ಅನುದಿನದ ಮನ್ನಾ
ಇತರರಿಗಾಗಿ ಪ್ರಾರ್ಥಿಸುವುದು
Friday, 3rd of January 2025
2
1
55
Categories :
ಪ್ರಾರ್ಥನೆ (prayer)
ಮಧ್ಯಸ್ತಿಕೆ ಪ್ರಾರ್ಥನೆ (Intercession)
"ಆ ಸಮಯದಲ್ಲೇ ಅರಸನಾದ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸೆಪಡಿಸುವುದಕ್ಕೆ ಕೈಹಾಕಿದನು. ಯೋಹಾನನ ಅಣ್ಣನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು. ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂದು ತಿಳಿದು, ಅಷ್ಟಕ್ಕೆ ನಿಲ್ಲದೆ ಪೇತ್ರನನ್ನೂ ಬಂಧಿಸಿದನು. ಆ ಕಾಲದಲ್ಲಿ ಪಸ್ಕಹಬ್ಬ ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ ನಡೆಯುತ್ತಿತ್ತು. ಅವನನ್ನು ಪಸ್ಕ ಹಬ್ಬವಾದ ಮೇಲೆ ಜನರ ಮುಂದೆ ತರಿಸಬೇಕೆಂಬ ಯೋಚನೆಯಿಂದ ಸೆರೆಯಲ್ಲಿ ಹಾಕಿಸಿ ಅವನನ್ನು ಕಾಯಲಿಕ್ಕೆ ನಾಲ್ಕು ನಾಲ್ಕು ಸಿಪಾಯಿಗಳಿದ್ದ ನಾಲ್ಕು ಗುಂಪುಗಳ ವಶಕ್ಕೆ ಕೊಟ್ಟನು. ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ, ಸಭೆಯವರು ಅವನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು." (ಅ. ಕೃ 12:1-5)
ಮೇಲಿನ ವಾಕ್ಯಭಾಗದಲ್ಲಿ , ಅಪೋಸ್ತಲನಾದ ಯಾಕೋಬನು ಕೊಲ್ಲಲ್ಪಟ್ಟಿದ್ದನು ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ಆದರೂ, ಅಪೊಸ್ತಲನಾದ ಪೇತ್ರನು ದೇವರ ಕರಗಳ ಮೂಲಕ ಅದ್ಭುತವಾಗಿ ರಕ್ಷಿಸಲ್ಪಟ್ಟನು. ಕರ್ತನ ದೂತನು ಆ ಸೆರೆಮನೆಯೊಳಗೆ ಬಂದು ಪೇತ್ರನನ್ನು ವೈಯಕ್ತಿಕವಾಗಿ ಸೆರೆಮನೆಯಿಂದ ಹೊರಗೆ ಕರೆದೊಯ್ದನು.
ಇದರಲ್ಲಿರುವ ವ್ಯತ್ಯಾಸವೇನು ? ಏಕೆ ಯಾಕೋಬನು ಮಾತ್ರ ಕೊಲ್ಲಲ್ಪಟ್ಟನು? ಆದರೆ ಪೇತ್ರನು ಮಾತ್ರ ಏಕೆ ಉಳಿದುಕೊಂಡನು? "ಆದರೆ ಪೇತ್ರನು ಜೈಲಿನಲ್ಲಿದ್ದಾಗ, ಸಭೆಯು ಅವನಿಗಾಗಿ ಬಹಳ ಶ್ರದ್ಧೆಯಿಂದ ಪ್ರಾರ್ಥಿಸಿತು" ಎಂಬ ಒಂದು ಕೀಲಿಕೈಯನ್ನು ನಾನು ನಂಬುತ್ತೇನೆ.
ಪ್ರಾರ್ಥನೆಯ ಶಕ್ತಿಯನ್ನು ನಮ್ಮ ಜೀವನಕ್ಕಾಗಿ ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನವರಿಗಾಗಿಯೂ ಉಪಯೋಗಿಸುವುದು ಬಹಳ ಮುಖ್ಯ. ನಮ್ಮ ದೇಶ ಮತ್ತು ನಮ್ಮ ಚರ್ಚ್‌ನಲ್ಲಿರುವ ನಮ್ಮ ನಾಯಕರಿಗಾಗಿ ಪ್ರಾರ್ಥಿಸಬೇಕೆಂದು ದೇವರ ವಾಕ್ಯದ ಮೂಲಕ ಆಜ್ಞಾಪಿಸಲ್ಪಟ್ಟಿದ್ದೇವೆ. ಮತ್ತು ನಾವು ಒಬ್ಬರಿಗೊಬ್ಬರು ಪ್ರಾರ್ಥಿಸುವಂತೆಯೂ ಆಜ್ಞಾಪಿಸಲ್ಪಟ್ಟಿದ್ದೇವೆ. ಕ್ರಿಸ್ತನ ದೇಹವಾಗಿ ನಾವು ಅನೇಕ ಸವಾಲುಗಳನ್ನು ಎದುರಿಸುವವರಾಗಿದ್ದು ಬಹುತೇಕ ಸವಾಲುಗಳು ಉತ್ಸಾಹಭರಿತ ಮಧ್ಯಸ್ಥಿಕೆಯ ಪ್ರಾರ್ಥನೆಯ ಕೊರತೆಯಿಂದ ನಮಗೆ ಒದಗಿರಬಹುದು.
ಅನೇಕ ವರ್ಷಗಳಲ್ಲಿ, ಪ್ರವಾದನೆ, ಸ್ವಸ್ಥತೆ ಅಥವಾ ಬಿಡುಗಡೆ ಸೇವಾಕಾರ್ಯ ಕಾರ್ಯಕ್ರಮ ಇದ್ದರೆ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ಆದಾಗ್ಯೂ, ಮಧ್ಯಸ್ಥಿಕೆಯ ಪ್ರಾರ್ಥನೆ ಸೇವೆಯೆಂದರೆ ಯಾರೂ ಅಷ್ಟಾಗಿ ಗಂಭೀರವಾಗಿ ಪರಿಗಣಿಸಿವುದಿಲ್ಲ . ನಾವು ಆಳವಾದ ಹಳ್ಳದಲ್ಲಿರುವಾಗ ಯಾರಾದರೂ ಮತ್ತು ಪ್ರತಿಯೊಬ್ಬರೂ ನಮಗಾಗಿ ಪ್ರಾರ್ಥಿಸಬೇಕೆಂದು ನಾವೆಲ್ಲರೂ ಬಯಸುತ್ತೇವೆ, ಆದರೆ ದುಃಖಕರವೆಂದರೆ ಇತರರು ನಮ್ಮಂತ ಸಾಲಿನಲ್ಲಿದ್ದಾಗ ಆ ಪ್ರಾರ್ಥನೆಯ ಕರೆಗೆ ನಾವು ಉತ್ತರಿಸುವುದಿಲ್ಲ.
ಆದುದರಿಂದ, ನಾವು ನಮ್ಮ ಪಾಸ್ಟರ್ಗಳು , ಸಭಾನಾಯಕರು, ಸಹೋದರರು ಮತ್ತು ಕ್ರಿಸ್ತನಲ್ಲಿ ಸಹೋದರರು ಮತ್ತು ಸಹೋದರಿಯರಿಗಾಗಿ ಆಸಕ್ತಿಯಿಂದ ಪ್ರಾರ್ಥಿಸೋಣ, ಅಥವಾ ಕರ್ತನು ನಮ್ಮ ಹೃದಯದಲ್ಲಿ ಕೊಡುವ ಇತರ ಯಾವುದೇ ವ್ಯಕ್ತಿಗಳಿಗೋಸ್ಕರವಾಗಲಿ ಆಸಕ್ತಿಯಿಂದ ಪ್ರಾರ್ಥಿಸೋಣ.
ಚರ್ಚೆ ಏನೋ ಅಗ್ಗವಾಗಿದೆ, ಆದರೆ ನಮ್ಮ ಪ್ರಾರ್ಥನೆಯ ಜೀವಿತವನ್ನು ನಮಗಾಗಿ ಮಾತ್ರವಲ್ಲದೆ ಇತರರಿಗಾಗಿಯೂ ಹೆಚ್ಚಿಸಿಕೊಳ್ಳುವ ಅವಶ್ಯಕತೆಯಿದೆ, ನೀವು ಅವರ ಆತ್ಮದ ಕರೆಗೂ ಉತ್ತರಿಸುವಿರಾ?
Bible Reading : Genesis 8 -11
ಪ್ರಾರ್ಥನೆಗಳು
1.ನನಗಾದ ಅವಮಾನಕ್ಕೆ ಬದಲಾಗಿ ಎರಡರಷ್ಟು ಮಾನವನ್ನು ಹೊಂದುವೆನು. ನಾಚಿಕೆಪಟ್ಟದ್ದಕ್ಕೆ ಪ್ರತಿಯಾಗಿ ನಾನು ನನ್ನ ಸ್ವತ್ತಿನಲ್ಲಿ ಹಿಗ್ಗುವರು; ಹೀಗೆ ನನ್ನ ದೇಶದಲ್ಲಿ ಎರಡರಷ್ಟನ್ನು ಅನುಭವಿಸುವೆನು; ನನಗೆ ಶಾಶ್ವತ ಸಂತೋಷವಾಗುವುದು. (ಯೆಶಾಯ 61:7)
2. ರಕ್ತಗತವಾಗಿ ಹರಡಿಬರುವ ನನ್ನ ಪೂರ್ವಜರ ಶಾಪಗಳೆಲ್ಲ ಯೇಸುನಾಮದಲ್ಲಿ ಯೇಸುವಿನ ರಕ್ತದ ಮೂಲಕ ಶಾಶ್ವತವಾಗಿ ಮುರಿಯಲ್ಪಡಲಿ .
3. ನನ್ನ ಸಮೃದ್ಧಿ, ಕೆಲಸ, ವ್ಯಾಪಾರ ಸಂಪರ್ಕಗಳು, ಪ್ರಚಾರ ಪ್ರಗತಿಯನ್ನು ಹೊಂದಿಕೊಳ್ಳದಂತೆ ಮಾಡುತ್ತಿರುವ, ಶತ್ರುವು ನನ್ನ ಮೇಲೆ ಹಾಕಿರುವ ಪ್ರತಿಯೊಂದು ಕತ್ತಲೆಯ ಮುಸುಕನ್ನು ಯೇಸುನಾಮದಲ್ಲಿ ಸುಟ್ಟು ಬೂದಿ ಮಾಡಲಿ
Join our WhatsApp Channel
Most Read
● ಕ್ಷಿಪ್ರವಾಗಿ ವಿಧೇಯರಾಗುವುದರಲ್ಲಿರುವ ಬಲ● ಕೆಟ್ಟ ನಡವಳಿಕೆಗಳಿಂದ ಬಿಡುಗಡೆ
● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದುರಾತ್ಮಗಳ ಪ್ರವೇಶವನ್ನು ಮುಚ್ಚುವ ಅಂಶಗಳು- I
● ನಿಮ್ಮ ಗತಿಸಿ ಹೋದ ಕಾಲವು ನಿಮ್ಮ ಹೆಸರಾಗುವುದಕ್ಕೆ ಅವಕಾಶ ಕೊಡಬೇಡಿರಿ.
● ಯೇಸುವಿನ ಹೆಸರು.
● ಜೀವಬಾದ್ಯರ ಪುಸ್ತಕ
ಅನಿಸಿಕೆಗಳು