"ನಾನೇ ನಿಜವಾದ ದ್ರಾಕ್ಷೇಬಳ್ಳಿ. ನನ್ನ ತಂದೆ ತೋಟಗಾರನು."
(ಯೋಹಾನ 15:1)
ಇಲ್ಲಿ ಮೂರು ಸಂಗತಿಗಳಿವೆ :
1.ತಂದೆಯು ‘ದ್ರಾಕ್ಷಾತೋಟದ ಮಾಲೀಕ ’. ಇನ್ನೊಂದು ಭಾಷಾಂತರವು ತಂದೆಯನ್ನು ‘ತೋಟಗಾರ’ ಎಂದು ಹೇಳುತ್ತದೆ.
2.ಯೇಸುವೇ ನಿಜವಾದ ದ್ರಾಕ್ಷಿಬಳ್ಳಿ
3. ಸಭೆಯಾದ ನಾವು ಕೊಂಬೆಗಳು(ಯೋಹಾನ 15:2)
ಯಾವುದೇ ಒಂದು ಸಂಸ್ಥೆಯ ಸಿಇಒ ಅಥವಾ ಸಂಸ್ಥೆಯ ಮುಖ್ಯಸ್ಥರು ಮಾಡುವಂತೆಯೇ, ದೇವರು ಪ್ರತಿ ಕೊಂಬೆಯನ್ನು ಅಥವಾ ನಮ್ಮ ಜೀವನದಲ್ಲಿ ಬೇಡದ ಪ್ರತಿಯೊಂದನ್ನು ತೆಗೆದುಹಾಕುತ್ತಾನೆ- ಯಾಕೆಂದರೆ ಅದು ನಮ್ಮನ್ನು ಫಲಪ್ರದವಾಗದಂತೆ ಅಥವಾ ಉತ್ಪಾದಕವಾಗದಂತೆ ತಡೆಯುತ್ತಿರುತ್ತದೆ. ನಮ್ಮ ದೇವರು ಫಲಪ್ರದತೆಯ ಮತ್ತು ಉತ್ಪಾದಕತೆಯ ದೇವರಾಗಿದ್ದಾನೆ.
ಜನರು ಕೆಲವು ಸಂಬಂಧಗಳಲ್ಲಿ ಸ್ಪಷ್ಟವಾದ ಹಿನ್ನಡೆಗಳನ್ನು ಅನುಭವಿಸಲು ಇದೂ ಒಂದು ಕಾರಣವಾಗಿರಬಹುದು. ಆದರೆ, ದಯವಿಟ್ಟು ಗಮನಿಸಿ, "ಅದೂ ಸಹ ಕಾರಣಗಳಲ್ಲಿ ಒಂದಾಗಿರಬಹುದು" ಎಂದು ನಾನು ಹೇಳಿದ್ದೇನೆ, ದೇವರು ನಂಬಿಗಸ್ತನಾಗಿದ್ದಾನೆ ಮತ್ತು ನಮಗೆ ಹೆಚ್ಚು ಉತ್ತಮವಾದದ್ದನ್ನು ನೀಡಲು ಮಾತ್ರವೇ ಬೇಡದ ಸಂಗತಿಗಳನ್ನು ಆತನು ತೆಗೆಯುವವನಾಗಿದ್ದಾನೆ.
ನೀವು ಒಬ್ಬ ಉದ್ಯಮಿಯಾಗಿಯೋ ಅಥವಾ ಒಂದು ಸಂಸ್ಥೆಯ ಮುಖ್ಯಸ್ಥರಾಗಿದ್ದರೆ, ಇದು ನೀವು ಅನ್ವಯಿಸಿಕೊಳ್ಳಬೇಕಾದ ತತ್ವವಾಗಿದೆ. ನಿಮ್ಮ ವ್ಯಾಪಾರವನ್ನು ಪರಿಶೀಲಿಸಿ ನೋಡಿ, ನಿಮ್ಮ ವ್ಯವಸ್ಥೆಗಳನ್ನು ಪರಿಶೀಲಿಸಿ ನೋಡಿರಿ. ಉತ್ಪಾದಕವಲ್ಲದ ಯಾವುದೇ ಪ್ರಕ್ರಿಯೆಗಳಿವೆಯೇ? ಹಾಗಿದ್ದರೆ ಆ ಸಂಗತಿಗಳನ್ನು ದೂರ ಮಾಡಿ. ಸತ್ತಕೊಂಬೆಗಳನ್ನು ತೆಗೆದುಹಾಕಲೇ ಬೇಕು
"ಅನನೀಯ ಮತ್ತು ಸಫೈರ ಸತ್ತರು, ಮತ್ತು ಯುವಕರು ಬಂದು ಅವರನ್ನು ಒಯ್ದರು."ಎಂದು ಸತ್ಯವೇದ ಹೇಳುತ್ತದೆ.
(ಅ. ಕೃ 5: 6, 10) ಸಭೆಯಲ್ಲಿ ಸತ್ತಂತವರನ್ನು ಉಳಿಸಿಕೊಳ್ಳಲು ದೇವರು ಅನುಮತಿಸುವುದಿಲ್ಲ. ಗಮನಿಸಿ, ಆದಿಸಭೆಯವರು ಈ ಘಟನೆಯ ಸುತ್ತಲೂ ಒಂದು ಸ್ಮಾರಕವನ್ನು ಹೆಣೆಯಲು ಹೋಗಲಿಲ್ಲ. ಬದಲಾಗಿ "ಈ ಸತ್ತ ಸಂಗತಿಗಳು ತೆಗೆದುಹಾಕಲ್ಪಡಬೇಕೆಂದು" ಪ್ರಾಯಶಃ ಹೀಗೆ ಹೇಳಿದ್ದಿರಬಹುದು.
"ನನ್ನಲ್ಲಿ ನೆಲೆಗೊಂಡಿರದ ಪ್ರತಿಯೊಂದು ಕೊಂಬೆಯನ್ನೂ ತೆಗೆದುಹಾಕಲಾಗುತ್ತದೆ .." (ಯೋಹಾನ 15: 6 )
ಎಂದು ಕರ್ತನಾದ ಯೇಸು ಹೇಳಿದನು.
ನಿರ್ಜೀವ ಕೊಂಬೆಯನ್ನು ತೆಗೆದು ಹಾಕಬೇಕಾಗಿದೆ; ಅದು ಹೋಗಲೇಬೇಕು. ದೇವರು ಹೀಗೆಯೇ ಕಾರ್ಯನಿರ್ವಹಿಸುವಂತದ್ದು.ನಾವು ಕೆಲವೊಂದು ವಿಷಕಾರಿಯಾಗಿರುವ ಸಂಬಂಧಗಳು ನಮ್ಮನ್ನು ಎಲ್ಲಿಯೂ ಕರೆದೊಯ್ಯುವುದಿಲ್ಲ ಎಂದು ತಿಳಿದವರೇ ಆಗಿದ್ದೇವೆ. ಆಗ ದೇವರು ಮಧ್ಯಪ್ರವೇಶಿಸಿ ಅಂತಹದನ್ನು ತೆಗೆದುಹಾಕುತ್ತಾನೆ. ಇದಕ್ಕಾಗಿ ಕಣ್ಣೀರು ಸುರಿಸಬೇಡಿ. ಆತನನ್ನು ನಂಬಿರಿ!
ಇತರರನ್ನು ಪರೀಕ್ಷಿಸುವ ಬದಲು, ನಾವು ನಿಜವಾಗಿಯೂ ಫಲ ನೀಡುತ್ತಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ನಮ್ಮನ್ನು ಪರೀಕ್ಷಿಸುವ ಸಮಯ ಇದಾಗಿದೆ. (1 ಕೊರಿಂಥ 11:28)
ಅಲ್ಲದೆ, ನೀವು ವರ್ಷಗಳಿಂದ ಸಭೆಗೆ ಹಾಜರಾಗುತ್ತಿದ್ದರೂ ಕುರ್ಚಿ ಮೇಲೆ ಕುಳಿತು ಎದ್ದು ಬರುವುದನ್ನು ಬಿಟ್ಟು ಏನನ್ನೂ ಮಾಡದೆ ಇದ್ದರೆ, ಇಂದು, ನೀವು ಆತನ ಮಹಿಮೆಗಾಗಿ ನಿಮ್ಮನ್ನು ಉಪಯೋಗಿಸಲ್ಪಡಬೇಕೆಂದು ನಿಮ್ಮನ್ನು ಒಪ್ಪಿಸಿಕೊಡುವ ನಿರ್ಧಾರವನ್ನು ತೆಗೆದುಕೊಳ್ಳಿ.
Bible Reading: Exodus 7-8
ಅರಿಕೆಗಳು
ತಂದೆಯೇ, ನಾನು ನೀರಿನ ಕಾಲುವೆಗಳ ಬಳಿಯಲ್ಲಿ ನೆಡಲ್ಪಟ್ಟ ಧೃಡವಾದ ಮರವಾಗಿದ್ದೇನೆ ಮತ್ತು ಕಾಲಕಾಲಕ್ಕೆ ಸಮೃದ್ಧಿಯಾಗಿ ಫಲಿಸುವ ಕೊಂಬೆಯಾಗಬೇಕೆಂದು ಯೇಸುನಾಮದಲ್ಲಿ ನಿರ್ಧರಿಸಿದ್ದೇನೆ ಮತ್ತು ಅದನ್ನೇ ಘೋಷಿಸುತ್ತೇನೆ ಆಮೆನ್.
Join our WhatsApp Channel

Most Read
● ನಂಬಿಕೆಯಲ್ಲಿಯೋ ಅಥವಾ ಭಯದಲ್ಲಿಯೋ● ನೀವು ದೇವರನ್ನು ಎದುರಿಸುತ್ತಿದ್ದೀರಾ?
● ನಂಬತಕ್ಕ ಸಾಕ್ಷಿ
● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಬೇರಿನೊಂದಿಗೆ ವ್ಯವಹರಿಸುವುದು
● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
ಅನಿಸಿಕೆಗಳು