ಅನುದಿನದ ಮನ್ನಾ
3
0
87
ದೈನಂದಿನ ಮನ್ನಾ
Thursday, 6th of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು - ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ? (ಲೂಕ 14:28)
ಜೀವನದ ಅತ್ಯಂತ ಮಹತ್ವ ಪೂರ್ಣವಾದ ಒಂದು ಹಗಲು ಮತ್ತು ರಾತ್ರಿಗಾಗಿ ಸಿದ್ದರಾಗಲು ಎಷ್ಟು ವೆಚ್ಚವಾಗುತ್ತದೆ ಎಂಬುದು ಪ್ರತಿಯೊಬ್ಬ ವಧುವಿಗೂ ತಿಳಿದಿದೆ. ಎಸ್ತರಳು ರಾಜನ ಮುಂದೆ ನಿಲ್ಲುವ ಒಂದು ದಿನಕ್ಕಾಗಿ ಕೆಲವು ವಿಶಿಷ್ಟ ರೀತಿಯಲ್ಲಿ ಹನ್ನೆರಡು ತಿಂಗಳುಗಳ ಕಾಲಸಿದ್ಧತೆ ಮಾಡಿಕೊಂಡಳು ಎಂದು ಸತ್ಯವೇದ ಹೇಳುತ್ತದೆ.
"ಕನ್ಯೆಯರ ಲೇಪನಕಾಲವು ಪೂರೈಸುವದಕ್ಕೆ ಗಂಧರಸಪ್ರಯೋಗದಲ್ಲಿ ಆರು ತಿಂಗಳೂ ಪರಿಮಳ ದ್ರವ್ಯ ಕಾಂತಿವರ್ಧಕ ದ್ರವ್ಯಗಳ ಪ್ರಯೋಗದಲ್ಲಿ ಆರು ತಿಂಗಳೂ ಅಂತೂ ಹನ್ನೆರಡು ತಿಂಗಳು ಕಳೆದವು. ಈ ಕಾಲ ಮುಗಿದನಂತರ ರಾಜಸ್ತ್ರೀಯರ ವಿಷಯವಾದ ನಿಯಮದ ಮೇರೆಗೆ ತನ್ನನ್ನು ಸಿದ್ಧಪಡಿಸಿಕೊಂಡ ಪ್ರತಿಯೊಬ್ಬ ಕನ್ಯೆಯು ಅರಸನಾದ ಅಹಷ್ವೇರೋಷನ ಬಳಿಗೆ ಹೋಗುವಳು. (ಎಸ್ತರಳು 2:12)
ನಮ್ಮ ಈಗಿನ ಸಂಸ್ಕೃತಿಯಲ್ಲಿ ಸುಗಂಧ ದ್ರವ್ಯದ ಬಾಟಲಿಯನ್ನು ಖರೀದಿಸಿ ಮೇಲೆ ಮೇಲೆ ಮೇಲೆ ಚಿಮ್ಮಿಕಿಸಿಕೊಳ್ಳುತ್ತೇವೆ ಅಷ್ಟೇ. ಆದರೆ ಇಲ್ಲಿ, ಆ ಸುಗಂದ ದ್ರವ್ಯಗಳು ಅಕ್ಷರಶಃ ಅವಳ ಚರ್ಮಕ್ಕೆ ಲೇಪನವಾಗಿ ಅವಳು ಬೆವರಿದಾಗಲೂ ಅವಳು ಸುಗಂಧ ದ್ರವ್ಯದ ವಾಸನೆಯನ್ನು ಬೀರುವಂತೆ ಆದಳು . ಅದಕ್ಕಾಗಿ ಅವಳ ಆಹಾರಕ್ರಮವು ಬದಲಾಗಿರಬೇಕು ಎಂದು ನಾನು ನಂಬುತ್ತೇನೆ. ಒಬ್ಬ ಅರಸನ ಮುಂದೆ ಹಾಜರಾಗಬೇಕಾದರೆ ಅವಳು ಬಹಳಷ್ಟು ತ್ಯಾಗ ಮಾಡಬೇಕಾಗಿರುತ್ತದೆ.
ಅವಳು ಅರಮನೆಗೆ ಕಾಲಿಟ್ಟ ಕ್ಷಣದಲ್ಲೇ ನಿತ್ಯ ರೀತಿಯಲ್ಲಿ ಅದು ವ್ಯವಹರಿಸಲ್ಪಡಲಿಲ್ಲ .ಅವರು ಪ್ರತಿ ಕನ್ಯೆಗೂ ನಿರ್ದಿಷ್ಟ ವೇಳಾಪಟ್ಟಿಯನ್ನು ನೀಡುತ್ತಿದ್ದರು ಎಂದು ನನಗೆ ಖಾತ್ರಿಯಿದೆ. ಯಾವಾಗ ಏಳಬೇಕು, ಯಾವಾಗ ಸ್ನಾನ ಮಾಡಬೇಕು ಮತ್ತು ಯಾವಾಗ ಸಮಾಲೋಚನೆ ತರಗತಿಯಲ್ಲಿ ಹಾಜರಾಗಬೇಕು ಅಥವಾ ಯಾವಾಗ ಸೌಂಧರ್ಯವರ್ಧನೆ ಮಾಡುವ ಕೆಲಸಗಾರರಿಗೆ ತಮ್ಮನ್ನು ಒಪ್ಪಿಸಿಕೊಡಬೇಕು ಎನ್ನುವ ಎಲ್ಲದಕ್ಕೂ ಇರುವ ಸಮಯ ಅವರುಗಳಿಗೆ ತಿಳಿದಿತ್ತು.
ಅಂತಿಮವಾಗಿ ಆಯ್ಕೆಯಾದರೆ ಅವರು ಮುಂದೆ ರಾಜಾಮನೆತನದ ಕಾರ್ಯಕ್ಕೆ ದೈಹಿಕವಾಗಿ ಸದೃಢರಾಗಲು ಬಹುಶಃ ಅವರು ವ್ಯಾಯಾಮಕ್ಕೂ ಹೋಗಲು ನಿರ್ದಿಷ್ಟ ಸಮಯವನ್ನು ಹೊಂದಿದ್ದರು ಎನಿಸುತ್ತದೆ.
ಪ್ರತಿಯೊಬ್ಬ ಕನ್ಯೆಯರೂ ರಾಣಿಯಂತೆ ತಯಾರಾದರು . ಅವರು ಈಗಷ್ಟೇ ವಜಾಗೊಳಿಸಿಲಾಗಿದ್ದ ಮಾಜಿ ಪರ್ಷಿಯನ್ ರಾಣಿ ವಷ್ಟಿಯ ಬೂಟುಗಳಿಗೆ ತಮ್ಮ ಪಾದಗಳನ್ನು ಸರಿ ಹೊಂದಿಸಿ ಕೊಳ್ಳಲು ಅದೇ ರೀತಿಯಲ್ಲಿ ಕೆತ್ತಲ್ಪಟ್ಟರು. ಅದೊಂದು ಗಂಭೀರ ಕೆಲಸವಾಗಿತ್ತು. ಒಂದು ದಿನ ರಾಜನ ಮುಂದೆ ಕಾಣಿಸಿಕೊಳ್ಳಲು ಅವರು ಇಡೀ ವರ್ಷ ತಯಾರಿ ಮಾಡಬೇಕಾಗಿತ್ತು ಎಂದು ಸತ್ಯವೇದ ಹೇಳುತ್ತದೆ. ಅದೊಂದು ಹೆಚ್ಚು ವೆಚ್ಚ ತಗಲುವ ದೊಡ್ಡ ಕೆಲಸ ವಾಗಿತ್ತು.
ಫೋರ್ಬ್ಸ್‌ನಲ್ಲಿನ 2008 ರ ಲೇಖನವು 'ಬಹುತೇಕ ಒಲಂಪಿಕ್ ಅಥ್ಲೀಟ್‌ಗಳು ಒಲಿಂಪಿಕ್ ತಂಡವನ್ನು ಮಾಡುವ ಮೊದಲು ಆ ಕ್ರೀಡೆಯಲ್ಲಿ ನಾಲ್ಕರಿಂದ ಎಂಟು ವರ್ಷಗಳ ತರಬೇತಿಯನ್ನು ಕಳೆಯುತ್ತಾರೆ' ಎಂದು ಹೇಳುತ್ತದೆ. ಇದು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ, ಅಭ್ಯಾಸದ ಪ್ರಮಾಣವು ಕ್ರೀಡಾಪಟುವಿನ ಮೇಲೆ ಅವಲಂಬಿತವಾಗಿರುತ್ತದೆ ಎನ್ನುವುದನ್ನು ನಮಗೆ ತಿಳಿಸುತ್ತದೆ
ಉದಾಹರಣೆಗೆ, ಯುಎಸ್ ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ಅವರು ವಾರಕ್ಕೆ 32 ಗಂಟೆಗಳ ಕಾಲ ತಮ್ಮ ಒಂದು ದಿನದ ರಜೆಯೊಂದಿಗೆ ತರಬೇತಿ ನೀಡುತ್ತಾರೆ ಎಂದು ಹೇಳಿದರು.
ಜಿಮ್ನಾಸ್ಟ್ ಗ್ಯಾಬಿ ಡೌಗ್ಲಾಸ್ ಅವರು ಬೆಳಿಗ್ಗೆ 8 ರಿಂದ ಮಧ್ಯಾಹ್ನದವರೆಗೆ ತರಬೇತಿ ನೀಡುತ್ತಾರೆ, ನಂತರ ಊಟಕ್ಕೆ ವಿರಾಮ ತೆಗೆದುಕೊಂಡು ಭೋಜನದವರೆಗೂ ತರಬೇತಿಯನ್ನು ಮುಂದುವರೆಸುತ್ತಾರೆ.
ಅಲ್ಲದೆ, ಮೈಕೆಲ್ ಫೆಲ್ಪ್ಸ್ ಅವರು ಸಿಎನ್‌ಎನ್‌ಗೆ ಮೂರರಿಂದ ಆರು ಗಂಟೆಗಳ ಕಾಲ ಪೂಲ್‌ನಲ್ಲಿ ಪ್ರತಿದಿನ ಅಭ್ಯಾಸ ಮಾಡುತ್ತಾರೆ, ವಾರದಲ್ಲಿ ನಾಲ್ಕರಿಂದ ಐದು ದಿನಗಳವರೆಗೆ ಒಣ ಭೂಮಿಯಲ್ಲಿ ಪ್ರತ್ಯೇಕವಾಗಿ ವ್ಯಾಯಾಮ ಮಾಡುತ್ತಾರೆ.
ಸೈಕ್ಲಿಸ್ಟ್ ಕ್ರಿಸ್ಟಿನ್ ಆರ್ಮ್‌ಸ್ಟ್ರಾಂಗ್ ಅವರು ನೇರವಾಗಿ ಹತ್ತು ದಿನಗಳವರೆಗೆ ವಾರಕ್ಕೆ 20 ರಿಂದ 25 ಗಂಟೆಗಳವರೆಗೆ ಸೈಂಕ್ಲಿಗ್ ಮಾಡುತ್ತೇನೆ ಎಂದು ಹೇಳುತ್ತಾರೆ.
2012 ರ ಲಂಡನ್ ಒಲಿಂಪಿಕ್ಸ್‌ಗೆ ಮೊದಲು, ಕೆಲವು ಕ್ರೀಡಾಪಟುಗಳು ಆಟಗಳಿಗೆ ಮೊದಲು ಸುಮಾರು 10,000 ಗಂಟೆಗಳ ಅಭ್ಯಾಸವನ್ನು ನಡೆಸಿದ್ದರು ಎಂದು ಕಂಡುಹಿಡಿಯಲಾಯಿತು.
ಈ ಎಲ್ಲಾ ಪ್ರಯತ್ನಗಳು ಮತ್ತು ಶಿಸ್ತು ಕೇವಲ ಒಂದು ದಿನ ಪದಕ ಗೆಲ್ಲಲು. ಅವರು ಅದರ ಭರಿಸಬೇಕಾದ ವೆಚ್ಚವನ್ನು ತಿಳಿದಿದ್ದು ಅವರು ಬೆಲೆಯನ್ನು ಪಾವತಿಸಲು ಸಿದ್ಧರಿದ್ದಾರೆ. ಪ್ರಶ್ನೆಯೆಂದರೆ, ಆ ಮಹಾ ಅರಸನ ಮುಂದೆ ಹಾಜರಾಗಲು ನೀವು ಭರಿಸಬೇಕಾದ ವೆಚ್ಚವನ್ನು ಲೆಕ್ಕ ಹಾಕಿದ್ದೀರಾ?
ಲೂಕ 14:28-33 ರಲ್ಲಿ ಯೇಸು ಹೀಗೆ ಹೇಳುತ್ತಾನೆ ,
"ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು - ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ? ಹೀಗೆ ಲೆಕ್ಕಮಾಡದೆ ಅದಕ್ಕೆ ಅಸ್ತಿವಾರ ಹಾಕಿದ ಮೇಲೆ ಆ ಕೆಲಸವನ್ನು ಪೂರೈಸಲಾರದೆ ಹೋದರೆ ನೋಡುವವರೆಲ್ಲರು - ಈ ಮನುಷ್ಯನು ಕಟ್ಟಿಸುವದಕ್ಕಂತೂ ತೊಡಗಿದನು, ಕೆಲಸಪೂರೈಸಲಾರದೆಹೋದನು ಎಂದು ಅವನನ್ನು ಹಾಸ್ಯಮಾಡಾರು. ಇಲ್ಲವೆ ಯಾವ ಅರಸನಾದರೂ ಮತ್ತೊಬ್ಬ ಅರಸನ ಸಂಗಡ ಯುದ್ಧಮಾಡುವದಕ್ಕೆ ಹೋಗುವಾಗ ತನ್ನ ಮೇಲೆ ಇಪ್ಪತ್ತು ಸಾವಿರ ದಂಡು ತೆಗೆದುಕೊಂಡು ಬರುವವನನ್ನು ತಾನು ಹತ್ತು ಸಾವಿರ ದಂಡಿನಿಂದ ಎದುರಿಸುವದಕ್ಕೆ ಶಕ್ತನಾಗುವೆನೋ ಇಲ್ಲವೋ ಎಂದು ಕೂತುಕೊಂಡು ಆಲೋಚಿಸುವದಿಲ್ಲವೇ? ತಾನು ಶಕ್ತನಲ್ಲದಿದ್ದರೆ ಬರುವ ಅರಸನು ಇನ್ನೂ ದೂರದಲ್ಲಿರುವಾಗಲೇ ರಾಯಭಾರಿಗಳನ್ನು ಕಳುಹಿಸಿ ಸಂಧಾನಕ್ಕೆ ಒಪ್ಪಂದವನ್ನು ಕೇಳಿಕೊಳ್ಳುವನು. ಹಾಗೆಯೇ ನಿಮ್ಮಲ್ಲಿ ಯಾವನೇ ಆಗಲಿ ತನಗಿರುವದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು."
Bible Reading: Leviticus 13
ಪ್ರಾರ್ಥನೆಗಳು
ತಂದೆಯೇ, ನನ್ನ ರೂಪಾಂತರಕ್ಕೆ ತಗಲುವ ವೆಚ್ಚವೇನೆಂಬುದನ್ನು ನಾನು ಅರಿತುಕೊಳ್ಳುವಂತೆ ನೀವು ನನ್ನ ಕಣ್ಣುಗಳನ್ನು ತೆರೆಯಬೇಕೆಂದು ಯೇಸುನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ. ಬೆಲೆಯನ್ನು ಪಾವತಿಸಲು ಮತ್ತು ಕೊನೆಯವರೆಗೂ ನಿಮ್ಮನ್ನು ಅನುಸರಿಸಲು ನೀವು ನನಗೆ ಸಹಾಯ ಮಾಡಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನನ್ನ ಅದ್ಭುತವಾದ ಗುರಿಯನ್ನು ತಲುಪಲು ಅಗತ್ಯವಾದ ಸರಿಯಾದ ಶಿಸ್ತನ್ನು- ಶಿಕ್ಷಣವನ್ನು ನೀವು ನನಗೆ ನೀಡಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನಾನು ಈ ದಾರಿಯುದ್ದಕ್ಕೂ ಧೈರ್ಯಗೆಡುವುದಿಲ್ಲ ಹಿಂಜಾರುವುದಿಲ್ಲ ಎಂದು ನಾನು ಯೇಸುವಿನ ಹೆಸರಿನಲ್ಲಿ ಆದೇಶಿಸುತ್ತೇನೆ. ಆಮೆನ್.
Join our WhatsApp Channel

Most Read
● ಕ್ಷಮಿಸಲು ಇರುವ ಪ್ರಾಯೋಗಿಕ ಹಂತಗಳು.● ನಂಬಿಕೆಯಿಂದ ಹೊಂದಿಕೊಳ್ಳುವುದು
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - III
● "ಆತನಿಗೆ ಎಲ್ಲವನ್ನೂ ತಿಳಿಸಿರಿ"
● ದೈವೀಕ ಅನುಕ್ರಮ -2
● ಶತ್ರುವಿನ ಮಾರ್ಗ ರಹಸ್ಯವಾಗಿದೆ
ಅನಿಸಿಕೆಗಳು