ಅನುದಿನದ ಮನ್ನಾ
5
2
98
ಎಲ್ಲಿ ಸ್ತುತಿಸ್ತೋತ್ರವೋ ಅಲ್ಲಿ ದೇವರು ನೆಲೆಸಿರುತ್ತಾನೆ.
Friday, 24th of January 2025
Categories :
Praise
"ಅವರು ಸಂಚಾರಮಾಡುತ್ತಿರುವಾಗ ಆತನು ಒಂದಾನೊಂದು ಹಳ್ಳಿಗೆ ಬಂದನು; ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯಲ್ಲಿ ಇಳಿಸಿಕೊಂಡಳು. ಆಕೆಗೆ ಮರಿಯಳೆಂಬ ಒಬ್ಬ ತಂಗಿ ಇದ್ದಳು. ಈಕೆಯು ಸ್ವಾವಿುಯ ಪಾದಗಳ ಬಳಿಯಲ್ಲಿ ಕೂತುಕೊಂಡು ಆತನ ವಾಕ್ಯವನ್ನು ಕೇಳುತ್ತಿದ್ದಳು." (ಲೂಕ 10:38-39)
ಬೆಥಾನಿಯದಲ್ಲಿ ಅನೇಕ ಮನೆಗಳು ಇದ್ದವು, ಆದರೂ ಯೇಸು ಮಾರ್ಥ, ಮರಿಯ ಮತ್ತು ಲಾಜರಸ್ ಅವರ ಮನೆಯಲ್ಲಿಯೇ ಹೆಚ್ಚಾಗಿ ಇರುತ್ತಿದ್ದನು ಎಂದು ಸತ್ಯವೇದ ಹೇಳುತ್ತದೆ. ಅವರು ಆತ್ಮೀಯವಾಗಿ ಆತನನ್ನು ಸ್ವಾಗತಿಸಿತ್ತಿದ್ದದ್ದರಿಂದ ಇದು ಸಂಭವಿಸಿದೆ ಎಂದು ನಾನು ನಂಬುತ್ತೇನೆ. ದೇವರು ಯಾವಾಗಲೂ ಆತನ ಉಪಸ್ಥಿತಿಯನ್ನು ಸಹಿಸಿಕೊಳ್ಳಲಾಗದ ಸ್ಥಳಕ್ಕೆ ಹೋಗದೇ ಆತನ ಉಪಸ್ಥಿತಿಯನ್ನು ಸಂಭ್ರಮಿಸುವಂತ ಸ್ಥಳಕ್ಕೆ ಹೋಗಲು ಬಯಸುತ್ತಾನೆ. ದೇವರ ಉಪಸ್ಥಿತಿಯನ್ನು ತಕ್ಷಣವೇ ಮತ್ತು ಅಕ್ಷರಶಃ ಅನುಭವಿಸುವ ಸ್ಥಳಗಳಿಗೆ ನಾನು ಸಾಮಾನ್ಯವಾಗಿ ಹೋಗುತ್ತಿರುತ್ತೇನೆ. ಅಲ್ಲಿ ಒಬ್ಬರು ಅಕ್ಷರಶಃ ಶಾಂತಿ ಮತ್ತು ನೆಮ್ಮದಿಯ ಅಗಾಧವಾದ ಆತನ ಅಸ್ತಿತ್ವದ ಪ್ರಜ್ಞೆಯನ್ನು ಅನುಭವಿಸಬಹುದು. ಇದಕ್ಕೆ ಒಂದು ಕಾರಣವೆಂದರೆ ಅವು ನಿರಂತರವಾಗಿ ಸ್ತುತಿ ಮತ್ತು ಆರಾಧನೆಯನ್ನು ಸಲ್ಲಿಸುವ ಸ್ಥಳಗಳಾಗಿರುತ್ತವೆ.
"ಇಸ್ರಾಯೇಲ್ಯರ ಸ್ತೋತ್ರಸಿಂಹಾಸನದಲ್ಲಿರುವಾತನೇ, ನೀನು ಪವಿತ್ರಸ್ವರೂಪನು".(ಕೀರ್ತನೆ 22:3)
ಇದರರ್ಥ ಜನರು ಎಲ್ಲಿ ಆತನನ್ನು ಸ್ತುತಿಸಬೇಕೆಂದು ಬಯಸುತ್ತಾರೋ, "ನಾನು ಅಲ್ಲಿರುತ್ತೇನೆ" ಎಂದು ದೇವರು ಹೇಳುತ್ತಾನೆ.ದೇವರು ತನ್ನ ಜನರ ಸ್ತುತಿಗಳ ಮದ್ಯದಲ್ಲಿ ನೆಲೆಸುತ್ತಾನೆ. ದೇವರು ಅಕ್ಷರಶಃ ನೆಲೆಸಿರುವ ಸ್ಥಳವೆಂದರೆ ಸ್ತೋತ್ರ ಮಾಡುವ ಸ್ಥಳ. ಅಂತಹ ಸ್ಥಳಗಳಿಗೇ ದೇವರು ಆಕರ್ಷಿತನಾಗುತ್ತಾನೆ.
ಈ ರಹಸ್ಯವನ್ನು ನೀವು ಮನದಟ್ಟುಮಾಡಿ ಕೊಂಡರೆ, ನಿಮ್ಮ ಮನೆಯು ಆಶೀರ್ವಾದದ ಸ್ಥಳವಾಗಬಹುದು. ದಯವಿಟ್ಟು ನನಗೆ ವಿವರಿಸಲು ಅನುಮತಿಸಿ.
ಒಂದು ದಿನ ಒಬ್ಬ ವ್ಯಕ್ತಿ ನನಗೆ ಪತ್ರ ಬರೆದು, ಅವರು ಬಹಳಷ್ಟು ದುರಾತ್ಮನ ದಾಳಿಗಳನ್ನು ಎದುರಿಸುತ್ತಿರುವ ಕಾರಣ ಅವರು ತಮ್ಮ ವಾಸಸ್ಥಳವನ್ನು ಬದಲಾಯಿಸಲು ಯೋಚಿಸುತ್ತಿದ್ದಾರೆ ಎಂದು ಹೇಳಿದರು. ಸ್ಪಷ್ಟವಾಗಿ, ಕೆಲವು ದುಷ್ಟ ಶಕ್ತಿಗಳು ಆ ಸ್ಥಳದಲ್ಲಿ ಅವರನ್ನು ತೊಂದರೆಗೊಳಿಸುತ್ತಿದ್ದವು. ಬೇರೆಡೆಗೆ ತೆರಳುವಂತೆ ಸೂಚಿಸಲ್ಪಟ್ಟಿದರು. ಹಿಂದೆಯೂ, ಅವರು ಈಗಾಗಲೇ ಎರಡು ನಿವಾಸ ಸ್ಥಳಗಳನ್ನು ಬದಲಾಯಿಸಿದ್ದರು.
ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಅಂತಹ ಅನುಭವವನ್ನು ಅನುಭವಿಸುತ್ತಿದ್ದರೆ, ಸ್ಥಳಗಳನ್ನು ಬದಲಾಯಿಸುವುದು ಶಾಶ್ವತ ಪರಿಹಾರವನ್ನು ತರುವುದಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ. ನೋಡಿ, ಇಸ್ರಾಯೇಲ್ ಮಕ್ಕಳು ಐಗುಪ್ತದಲ್ಲಿ 430 ವರ್ಷಗಳ ಕಾಲ ದುಷ್ಟ ಫರೋಹನ ಅಡಿಯಲ್ಲಿ ದಾಸರಾಗಿದ್ದರು. ಆದಾಗ್ಯೂ, ದೇವರ ಕರುಣೆಯ ಮೂಲಕ, ಅವರು ಒಂದೇ ರಾತ್ರಿಯಲ್ಲಿ ಐಗುಪ್ತದಿಂದ ಹೊರಬಂದರು. ಅವರು ತಮ್ಮ ಭೌತಿಕ ವಾಸಸ್ಥಳವನ್ನು ಬದಲಾಯಿಸಿದರು. ಆದರೆ ಅವರಿನ್ನೂ ಐಗುಪ್ತದಿಂದ ಹೊರಗೆ ಹೋಗುವಾಗಲೇ, ಫರೋಹ ಮತ್ತು ಅವನ ದುಷ್ಟ ಸೇನೆಗಳು ಅವರನ್ನು ಹಿಂಬಾಲಿಸಲಾರಾಂಭಿಸಿದರು. (ದಯವಿಟ್ಟು ವಿಮೋಚನಕಾಂಡ 14 ಓದಿ)
ಇದುವೇ ಸಾಮಾನ್ಯವಾಗಿ ಜನರಿಗೆ ಸಂಭವಿಸುತ್ತಿರುತ್ತದೆ. ನೀವು ಭೌತಿಕವಾಗಿ ಸ್ಥಳದಿಂದ ಹೊರಬರಬಹುದು, ಆದರೆ ನೀವು ಎಲ್ಲಿಗೆ ಹೋದರೂ ಅಂಧಕಾರದ ಆತ್ಮಗಳು ನಿಮ್ಮನ್ನು ಹಿಂಬಾಲಿಸುತ್ತಲೇ ಬರುತ್ತಿರುತ್ತವೆ. ಅದಕ್ಕಾಗಿ ನಿಮಗೆ ಬೇಕಾಗಿರುವುದು ದೇವರ ಬಲ . ದೇವರ ಬಲವು ನಿಮ್ಮ ಮೇಲೆ, ನಿಮ್ಮ ಕುಟುಂಬ ಮತ್ತು ನಿಮ್ಮ ಮನೆಯ ಮೇಲೆ ಬಂದರೆ ಆ ಅಂಧಕಾರದ ಶಕ್ತಿಗಳು ನಾಚಿಕೆಗೆಗೆ ಈಡಾಗುತ್ತವೆ.
2 ಪೂರ್ವಕಾಲ ವೃತ್ತಾಂತ 20 ರಲ್ಲಿ, ರಾಜ ಯೆಹೋಷಾಫಾಟ್ ಮತ್ತು ಅವನ ಜನರ ಮೇಲೆ ದಾಳಿ ಮಾಡಲು ಒಟ್ಟಿಗೆ ಸೇರಿದ ಹಲವಾರು ಸೈನ್ಯಗಳ ಬಗ್ಗೆ ನಾವು ಓದುತ್ತೇವೆ. ಅಂತಹ ಬೃಹತ್ ಸೈನ್ಯದ ಕೈಯಲ್ಲಿ ಅವರು ಸನ್ನಿಹಿತವಾದ ಸೋಲನ್ನು ಎದುರಿಸಿದರು.
ಮುಂದೆ ನಡೆದದ್ದು ನಿಮಗೂ ನನಗೂ ಒಂದು ನಂಬಲಾಗದ ಪಾಠವಾಗಿದೆ. ಅವರು ದೇವರನ್ನು ಸ್ತುತಿಸಲು ಪ್ರಾರಂಭಿಸಿದಾಗ, ಅದು ಶತ್ರುಗಳನ್ನು ಭಯಭೀತಗೊಳಿಸಿತು ಮತ್ತು ಅವರು ತಮ್ಮ ತಮ್ಮಲ್ಲಿಯೇ ಬಡಿದಾಡಿಕೊಂಡು ಸತ್ತರು. ಆದ್ದರಿಂದ ಅವರು ಆ ತಗ್ಗುನ್ನು "ಬೆರಾಕ ತಗ್ಗು " ಎಂದು ಮರುನಾಮಕರಣ ಮಾಡಿದರು, ಇದರರ್ಥ ಸ್ತುತಿಯ ಕಣಿವೆ ಅಥವಾ ಆಶೀರ್ವಾದದ ಕಣಿವೆ.
"ನಾಲ್ಕನೆಯ ದಿನದಲ್ಲಿ ಬೆರಾಕ ತಗ್ಗಿನಲ್ಲಿ ಕೂಡಿಬಂದರು. ಅವರು ಅಲ್ಲಿ ಯೆಹೋವನನ್ನು ಸ್ತುತಿಸಿದದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಬೆರಾಕ ತಗ್ಗು ಎಂಬ ಹೆಸರಿದೆ. (2 ಪೂರ್ವಕಾಲವೃತ್ತಾಂತ 20:26)
ನೀವು ದೇವರನ್ನು ಸ್ತುತಿಸುವಾಗ, ಆತನು ನಿಮ್ಮ ಭಯ ಮತ್ತು ಹತಾಶೆಯ ಕಣಿವೆಯನ್ನು ಸ್ತುತಿಯ ಮತ್ತು ಆಶೀರ್ವಾದದ ಕಣಿವೆಯನ್ನಾಗಿ ಮಾಡಬಲ್ಲನು. ನಿಮ್ಮ ಮನೆಯಲ್ಲಿ, ನಿಮ್ಮ ವ್ಯವಹಾರದ ಸ್ಥಳದಲ್ಲಿ ನೀವು ಭಗವಂತನನ್ನು ಸ್ತುತಿಸಿದಾಗ, ಅವನ ಉಪಸ್ಥಿತಿಯು ಇಳಿಯುತ್ತದೆ ಆಗ ಅಂಧಕಾರದ ಶಕ್ತಿಗಳು ಪಲಾಯನ ಮಾಡಬೇಕಾಗುತ್ತದೆ.
ಪ್ರತಿದಿನ ಕೆಲವು ನಿಮಿಷಗಳ ಕಾಲವಾದರೂ ಕುಟುಂಬವಾಗಿ ಒಟ್ಟಿಗೆ ನೀವು ದೇವರನ್ನು ಏಕೆ ಸ್ತುತಿಸಬಾರದು? ನಿಮ್ಮ ಮ್ಯೂಸಿಕ್ ಸಿಸ್ಟಮ್ ಅಥವಾ ನಿಮ್ಮ ಫೋನ್ನಲ್ಲಿ ಕೆಲವು ಸ್ತುತಿಯ ಮತ್ತು ಆರಾಧನೆಯ ಸಂಗೀತವನ್ನು ಪ್ಲೇ ಮಾಡುವ ಮೂಲಕ ನಿಮ್ಮ ದಿನವನ್ನು ನೀವು ಪ್ರಾರಂಭಿಸಬಹುದು. ಆ ಸಂಗೀತವು ಧೂಪದ್ರವ್ಯದಂತೆ ನಿಮ್ಮ ಮನೆಯಲ್ಲಿ ಆವರಿಸಲಿ.
ನೀವು ಹೀಗೆ ಮಾಡಲು ಪ್ರಾರಂಭಿಸುವಾಗ, ನೀವು ಗಮನಾರ್ಹ ಬದಲಾವಣೆಗಳನ್ನು ಅನುಭವಿಸುವಿರಿ. ಆತನ ಶಾಂತಿ ಮತ್ತು ಸಮೃದ್ಧಿ ನದಿಯಂತೆ ಹರಿಯಲು ಪ್ರಾರಂಭಿಸುತ್ತದೆ. ಬಹುಶಃ ನೀವು ಕೆಲವು ಆಸ್ತಿಗೆ ಸಂಬಂಧಿಸಿದ ಕೆಲವು ನ್ಯಾಯಾಲಯದ ಪ್ರಕರಣಗಳನ್ನು ಎದುರಿಸುತ್ತಿರುವಿರಿ. ಆ ಸ್ಥಳದಲ್ಲಿ ನಿಂತು ದೇವರನ್ನು ಸ್ತುತಿಸುತ್ತಾ ಆ ಸ್ಥಳದಲ್ಲಿ ಕರ್ತನ ವಿಜಯವನ್ನು ಘೋಷಿಸುತ್ತಾ ಕಾಲ ಕಳೆಯಿರಿ. ಆತನ ಮಹಿಮೆಗಾಗಿ ನೀವು ಒಂದು ಚರಿತ್ರೆಯೊಡನೆ ಹಿಂತಿರುಗುತ್ತೀರಿ.
ಅರಿಕೆಗಳು
ನಾನು ಯಾವಾಗಲೂ ಕರ್ತನನ್ನು ಸ್ತುತಿಸುತ್ತೇನೆ; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುತ್ತದೆ. ಆದ್ದರಿಂದ ನನ್ನ ಶೋಕವು ನೃತ್ಯವಾಗಿ ಮತ್ತು ನನ್ನ ದುಃಖವು ಯೇಸುವಿನ ಹೆಸರಿನಲ್ಲಿ ಸಂತೋಷವಾಗಿ ಬದಲಾಗುತ್ತದೆ.
Join our WhatsApp Channel

Most Read
● ಆರಾಧನೆಗೆ ಬೇಕಾದ ಇಂಧನ● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕರ್ತನ ಸೇವೆ ಮಾಡುವುದು ಎಂದರೇನು II
● ನಂಬಿಕೆಯಿಂದ ಹೊಂದಿಕೊಳ್ಳುವುದು
● ದೇವರ ಕೃಪೆಯನ್ನು ಸೇದುವುದು
● ದೇವರು ನನಗಿಂದು ಒದಗಿಸುತ್ತಾನೋ?
● ಕೊಡುವ ಕೃಪೆ -2
ಅನಿಸಿಕೆಗಳು