ಅನುದಿನದ ಮನ್ನಾ
ದಿನ 34:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Wednesday, 25th of December 2024
2
0
81
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ದಾರಿದ್ರ್ಯದ ಆತ್ಮದೊಂದಿಗೆ ಹೋರಾಡುವುದು.
"ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು; ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದನೆಂಬದು ನಿನಗೆ ಗೊತ್ತುಂಟಲ್ಲಾ; ಸಾಲಕೊಟ್ಟವನು ನನ್ನ ಇಬ್ಬರು ಮಕ್ಕಳನ್ನು ದಾಸರನ್ನಾಗಿ ತೆಗೆದುಕೊಂಡು ಹೋಗುವದಕ್ಕೆ ಬಂದಿದ್ದಾನೆ ಎಂದು ಮೊರೆಯಿಟ್ಟಳು.
.ಕೂಡಲೆ ಎಣ್ಣೆಯುಕ್ಕುವದು ನಿಂತು ಹೋಯಿತು. ತರುವಾಯ ಆಕೆಯು ದೇವರ ಮನುಷ್ಯನ ಹತ್ತಿರ ಬಂದು ನಡೆದದ್ದನ್ನೆಲ್ಲಾ ತಿಳಿಸಿದಳು. ಅವನು ಆಕೆಗೆ - ಹೋಗಿ ಎಣ್ಣೆಯನ್ನು ಮಾರಿ ಸಾಲತೀರಿಸು; ಉಳಿದ ಹಣದಿಂದ ನೀನೂ ನಿನ್ನ ಮಕ್ಕಳೂ ಜೀವನ ಮಾಡಿರಿ ಅಂದನು."("2 ಅರಸುಗಳು 4:1,7)
ದಾರಿದ್ರ್ಯದಲ್ಲಿ ಜೀವಿಸುವಂಥದ್ದು ಬಹಳ ನೋವಿನ ಸಂಗತಿಯಾಗಿದೆ ದಾರಿದ್ರ್ಯವು ದೇವರನ್ನು ಮಹಿಮೆಗೊಳಿಸಲಾರದು. ಬಡತನ ಹಾಗೂ ಕೊರತೆಗಳು ಪಾವಿತ್ರ್ಯದೊಂದಿಗೆ ತಳಕು ಹಾಕಿಕೊಂಡಿದ್ದ ದಿನಗಳು ಕಳೆದುಹೋಯಿತು. ಆದಾಗಿಯೂ ಇಂದು ಸಹ ಕೆಲವರು ಬಡತನ ಮತ್ತು ಕೊರತೆಗಳನ್ನು ಪಾವಿತ್ರತೆಯೊಂದಿಗೆ ತಳಕು ಹಾಕುತ್ತಲೇ ಇದ್ದಾರೆ. ಅವರು ಅದನ್ನು ಲೋಕದ ಸಂಗತಿ ಎಂದು ಪರಿಗಣಿಸಿದ್ದಾರೆ. ಆದರೆ ಅದು ಲೋಕದ ಸಂಗತಿಯಲ್ಲ. ದೇವರ ವಾಕ್ಯ ಹೇಳುತ್ತದೆ ಹಣವು ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು (ಪ್ರಸಂಗಿ 10:19).
ಇಂದು ಲೌಕಿಕ ಆಯಾಮದ ಅನೇಕ ಕಾರ್ಯಗಳನ್ನು ನೆರವೇರಿಸಲು ಹಣವು ಅಗತ್ಯವಾಗಿ ಬೇಕಾಗಿದೆ. ಇದು ವಿನಿಮಯದ ಮಾಧ್ಯಮವಾಗಿದೆ. ಇದನ್ನು ಯಾವುದಕ್ಕೆ ಉಪಯೋಗಿಸುತ್ತೇವೆಯೋ ಅವು ಸಹ ಸಂಗ್ರಹಿಸಲ್ಪಡತಕ್ಕದ್ದಾಗಿದೆ. ಭೂಲೋಕದ ನಮ್ಮ ಜೀವನದ ಅನೇಕ ಉದ್ದೇಶಗಳನ್ನು ಪೂರೈಸಿಕೊಳ್ಳಲು ಹಣವನ್ನು ಸಾಧನವಾಗಿ ಉಪಯೋಗಿಸಲ್ಪಡಲಾಗುತ್ತಿದೆ. ಸುವಾರ್ತೆಯನ್ನು ಸಾರಲು ಸಹ ಹಣವು ಸಾಧನವಾಗಿ ಬಳಕೆಯಾಗುತ್ತಿದೆ
ನೀವು ಹಣದ ಕೊರತೆಯನ್ನು ಎದುರಿಸುತ್ತಿರುವಾಗ ನಿಮ್ಮೆಲ್ಲಾ ಸಾಮರ್ಥ್ಯಗಳನ್ನು ಅದು ಬಳಕೆಗೆ ಬಾರದಂತೆ ಅದುಮಿಬಿಡುತ್ತದೆ. ನಾವು ಸೇವಿಸುತ್ತಿರುವ ದೇವರು ಐಶ್ವರ್ಯವಂತನಾದ ದೇವರಾಗಿದ್ದಾನೆ. ಆತನು ಬಡ ದೇವರಲ್ಲ ಆದರೂ ಆತನು ಅತ್ಯಂತ ಪವಿತ್ರನಾಗಿಯೇ ಇದ್ದಾನೆ. ಪರಲೋಕದ ರಸ್ತೆಗಳು ಸಹ ಶುದ್ಧ ಚಿನ್ನದಿಂದಾಗಿವೆ. ಹಾಗಾಗಿ ಪರಿಶುದ್ಧತೆಯೊಂದಿಗೆ ಬಡತನವನ್ನು ತಳುಕು ಹಾಕುವ ಯಾವುದೇ ಆಲೋಚನೆಗಳಿದ್ದರೂ ಅದು ಪಾತಾಳ ಲೋಕದಿಂದ ಬಂದ ಒಂದು ಸುಳ್ಳಾಗಿದೆ. ನಮ್ಮ ನಿರೂಪಣೆಯ ದೇವರ ವಾಕ್ಯವನ್ನು ನಾವು ಓದಿ ನೋಡಿದಂತೆ ಆ ವಿಧವೆಯ ಗಂಡನಾಗಿದ್ದವನು ಸಾತ್ವಿಕನಾದಂತ ಪ್ರವಾದಿಯಾಗಿದ್ದನು. ದೇವರಿಗೆ ಭಯ ಭಕ್ತಿಯಿಂದ ನಡೆಯುವ ದೇವರ ಸೇವಕನಾಗಿದ್ದನು ಆದರೂ ಅವನು ಸಾಲದಲ್ಲೇ ಬದುಕಿ ಸಾಲದಲ್ಲೇ ಸತ್ತನು. ಅವನ ಹೆಂಡತಿಗಾದರೂ ಆ ಸಾಲವನ್ನು ತೀರಿಸುವಂತಹ ಯಾವುದೇ ವ್ಯವಹಾರವಾಗಲಿ ದಾರಿಯಾಗಲಿ ಇರಲಿಲ್ಲ ಹೀಗಿದ್ದಾಗ ಆಕೆ ತನ್ನ ದಾರಿದ್ರ್ಯದೊಂದಿಗೆ ಹೇಗೆ ಹೋರಾಡಿದಳು?
ನೀವು ಈ ಕಥೆಯನ್ನು ಚೆನ್ನಾಗಿ ಓದಿ ನೋಡಿದರೆ ಆಕೆಯ ಮನೆಯ ಎಣ್ಣೆಯ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಇತ್ತು ಆದರೆ ಅದರ ಮಹಿಮೆಯನ್ನೇ ಆಕೆ ಅರಿತಿರಲಿಲ್ಲ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ. ಪ್ರವಾದಿಯಾದ ಎಲೀಷನು ಅವಳಿಗೆ ಅದನ್ನು ತೋರಿಸುವವರೆಗೂ ಆಕೆಯು ಅದನ್ನು ಸೂಕ್ಷ್ಮವಾಗಿ ನೋಡಿಯೇ ಇರಲಿಲ್ಲ. ಇಂದು ಅನೇಕ ವಿಶ್ವಾಸಿಗಳು ಆ ವಿಧವೆಯಂತೆಯೇ ಇದ್ದಾರೆ ಅವರ ಮನೆಯಲ್ಲೂ ಸಹ ಅಂತ ಎಣ್ಣೆಯ ಪಾತ್ರೆ ಇದೆ,ಆದರೂ ಅವರು ದಾರಿದ್ರದಲ್ಲೇ ಜೀವಿಸುತ್ತಿರುತ್ತಾರೆ. ಇಂದು ಅನೇಕ ಮಂದಿ ತಲಾಂತುಗಳನ್ನು ಹೊಂದಿದ್ದರೂ ಬಡವರಾಗಿಯೇ ಇದ್ದಾರೆ. ಏಕೆಂದರೆ ಅವರು ತಮ್ಮಲ್ಲಿರುವ ಸಾಮರ್ಥ್ಯವನ್ನು ಮಹಿಮೆಯನ್ನು ಗುರುತಿಸಿಕೊಳ್ಳಲಾಗದಂತೆ ಸೈತಾನನು ಅವರ ಆಂತರಿಕ ಕಣ್ಣುಗಳನ್ನು ಕುರುಡು ಮಾಡಿಬಿಟ್ಟಿದ್ದಾನೆ
ನಾವಿಂದು ದಾರಿದ್ರ್ಯದೊಡನೆ ಹೋರಾಡಲು ಹೋಗುವಾಗ ನೀವು ಆತ್ಮಿಕ ಸಂಗತಿಗಳನ್ನು ಮತ್ತು ಲೌಕಿಕ ಸಂಗತಿಗಳನ್ನು ಸಮತೋಲನದ ದೃಷ್ಟಿಯಿಂದ ನೋಡುವಂತವರಾಗಿರ ಬೇಕೆಂದು ನಾನು ಬಯಸುತ್ತೇನೆ. ಕೆಲವೊಮ್ಮೆ ಜನರು ಅವರ ಹಣಕಾಸಿನ ಸ್ಥಿತಿ ಮೇಲೆ ದುರಾತ್ಮನ ದಾಳಿಯಿಂದಾಗಿ ಬಡವರಾಗಿರುವುದಿಲ್ಲ ಆದರೆ ಸಂಪತ್ತನ್ನು ಕೂಡಿರುವ ವಿಚಾರದಲ್ಲಿ ಅದನ್ನು ಸರಿಯಾಗಿ ನಿರ್ವಹಿಸುವ ಜ್ಞಾನವಿಲ್ಲದಿರುವುದರಿಂದಲೇ ಅವರು ಬಡವರಾಗಿರುತ್ತಾರೆ.
ದಾರಿದ್ರ್ಯ ಉಂಟಾಗಲು ಕಾರಣಗಳೇನು?
1. ಪಾಪವೇ ಬಡತನಕ್ಕೆ ಹೊಣೆಯಾಗಿರಬಹುದು.
ಪಾಪವೂ ಬಡತನವನ್ನು ಬಹುಮಾನವಾಗಿ ನೀಡುತ್ತದೆ ಐಶ್ವರ್ಯವಂತರಾಗಿದ್ದ ಜನರು ಪಾಪದ ಕಾರ್ಯಗಳಲ್ಲಿ ಕೈ ಹಾಕಿ ದಿವಾಳಿಯಾಗಿ ಹೋದ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ.
ಧರ್ಮೋಪದೇಶಕಾಂಡ 28:47-48 ಹೀಗೆ ಹೇಳುತ್ತದೆ. "ನಿಮಗೆ ಸರ್ವಸಮೃದ್ಧಿಯುಂಟಾದ ಕಾಲದಲ್ಲಿಯೂ ನೀವು ನಿಮ್ಮ ದೇವರಾದ ಯೆಹೋವನನ್ನು ಹರ್ಷಾನಂದಗಳುಳ್ಳವರಾಗಿ ಸೇವಿಸದೆಹೋದದರಿಂದ ಯೆಹೋವನು ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವನು; [48] ಆಗ ನೀವು ಹಸಿವು ಬಾಯಾರಿಕೆಗಳುಳ್ಳವರಾಗಿ ಬಟ್ಟೆಯೂ ಏನೂ ಇಲ್ಲದೆ ಆ ಶತ್ರುಗಳಿಗೇ ಸೇವಕರಾಗಬೇಕಾಗುವದು. ಆತನು ಕಬ್ಬಿಣದ ನೊಗವನ್ನು ಹೇರಿಸಿ ನಿಮ್ಮನ್ನು ನಾಶಮಾಡುವನು." ಎಂದು.
ಜನರು ದೇವರಿಗೆ ಅವಿಧೇಯತೆ ತೋರಿದ ತತ್ಪರಿಣಾಮವಾಗಿ ಅವರು ಬಡತನದ- ಕೊರತೆಯ ಸ್ಥಿತಿಯಲ್ಲಿ ಜೀವಿಸಬೇಕಾಗಿ ಬರುತ್ತದೆ.
2.ಸೋಮಾರಿತನವು ಬಡತನವನ್ನು ತಂದೊಡ್ಡುತ್ತದೆ.
ಎಣ್ಣೆ ಪಾತ್ರೆ ಹೊಂದಿದ ಆ ವಿಧವೆಗೆ ಅದರಿಂದ ತಾನು ಏನು ಮಾಡಬೇಕು ಎಂಬುದು ತಿಳಿದಿರಲಿಲ್ಲ. ಅದರಿಂದ ಅವಳು ಅದರ ಜೊತೆಗೆ ಸುಮ್ಮನೆ ಜಡವಾಗಿ ಕೂತಿದ್ದಳು.
ಜ್ಞಾನೋಕ್ತಿ6:10-11 ಹೇಳುತ್ತದೆ,"ಇನ್ನು ಸ್ವಲ್ಪ ನಿದ್ದೆ, ಇನ್ನು ತುಸು ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ? [11] ಬಡತನವು ದಾರಿಗಳ್ಳನ ಹಾಗೆ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು."ಎಂದು.
ಮನುಷ್ಯನು ಸೋಮಾರಿಯಾದರೆ ಬಡತನದಲ್ಲಿಯೇ ತನ್ನ ಜೀವಿತವನ್ನು ಮುಗಿಸಬೇಕಾಗುತ್ತದೆ ಆದರೆ ನೀವು ದಾರಿದ್ರ್ಯದೊಂದಿಗೆ ಹೋರಾಡಬೇಕೆಂದರೆ ನೀವು ದುಡಿಯಲೇ ಬೇಕು. ಹಾಗಾಗಿ ದುಡಿಮೆಯೇ ದಾರಿದ್ರಕ್ಕೆ ಮದ್ದು. ನೀವು ಕಷ್ಟಪಟ್ಟು ದುಡಿಯಲೇ ಬೇಕು.
3.ದುರಾದೃಷ್ಟದಿಂದ ಬಡತನವು ಉಂಟಾಗಬಹುದು.
ದುರಾದೃಷ್ಟವು ಒಬ್ಬನು ತನ್ನ ಸಂಪತ್ತನ್ನೆಲ್ಲ ಕಳೆದುಕೊಳ್ಳುವಂತೆ ಮಾಡಬಲ್ಲದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಯೋಬನು. ಯೋಬನು ತಾನು ಕಷ್ಟಪಟ್ಟು ಸಂಪಾದಿಸಿದ ಎಲ್ಲವನ್ನು ಕಳೆದುಕೊಂಡನು. ಯೋಬನು ನೀತಿವಂತನಾದ ಮನುಷ್ಯನಾಗಿದ್ದನು. ಅವನು ಯಾವ ಪಾಪವನ್ನೂ ಮಾಡಿರಲಿಲ್ಲ. ಆದರೂ ತನ್ನ ಸಂಪತ್ತನ್ನೆಲ್ಲ ಕಳೆದುಕೊಂಡನು. ಏಕೆಂದರೆ ಅದೊಂದು ಅವನ ಆರ್ಥಿಕ ಸ್ಥಿತಿ ಮೇಲಾದ ಆತ್ಮೀಕ ದಾಳಿಯಾಗಿತ್ತು ಹಾಗಾಗಿ ಆತ್ಮಿಕ ದಾಳಿಯಿಂದಲೂ ಸಹ ದಾರಿದ್ರ ಉಂಟಾಗಬಹುದು ಇದು ಒಬ್ಬ ವ್ಯಕ್ತಿಯು ಮಾಡುವ ಕಾರ್ಯಗಳನ್ನೆಲ್ಲಾ ನಷ್ಟಕ್ಕೆ ನಡೆಸಬಹುದು.
ನ್ಯಾಯ ಸ್ಥಾಪಕರು 6:5-6 ರಲ್ಲಿ ಗಿದ್ಯೋನ್ಯನ ಚರಿತ್ರೆಯನ್ನು ನೋಡಿರಿ ಅಲ್ಲಿ ಮಿದ್ಯಾನರು ಬಂದು ಜನರು ಬಿತ್ತಿ ಬೆಳೆದದ್ದನ್ನೆಲ್ಲಾ ನಾಶ ಮಾಡುತ್ತಿದ್ದರು.
"ಆ ಶತ್ರುಗಳು ತಮ್ಮ ಕುರಿದನ ಗುಡಾರಗಳ ಸಹಿತವಾಗಿ ವಿುಡಿತೆಗಳಂತೆ ಗುಂಪುಗುಂಪಾಗಿ ಬಂದರು; ಅವರೂ ಅವರ ಒಂಟೆಗಳೂ ಅಸಂಖ್ಯ. ಆ ಗುಂಪೆಲ್ಲಾ ಬಂದು ದೇಶವನ್ನು ಹಾಳುಮಾಡುತ್ತಿತ್ತು.
ಇಸ್ರಾಯೇಲ್ಯರು ಮಿದ್ಯಾನ್ಯರ ದೆಸೆಯಿಂದ ಬಲು ಕುಗ್ಗಿ ಹೋಗಿ ಯೆಹೋವನಿಗೆ ಮೊರೆಯಿಟ್ಟರು."(ನ್ಯಾಯಸ್ಥಾಪಕರು 6:5-6)
ನೀವು ನಿಮ್ಮ ಬಡತನಕ್ಕೆ ಮೂಲ ಕಾರಣವೇನು ಎಂಬುದನ್ನು ಮೊದಲು ನೀವು ಅರ್ಥಕೊಂಡರೆ ಆನಂತರ ಆ ಕಾರಣಗಳೊಂದಿಗೆ ಸಮರ್ಥವಾಗಿ ಹೋರಾಡಬಲ್ಲಿರಿ.ಕೆಲವೊಮ್ಮೆ ಪ್ರಾರ್ಥನೆಗಳು ಬಡತನಕ್ಕೆ ಪರಿಹಾರವಾಗಿರುತ್ತದೆ ಮತ್ತೊಮ್ಮೆ ಕಷ್ಟಪಟ್ಟು ದುಡಿಮೆಮಾಡುವಂತದ್ದು ಪರಿಹಾರವಾಗಿರುತ್ತದೆ.
4.ಅಶಿಸ್ತಿನ ಜೀವನ ಶೈಲಿಯೇ ನಿಮ್ಮ ಬಡತನಕ್ಕೆ ಹೊಣೆಯಾಗಿರಬಹುದು.
ನೀವು ನಿಮ್ಮ ಖರ್ಚಿನ ವಿಚಾರದಲ್ಲಿ ಶಿಸ್ತನ್ನು ಹೊಂದಿರಬೇಕು.ನಿಮ್ಮ ಸಮಯ ವ್ಯಯ ಮಾಡುವುದರಲ್ಲಿ ನಿಮಗೆ ಶಿಸ್ತಿರಬೇಕು.ನಿಮ್ಮ ಕೆಲಸದ ಸ್ಥಳಗಳಲ್ಲಿ ನೀವು ಶಿಸ್ತಿನಿಂದ ನಡೆದುಕೊಳ್ಳಬೇಕು. ನಿಮ್ಮ ಜೀವಿತದ ಎಲ್ಲದರಲ್ಲಿಯೂ ಶಿಸ್ತನ್ನು ಅಳವಡಿಸಿಕೊಂಡಿರಬೇಕು. ನೀವು ನಿಮ್ಮ ಹಣವನ್ನು ಹೇಗೆ ಖರ್ಚು ಮಾಡುತ್ತಿದ್ದೀರಿ? ಇಂಥ ಚಿಕ್ಕ ಚಿಕ್ಕ ವಿಷಯಗಳು ಸಹ ನಿಮ್ಮ ದಾರಿದ್ರಕ್ಕೆ ಕಾರಣವಾಗಿರಬಹುದು.
5.ದೇವರ ವಾಕ್ಯಕ್ಕೆ ತೋರುವ ಅವಿಧೇಯತೆಯು ನಿಮ್ಮನ್ನು ಬಡತನಕ್ಕೆ ತಳ್ಳಬಹುದು.
ನಾವು ದೇವರ ವಾಕ್ಯಕ್ಕೆ ಅವಿಧೇಯತೆ ತೋರಿದಾಗ ಅದು ಸೈತಾನನು ನಮ್ಮ ಜೀವನದಲ್ಲಿ ಸಂಕಟಗಳನ್ನು ಬಿತ್ತುವುದಕ್ಕೆ ನೆಲೆ ಕೊಡಿಸುತ್ತದೆ. ದೇವರಿಂದ ಬರುವಂತಹ ಪ್ರತಿಯೊಂದು ವಾಕ್ಯವು ಆಶೀರ್ವಾದಗಳೊಂದಿಗೂ ಮತ್ತು ಪರಿಣಾಮಗಳೊಂದಿಗೂ ಬರುತ್ತದೆ. ನೀವು ದೇವರ ವಾಕ್ಯಕ್ಕೆ ವಿಧೇಯರಾದರೆ ಆಶೀರ್ವಾದಗಳನ್ನು ಆನಂದಿಸುವಿರಿ. ಇಲ್ಲವಾದರೆ ಸ್ವಯಂ ಚಾಲಿತವಾಗಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
6.ಸೈತಾನನ ಕಾರ್ಯಗಳೂ ಸಹ ಬಡತನಕ್ಕೆ ತಳ್ಳಬಹುದು. (ಲೂಕ 843-48)
ರಕ್ತ ಕುಸುಮ ರೋಗಿಯಾಗಿದ್ದ ಸ್ತ್ರೀಯು ತನ್ನ ಅನಾರೋಗ್ಯವನ್ನು ಸರಿ ಮಾಡಿಕೊಳ್ಳಲು ತನ್ನಲ್ಲಿರುವ ಹಣವನ್ನೆಲ್ಲ ವ್ಯಯ ಮಾಡಿಕೊಂಡಿದ್ದಳು. ಆರೋಗ್ಯ ಸಮಸ್ಯೆಗಳು ರೋಗಗಳು ವ್ಯಾದಿಗಳು ಇವುಗಳು ಸಹ ಜನರ ಹಣಕಾಸಿನ ಮೇಲೆ ಸೈತಾನನಿಂದ ಆಗುವ ದಾಳಿಯಾಗಿದೆ. ವಾರ- ವಾರವು ತಿಂಗಳುಗಟ್ಟಲೆ ತೆಗೆದುಕೊಳ್ಳುವ ಔಷಧಿಗಾಗಿ ಮಾಡುವ ಖರ್ಚುಗಳು ಇವೆಲ್ಲವೂ ದುರಾತ್ಮನ ದಾಳಿಯ ಫಲವಾಗಿದೆ.
ಜನರ ಹಣಕಾಸಿನ ಮೇಲೆ ದುರಾತ್ಮನು ದಾಳಿ ಮಾಡುವ ಅನೇಕ ವಿಧಗಳಿವೆ.ದೇವರ ಸಾನಿಧ್ಯದಲ್ಲಿ ಪ್ರಾರ್ಥನೆಯಲ್ಲಿ ಕುಳಿತು ನೀವು ಇದರೊಟ್ಟಿಗೆ ಹೋರಾಡಬೇಕು.
ಇಂದು, ನಾನು ನಿಮಗೆ ಮೇಲ್ಕಂಡಂತೆ ಕೊಟ್ಟಿರುವ ಸಂಗತಿಗಳ ಅನುಸಾರ ಬಡತನಕ್ಕೆ ವಿರುದ್ಧವಾಗಿ ನಾವು ಹೋರಾಡಬೇಕಾಗಿದೆ. ನಾವು ಅತ್ಯಂತ ಪರಿಣಾಮಕಾರಿಯಾಗಿ ಇದರೊಂದಿಗೆ ಹೋರಾಡಬೇಕೆ ವಿನಹಃ ಆ ಹೋರಾಟವು ಉಪೇಕ್ಷೆಯಿಂದ ಇರಕೂಡದು.
Bible Reading Plan : Hebrew 2 - 10
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ನನ್ನ ಹಣ, ಕುಟುಂಬ, ವ್ಯವಹಾರ ಮತ್ತು ನನ್ನ ಜೀವನದ ಎಲ್ಲಾ ಕ್ಷೇತ್ರಗಳಲ್ಲಿನ ಬಡತನದ ಪ್ರತಿಯೊಂದು ರೂಪವು ಯೇಸುವಿನ ಹೆಸರಿನಲ್ಲಿ ಕೊನೆಗೊಳ್ಳುತ್ತದೆ.
2.ಯೇಸು ನಾಮದಲ್ಲಿ ನನ್ನ ಜೀವಿತ ಮತ್ತು ನನ್ನ ಕುಟುಂಬದ ವಿರುದ್ಧ ಕಾರ್ಯ ಮಾಡುವ ಎಲ್ಲಾ ಬಡತನದ ಆತ್ಮಗಳ ಬಲವು ಯೇಸುನಾಮದಲ್ಲಿ ಮುರಿಯಲ್ಪಡಲಿ. ( ಧರ್ಮೋಪದೇಶಕಾಂಡ 8:18)
3. ನನ್ನ ತಲೆಮಾರುಗಳ ರಕ್ತ ಸಂಬಂಧದ ಶಾಪದಿಂದ ಬಂದಿರುವ ಯಾವುದೇ ದಾರಿದ್ರ್ಯವನ್ನು ಯೇಸುರಕ್ತದ ಮೂಲಕ ತೊಳೆಯುತ್ತಿದ್ದೇನೆ ಮತ್ತು ಈ ದುರಾತ್ಮನ ಬಲವನ್ನು ಯೇಸು ನಾಮದಲ್ಲಿ ಮುರಿಯುತ್ತೇನೆ. ನಮ್ಮ ಕುಟುಂಬದ ರಕ್ತ ಪ್ರಸಾರದಲ್ಲಿ ಇನ್ನುಮುಂದೆ ಈ ದಾರಿದ್ರದ ಆತ್ಮವು ಇರದಂತೆ ಯೇಸು ನಾಮದಲ್ಲಿ ನಮ್ಮನ್ನು ಬಿಟ್ಟು ತೊಲಗಲಿ.(ಗಲಾತ್ಯ 3:13-14).
4. ನನ್ನ ಆರ್ಥಿಕ ಸ್ಥಿತಿಗತಿಯ ಮೇಲೆ ದಾಳಿ ಮಾಡುವ ಯಾವುದೇ ಶಕ್ತಿಯಾದರೂ ಯೇಸು ನಾಮದಲ್ಲಿ ನಾಶವಾಗಿ ಹೋಗಲಿ ನನ್ನ ಹಣಕಾಸಿನ ಮೇಲೆ ದಾಳಿ ಮಾಡುವ ಎಲ್ಲ ನಿನ್ನ ಕಾರ್ಯಗಳನ್ನು ಯೇಸುನಾಮದಲ್ಲಿ ಈಗಲೇ ಲಯಗೊಳಿಸುತ್ತೇನೆ. (3 ಯೋಹಾನ 1:2).
5. ನನ್ನ ಆಶೀರ್ವಾದಗಳನ್ನು ನುಂಗಿ ಹಾಕುವ ಎಲ್ಲಾ ದುಷ್ಟ ಮಿಡತೆಗಳು ಯೇಸುನಾಮದಲ್ಲಿ ಈಗಲೇ ಮರಣ ಹೊಂದಲಿ. (ಮಲಾಕಿ 3:11)
6.ಓ ಕರ್ತನೇ, ನಾನು ಸಮೃದ್ಧಿಯ ಜೀವಿತಕ್ಕೆ ಪ್ರವೇಶಿಸುವಂತೆ ಕಾರ್ಯ ಮಾಡುವ ಅದ್ಭುತ ಆಲೋಚನೆಗಳನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು. (ಜ್ಞಾನೋಕ್ತಿ 8:12).
7. ತಂದೆಯೇ ಮಹತ್ವದ ಅವಕಾಶಗಳೊಂದಿಗೆ ಅದಕ್ಕೆ ಸರಿಯಾದ ಜನರೊಂದಿಗೆ ನನ್ನನ್ನು ಯೇಸು ನಾಮದಲ್ಲಿ ಸೇರುವಂತೆ ಸಹಾಯಮಾಡು. (ಜ್ಞಾನೋಕ್ತಿ 3:5-6).
8. ತಂದೆಯೇ ಇನ್ನೂ ಸಾಲದು ಇನ್ನೂ ಸಾಲದು ಎನ್ನುವ ಆಯಾಮದಿಂದ ನನ್ನ ಬಳಿ ಬೇಕಾದಷ್ಟು ಇದೆ ಎಂದು ಹೇಳುವಂಥ ಆಯಾಮಕ್ಕೆ ಯೇಸು ನಾಮದಲ್ಲಿ ನಾನು ಚಲಿಸುವಂತೆ ಮಾಡು. (ಫಿಲಿಪ್ಪಿ 4:19).
9. ನಾನು ಕಳೆದುಕೊಂಡ ಸಂಪತ್ತು ಗೌರವ ಸಂಪನ್ಮೂಲಗಳೆಲ್ಲ ಯೇಸು ಕ್ರಿಸ್ತನ ನಾಮದಲ್ಲಿ ನನ್ನ ಬಳಿಗೆ ಈಗಲೇ ತಿರುಗಿ ಬರಲು ಆರಂಭಿಸಲಿ. (ಯೋವೇಲ 2:25).
10. ತಂದೆಯೇ, ನಿನ್ನ ಪರಲೋಕದ ಸಾನಿಧ್ಯದಿಂದ ನನಗೆ ಸಮೃದ್ಧಿಯನ್ನು ಸಹಾಯ ಹಸ್ತವನ್ನು ಕಳುಹಿಸಿಕೊಡು. (ಕೀರ್ತನೆ 20:2).
11. ತಂದೆಯೇ, ಅದ್ಭುತವಾದ ಆಲೋಚನೆಗಳನ್ನು ಅನುಗ್ರಹಿಸು ಮತ್ತು ನನ್ನ ವ್ಯವಹಾರವು ಜನರ ದೃಷ್ಟಿಗೆ ಗೋಚರಿಸುವಂತೆ ನನ್ನ ಜೀವಿತದ ಮೇಲೆಯೂ ನನ್ನ ಆರ್ಥಿಕ ಸ್ಥಿತಿಗತಿಯ ಮೇಲೆಯೂ ಯೇಸುನಾಮದಲ್ಲಿ ನಿನ್ನ ಮಹಿಮೆಯ ಬೆಳಕು ಉಂಟಾಗಲಿ. (ಯೆಶಾಯ 60:1).
Join our WhatsApp Channel
Most Read
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?
● ಕಾಮದ ದುರಿಚ್ಛೆಗಳಿಂದ ಹೊರಬರುವುದು
● ದೇವರ ಕೃಪೆಯನ್ನು ಸೇದುವುದು
● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
● ಸಮರುವಿಕೆಯ ಕಾಲ - 2
● ಸರ್ವಬೀಗದ ಕೈ
ಅನಿಸಿಕೆಗಳು