ಅನುದಿನದ ಮನ್ನಾ
ನಿತ್ಯತ್ವದ ಮನಃಸ್ಥಿತಿಯಲ್ಲಿ ಬದುಕುವುದು.
Friday, 10th of January 2025
3
0
72
Categories :
ಶೋಕ (Grief)
ನಾನು ಒಂದು ರಾತ್ರಿ ಪ್ರಾರ್ಥನೆಯ ನಂತರ, ಮಲಗಲು ಇನ್ನೇನು ಹೋಗುತ್ತಿರುವಾಗ, ನಮ್ಮ ತಂಡದ ಸದಸ್ಯರೊಬ್ಬರ ಮಗಳಿಂದ "ಪಾಸ್ಟರ್, ದಯವಿಟ್ಟು ಪ್ರಾರ್ಥಿಸಿ; ನನ್ನ ದಾದಾನ ಕಥೆ ಮುಗಿಯುತ್ತಿದೆ ; ವೈದ್ಯರು ಭರವಸೆಯನ್ನು ಬಿಟ್ಟಿದ್ದಾರೆ." ಎನ್ನುವ ಉದ್ರಿಕ್ತ ಕರೆ ನನಗೆ ಬಂತು. ಇದರಿಂದ ನಾನು ಸಹ ಕೊಂಚ ಆಘಾತಕ್ಕೊಳಗಾಗಿದ್ದೆ ಹಾಗಾಗಿ ಹತಾಶೆಯಿಂದ ಪ್ರಾರ್ಥಿಸಲು ನನ್ನ ಮೊಣಕಾಲುಗಳ ಮೇಲೆ ನಿಂತೆ. ನಂತರ "ಪಾಸ್ಟರ್, ದಾದಾ ಇನ್ನಿಲ್ಲ" ಎಂದು ಅಳುವ ಕೆಟ್ಟ ಸುದ್ದಿ ಬಂದಿತು.
ಒಂದು ದಿನ, ನಾನು ಈ ಅದ್ಭುತ ಸಹೋದರ ಮತ್ತು ಅವರ ಕುಟುಂಬವನ್ನು ಭೇಟಿಯಾಗಲು ಹೋಗಿದ್ದೆ ನಾವಲ್ಲಿ ಅದ್ಭುತವಾದ ಸಹೋದರ ಅನ್ಯೋನ್ಯತೆಯನ್ನು ಹೊಂದಿದೆವು . ಈ ಸಹೋದರ ಮತ್ತು ನಾನೂ ಇಬ್ಬರೂ ಪುಸ್ತಕಗಳನ್ನೂ ಸಂಗೀತವನ್ನು ಪ್ರೀತಿಸುತ್ತಿದ್ದೆವು ಮತ್ತು ನಾವಿನ್ನೂ ಹಾಗೆ ಮುಂದುವರಿಸಬಹುದಿತ್ತು ಆದರೆ ಈಗ ಅವನು ಇನ್ನಿಲ್ಲ ಎಂದು ಕೇಳಲು - ನಾನು ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂದಿಗೂ, ನಾನು ಅವನನ್ನು ತುಂಬಾ ನೆನೆಪಿಸಿಕೊಳ್ಳುತ್ತಿರುತ್ತೇನೆ.
" ಯೇಸು ಕಣ್ಣೀರಿಟ್ಟನು" ಎಂದು ಯೋಹಾನ 11:35 ನಮಗೆ ಹೇಳುತ್ತದೆ,. ಯೇಸು ಕೂಡ ತಾನು ಪ್ರೀತಿಸಿದ ಜನರ ಮರಣವನ್ನು ಎದುರಿಸಬೇಕಾಗಿತ್ತು. ಯೇಸು ತನ್ನ ಸ್ನೇಹಿತನಾದ ಲಾಜರನ ವಿಷಯದಲ್ಲಿ ಅತ್ತಂಥೆಯೇ ನಮ್ಮ ದುಃಖದಲ್ಲಿಯೂ ಆತನು ನಮ್ಮೊಂದಿಗೆ ಅಳುತ್ತಾನೆಂದು ತಿಳಿಯುವುದು ಎಷ್ಟು ಸಾಂತ್ವನದಾಯಕವಾಗಿದೆ. ಜೀವನ ಎಷ್ಟು ನಾಜೂಕು ಮತ್ತು ಕ್ಷಣಿಕ ಎಂದು ನಮಗೆ ಅರಿವಾಗುವುದು ಕೂಡ ಅಂತಹ ಕ್ಷಣಗಳಲ್ಲಿಯೇ. "ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ: “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಅದರ ಮಹಿಮೆಯೆಲ್ಲಾ ಹುಲ್ಲಿನ ಹೂವಿನಂತಿದೆ. ಹುಲ್ಲು ಒಣಗಿ ಹೋಗುವುದು. ಅದರ ಹೂವು ಉದುರಿ ಹೋಗುವುದು." ಎನ್ನುವ ಸತ್ಯವನ್ನು ನಮಗೆ ನೆನಪಿಸುತ್ತದೆ. " (1 ಪೇತ್ರ 1:24-25)
ಅದೇ ಸಮಯದಲ್ಲಿ, ಈ ಭೂಮಿಯ ಮೇಲಿನ ನಮ್ಮ ಜೀವನವು ನಶ್ವರವಾದದ್ದು ಮತ್ತು ಕ್ರಿಸ್ತನಲ್ಲಿನ ನಮ್ಮ ಜೀವನವೇ ಶಾಶ್ವತವಾದದ್ದು ಎಂಬುದನ್ನು ನಾವು ಮರೆಯಬಾರದು, .
ಈ ಭೂಮಿಯ ಮೇಲಿನ ಎಲ್ಲಾ ವಸ್ತುಗಳು ಅಳಿದು ಹೋಗುತ್ತವೆ. ಆದರೆ ಶಾಶ್ವತವಾಗಿ ಯಾವುದು ನಿಲ್ಲುತ್ತದೆಯೋ ಅದನ್ನು ನಾವು ಹಿಡಿದಿಟ್ಟುಕೊಳ್ಳಬೇಕು. ನಾವು ಶಾಶ್ವತತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಜೀವನವನ್ನು ನಡೆಸಬೇಕು. ನಿಮ್ಮ ಸಮಯ ಮತ್ತು ನೀವು ಅದನ್ನು ಹೇಗೆ ಕಳೆಯುತ್ತೀರಿ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳಿ.
"ಪ್ರಾಣವಿರುವವರೆಗೂ ಯೆಹೋವನನ್ನು ಸ್ತುತಿಸುವೆನು, ಜೀವಮಾನವೆಲ್ಲಾ ನನ್ನ ದೇವರನ್ನು ಕೊಂಡಾಡುವೆನು." (ಕೀರ್ತನೆ 146: 2) ಎಂದು ಕೀರ್ತನೆಗಾರನು ಮಾಡಿಕೊಂಡ ನಿಬಂಧನೆಗಳಲ್ಲಿ ಒಂದನ್ನು ನೋಡಿರಿ.ಅದರಂತೆ ನೀವೂ ಸಹ
ಕರ್ತನನ್ನು ಆರಾಧಿಸಲು ಪ್ರತಿದಿನ ಸಮಯವನ್ನು ಮೀಸಲಿಡಿ. ಏಕೆಂದರೆ ಒಂದು ದಿನ, ನಾವೆಲ್ಲರೂ ಆತನನ್ನು ಮುಖಾಮುಖಿಯಾಗಿ ನೋಡಲಿದ್ದೇವೆ.
Bible Reading : Genesis 30 - 31
ಪ್ರಾರ್ಥನೆಗಳು
ತಂದೆಯೇ, ನೀನು ಕೊಟ್ಟ ಜೀವನದ ವರಕ್ಕಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುವೆನು. ಯೇಸು ನನಗಾಗಿ ಕೊಂಡುಕೊಂಡ ನಿತ್ಯಜೀವದ ಉಚಿತಾರ್ಥ ವರಕ್ಕಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ನಿತ್ಯತ್ವದ ಮನಃಸ್ಥಿತಿಯನ್ನಿಟ್ಟುಕೊಂಡು ಅನುದಿನವೂ ಬದುಕಲು ಯೇಸುನಾಮದಲ್ಲಿ ನನಗೆ ಸಹಾಯ ಮಾಡಿ.
ಧನ್ಯನಾದ ಪವಿತ್ರಾತ್ಮ ದೇವರೇ , ನೀವು ನಿಜವಾಗಿಯೂ ನಮ್ಮನ್ನು ಸಂತೈಸುವಾತನು. ದುಃಖಿಸುತ್ತಿರುವವರಿಗೂ ನೋವಿನಲ್ಲೂ ಶೋಕದಲ್ಲಿಯೂ ಇರುವ ಎಲ್ಲರಿಗೂ ನಿಮ್ಮ ಸಾಂತ್ವನವನ್ನು ಅನುಗ್ರಹಿಸಿ.
Join our WhatsApp Channel
Most Read
● ಪರಿಶೋಧನೆಯ ಸಮಯದಲ್ಲಿ ನಂಬಿಕೆ● ನೆಪ ಹೇಳುವ ಕಲೆ
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕೊಡುವ ಕೃಪೆ - 1
● ನಿಮ್ಮ ದೌರ್ಬಲ್ಯಗಳನ್ನು ದೇವರಿಗೆ ಒಪ್ಪಿಸಿ
● ನಿಮ್ಮ ಗತಿಯನ್ನು ಬದಲಾಯಿಸಿ
● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
ಅನಿಸಿಕೆಗಳು