ಅನುದಿನದ ಮನ್ನಾ
2
0
58
ಎಸ್ತರಳ ರಹಸ್ಯವೇನು?
Sunday, 2nd of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ; ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು." (ಜ್ಞಾನೋಕ್ತಿ 31:30)
ಎಸ್ತರಳ ರಹಸ್ಯವೇನು? ಅದು ಅವಳ ಸೌಂದರ್ಯವೋ ಅಥವಾ ಬೇರೆ ಇನ್ಯಾವ ಸಂಗತಿಯೋ? ದೇಶಭ್ರಷ್ಟರಾದ ಜನಾಂಗದ ಒಬ್ಬ ರೈತ ಹುಡುಗಿಯನ್ನು ಪ್ರಖ್ಯಾತನಾದ ಒಬ್ಬ ಪರ್ಷಿಯನ್ ರಾಜನು ಏಕೆ ತನ್ನ ರಾಣಿಯಾಗಿ ಆರಿಸಿಕೊಂಡನು?
ಇತರ 127 ರಾಷ್ಟ್ರಗಳು ಮತ್ತು ಪರ್ಷಿಯ ಪ್ರಾಂತ್ಯಗಳ 1,459 ಅಭ್ಯರ್ಥಿಗಳನ್ನು ಹೊರತು ಪಡಿಸಿ ಅಹಶ್ವರೋಷ ರಾಜನ ಕಣ್ಣುಗಳು ಏಕೆ ಎಸ್ತೆರಳನ್ನೇ ಆಯ್ಕೆ ಮಾಡಿತು? ಇದು ಕೇವಲ ಅವಳ ಸೌಂದರ್ಯದಿಂದಾಗಿಯೇ ಅಥವಾ ಅವಳಲ್ಲಿ ಇರುವ ಒಂದು ರಹಸ್ಯದ ನಿಮಿತ್ತವೇ ?
ಪುರಾತನ ರಬ್ಬಿನಿಕ್ ಸಂಪ್ರದಾಯದ ಪ್ರಕಾರ, ಅತ್ಯಂತ ಸುಂದರವಾದ ಸಾರ್ವಕಾಲಿಕ ನಾಲ್ಕು ಯಹೂದಿ ಮಹಿಳೆಯರಲ್ಲಿ (ಇತರರು ಸಾರಾ, ರಾಹಾಬ್ ಮತ್ತು ಅಬಿಗೈಲ್)ಎಸ್ತರಳು ಒಬ್ಬಳಾಗಿದ್ದಳು . ಅರಸನಾದ ಅಹಶ್ವರೋಷನ ಆಸ್ಥಾನವು ವಿಶ್ವದ ಅತ್ಯಂತ ಸುಂದರ ಸ್ತ್ರೀಯರಿಗಾಗಿ ಅನಿಯಮಿತ ಪ್ರವೇಶವನ್ನು ಹೊಂದಿತ್ತು ಮತ್ತು ಅವನ ಅರಮನೆಯಲ್ಲಿದ್ದ ಬಹು ಪತ್ನಿಯರ ಉಪಸ್ಥಿತಿಯೇ ಇದಕ್ಕೆ ಪುರಾವೆಯಾಗಿದೆ. ಅಂತಹ ಮನುಷ್ಯನನ್ನು ಆಕರ್ಷಿಸಲು ಕೇವಲ ಬಾಹ್ಯ ಸೌಂದರ್ಯ ಅಥವಾ ಇಂದ್ರಿಯ ಸಂಜ್ಞೆ ಗಳಿಗಿಂತ ಹೆಚ್ಚಿನ ಸಂಗತಿಯು ಅಗತ್ಯವಿದೆ. ಎಸ್ತರ್ ಉಪಪತ್ನಿಯಾಗಿ ಅಥವಾ ದ್ವಿತೀಯ ಪತ್ನಿಯಾಗಿ ಉಳಿಯುವಂತೆ ಅಹಶ್ವರೋಷನು ಮಾಡಬಹುದಿತ್ತು, ಆದರೂ ಅವಳು ಅವನನೊಡನೆ ಬದ್ಧತೆಯನ್ನು ನಿರೀಕ್ಷೆಸಿದಳು.
ಎಸ್ತರ್ ಒಬ್ಬ ಪರದೇಸಿಯಾಗಿದ್ದು , ಸ್ವತಂತ್ರ ದೇಶದಲ್ಲಿ ಹುಟ್ಟದೆ ಗಡೀಪಾರಾದ ಸೆರೆಹೊಯ್ದ ಜನರಲ್ಲಿ ಹುಟ್ಟಿದವಳಾಗಿದ್ದಳು. ಅವಳಿಗೆ ಈ ಸಂಪ್ರದಾಯಗಳಾವುವು ತಿಳಿದಿರಲಿಲ್ಲ, ಆದರೆ ಹೇಗೂ ಅವಳು ಪರ್ಷಿಯನ್ ಪೂರ್ವಾಗ್ರಹಗಳು ಮತ್ತು ಸಂಪ್ರದಾಯಗಳ ಹೊರತಾಗಿಯೂ ರಾಜನ ಹೃದಯವನ್ನು ಮತ್ತು ನಂತರ ತನ್ನ ಮಾತಿಗೆ ಒಡ್ಡುವ ಅವನ ಕಿವಿಯನ್ನು ಗೆದ್ದಳು. ಅವಳಲ್ಲಿದ್ದ ಆ ರಹಸ್ಯವೇನು?
ನಾವು ಆಂತರಿಕ ಸೌಂಧರ್ಯಕ್ಕಿಂತ ಹೊರನೋಟದ ಮೇಲೆ ಹೆಚ್ಚು ಗಮನಹರಿಸುವ ಪೀಳಿಗೆಯಲ್ಲಿ ವಾಸಿಸುತ್ತಿದ್ದೇವೆ ಎಂದು ನಾನು ಗಮನಿಸಿದ್ದೇನೆ. ಇತರರನ್ನು ಮೆಚ್ಚಿಸಲು ನಾವು ಅತ್ಯಂತ ದುಬಾರಿ ಫೋನ್‌ಗಳನ್ನು ಖರೀದಿಸಲು ಟನ್‌ಗಟ್ಟಲೆ ಹಣವನ್ನು ವ್ಯಯಿಸುತ್ತೇವೆ. ನಮಗೆ ಬ್ರ್ಯಾಂಡ್ ಲೋಗೋ ಮುಖ್ಯವಾಗಿದೆ ಹೊರತು ನಾವು ಫೋನ್‌ನ ಕಾರ್ಯಗಳ ಬಗ್ಗೆ ಕನಿಷ್ಠ ಕಾಳಜಿ ಕೂಡ ಇಲ್ಲ .
ಮತ್ತಾಯ 23:26 ರಲ್ಲಿ ಯೇಸು ," ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪಂಚಪಾತ್ರೆ ಬಟ್ಟಲು ಇವುಗಳ ಹೊರಭಾಗವನ್ನು ಶುಚಿಮಾಡುತ್ತೀರಿ; ಆದರೆ ಅವು ಒಳಗೆ ಸುಲುಕೊಂಡವುಗಳಿಂದಲೂ ಇಹಭೋಗ ಪದಾರ್ಥಗಳಿಂದಲೂ ತುಂಬಿರುತ್ತವೆ." ಎಂದು ಹೇಳಿದನು.ಇಲ್ಲಿ, ಆಂತರಿಕ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಯೇಸು ನಮಗೆ ಕಲಿಸುತ್ತಿದ್ದಾನೆ.
ಎಸ್ತರ್ ಸುಂದರವಾಗಿದ್ದಳು, ಆದರೆ ಅವಳ ಜೀವನದಲ್ಲಿ ಈ ಕ್ಷಣದಲ್ಲಿ, ಅವಳಿಗೆ ಬಾಹ್ಯ ಸೌಂದರ್ಯವನ್ನು ಮೀರಿ ಮತ್ತೊಂದು ಸುಗಂಧ ಬೇಕಿತ್ತು. ಆಕೆಗೆ ಪ್ರೀತಿ ಮತ್ತು ಆಂತರಿಕ ಚಾರಿತ್ರ್ಯದ ಅಗತ್ಯವಿದೆ. ಎಸ್ತರ್ 2: 15-17 ರಲ್ಲಿ ಸತ್ಯವೇದ ಹೇಳುತ್ತದೆ,
"ಅರಸನ ಬಳಿಗೆ ಹೋಗುವದಕ್ಕೆ ಮೊರ್ದೆಕೈಯ ದತ್ತಪುತ್ರಿಯೂ ಅವನ ಚಿಕ್ಕಪ್ಪನಾದ ಅಬೀಹೈಲನ ಮಗಳೂ ಆದ ಎಸ್ತೇರಳ ಸರತಿ ಬಂದಾಗ ಅಂತಃಪುರ ಪಾಲಕನಾದ ಹೇಗೈ ಎಂಬ ರಾಜಕಂಚುಕಿಯು ನೇವಿುಸಿದ್ದನ್ನೇ ಹೊರತು ಆಕೆ ಬೇರೇನೂ ಕೇಳಲಿಲ್ಲ. ನೋಡುವವರೆಲ್ಲರೂ ಆಕೆಯನ್ನು ಮೆಚ್ಚುತ್ತಿದ್ದರು. ಅರಸನಾದ ಅಹಷ್ವೇರೋಷನ ಬಳಿಗೆ ಅವನ ಆಳಿಕೆಯ ಏಳನೆಯ ವರುಷದ ಹತ್ತನೆಯ ತಿಂಗಳಾದ ಪುಷ್ಯ ಮಾಸದಲ್ಲಿ ಆಕೆಯನ್ನು ರಾಜಗೃಹಕ್ಕೆ ಕರತಂದರು. ಅರಸನು ಎಲ್ಲಾ ಸ್ತ್ರೀಯರಲ್ಲಿ ಎಸ್ತೇರಳನ್ನು ಮೆಚ್ಚಿದನು. ಎಲ್ಲಾ ಕನ್ಯೆಯರಲ್ಲಿ ಆಕೆಯು ಅವನ ದಯೆಗೂ ಪ್ರೀತಿಗೂ ಪಾತ್ರಳಾದದರಿಂದ ಅವನು ರಾಜಮುಕುಟವನ್ನು ಆಕೆಯ ತಲೆಯ ಮೇಲಿಟ್ಟು ಆಕೆಯನ್ನು ವಷ್ಟಿಗೆ ಬದಲಾಗಿ ರಾಣಿಯನ್ನಾಗಿ ಮಾಡಿಕೊಂಡನು.. " ಎಂದು
ಎಸ್ತರಳು ಕಂಚುಕಿಯ ಸೂಚನೆಗಳಿಗೆ ಗಮನ ಕೊಟ್ಟಳು. ಅವಳು ತನ್ನನ್ನು ಬರಿದು ಮಾಡಿಕೊಂಡು ; ದೇವರ ಕೃಪೆಯು ತನ್ನ ಮೂಲಕ ಪ್ರತಿಬಿಂಬಿಸಲು ಸಾಕಷ್ಟು ತನ್ನನ್ನು ತಾನು ತಗ್ಗಿಸಿಕೊಂಡಳು . ಅವಳು ಪ್ರೀತಿಯಿಂದ ತುಂಬಿದವಳಾಗಿದ್ದು ಅವಳ ವಿಶ್ವಾಸವು ಅವಳ ಬಾಹ್ಯ ಸೌಂದರ್ಯದ ಮೇಲೆ ಇರದೇ, ದೈವೀಕ ಪ್ರೀತಿ ಮತ್ತು ಕೃಪೆ ಮೇಲೆ ಆಧಾರಿತವಾಗಿದ್ದೆ ಅವಳ ಆಂತರಿಕ ಸುಗಂಧವಾಗಿತ್ತು.
ಈ ವರ್ಷ ನಿಮ್ಮ ಕನಸುಗಳನ್ನು ಸಾಕರಗೊಳಿಸಲು ನೀವು ಎದುರು ನೋಡುತ್ತಿರುವಲ್ಲಿ, ನಿಮ್ಮ ವಿಶ್ವಾಸ ಯಾವುದರ ಮೇಲೆ ಆಧಾರವಾಗಿದೆ? ನಿಮ್ಮ ಬುದ್ಧಿವಂತಿಕೆ, ಹಣ, ಶ್ರದ್ಧೆ ಅಥವಾ ನಿಮ್ಮ ಸಂಪರ್ಕಗಳ ಮೇಲೋ? ಇತರ ಮಹಿಳೆಯರ ಸೌಂದರ್ಯವು ಅವರನ್ನು ವಿಫಲಗೊಳಿಸಿದಂತೆಯೇ ಇವೆಲ್ಲವೂ ವಿಫಲವಾಗಬಹುದು ಎಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ, ದೇವರ ಕೃಪೆ ಮತ್ತು ದಯೆಯನ್ನು ಹೊಂದಿಕೊಳ್ಳಿ. ಎಸ್ತೇರಳಿಗೆ ರಾಜನ ದೃಷ್ಟಿಯಲ್ಲಿ ದಯೆ ಸಿಕ್ಕಿತು. ಆದ್ದರಿಂದ ನಾನು ಈ ವರ್ಷ ನೀವು ಉನ್ನತ ಸ್ಥಳಗಳಲ್ಲಿ ದೇವರ ದಯೆಯನ್ನು ಅನುಭವಿಸುವಿರಿ ಎಂದು ಪ್ರವಾದನೆ ನುಡಿಯುತ್ತೇನೆ, .
Bible Reading: Leviticus 1-4
ಪ್ರಾರ್ಥನೆಗಳು
ತಂದೆಯೇ, ನನ್ನ ಸಿಂಹಾಸನವನ್ನು ಪಡೆದುಕೊಳ್ಳುವ ರಹಸ್ಯವನ್ನು ನನಗೆ ತೋರಿಸಿಕೊಟ್ಟದ್ದಕ್ಕಾಗಿ ನಾನು ನಿಮಗೆ ಯೇಸು ನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ನಿನ್ನ ದಯೆಯು ನಿನ್ನ ಕೃಪೆಯಿಂದ ನನ್ನನ್ನು ಸುತ್ತುವರಿಯಲಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಜೀವನವು ಹೆಚ್ಚಿನ ಅನುಗ್ರಹದಿಂದ ತುಂಬಿರಲಿ, ಆಗ ನಾನು ಈ ವರ್ಷ ಸಕಲ ಒಳ್ಳೆಯದನ್ನು ಹೊಂದಿಕೊಳ್ಳಬಹುದು. ನಾನು ಎಲ್ಲಾ ಕಡೆ ಸ್ವೀಕರಿಸಲ್ಪಡುತ್ತೇನೆಯೇ ಹೊರತು ಎಂದಿಗೂ ತಿರಸ್ಕಾರವನ್ನು ಅನುಭವಿಸುವುದಿಲ್ಲ ಎಂದು ಯೇಸುವಿನ ಹೆಸರಿನಲ್ಲಿ ಆದೇಶಿಸುತ್ತೇನೆ ಆಮೆನ್.
Join our WhatsApp Channel

Most Read
● ವ್ಯರ್ಥವಾದದಕ್ಕೆ ಹಣ● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ಯಾವುದೂ ಮರೆಯಾಗಿಲ್ಲ
● ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕರ್ತನ ಆಲೋಚನೆಯನ್ನು ಕೇಳಬೇಕಾದ ಅಗತ್ಯತೆ
● ಕಟ್ಟಬೇಕಾದ ಬೆಲೆ
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
ಅನಿಸಿಕೆಗಳು