ಅನುದಿನದ ಮನ್ನಾ
ನಿಮ್ಮ ಮಾರ್ಗದರ್ಶಕರು ಯಾರು - II
Thursday, 30th of January 2025
3
0
35
Categories :
ಮಾರ್ಗದರ್ಶಕ (Mentor)
ನಿಮ್ಮ ಮಾರ್ಗದರ್ಶಕರು ಯಾರು ಎಂದು ನಾನು ಜನರನ್ನು ಕೇಳಿದಾಗ ಕೆಲವರು, "ಯೇಸುವೇ ನನ್ನ ಗುರು" ಎಂದು ಉತ್ತರಿಸುತ್ತಾರೆ. ಅಂತಹ ಜನರು ನಿಜವಾಗಿಯೂ ಮಾರ್ಗದರ್ಶಿಯ ಬಗ್ಗೆ ಸತ್ಯವೇದ ಏನು ಹೇಳುತ್ತದೆ ಎಂಬುದನ್ನು ತಿಳಿದಿರುವುದಿಲ್ಲ ಅಥವಾ ಅರ್ಥಮಾಡಿಕೊಂಡಿರುವುದಿಲ್ಲ.
ಒಬ್ಬ ಮಾರ್ಗದರ್ಶಕನು ದೇವರು ನೇಮಿಸಿದ ವ್ಯಕ್ತಿಯಾಗಿರುತ್ತಾನೆ. ನೀವು ಸತ್ಯವೇದವನ್ನು ಓದಿ ನೋಡಿದರೆ ತಿಮೋತೆಯ ತಂದೆ ಗ್ರೀಕ್ನವನಾಗಿದ್ದು ಅನ್ಯಜನಾಂಗದವನಾಗಿದ್ದನು. ಆದರೆ, ತಿಮೊಥೆಯನು ತನ್ನ ಮಾರ್ಗದರ್ಶಕನಾಗಿ ಅಪೋಸ್ತಲನಾದ ಪೌಲನನ್ನು ಆರಿಸಿಕೊಂಡನು. ಅಪೋಸ್ತಲನಾದ ಪೌಲನು ತಿಮೊಥೆಯನನ್ನು "ನಂಬಿಕೆಯಲ್ಲಿ ನನ್ನ ನಿಜವಾದ ಮಗನು" ಎಂದು ಕರೆದನು (1 ತಿಮೋತಿ 1:2).
ಇಂದು, ಸಭೆಯಲ್ಲಿ ಎಷ್ಟು ಜನರನ್ನು "ನಂಬಿಕೆಯಲ್ಲಿ ನಿಜವಾದ ಮಗ ಅಥವಾ ನಿಜವಾದ ಮಗಳು" ಎಂದು ಉಲ್ಲೇಖಿಸಬಹುದು. - ಬಹಳ ಕಡಿಮೆ. ಇಂದು, ಅನೇಕರು ಪ್ರಸಿದ್ಧರಾದ ದೇವಸೇವಕ ಅಥವಾ ಸೇವಕಿಗೆ ಲಗತ್ತಿಸಲಾದ ಹೆಸರು ಮತ್ತು ಖ್ಯಾತಿಯನ್ನು ಬಯಸುತ್ತಾರೆ. ತಿಮೊಥೆಯನು ಎಫೆಸ ಸಭೆಯ ಮೊದಲ ಸಭಾಪಾಲಕ ಆದನೆಂದು ನಿಮಗೆ ತಿಳಿದಿದೆಯೇ? ಇದು ಹೇಗಾಯಿತು?ಹೇಗೆಂದರೆ ಅವನು ಅಪೋಸ್ತಲನಾದ ಪೌಲನಿಂದ ಮಾರ್ಗದರ್ಶನ ಪಡೆಯುತ್ತಿದ್ದ ವ್ಯಕ್ತಿಯಾಗಿದ್ದನು.
ಕಲಿಸಬಹುದಾದ ಕೆಲವು ವಿಷಯಗಳಿವೆ ಮತ್ತು ಕೆಲವು ವಿಷಯಗಳನ್ನು ಮಾತ್ರ ಹಿಡಿದುಕೊಳ್ಳಬಹುದು. ನನ್ನ ಆರಂಭಿಕ ಕ್ರೈಸ್ತ ದಿನಗಳಿಂದಲೇ, ಒಬ್ಬ ಮಾರ್ಗದರ್ಶಕರ ಪ್ರಾಮುಖ್ಯತೆ ನನಗೆ ತಿಳಿದಿತ್ತು. ಇಬ್ಬರು ದೇವಮನುಷ್ಯರಾದ ದೇವಸೇವಕರಾದ ಡಿ.ಜಿ.ಎಸ್.ದಿನಕರನ್ ಮತ್ತು ಪಾಸ್ಟರ್ ಬೆನ್ನಿ ಹಿನ್ ಇವರಿಂದ ನಾನು ನಿಜವಾಗಿಯೂ ಅನೇಕ ವಿಷಯಗಳನ್ನು ಕಲಿತುಕೊಂಡೆ .
ನಾನು ಈ ದೇವ ಮನುಷ್ಯರನ್ನು ವೈಯಕ್ತಿಕವಾಗಿ ತಿಳಿದಿರಲಿಲ್ಲ. ಬಹುಶಃ ನಾನು ಅಸ್ತಿತ್ವದಲ್ಲಿದ್ದೇನೆ ಎಂದು ಸಹ ಅವರಿಗೆ ತಿಳಿದಿರಲಿಲ್ಲ ಎಂದು ಭಾವಿಸುತ್ತೇನೆ.ಆದರೆ ನಾನು ಅವರ ಪುಸ್ತಕಗಳನ್ನು ಓದುತ್ತಿದ್ದೆ, ಅವರ ವೀಡಿಯೊಗಳನ್ನು ನೋಡುತ್ತಿದ್ದೆ ಮತ್ತು ಅವರ ಟೇಪ್ಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದೆ. ಅವರ ಪ್ರತಿ ಬೋಧನೆಗಳನ್ನು ಬರೆದುಕೊಂಡು ಅಧ್ಯಯನ ಮಾಡುತ್ತಿದ್ದೆ. ನಾನು ಅವರಿಗೆ ಹತ್ತಿರವಿರುವ ಜನರನ್ನು ಭೇಟಿ ಮಾಡಲು ಪ್ರಯತ್ನಿಸಿ ಅವರ ವೈಯಕ್ತಿಕ ಪ್ರಾರ್ಥನಾ ಜೀವಿತದ ಕುರಿತು ಕಲಿಯಲು ಪ್ರಯತ್ನಿಸುತ್ತಿದ್ದೆ.
ನನಗೆ ಇನ್ನೂ ನೆನಪಿದೆ; ದೇವರ ಮನುಷ್ಯರಾದ ಡಿ.ಜಿ.ಎಸ್.ದಿನಕರನ್ ಅವರು ಕೊಲ್ಲಾಪುರಕ್ಕೆ ಬಂದಾಗ ಅವರ ಕ್ರೂಸೈಡ್ ನಲ್ಲಿ ಪಾಲ್ಗೊಳ್ಳಲು ನಾನು ಎರಡು ಬಸ್ಸುಗಳನ್ನು ಆಯೋಜಿಸಿ ಜನರನ್ನು ತುಂಬಿಸಿಕೊಂಡು ಹೋಗಿದ್ದೆ. ಇದು ಸುಮಾರು 10 ಗಂಟೆಗಳ ಪ್ರಯಾಣವಾಗಿತ್ತು. ಅದೊಂದು ಸಿಟಿ ಬಸ್ ಆಗಿದ್ದು ನಮಗೆ ತುಂಬಾ ಅಗ್ಗವಾಗಿ ಸಿಗುತ್ತಿದ್ದದ್ದು ಅದೇ ಆಗಿತ್ತು. ಆ ಬಸ್ಸಿನ ಸೀಟುಗಳು ನೇರವಾಗಿದ್ದು, ಬಸ್ನ ಸಸ್ಪೆನ್ಶನ್ ಭಯಾನಕವಾಗಿತ್ತು. ಅದರ ಪ್ರಯಾಣವು ನಮಗೆ ಬೆನ್ನು ನೋವು ತರಿಸಿತಿತ್ತು. ನಾವು ಅಂದು ನಿದ್ರಿಸಲೂ ಆಗಿರಲಿಲ್ಲ.ಆದರೂ ಆ ದೇವರ ಮನುಷ್ಯನನ್ನು ಹತ್ತಿರದಿಂದ ನೋಡಲು ನಾನಂತೂ ತುಂಬಾ ಉತ್ಸುಕನಾಗಿದ್ದೆನಾದ್ದರಿಂದ ಎಲ್ಲವನ್ನೂ ಸಂತೋಷದಿಂದ ಸಹಿಸಿಕೊಂಡೆ.
ಕೆಲವು ಜನರು ಪ್ರಖ್ಯಾತ ಮಾರ್ಗದರ್ಶಕರೊಂದಿಗೆ ಇರಲು ತುಂಬಾ ಹೆಮ್ಮೆಪಡುತ್ತಾರೆ. ಎರಡು ದಿನಗಳ ಕಾಲ ಒಬ್ಬ ವ್ಯಕ್ತಿಯೊಂದಿಗೆ ಇರುತ್ತಾರೆ ಆದರೆ ಮತ್ತೆ ತಮ್ಮದೇ ರೀತಿಯ ಕಾರ್ಯ ಮಾಡಲಾರಾಂಭಿಸುತ್ತಾರೆ. ಯಾವ ದೇವಮನುಷ್ಯನೂ ಕೂಡ ಪರಿಪೂರ್ಣನಲ್ಲ. ಯಾವುದೇ ಮಾರ್ಗದರ್ಶಕರು ಕೂಡ ಪರಿಪೂರ್ಣರಲ್ಲ, ಆದರೆ ಕರ್ತನೊಂದಿಗಿನ ನಿಮ್ಮ ನಡಿಗೆಯಲ್ಲಿ ನಿಮ್ಮನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ದೇವರು ಅಂತಹ ಮಾರ್ಗದರ್ಶಕರನ್ನು ಬಳಸುತ್ತಾನೆ ಅಷ್ಟೇ.
ಯೇಸು ತನ್ನ ಜೀವನದ ಮೂರೂವರೆ ವರ್ಷಗಳನ್ನು ಸೇವೆಯಲ್ಲಿ ಕಳೆದನು. ಆತನ ಹೆಚ್ಚಿನ ಸಮಯವು ದೊಡ್ಡ ಜನರ ಗುಂಪಿನೊಂದಿಗೆ ಅಥವಾ ಶ್ರೀಮಂತ ಮತ್ತು ಪ್ರಭಾವಶಾಲಿ ನಾಯಕರೊಂದಿಗೆ ಕಳೆಯದೆ ಬದಲಾಗಿ ತನ್ನ ಹನ್ನೆರಡು ಮಂದಿ ಶಿಷ್ಯರೊಂದಿಗೆ ಇದ್ದು ಅವರಿಗೆ ತನ್ನ ಜೀವನವನ್ನು ಮತ್ತು ವಿವೇಕವನ್ನು ಧಾರೆ ಎರೆದನು.
ಮೊದಲನೆಯದಾಗಿ, ಆತನು ಜನರ ಗುಂಪಿನೊಂದಿಗೆ ಸಾಮ್ಯಗಳಲ್ಲಿಯೇ ಮಾತನಾಡುತ್ತಿದ್ದನು; ತರುವಾಯ ಆತನು ತನ್ನ ಶಿಷ್ಯರನ್ನು ಪ್ರತ್ಯೇಕವಾಗಿ ಕರೆದು ಅವುಗಳನ್ನು ವಿವರಿಸುತ್ತಿದ್ದನು. ಈ ಮನುಷ್ಯರೇ ಮುಂದೆ ಆತನ ಸಭೆಯ ಆಧಾರ ಸ್ಥಂಭಗಳಾದರು.
ಒಂದು ದೊಡ್ಡ ಜನರ ಗುಂಪೂ ಇದೆ, ಹಾಗೆಯೇ ಶಿಷ್ಯರು ಎನ್ನುವ ಸಣ್ಣ ಗುಂಪೂ ಇದೆ . ಶಿಷ್ಯರು ಯಾವಾಗಲೂ ಗುರುವನ್ನು ಎದುರು ನೋಡುವವರಾಗಿರುತ್ತಾರೆ. ನೀವು ನನ್ನನ್ನು ನಿಮ್ಮ ಮಾರ್ಗದರ್ಶಕ ಎಂದು ಕರೆಯುವದಾದರೆ, ಈ ವರ್ಷ ದೇವರ ಮಾರ್ಗಗಳಲ್ಲಿ ಬೆಳೆಯುವ ಬಗ್ಗೆ ನೀವು ಗಂಭೀರವಾಗಿರಬೇಕು. ನೀವು ನಿಜವಾಗಿಯೂ ಮಾರ್ಗದರ್ಶನ ಹೊಂದಲು ಬಯಸಿದರೆ ನೀವು ಮೃದುವಾದ ಜೇಡಿಮಣ್ಣಿನಂತೆ ಇರಬೇಕು. ಆಗಮಾತ್ರ ನೀವು ನಿಮ್ಮ ಮಾರ್ಗದರ್ಶನ ಜೊತೆ ಕೆಲಸ ಮಾಡುವ ದೇವರ ಆತ್ಮನು ಕರ್ತನ ಸೇವೆಗೆ ಸಿದ್ಧವಾಗಿರುವ ಉಪಯುಕ್ತ ಪಾತ್ರೆಯಾಗಿ ನಿಮ್ಮನ್ನು ರೂಪಿಸಲು ಸಾಧ್ಯ. (2 ತಿಮೋತಿ 2:21)
Bible Reading: Exodus 33-35
ಪ್ರಾರ್ಥನೆಗಳು
ತಂದೆಯೇ, ನೀವು ನನ್ನ ಜೀವನದಲ್ಲಿ ಇರಿಸಿರುವ ದೈವೀಕ ಮಾರ್ಗದರ್ಶಕರಿಗಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. (ನಿಮ್ಮ ಮಾರ್ಗದರ್ಶಕರೂ ಮತ್ತು ಅವರೊಂದಿಗೆ ನಿಮಗಿರುವ ಸಂಬಂಧಕ್ಕಾಗಿ ಪ್ರಾರ್ಥಿಸಲು ಸ್ವಲ್ಪ ಸಮಯವನ್ನು ವಿನಿಯೋಗಿಸಿ).
Join our WhatsApp Channel
Most Read
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ● ನಂಬುವವರಾಗಿ ನಡೆಯುವುದು
● ಒಳಕೋಣೆ
● ಪುರುಷರು ಏಕೆ ಪತನಗೊಳ್ಳುವರು -4
● ಬೇರಿನೊಂದಿಗೆ ವ್ಯವಹರಿಸುವುದು
● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು