಕೊಪ್ಪುವ ಕಾರ್ಯಗಳನ್ನು ನಮ್ಮ ನಾಯಕರುಗಳು ಮಾಡುವಂತೆ ಸಹಕರಿಸುತ್ತದೆ.
ಪ್ರಾರ್ಥನೆಯು ನಮ್ಮ ನಾಯಕರು ದೇವರಿಗೆ ವಿಧೇಯರಾಗುವಂತೆಯೂ ದೇವರಿಗೆ ಭಯಪಡುವಂತೆಯೂ ಅವರ ಹೃದಯಗಳನ್ನು ಮುಟ್ಟುವ ಕಾರ್ಯ ಮಾಡುತ್ತದೆ. ನಾವು ನಮ್ಮ ನಾಯಕರಿಗಳಿಗೋಸ್ಕರ ಪ್ರಾರ್ಥನೆಯನ್ನು ಸಲ್ಲಿಸದಿದ್ದರೆ ನಮ್ಮ ದೇಶ, ನಮ್ಮ ಸಭೆಗಳು ಹೀಗೆ ಅನೇಕ ಸಂಗತಿಗಳು ದೇವರ ಚಿತ್ತಕ್ಕೆ ವಿರುದ್ಧವಾಗಿ ವರ್ತಿಸಲಾರಂಭಿಸುತ್ತವೆ. ಇದರಿಂದ ಇಂದು ನಮಗೆ ಜನರನ್ನು ದೇವರ ಚಿತ್ತಕ್ಕನುಸಾರ ನಡೆಸುವಂತಹ ದೇವರಿಗೆ ಭಯಪಡುವ ನಾಯಕರಗಳು ಬೇಕಾಗಿದ್ದಾರೆ.ಅದಕ್ಕಾಗಿ ನಮ್ಮ ನಾಯಕರ ಹೃದಯಗಳನ್ನು ಮುಟ್ಟು ಎಂದು ನಾವು ನಿಯಮಿತವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು.
2).ನಮ್ಮ ನಾಯಕರುಗಳು ವಿವೇಕದಿಂದ ಆಳ್ವಿಕೆಯನ್ನು ನಡೆಸುವುದಕೋಸ್ಕರ ನಾವು ಪ್ರಾರ್ಥಿಸಬೇಕಾಗಿದೆ.
ಜ್ಞಾನ-ವಿವೇಕವು ಬಹು ಮುಖ್ಯ ಸಂಗತಿಯಾಗಿದ್ದು, ಒಬ್ಬ ನಾಯಕನು ಯಶಸ್ವಿಯಾಗಿ ಆಳ್ವಿಕೆ ನಡೆಸಲು ಜ್ಞಾನ ವಿವೇಕ ಅತ್ಯವಶ್ಯ.
ಸೋಲೋಮನನು ಅಧಿಕಾರದ ಚುಕ್ಕಾಣಿ ಹಿಡಿದಾಗ ತಕ್ಷಣವೇ ತನಗೆ ಜ್ಞಾನ -ವಿವೇಕದ ಅವಶ್ಯಕತೆ ಇದೆ ಎಂಬುದನ್ನು ಅರಿತುಕೊಂಡನು. ಆ ಸಮಯಕ್ಕೆ ಆತನಿಗೆ ಜ್ಞಾನ ವಿವೇಕವೆಂಬುದು ಅತ್ಯವಶ್ಯಕವಾಗಿ ಬೇಕಾಗಿದೆ ಎಂಬುದು ಅವನಿಗೆ ತಿಳಿದಿತ್ತು.
ದೇವರು ಅವನಿಗೆ ಒಂದು ಖಾಲಿಯಾದ ಚೆಕ್ಕನ್ನು ಕೊಟ್ಟಂತೆ ಏನು ಬೇಕಾದರೂ ಕೇಳಿಕೋ ಎಂದಾಗ...
"ನನ್ನ ದೇವರಾದ ಯೆಹೋವನೇ, ನನ್ನ ತಂದೆಗೆ ಬದಲಾಗಿ ನಿನ್ನಿಂದ ಅರಸನಾಗಿ ನೇವಿುಸಲ್ಪಟ್ಟ ನಿನ್ನ ಸೇವಕನಾದ ನಾನು ಇನ್ನೂ ಚಿಕ್ಕವನು; 8 ವ್ಯವಹಾರಜ್ಞಾನವಿಲ್ಲದವನು, ನಿನ್ನ ಸೇವಕನಾದ ನಾನು ಲೆಕ್ಕಿಸಲಾಗದಂಥ ಮಹಾ ಜನಾಂಗವಾಗಿರುವ ನಿನ್ನ ಸ್ವಕೀಯ ಪ್ರಜೆಯ ಮಧ್ಯದಲ್ಲಿದ್ದೇನೆ. 9 ಆದದರಿಂದ ಅದನ್ನು ಆಳುವದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವದಕ್ಕೂ ನನಗೆ ವಿವೇಕವನ್ನು ದಯಪಾಲಿಸು. ಈ ಮಹಾ ಜನಾಂಗವನ್ನು ಆಳಲು ಸಮರ್ಥರು ಯಾರು ಎಂದು ಬೇಡಿಕೊಂಡನು."(" 1 ಅರಸುಗಳು 3:7-9)
ದೇವರು ಅವನ ವಿಜ್ಞಾಪನೆಯನ್ನು ಮೆಚ್ಚಿದನು. ಏಕೆಂದರೆ ಅವನು ಅವನಿಗೋಸ್ಕರ ದೀರ್ಘಾಯುಷ್ಯವನ್ನು ಐಶ್ವರ್ಯವನ್ನು ಕೇಳಿಕೊಳ್ಳಲಿಲ್ಲ. ಆದರೂ ದೇವರು ಅವನಿಗೆ ಜ್ಞಾನವಿವೇಕಗಳನ್ನೂ,ಐಶ್ವರ್ಯವನ್ನೂ ಮತ್ತು ಅವನ ಕೇಳಿಕೊಳ್ಳದ ಎಲ್ಲಾ ಒಳ್ಳೆಯದನ್ನೂ ಅನುಗ್ರಹಿಸಿದನು. ಇಂದು ನಮ್ಮ ದೇಶದಲ್ಲಿರುವ ಬಹುಸಂಖ್ಯೆಯ ಜನರೊಂದಿಗೆ ವ್ಯವಹರಿಸಲು ಅವರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿಯೂ ನಮ್ಮ ನಾಯಕರಿಗೆ ಜ್ಞಾನವಿವೇಕಗಳು ಅತ್ಯವಶ್ಯಕವಾಗಿ ಬೇಕೇ ಬೇಕು. ಅವರಿಗೆ ಜ್ಞಾನ ವಿವೇಕ ಗಳಿಲ್ಲದೆ ಹೋದರೆ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ತೀಕ್ಷ್ಣವಾದ ಭಕ್ತಿಹೀನವಾದ ನಿರ್ಧಾರಗಳನ್ನು ಅವರು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.
ನಾವು ಸಭೆಗಾಗಿ ಏಕೆ ಪ್ರಾರ್ಥಿಸಬೇಕು?
ಸಭೆಯು ದೇವರ ರಾಯಭಾರಿಯಾಗಿ ಭೂಮಿಯಲ್ಲಿ ಕಾರ್ಯ ಮಾಡುತ್ತಿದೆ. ಆದರಿಂದ ಸಭೆಗಳಿಗೋಸ್ಕರ ನಾವು ದೇವರಿಗೆ ವಿಜ್ಞಾಪನೆ ಮಾಡಲೇಬೇಕು.
1). ದೇವರ ರಾಜ್ಯವು ಭೂಮಿಯ ಮೇಲೆ ಅಭಿವೃದ್ಧಿ ಹೊಂದುವುದಕ್ಕೋಸ್ಕರ ನಾವು ಸಭೆಗಾಗಿ ಪ್ರಾರ್ಥನೆ ಮಾಡಬೇಕು.
2). ದೇಶಗಳ, ಜನರ ಜೀವಿತಗಳ, ಸಮುದಾಯಗಳ ಮೇಲೆ ದಾಳಿ ಮಾಡುವ ಶತ್ರುವಿನ ಕೋಟೆ ಕೊತ್ತಲಗಳನ್ನು ಕೆಡವಿ ಹಾಕಲು ಸಭೆಗಾಗಿ ನಾವು ಪ್ರಾರ್ಥಿಸಲೇಬೇಕು.
3). ಸುವಾರ್ತೆಯು ಲೋಕಾದಾದ್ಯಂತ ಸಾರಲ್ಪಡಲು ಸಭೆಗೆ ನಮ್ಮ ಪ್ರಾರ್ಥನೆ ಅವಶ್ಯಕತೆ ಇದೆ.
4). ಸಭೆಯು ಲೋಕದ ಸಂಗತಿಗಳಿಂದ ತನ್ನ ಗಮನವನ್ನು ವಿಕೇಂದ್ರಿಸಿಕೊಳ್ಳದಂತೆ ಇಲ್ಲವೇ ಲೌಕಿಕ ಸಂಗತಿಗಳ ಆಕರ್ಷಣೆಗೆ ಒಳಪಡದಂತೆ ಇರಲು ಸಭೆಗೆ ನಮ್ಮ ಪ್ರಾರ್ಥನೆಯ ಅವಶ್ಯಕತೆ ಇದೆ.
ಸಹೋದರರೇ ನಾವು ಸಭೆಗಳಿಗಾಗಿ ಹೃದಯಪೂರ್ವಕವಾಗಿ ಪ್ರಾರ್ಥಿಸಲೇಬೇಕು ಎಂದು ನಾನು ಬಯಸುತ್ತೇನೆ ಏಕೆಂದರೆ ನಾವು ಸಭೆಗೆ ಪ್ರಾರ್ಥಿಸುವ ಮುಖಾಂತರ ಪರೋಕ್ಷವಾಗಿ ನಮಗಾಗಿಯೇ ನಾವು ಪ್ರಾರ್ಥಿಸಿಕೊಳ್ಳುತ್ತೇವೆ. ಹಾಗೆಯೇ ನಮ್ಮ ದೇಶಕ್ಕಾಗಿಯೂ ದೇಶದ ನಾಯಕರಿಗಾಗಿಯೂ ಪ್ರಾರ್ಥಿಸಬೇಕೆಂದು ನಾನು ಬಯಸುತ್ತೇನೆ.
"ಯೆರೂಸಲೇವಿುನ ಶುಭಕ್ಕೋಸ್ಕರ ಪ್ರಾರ್ಥಿಸಿರಿ. [ಯೆರೂಸಲೇಮೇ,] ನಿನ್ನನ್ನು ಪ್ರೀತಿಸುವವರಿಗೆ ಸೌಭಾಗ್ಯವುಂಟಾಗಲಿ.
8ನನ್ನ ಬಂಧುವಿುತ್ರರ ನಿವಿುತ್ತವಾಗಿ ನಿನಗೆ ಶುಭವಾಗಲೆಂದು ಹೇಳುತ್ತೇನೆ."(ಕೀರ್ತನೆಗಳು 122:6,8)
ಒಂದು ಉದಾಹರಣೆಗೆ ಹೇಳುವುದಾದರೆ, ಪ್ರಸ್ತುತ ಉಕ್ರೇನಿನಲ್ಲಿ ರಷ್ಯಾ ವಿರುದ್ಧ ಯುದ್ಧ ನಡೆಯುತ್ತಿದೆ. ಇದರಿಂದಾಗಿ ಯಾವ ಸಂಗತಿಗಳು ಸಹ ಅಲ್ಲಿ ಸಹಜವಾಗಿಲ್ಲ ವ್ಯವಹಾರಗಳು ಮತ್ತು ಇನ್ನೂ ಅನೇಕ ಸಂಗತಿಗಳು ಇದರಿಂದ ತೊಂದರೆಗೀಡಾಗಿದೆ. ಹಾಗಾಗಿ ಇಂದು ನೀವು ನಿಮ್ಮ ದೇಶದಲ್ಲಿ ಶಾಂತಿಗಾಗಿ ಪ್ರಾರ್ಥಿಸದಿದ್ದರೆ, ನಿಮ್ಮ ನಾಯಕರಿಗೋಸ್ಕರ ಪ್ರಾರ್ಥಿಸದೆ ಇದ್ದರೆ, ನಿಮ್ಮ ಸಭೆಗಳಿಗೋಸ್ಕರ ನೀವು ಪ್ರಾರ್ಥಿಸದೆ ಇದ್ದರೆ ನಿಮ್ಮ ದೇಶವನ್ನೂ, ನಾಯಕರನ್ನೂ, ಸಭೆಗಳನ್ನೂ ತೊಂದರೆಪಡಿಸುವ ಸಂಗತಿಯೇ ನಾಳೆ ನಿಮ್ಮನ್ನೂ ಬಾಧಿಸುತ್ತದೆ. ಅದು ನಿಮ್ಮನ್ನೂ, ನಿಮ್ಮ ಕುಟುಂಬವನ್ನೂ ನಿಮ್ಮ ವ್ಯವಹಾರಗಳನ್ನೂ ಬಹುಕಾಲದವರೆಗೂ ಬಾಧಿಸುತ್ತಲೇ ಹೋಗುತ್ತದೆ. ಹೀಗಿರುವುದರಿಂದ ನಾವು ಇಂದು ಅತ್ಯುತ್ಸಾಹದಿಂದ ಇದಕ್ಕಾಗಿ ಪ್ರಾರ್ಥಿಸಬೇಕಾಗಿದೆ. ಮತ್ತು ನಮಗಿರುವುದೆಲ್ಲವನ್ನು ದೇವರಿಗೆ ಒಪ್ಪಿಸಬೇಕು. ಆಗ ದೇವರು ನಮ್ಮ ದೇಶದ ಆಳ್ವಿಕೆಯಲ್ಲಿ ತನ್ನ ಹೆಜ್ಜೆಗಳನ್ನು ಇಟ್ಟು ಸಭೆಗಳನ್ನು ಪವಿತ್ರಾತ್ಮನ ಅಗ್ನಿಯಿಂದ ಬಲಗೊಳಿಸುತ್ತಾನೆ. ನಮ್ಮ ದೇಶಕ್ಕಾಗಿ ನೇಮಿಸಲ್ಪಟ್ಟ ಎಲ್ಲಾ ಕಾರ್ಯಗಳಲ್ಲೂ ದೇವರ ಕೃಪೆಯು ಹರಿದು ಬರುತ್ತದೆ.
Bible Reading Plan : 1 Thessalonians 3 - 1 Timothy 5
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ತಂದೆಯೇ ಯೇಸು ಕ್ರಿಸ್ತನ ಹೆಸರಿನಲ್ಲಿ ನಿನ್ನ ಚಿತ್ತವೇ ನಮ್ಮ ದೇಶದಲ್ಲಿ ಯೇಸು ನಾಮದಲ್ಲಿ ನೆರವೇರಿಸಲ್ಪಡಲಿ. (ಮತ್ತಾಯ 6:10)
2. ನಮ್ಮ ದೇಶಕ್ಕೆ ವಿರುದ್ಧವಾಗಿ ಯಾವುದೇ ದುರಾತ್ಮನ ಯೋಜನೆಗಳಿದ್ದರೂ ಯೇಸುನಾಮದಲ್ಲಿ ಅವುಗಳು ನಿರ್ಮೂಲವಾಗಲಿ, ಅವು ಯಾವುವೂ ಸಹ ಉಂಟಾಗಬಾರದೆಂದು ಯೇಸು ನಾಮದಲ್ಲಿ ನಾವು ಘೋಷಿಸುತ್ತೇವೆ. (2 ಕೊರಿಯಾಂತೆ 10:4-5)
3.ಕರ್ತನೆ, ನಿನ್ನ ಸಭೆಯು ಕೃಪೆಯಲ್ಲಿಯೂ ಬಲದಲ್ಲಿಯೂ ಅಭಿವೃದ್ಧಿ ಹೊಂದುವಂತೆ ಯೇಸು ನಾಮದಲ್ಲಿ ನಿನ್ನ ಸಭೆಯನ್ನು ಬಲಗೊಳಿಸು.(ಅಪೋಸ್ತಲ ಕೃತ್ಯಗಳು 1:8)
4. ತಂದೆಯೇ, ನೀವು ನಮ್ಮ ಕೈಗಳಿಗೆ ಒಪ್ಪಿಸಿದ ಕೆಲಸ ವನ್ನು ಸಭೆಯಾಗಿ ಮಾಡಲು ನಿನ್ನ ಬೆಳೆಗಾಗಿ ಕೂಲಿಯವರನ್ನು ಯೇಸು ನಾಮದಲ್ಲಿ ಕಳುಹಿಸಿ ಕೊಡು. (ಮತ್ತಾಯ 9:38)
5. ತಂದೆಯೇ, ನಮ್ಮ ದೇಶದ ನಾಯಕರುಗಳು ದೇಶದಲ್ಲಿರುವ ಬಿಕ್ಕಟ್ಟುಗಳನ್ನೂ ಸಮಸ್ಯೆಗಳನ್ನೂ ಪರಿಹರಿಸುವತ್ತ ತಮ್ಮ ಗಮನಹರಿಸುವಂತೆ ನಮ್ಮ ದೇಶದ ನಾಯಕರುಗಳಿಗೆ ಜ್ಞಾನವಿವೇಕಗಳನ್ನು ಯೇಸು ನಾಮದಲ್ಲಿ ಅನುಗ್ರಹಿಸು. (ಯಾಕೋಬ1:5)
6.ತಂದೆಯೇ, ನಮ್ಮ ನಾಯಕರುಗಳು ನಿಮ್ಮ ಚಿತ್ತವನ್ನೇ ಮಾಡುವಂತೆಯೂ ಅವರ ಹೃದಯಗಳಲ್ಲಿ ನಿನ್ನ ಮೇಲೆ ಭಯ ಭಕ್ತಿ ಇರುವಂತೆಯೂ ಯೇಸು ನಾಮದಲ್ಲಿ ನಾವು ಪ್ರಾರ್ಥಿಸುತ್ತೇವೆ. (ಜ್ಞಾನೋಕ್ತಿ 9:10).
7. ತಂದೆಯೇ, ನಮ್ಮ ನಾಯಕರಗಳು ನಿರಂತರವಾಗಿಯೂ ನಿನ್ನ ನೀತಿಯನ್ನು ಎತ್ತಿ ಹಿಡಿಯುವಂತೆ ನೀನು ಯೇಸು ನಾಮದಲ್ಲಿ ಅವರನ್ನು ರಕ್ಷಿಸಿ ಕಾಪಾಡು(ಜ್ಞಾನೋಕ್ತಿ 3:1-2).
8. ತಂದೆಯೇ, ದಾನಿಯೆಲನಂತ ನೀತಿಯುಳ್ಳ, ನೆಹೇಮಿಯಂತ ಭಯಭಕ್ತಿಯುಳ್ಳ,ಮೋಶೆ ಹಾಗೂ ಯೆಹೋಶುವನಂತೆ ನಿನ್ನ ಚಿತ್ತವನ್ನು ಶಕ್ತಿಯುತವಾಗಿ ನೆರವೇರಿಸುವ ನಾಯಕರನ್ನು ಯೇಸುನಾಮದಲ್ಲಿ ಎಬ್ಬಿಸು ನಮ್ಮ ತಲೆಮಾರುಗಳಲ್ಲಿಯೇ ಯೇಸು ನಾಮದಲ್ಲಿ ಅಂತವರನ್ನು ಎಬ್ಬಿಸು. (ದಾನಿಯೇಲ 1:17, ನೆಹಮಿಯ 1:4, ಇಬ್ರಿಯ 11:23-29)
Join our WhatsApp Channel
Most Read
● ಕನಸು ಕಾಣುವ ಧೈರ್ಯ● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ
● ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?
● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ನೀವಿನ್ನೂ ತಡಮಾಡುತ್ತಿರುವುದೇಕೆ?
● ಸರಿಯಾದವುಗಳ ಮೇಲೆ ಲಕ್ಷ್ಯವಿಡಿರಿ
ಅನಿಸಿಕೆಗಳು